
ಮಡಿಕೇರಿ NEWS DESK ಮೇ 27 : ಉತ್ತರ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎಚ್.ಮುಸ್ತಫ ಹಾಜಿ ಹಾಗೂ ಉಪಾಧ್ಯಕ್ಷರಾಗಿ ಎಂ.ಬಿ.ಕೌಸರ್ ಆಯ್ಕೆಯಾಗಿದ್ದಾರೆ. ಸಹಕಾರ ಸಂಘದ ಮಡಿಕೇರಿಯ ಕಚೇರಿಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮಹಮದ್ ಇಮ್ರಾನ್, ಎಂ.ಎನ್.ಮುಜೀಬ್, ಮೊಹಮ್ಮದ್ ನಾಸಿರ್ ಹುಸೇನ್, ಸಾಧಿಕ್ ಅಹಮದ್, ಇಮ್ರಾನ್ ಯು, ಸೈಯದ್ ಮಾಸೂಮ್ ಅಲಿ, ಎಂ.ಎಚ್.ಅಬ್ದುಲ್ ಹನೀಫ್, ಅಬ್ದುಲ್ ರಜಾಕ್, ಯೂನುಸ್ ಎಂ.ಎo, ನಝೀರ್ ಅಹ್ಮದ್ ಹಾಗೂ ಸಫಿಯಾ ಆಯ್ಕೆಯಾಗಿದ್ದಾರೆ.








