
ಸೋಮವಾರಪೇಟೆ ಜೂ.1 NEWS DESK : ಕೊಡಗು ಜಿಲ್ಲೆಯ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘದ ವಾರ್ಷಿಕ ಮಹಾಸಭೆ ಸೋಮವಾರಪೇಟೆಯ ವಿರಕ್ತ ಮಠದಲ್ಲಿ ಭಾನುವಾರ ಜರುಗಿತು. ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ಸೋಮವಾರಪೇಟೆ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮಿ ಅವರ ಸಾನಿಧ್ಯದಲ್ಲಿ ಸಭೆ ನಡೆಯಿತು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಅರ್ಚಕರು ಮತ್ತು ಪುರೋಹಿತರ ಪುರೋಹಿತರ ಸಂಘದ ಜಿಲ್ಲಾ ಅಧ್ಯಕ್ಷ ಎಫ್.ಸಿ.ಹಿರೇಮಠಶಾಸ್ತ್ರಿ, ಉಪಾಧ್ಯಕ್ಷ ಮಹೇಶ್ ಜಿ.ಶಾಸ್ತ್ರಿ, ಕಾರ್ಯದರ್ಶಿ ಬಸವಕುಮಾರ ಶಾಸ್ತ್ರಿ, ಖಜಾಂಚಿ ಅಭಿಮಠದ ಮಹೇಶ್ ಶಾಸ್ತ್ರಿ, ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ, ವೀರಯ್ಯ ಹಿರೇಮಠ,
ಶಾಂತಮಲ್ಲಯ್ಯ, ನಂಜುಂಡಪ್ಪ, ಜಂಬೂರು ನಂಜಪ್ಪ,ಸೋಮಶೇಖರ, ಪುಷ್ಪಗಿರಿ ನಂದೀಶ್,ತ್ರಿಶಂಕು ಕುಮಾರ್, ವಿರೂಪಾಕ್ಷ ಇದ್ದರು.









