Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಹ್ಯೂಮನ್ ಪ್ಯಾಪಿಲೋಮ ವೈರಸ್ ತಡೆಯಲು ಲಸಿಕೆ ಪಡೆಯಿರಿ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಹ್ಯೂಮನ್ ಪ್ಯಾಪಿಲೋಮ ವೈರಸ್ ತಡೆಯಲು ಲಸಿಕೆ ಪಡೆಯಿರಿ

ಜೂನ್ 8, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಜೂ.8 NEWS DESK : ಎಚ್‍ಪಿವಿ ವೈರಸ್ ಅಂದರೆ ಹ್ಯೂಮನ್ ಪ್ಯಾಪಿಲೋಮ ವೈರಸ್ ಪ್ಯಾಪಿಲೋಮವಿರಿಡೆ ಎಂಬ ವೈರಸ್ ಜಾತಿಗೆ ಸೇರಿದ್ದು, ಇದರಲ್ಲಿ ಒಟ್ಟು 200 ಕ್ಕೂ ಹೆಚ್ಚು ಪ್ರಕಾರಗಳು ಇರುತ್ತದೆ. ಎಚ್‍ಪಿವಿ 16 ಮತ್ತು ಎಚ್‍ಪಿವಿ 18 ವೈರಸ್ ಇದು ಗರ್ಭಕಂಠದ ಕ್ಯಾನ್ಸರ್‍ಗೆ ಮೂಲ ಕಾರಣವಾಗಿರುತ್ತದೆ. ಇದನ್ನು 2030 ಒಳಗೆ ನಿರ್ಮೂಲನೆ ಮಾಡಲು ಜಾಗತಿಕ ಕಾರ್ಯಕ್ರಮ ರೂಪಿಸಲಾಗಿದೆ. ಇದು ಸುಮಾರು 35 ವರ್ಷದಿಂದ 45 ವರ್ಷದ ಒಳಗಿನವರಲ್ಲಿ ಹೆಚ್ಚು ಕಂಡು ಬರುತ್ತದೆ. ಭಾರತದಲ್ಲಿ ಮಹಿಳೆಯರಲ್ಲಿ ಸಂಭವಿಸುವ ಕ್ಯಾನ್ಸರ್ ಪ್ರಕರಣಗಳಲ್ಲಿ ಗರ್ಭಕಂಠ ಕ್ಯಾನ್ಸರ್ ಎರಡನೇ ಪ್ರಮುಖ ಕ್ಯಾನ್ಸರ್ ಆಗಿರುತ್ತದೆ. ವಯಸ್ಸಿನ ಪ್ರಮಾಣೀಕೃತ ಅಂದಾಜುಗಳು ಗರ್ಭಕಂಠದ ಕ್ಯಾನ್ಸರ್(2022) ಇವುಗಳು: ಘಟನೆ 1 ಲಕ್ಷ ಮಹಿಳೆಯರಿಗೆ ವರ್ಷಕ್ಕೆ 11.6. ಮರಣ ಪ್ರಮಾಣ 1 ಲಕ್ಷ ಮಹಿಳೆಯರಿಗೆ ವರ್ಷಕ್ಕೆ 5.1. ಬಾರತ ದೇಶದಲ್ಲಿ 2022 ರಲ್ಲಿ, ಒಟ್ಟು 79,103 ಹೊಸ ಪ್ರಕರಣಗಳು ಮತ್ತು 34,805 ಸಾವುಗಳು ಗರ್ಭಕಂಠದ ಕ್ಯಾನ್ಸರ್ ನಿಂದ ಸಂಭವಿಸಿವೆ ಎಂದು ವರದಿಯಾಗಿದೆ. ಎಚ್‍ಪಿವಿ ಲಸಿಕೆ ಜೀವಂತ ವೈರಸ್ ಲಸಿಕೆ ಅಲ್ಲ. ಇದು ಜೀವಂತವಲ್ಲದ, ಮರು ಸಂಯೋಜಿತ ಲಸಿಕೆ. ವೈರಸ್ ತರಹದ ಕಣಗಳನ್ನು (ವಿಎಲ್‍ಪಿ) ಒಳಗೊಂಡಿದ್ದು, ಎಚ್‍ಪಿವಿ ವೈರಸ್‍ನ ಹೊರ ಕವಚವನ್ನು ಹೋಲುವ ಅಸಾಂಕ್ರಾಮಿಕ ರಚನೆಗಳಿಂದ ತಯಾರಿಸಿರುವುದರಿಂದ ಈ ಲಸಿಕೆಯು ಎಚ್‍ಪಿವಿ ಸೋಂಕು ಉಂಟುಮಾಡಲು ಸಾಧ್ಯವಿಲ್ಲ. 14 ವರ್ಷ ವಯಸ್ಸಿನ ಹುಡುಗಿಯರು (ತಮ್ಮ 14 ನೇ ಹುಟ್ಟು ಹಬ್ಬ ಆಚರಿಸಿಕೊಂಡವರು ಆದರೆ ಇನ್ನೂ 15 ನೇ ಹುಟ್ಟುಹಬ್ಬ ಆಚರಿಸದವರು) ಫಲಾನುಭವಿಗಳಾಗಿರುತ್ತಾರೆ. ಅಂದರೆ ಒಟ್ಟು ಜನಸಂಖ್ಯೆಯ 1% = 14 ವರ್ಷ ವಯಸ್ಸಿನ ಹುಡುಗಿಯರು ಫಲಾನುಭವಿಗಳಾಗಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಡಿ.ಡಿ.ಪಿ.ಐ.ರವರು ತಮ್ಮ ವ್ಯಾಪ್ತಿಯ ಇಡೀ ಜಿಲ್ಲೆಯಲ್ಲಿ ಬರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಓದುತ್ತಿರುವ ಅರ್ಹ ಹೆಣ್ಣು ಮಕ್ಕಳ (ತಮ್ಮ 14 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡವರು ಆದರೆ ಇನ್ನೂ 15 ನೇ ಹುಟ್ಟುಹಬ್ಬವನ್ನು ಆಚರಿಸದವರು) ಪಟ್ಟಿಯನ್ನು ಅವರ ಜನ್ಮ ದಿನಾಂಕದೊಂದಿಗೆ ತಯಾರಿಸಿ ಆರೋಗ್ಯ ಇಲಾಖೆಯೊಂದಿಗೆ ಹಂಚಿಕೊಳ್ಳುವುದು. ಈ ಪಟ್ಟಿಯನ್ನು ಹಂಚಿಕೊಂಡ ನಂತರ ಮತ್ತು ಲಸಿಕಾ ಶಿಬಿರ ಗುರುತಿಸಿದ ನಂತರ ಆಯಾಯ ಶಾಲೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, ಈ ಲಸಿಕೆಯನ್ನು ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ನೀಡಲಾಗುವುದರಿಂದ ಅರ್ಹ ಫಲಾನುಭವಿಗಳನ್ನು ಶಾಲೆಯಿಂದ ಲಸಿಕೆ ನಡೆಯುತ್ತಿರುವ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಲಸಿಕೆ ಹಾಕಿಸಲು ಕ್ರಮವಹಿಸಬೇಕಿದೆ. ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಪೋಷಕರ ಸಭೆ ಕರೆದು ಈ ಎಚ್‍ಪಿವಿ ಲಸಿಕೆಯ ಬಗ್ಗೆ ಮಾಹಿತಿ ನೀಡಿ ಲಸಿಕೆ ನೀಡಲು ವಿಶೇಷವಾಗಿ ಪೋಷಕರ ಅಥವಾ ಹೆಣ್ಣು ಮಗುವಿನ ಮೊಬೈಲ್ ನಂಬರ್ ಅತ್ಯಗತ್ಯವಾಗಿ ಬೇಕಿರುವುದಿಂದ ಅದಕ್ಕೂ ಸಹ ಪೋಷಕರ ಒಪ್ಪಿಗೆ ಪಡೆದು ಮೊಬೈಲ್ ನಂಬರ್ ನಮೂದಿಸಿ ಪಟ್ಟಿ ತಯಾರಿಸಿ ಆರೋಗ್ಯ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕಿದೆ. ಪೋಷಕರು ನೀಡುವ ಮೊಬೈಲ್ ನಂಬರ್‍ಗೆ ಲಸಿಕೆಯ ನಂತರ ಒಟಿಪಿ ಬರುವುದರಿಂದ ಆ ಒಟಿಪಿ ಯನ್ನು ಆರೋಗ್ಯ ಇಲಾಖೆ ಸಿಬ್ಬಂದಿಯವರು ಕರೆ ಮಾಡಿದಾಗ ಒಟಿಪಿ ಹಂಚಿಕೊಳ್ಳಲು ಪೋಷಕರಿಗೆ ಮಾಹಿತಿ ನೀಡುವುದು. ಈ ಲಸಿಕೆಯು ಅತ್ಯಂತ ಸುರಕ್ಷಿತವಾಗಿದ್ದು, ಅಡ್ಡ ಪರಿಣಾಮಗಳು ಒಂದು ವೇಳೆ ಸಂಭವಿಸಿದಲ್ಲಿ ಸಂಬಂಧಪಟ್ಟ ಲಸಿಕಾ ಶಿಬಿರದ ವೈದ್ಯರು ಸೂಚಿಸಿರುವ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಮಾಹಿತಿ ನೀಡಬೇಕಿದೆ. ಶಾಲೆಯಿಂದ ಹೊರಗುಳಿದ 14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳ ಪಟ್ಟಿ ತಯಾರಿಸಿ ಅದನ್ನು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಸಿಬ್ಬಂದಿಗಳ ಜೊತೆ ಹಂಚಿಕೊಳ್ಳುವುದು. ಗುರುತಿಸಿದ 14 ರಿಂದ 15 ವರ್ಷದೊಳಗಿನ ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳಿಗೆ ಲಸಿಕೆಯನ್ನು ಹಾಕಿಸಲು ಉತ್ತೇಜನ ನೀಡಬೇಕಿದೆ. ‘ಕೊಡಗು ಜಿಲ್ಲೆಯಲ್ಲಿ ಮಾರ್ಚ್-9ನೇ ತಾರೀಖಿನಿಂದ ಎಚ್.ಪಿ.ವಿ ಲಸಿಕೆಯನ್ನು ನೀಡಲು ಪ್ರಾರಂಭಿಸಲಾಗಿದ್ದು, ಒಟ್ಟು ಗುರಿ 5276 ಇದ್ದು, ಜಿಲ್ಲೆಗೆ 3955 ಲಸಿಕೆಯನ್ನು ಸರಬರಾಜು ಮಾಡಿದ್ದು, ಇಲ್ಲಿಯವರೆಗೆ 1628 ಮಕ್ಕಳಿಗೆ ನೀಡಲಾಗಿದೆ. ಶೇ.30.85 ಪ್ರಗತಿ ಸಾಧಿಸಲಾಗಿದೆ.’ ಹೆಚ್ಚಿನ ಮಕ್ಕಳು ಲಸಿಕೆಯನ್ನು ಪಡೆಯಲು ಹಿಂದೇಟು ಹಾಕುತ್ತಿದ್ದು ಅದರ ಪ್ರಯೋಜನ ಪಡೆಯಲು ಹಿಂಜರಿಯುತ್ತಿದ್ದಾರೆ. ಈ ಲಸಿಕೆಯ ಭವಿಷ್ಯದಲ್ಲಿ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ಬಾರದ ರೀತಿ ತಡೆಯಲು ಸಾಧ್ಯವಾಗುತ್ತಿದ್ದು, ಸರ್ಕಾರ ಉಚಿತ ನೀಡುತ್ತಿರುವ ಲಸಿಕೆಯ ಪ್ರಯೋಜನ ಪಡೆಯಲು ಜಿಲ್ಲಾಡಳಿತ ಪರವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಕೋರಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Related Posts

ಬಾಲ್ಯದಿಂದಲೇ ಸ್ವಚ್ಛತೆಯ ಹವ್ಯಾಸ ಬೆಳೆಸುವುದು ಅವಶ್ಯ: ಸೀತಾಲಕ್ಷ್ಮಿ

ನವೆಂಬರ್ 4, 2026

ಪೇರಿಯಂಡ ಪೆಮ್ಮಯ್ಯ ದಂಪತಿ ಸ್ಥಾಪಿಸಿದ ಪ್ರಥಮ ವರ್ಷದ ಸಾಹಿತ್ಯ ಪ್ರಶಸ್ತಿಗೆ ಡಾ. ಕೋರನ ಸರಸ್ವತಿ ಆಯ್ಕೆ

ನವೆಂಬರ್ 3, 2026

ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಸಾಹಿತಿ ಉಳುವಂಗಡ ಕಾವೇರಿ ಉದಯ್ ಆಯ್ಕೆ

ನವೆಂಬರ್ 3, 2026

ಪೇರಿಯಂಡ ಪೆಮ್ಮಯ್ಯ ದಂಪತಿ ಸ್ಥಾಪಿಸಿದ ಪ್ರಥಮ ವರ್ಷದ ಸಾಹಿತ್ಯ ಪ್ರಶಸ್ತಿಗೆ ಡಾ. ಕೋರನ ಸರಸ್ವತಿ ಆಯ್ಕೆ

ನವೆಂಬರ್ 3, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ನ.3: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜಿಲ್ಲೆಯ ವಕೀಲರಾದ ಪೇರಿಯಂಡ ಪಿ. ಪೆಮ್ಮಯ್ಯ ಮತ್ತು…

ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಸಾಹಿತಿ ಉಳುವಂಗಡ ಕಾವೇರಿ ಉದಯ್ ಆಯ್ಕೆ

ನವೆಂಬರ್ 3, 2026

ಸಾಹಿತಿ ನಾ. ಡಿಸೋಜಾ ವಿಶ್ವಮಾನವತ್ವ ಮೇಳೈಸಿದ ದಾರ್ಶನಿಕ: ಎಸ್.ಐ. ಮುನೀರ್ ಅಹಮದ್

ನವೆಂಬರ್ 3, 2026

ಸರ್ವದೈವತ ಪದವಿ ಪೂರ್ವ ಕಾಲೇಜಿನ ಮೂರು ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆ

ನವೆಂಬರ್ 3, 2026

ಶಿಕ್ಷಣ ಇಲಾಖೆಯ ವಿಶೇಷ ಸಭೆ ಹಾಗೂ ಸಂವಾದಕ್ಕೆ ಜ್ಞಾನಗಂಗಾ ಶಾಲೆಯ ಬಿ.ಎಸ್. ನಿಂಗಪ್ಪ ಆಯ್ಕೆ

ನವೆಂಬರ್ 3, 2026

ತಂತ್ರಜ್ಞಾನ ಆಧಾರಿತ ಕೃಷಿ ಮಾರುಕಟ್ಟೆ ಕುರಿತು ರೈತ ಕ್ಷೇತ್ರ ಪಾಠಶಾಲೆ

ನವೆಂಬರ್ 3, 2026

2027ರ ಕೊಡವ ಜಮ್ಮ ಮುಸ್ಲಿಂ ಕುಟುಂಬಗಳ ಕ್ರೀಡಾ ಸಂಭ್ರಮಕ್ಕೆ ಸಿದ್ಧತೆ; ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯಾಟದ ಧ್ವಜ ಹಸ್ತಾಂತರ: ಎರಡು ಕುಟುಂಬಗಳಿಗೆ ಆತಿಥ್ಯದ ಜವಾಬ್ದಾರಿ

ನವೆಂಬರ್ 3, 2026

ಮಡಿಕೇರಿ ದಸರಾ ಜನೋತ್ಸವಕ್ಕೆ ಹೊಸ ವೈಭವ ತಂದುಕೊಟ್ಟ ಶಾಸಕ ಡಾ.ಮಂತರ್ ಗೌಡ : ಪ್ರಕಾಶ್ ಆಚಾರ್ಯ ಬಣ್ಣನೆ : ನಾಲ್ಕು ವರ್ಷಗಳ ದಸರಾ ಯಶಸ್ಸಿನ ಹಿಂದೆ ಶಾಸಕರ ಇಚ್ಛಾಶಕ್ತಿ ಮತ್ತು ವಿಶೇಷ ಆಸಕ್ತಿ : ದಸರಾ ಆರ್ಥಿಕ ವ್ಯವಸ್ಥೆಗೆ ಹೊಸ ಚೈತನ್ಯ

ನವೆಂಬರ್ 3, 2026

ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಅರಿಯೋಣ: ಉ.ರಾ. ನಾಗೇಶ್

ನವೆಂಬರ್ 3, 2026

ಕುಶಾಲನಗರದಲ್ಲಿ ಸ್ವಚ್ಛತಾ ಜಾಗೃತಿ: ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಇನ್ನರ್ ವೀಲ್ ಸಂಸ್ಥೆಯಿಂದ ಕಸದ ಬುಟ್ಟಿ ಕೊಡುಗೆ

ನವೆಂಬರ್ 3, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.