
ಮಡಿಕೇರಿ ಮೇ 21 NEWS DESK : ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಸಹಕಾರದಲ್ಲಿ ಪ್ರಸಕ್ತ ಸಾಲಿನ ಮಾವು ಮತ್ತು ಹಲಸು ಮೇಳವು ಮೇ, 22 ರಿಂದ 24 ರವರೆಗೆ ಹಾಪ್‍ಕಾಮ್ಸ್ ಆವರಣದಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಆವರಣದಲ್ಲಿ ಮೇ, 22 ರಂದು ಬೆಳಗ್ಗೆ 10.30 ಗಂಟಗೆ ಮಾವು ಮತ್ತು ಹಲಸು ಮೇಳಕ್ಕೆ ಗಣ್ಯರಿಂದ ಚಾಲನೆ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.








