
ಮಡಿಕೇರಿ ಮೇ 21 NEWS DESK : ಕೊಡಗು ಜಿಲ್ಲೆಯ ವಿವಿಧ ವಯೋಮಾನದ ಪ್ರತಿಭಾನ್ವಿತ ಫುಟ್ಬಾಲ್ ಆಟಗಾರರಿಗೆ ಮೇ 25 ರಂದು ಅಮ್ಮತ್ತಿ ಪ್ರೌಢ ಶಾಲಾಮೈದಾನದಲ್ಲಿ ಆಯ್ಕೆ ಟ್ರಯಲ್ಸ್ ನಡೆಯಲಿದೆ. ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಹಾಗೂ ಮಂಗಳೂರಿನ ಯೆನಪೋಯ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಯ್ಕೆ ನಡೆಯಲಿದೆ. ಯೆನಪೋಯ ವಿಶ್ವಿದ್ಯಾನಿಲಯದ ಹಿರಿಯ ಕೋಚ್ ಬಿಬಿ ಥೋಮಸ್ ನೇತೃತ್ವದ ಪರಿಣಿತರ ತಂಡ ಆಟಗಾರರನ್ನು ಆಯ್ಕೆ ಮಾಡುತ್ತಿದ್ದು, ಆಯ್ಕೆಯಾದವರಿಗೆ ವಿದ್ಯಾರ್ಥಿವೇತನ ಜೊತೆ ಯೆನಪೋಯ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣವನ್ನೂ ನೀಡಲಾಗುತ್ತದೆ. ಅಂಡರ್ 14, ಅಂಡರ್ 16, ಅಂಡರ್ 18 ಮತ್ತು 24 ವರ್ಷದೊಳಗಿನ ಹಿರಿಯರ ತಂಡಕ್ಕೂ ಆಯ್ಕೆ ನಡೆಯಲಿದೆ. ಟ್ರಯಲ್ಸ್ ನಲ್ಲಿ ಭಾಗವಹಿಸುವವರು ಮೇ 25 ರ ಸೋಮವಾರದಂದು ತಮ್ಮ ಪಾಸ್ ಪೋರ್ಟ್ ಅಳತೆಯ ಫೋಟೋ, ಆಧಾರ್ ಕಾರ್ಡ್ ಜೊತೆ ಕಡ್ಡಾಯವಾಗಿ ಬೆಳಗ್ಗೆ 8 ಗಂಟೆಗೆ ಕ್ರೀಡಾಂಗಣದಲ್ಲಿ ಹಾಜರಿರಬೇಕು. ಆಟಗಾರರು ಶಾರ್ಟ್ಸ್, ಜೆರ್ಸಿ, ಸ್ಟಡ್ಸ್, ಸ್ಟಾಕಿನ್ಸ್, ಶಿನ್ ಗಾರ್ಡ್ ಕಡ್ಡಾಯವಾಗಿ ತರಬೇಕು. ಯೆನಪೋಯ ಕ್ರೀಡಾ ಅಕಾಡೆಮಿಗೆ ಆಯ್ಕೆಯಾಗುವ ಆಟಗಾರರು ರಾಷ್ಟ್ರಮಟ್ಟದ ವಿವಿಧ ಟೂರ್ನಮೆಂಟ್ ಗಳಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ 8197751812 ಅಥವಾ 8310469708 ನಂಬರ್ ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.









