
ಮಡಿಕೇರಿ ಮೇ 18 NEWS DESK : ಐಗೂರು ಸೊಸೈಟಿ ಹಾಲ್ ನಲ್ಲಿ ಅಭಿನಯ ನೃತ್ಯ ಕೇಂದ್ರದ ವಿದ್ಯಾರ್ಥಿಗಳ ಗೆಜ್ಜೆ ಪೂಜೆ ಕಾರ್ಯಕ್ರಮ ನಡೆಯಿತು. ನಾಟ್ಯ ದೇವತೆ ನಟರಾಜನ ಪೂಜೆ ಮಾಡಿದ ನಂತರ ನೃತ್ಯ ಗುರುಗಳಾದ ಭವ್ಯ ಸುಕನ್ ಅವರಿಂದ ವಿದ್ಯಾರ್ಥಿಗಳಿಗೆ ಗೆಜ್ಜೆ ಹಸ್ತಾಂತರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನೆರವೇರಿತು. ಮಕ್ಕಳ ಪೋಷಕರು, ಸ್ಥಳೀಯರು ಹಾಗು ಹಿರಿಯ ನೃತ್ಯ ಕಲಾವಿದರು ಈ ಸಂದರ್ಭದಲ್ಲಿ ಹಾಜರಿದ್ದರು. ಕೊಡಗಿನಾದ್ಯಂತ ನೃತ್ಯ ವಿದ್ಯಾರ್ಥಿಗಳನ್ನು ಹೊಂದಿರುವ ಅಭಿನಯ ನೃತ್ಯ ಶಾಲೆಯ ವಿದ್ಯಾರ್ಥಿಗಳು ರಾಜ್ಯ, ದೇಶ ಮಟ್ಟದಲ್ಲಿ ನೃತ್ಯದಲ್ಲಿ ಛಾಪು ಮೂಡಿಸಿದ್ದು, ಈಗ ಇನ್ನಷ್ಟು ಹೊಸ ವಿದ್ಯಾರ್ಥಿಗಳು ಗೆಜ್ಜೆ ಪೂಜೆಯ ಮೂಲಕ ನೃತ್ಯವೈಭವದ ಮುನ್ನುಡಿ ಬರೆಯಲು ಮೆಟ್ಟಿಲೇರಿದ್ದಾರೆ.









