
ಮಡಿಕೇರಿ NEWS DESK ಮೇ 24 : 2002-2003ನೇ ಸಾಲಿನ ಸರಕಾರಿ ಪ್ರೌಢಶಾಲೆ ಹಾಗೂ Government Junior College Madikeri ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನವು ಮಡಿಕೇರಿಯ Ashoka Palace ನಲ್ಲಿ ಭಾನುವಾರ ಭಾವನಾತ್ಮಕ ವಾತಾವರಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಮಡಿಕೇರಿಯ ಮನ್ಸೂರ್ ಅಲಿಫರ್ಝ್, ಸಂದೀಪ್ ಬೆಂಗಳೂರು ಹಾಗೂ ಗೋಪಿನಾಥ್ ಅವರ ಪ್ರಯತ್ನದಿಂದ ಆಯೋಜಿಸಲಾಗಿತ್ತು. ಸುಮಾರು 35 ಮಂದಿ ಹಳೆಯ ವಿದ್ಯಾರ್ಥಿಗಳು ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ್ದು, ಕೇರಳದಿಂದಲೂ ಸ್ನೇಹಿತರು ಭಾಗವಹಿಸಿರುವುದು ವಿಶೇಷವಾಗಿತ್ತು. ಸುಮಾರು 25 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಮತ್ತೆ ಭೇಟಿಯಾದ ಸಹಪಾಠಿಗಳು ಹಳೆಯ ದಿನಗಳ ನೆನಪುಗಳನ್ನು ಹಂಚಿಕೊಂಡು ಭಾವುಕರಾದರು. ಕೇವಲ ಒಂದು ವಾರದ ಅವಧಿಯಲ್ಲಿ ಹಳೆಯ ಸ್ನೇಹಿತರನ್ನು ಹುಡುಕಿ, ಸಂಪರ್ಕಿಸಿ, ಎಲ್ಲರನ್ನು ಒಂದಾಗಿ ಸೇರಿಸಿರುವುದು ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ದೈನಂದಿನ ಜೀವನದ ಒತ್ತಡ, ಜವಾಬ್ದಾರಿಗಳು ಮತ್ತು ಆತುರದ ನಡುವೆ ಈ ಪುನರ್ಮಿಲನ ಎಲ್ಲರಿಗೂ ನಿಜವಾದ “Stress Buster” ಆಗಿ ಹೊಸ ಚೈತನ್ಯ ತುಂಬಿತು ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು. ಸಮ್ಮಿಲನದ ಅಂಗವಾಗಿ ಹಳೆಯ ವಿದ್ಯಾರ್ಥಿಗಳು ಮತ್ತೆ ತಮ್ಮ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ, ತರಗತಿ ಕೊಠಡಿಗಳು, ಪ್ರಾರ್ಥನಾ ಮೈದಾನ, ಕ್ರೀಡಾಂಗಣ ಹಾಗೂ ಶಿಕ್ಷಕರ ಮಾರ್ಗದರ್ಶನವನ್ನು ನೆನಪಿಸಿಕೊಂಡರು. ಹಳೆಯ ನೆನಪುಗಳನ್ನು ಮರುಕಳಿಸಿದ ಈ ಕ್ಷಣಗಳು ಎಲ್ಲರ ಮನಸ್ಸಿನಲ್ಲಿ ಸಂತಸದ ಜೊತೆಗೆ ಭಾವುಕತೆಯನ್ನೂ ಮೂಡಿಸಿತು.
“ಸ್ನೇಹ ಎನ್ನುವುದು ಸಮಯವನ್ನು ಮೀರಿದ ಅಮೂಲ್ಯ ಬಂಧ” ಎಂಬುದನ್ನು ಈ ಪುನರ್ಮಿಲನ ಮತ್ತೊಮ್ಮೆ ಸಾಬೀತುಪಡಿಸಿತು.









