
ಹಾರಂಗಿ NEWS DESK ಜು.13 : ಕೊಡಗು ಜಿಲ್ಲೆಯ ಕುಶಾಲನಗರ ಹುದುಗೂರು ಬಳಿ ಹಾರಂಗಿ ಅಣೆಕಟ್ಟೆ ಆವರಣಕ್ಕೆ ಕಾಡಾನೆ ಲಗ್ಗೆ ಮಾಡಿ ಅಲ್ಲಿನ ಗೇಟ್ ಗಳಿಗೆ ಹಾನಿ ಮಾಡಿದ ಘಟನೆ ನಡೆದಿದೆ. ಮೀಸಲು ಅರಣ್ಯದಿಂದ ಹಾರಂಗಿ ಅಣೆಕಟ್ಟು ಉತ್ತರ ದಿಕ್ಕಿನ ದ್ವಾರದ ಗೇಟ್ ಮೂಲಕ ಬಂದಿರುವ ಕಾಡಾನೆ ಅಲ್ಲಿರುವ ಆವರಣ ಗೋಡೆಯ ಪಿಲ್ಲರ್, ಕಬ್ಬಿಣದ ಗೇಟ್ಗಳನ್ನು ಹಾನಿ ಮಾಡಿದ ದೃಶ್ಯ ಆ ಭಾಗದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಗಳಲ್ಲಿ ದಾಖಲಾಗಿದೆ. ಸೋಮವಾರ ಮುಂಜಾನೆ 4 ಗಂಟೆಗೆ ಈ ಘಟನೆ ನಡೆದಿದ್ದು ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಆನೆಯನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ.









