Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕುಶಾಲನಗರ ಪಿ.ಎಂ.ಶ್ರೀ ಶಾಲಾ ಮಕ್ಕಳಿಂದ ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ; ಪರಿಸರ ಪೂರಕ ಗಣೇಶೋತ್ಸವ ಆಚರಣೆಗೆ ಟಿ.ಜಿ. ಪ್ರೇಮಕುಮಾರ್ ಮನವಿ; ಪಿ.ಓ.ಪಿ., ರಾಸಾಯನಿಕ ಬಣ್ಣದ ಗಣೇಶ ಮೂರ್ತಿಗಳನ್ನು ತ್ಯಜಿಸಲು ಕರೆ*
  • *ಮಡಿಕೇರಿ ದಸರಾ ಶೋಭಾಯಾತ್ರೆಗೆ ದಿನಾಂಕ ನಿಗದಿ : ಅ.20ರಂದು ದಶಮಂಟಪಗಳ ಮೆರವಣಿಗೆ*
  • *ಗೌರಿ–ಗಣೇಶ ಹಬ್ಬ: 2,400 ವಿಶೇಷ ಬಸ್‌ಗಳ ವ್ಯವಸ್ಥೆ*
  • *ಗೌರಿ ಗಣೇಶೋತ್ಸವ : ಕಾನೂನು ಪಾಲನೆಗೆ ಆದ್ಯತೆ ನೀಡಿ : ಎಸ್‌ಪಿ ಬಿಂದುಮಣಿ ಮನವಿ*
  • *ಇಂಡಿಯಾ ಸ್ಕಿಲ್ : ಹೆಸರು ನೋಂದಣಿಗೆ ಅವಕಾಶ*
  • *ಬೆಳ್ಳುಮಾಡು ಶ್ರೀ ಮಾದೇರಪ್ಪ ದೇವಾಲಯದ ಜೀರ್ಣೋದ್ಧಾರಕ್ಕೆ ರೂ.3 ಲಕ್ಷ ಅನುದಾನ*
  • *ಸೆ.14 ರಂದು ಇತಿಹಾಸ ಪ್ರಸಿದ್ದ ಶ್ರೀಕ್ಷೇತ್ರ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಣೆ*
  • *ಸೆ.15 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ : ಅಗತ್ಯ ಸಿದ್ಧತೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ ಸೂಚನೆ*
  • *ಸೆ.19 ರಂದು ಕೊಡಗು ಮಹಿಳಾ ಸಹಕಾರ ಸಂಘದ 86ನೇ ವಾರ್ಷಿಕ ಮಹಾಸಭೆ*
  • *ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬಾಲಕಾರ್ಮಿಕ ತಪಾಸಣೆ : ಕಾನೂನು ಅರಿವು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿ : ಕಾನೂನು ಸೇವಾ ಪ್ರಾಧಿಕಾರದಿಂದ ದುರ್ಬಲರಿಗೆ ಕಾನೂನು ನೆರವು : ಹಿರಿಯ ಸಿವಿಲ್ ನ್ಯಾಯಾಧೀಶೆ ಶುಭ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿ : ಕಾನೂನು ಸೇವಾ ಪ್ರಾಧಿಕಾರದಿಂದ ದುರ್ಬಲರಿಗೆ ಕಾನೂನು ನೆರವು : ಹಿರಿಯ ಸಿವಿಲ್ ನ್ಯಾಯಾಧೀಶೆ ಶುಭ*

ಜುಲೈ 22, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.22 NEWS DESK : ಕಾನೂನು ಸೇವಾ ಪ್ರಾಧಿಕಾರವು ದುರ್ಬಲರಿಗೆ ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ದ್ಯೇಯದಂತೆ ಪ್ರಾಧಿಕಾರವು ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಹೇಳಿದ್ದಾರೆ. ನಗರದ ಲಯನ್ಸ್ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಮಡಿಕೇರಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜಿತ ಸ್ನೇಹಾಶ್ರಯ ಸಮಿತಿ ಮತ್ತು ಓಡಿಪಿ ಸಂಸ್ಥೆಗಳ 18ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಎಚ್.ಐ.ವಿ. ಪೀಡಿತ ಮಕ್ಕಳ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಉಭಯ ಸಂಸ್ಥೆಗಳು ಮಹತ್ತರ ಪಾತ್ರ ವಹಿಸಿರುವುದನ್ನು ಶ್ಲಾಘಿಸಿದ ಶುಭ ಅವರು, ಸಮಾಜದ ವಿವಿಧ ಸೇವಾ ಸಂಸ್ಥೆಗಳು ಇಂತಹ ಕಾರ್ಯಕ್ಕೆ ಕೈಜೋಡಿಸಿ ಸಹಕಾರ ನೀಡಬೇಕೆಂದು ಕರೆ ನೀಡಿದರು. ಎಚ್.ಐ.ವಿ. ಪೀಡಿತರಿಗೆ ಕಾನೂನು ಸೇವೆಯ ನೆರವು ನೀಡಲು ಪ್ರಾಧಿಕಾರ ಸದಾ ಸಿದ್ಧವಿದೆ ಎಂದು ಹೇಳಿದ ನ್ಯಾಯಾಧೀಶರಾದ ಶುಭ, ಎಚ್.ಐ.ವಿ. ಇದೆ ಎಂದು ಗೊತ್ತಾದಾಗ ಭಯ ಪಡದೇ ಕಾಯಿಲೆಯಿಂದ ಮುಕ್ತರಾಗುವ ನಿಟ್ಟಿನಲ್ಲಿ ಪೀಡಿತರು ಧೈರ್ಯದಿಂದ ವರ್ತಿಸಬೇಕೆಂದು ಸಲಹೆ ನೀಡಿದರು. ಜೀವನ ಎಂಬುದು ಸದಾ ಸಂತೋಷದಿಂದ ಇರುವುದಿಲ್ಲ. ಎಲ್ಲರ ಜೀವನದಲ್ಲಿಯೂ ಏರಿಳಿತ ಇರುತ್ತದೆ ಇಂತಹ ಸಂದರ್ಭ ಧೈರ್ಯದಿಂದ ಬದುಕು ಎದುರಿಸಬೇಕು ಎಂದು ಶುಭ ಅವರು ಕಿವಿಮಾತು ಹೇಳಿದರು. ಓಡಿಪಿ ಸಂಸ್ಥೆ ಮೈಸೂರಿನ ನಿರ್ದೇಶಕರಾದ ಟೆನ್ನಿ ಕುರಿಯನ್ ಮಾತನಾಡಿ. ಸಮಾಜದಲ್ಲಿಂದು ಮೌಲ್ಯಗಳು ಕಡಿಮೆಯಾಗುತ್ತಿವೆ. ಹಿರಿಯರಿಗೆ ಗೌರವ ಬಾವನೆ ದೊರಕುತ್ತಿಲ್ಲ. ಈ ನಿಟ್ಟಿನಲ್ಲಿ ಜೀವನ ಮೌಲ್ಯಗಳನ್ನು ಕಲಿಸುವ ಕಾರ್ಯ ಮೊದಲು ಆಗಬೇಕೆಂದು ಸಲಹೆ ನೀಡಿದರು. ಸಂತ ಮೈಕಲರ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರು ಮತ್ತು ಸಂತಮೈಕಲರ ಚರ್ಚ್ ಧರ್ಮ ಗುರು ಪ್ಯಾಟ್ರಿಕ್ ಕ್ಲೇವಿಯರ್ ಮಾತನಾಡಿ ಎಚ್.ಐ.ವಿ. ಪೀಡಿತರಿಗೆ ಸಮಾಜದ ಸರ್ವ ವರ್ಗದ ಜನ ಸಹನೂಭೂತಿಯೊಂದಿಗೆ ನೆರವಿನ ಹಸ್ತ ಚಾಚಬೇಕೆಂದು ಮನವಿ ಮಾಡಿದರು. ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಭಾರತದಲ್ಲಿ 70 ಸಾವಿರ ಮತ್ತು ಕರ್ನಾಟಕದಲ್ಲಿ 11 ಸಾವಿರ ಎಚ್.ಐ.ವಿ. ಪೀಡಿತರಿದ್ದಾರೆ. ಪೀಡಿತರು ಜೀವನವನ್ನು ಸವಾಲಾಗಿ ಸ್ವೀಕರಿಸಿ ಸಂತೋಷದ ಬಾಳ್ವೆ ನಡೆಸಬೇಕೆಂದು ಹೇಳಿದರು. ಪತ್ರಕರ್ತ ಅನಿಲ್ ಎಚ್.ಟಿ. ಮಾತನಾಡಿ, ಎಚ್.ಐ.ವಿ ಪೀಡಿತರಿಗೆ ಅಗತ್ಯ ನೆರವನ್ನು 18 ವರ್ಷಗಳಿಂದ ನೀಡುವ ಮೂಲಕ ಸ್ನೇಹಾಶ್ರಯ ಮತ್ತು ಓಡಿಪಿ ಸಂಸ್ಥೆಗಳು ದೇವರು ಮೆಚ್ಚುವಂತಹ ಕೆಲಸ ಮಾಡುತ್ತಿವೆ ಎಂದು ಶ್ಲಾಘಿಸಿದರು. ಎಚ್.ಐ.ವಿ. ಪೀಡಿತ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸಾಮಾಜಿಕ ಸೇವಾ ಸಂಸ್ಥೆಗಳು ಪ್ರಯತ್ನಿಸಬೇಕು ಎಂದು ಅನಿಲ್ ಸಲಹೆ ನೀಡಿದರು. ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಎಚ್.ಐ.ವಿ ಪೀಡಿತರಿಗೆ ನೆರವಿನ ಮೂಲಕ ಜೀವನದಲ್ಲಿ ಹೊಸ ಭರವಸೆ ಮೂಡಿಸುವ ಪ್ರಯತ್ನ ಶ್ಲಾಘನೀಯ ಎಂದರು. 18 ವರ್ಷಗಳ ಹಿಂದೆ ಸ್ನೇಹಾಶ್ರಯ ಸಂಸ್ಥೆಯ ಹುಟ್ಟಿಗೆ ಕಾರಣರಾದವರಲ್ಲಿ ಪ್ರಮುಖರಾಗಿದ್ದ ಆರೋಗ್ಯ ಅಧಿಕಾರಿ ಡಾ.ಸಿದ್ದಯ್ಯ ಅವರು ಮಾತನಾಡಿ, ವಿಶ್ವದಲ್ಲಿ ಮಾರಕ ರೋಗಗಳ ಪೈಕಿ ಎಚ್.ಐ.ವಿ. 3ನೇ ಸ್ಥಾನದಲ್ಲಿದೆ. ಈ ಕಾಯಿಲೆಯಿಂದ ಬಳಲುವ ಮಕ್ಕಳಿಗೆ ಸೂಕ್ತ ಆರೈಕೆಯೊಂದಿಗೆ ಮಾನಸಿಕವಾಗಿಯೂ ಧೈರ್ಯ ತುಂಬುವ ಅಗತ್ಯವಿದೆ ಎಂದರು. ಸ್ನೇಹಾಶ್ರಯ ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು,, ಮಡಿಕೇರಿಯ ಅನೇಕ ಕೊಡುಗೈ ದಾನಿಗಳ ಸಹಕಾರದಿಂದ ಸ್ನೇಹಾಶ್ರಯ 18 ವರ್ಷ ಪೂರೈಸಿದ್ದು ನೂರಾರು ಎಚ್.ಐ.ವಿ ಪೀಡಿತರಿಗೆ ದಾನಿಗಳ ಸಹಕಾರ ಜೀವನದಲ್ಲಿ ಹೊಸ ಭರವಸೆ ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್, ಲಯನ್ಸ್ ಟ್ರಸ್ಟ್ ಅಧ್ಯಕ್ಷ ಎ.ಕೆ. ನವೀನ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ವೇದಿಕೆಯಲ್ಲಿದ್ದರು. ದಾನಿಗಳು ಈ ಸಂದರ್ಭ ಎಚ್.ಐ.ವಿ ಪೀಡಿತ ಮಕ್ಕಳಿಗೆ ವಿವಿಧ ರೀತಿಯ ನೆರವು ನೀಡಿದರು. ಸುನಿತಾ ಮುತ್ತಣ್ಣ ಸ್ವಾಗತಿಸಿ, ಜಾಯ್ಸ್ ಮೆನೇಜಸ್ ನಿರೂಪಿಸಿದರು. ಆರೈಕೆ ಮತ್ತು ಬೆಂಬಲ ಕೇಂದ್ರದ ಜಿಲ್ಲಾ ಸಂಯೋಜಕರಾದ ಬೈನಿ ಅವರು ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕುಶಾಲನಗರ ಪಿ.ಎಂ.ಶ್ರೀ ಶಾಲಾ ಮಕ್ಕಳಿಂದ ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ; ಪರಿಸರ ಪೂರಕ ಗಣೇಶೋತ್ಸವ ಆಚರಣೆಗೆ ಟಿ.ಜಿ. ಪ್ರೇಮಕುಮಾರ್ ಮನವಿ; ಪಿ.ಓ.ಪಿ., ರಾಸಾಯನಿಕ ಬಣ್ಣದ ಗಣೇಶ ಮೂರ್ತಿಗಳನ್ನು ತ್ಯಜಿಸಲು ಕರೆ*

ಸೆಪ್ಟೆಂಬರ್ 13, 2026

*ಮಡಿಕೇರಿ ದಸರಾ ಶೋಭಾಯಾತ್ರೆಗೆ ದಿನಾಂಕ ನಿಗದಿ : ಅ.20ರಂದು ದಶಮಂಟಪಗಳ ಮೆರವಣಿಗೆ*

ಸೆಪ್ಟೆಂಬರ್ 13, 2026

*ಗೌರಿ–ಗಣೇಶ ಹಬ್ಬ: 2,400 ವಿಶೇಷ ಬಸ್‌ಗಳ ವ್ಯವಸ್ಥೆ*

ಸೆಪ್ಟೆಂಬರ್ 13, 2026

*ಮಡಿಕೇರಿ ದಸರಾ ಶೋಭಾಯಾತ್ರೆಗೆ ದಿನಾಂಕ ನಿಗದಿ : ಅ.20ರಂದು ದಶಮಂಟಪಗಳ ಮೆರವಣಿಗೆ*

ಸೆಪ್ಟೆಂಬರ್ 13, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಸೆ.13 : ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಶೋಭಾಯಾತ್ರೆಯನ್ನು ಅ.20ರಂದು ನಡೆಸಲು ದಸರಾ…

*ಗೌರಿ–ಗಣೇಶ ಹಬ್ಬ: 2,400 ವಿಶೇಷ ಬಸ್‌ಗಳ ವ್ಯವಸ್ಥೆ*

ಸೆಪ್ಟೆಂಬರ್ 13, 2026

*ಗೌರಿ ಗಣೇಶೋತ್ಸವ : ಕಾನೂನು ಪಾಲನೆಗೆ ಆದ್ಯತೆ ನೀಡಿ : ಎಸ್‌ಪಿ ಬಿಂದುಮಣಿ ಮನವಿ*

ಸೆಪ್ಟೆಂಬರ್ 13, 2026

*ಇಂಡಿಯಾ ಸ್ಕಿಲ್ : ಹೆಸರು ನೋಂದಣಿಗೆ ಅವಕಾಶ*

ಸೆಪ್ಟೆಂಬರ್ 12, 2026

*ಬೆಳ್ಳುಮಾಡು ಶ್ರೀ ಮಾದೇರಪ್ಪ ದೇವಾಲಯದ ಜೀರ್ಣೋದ್ಧಾರಕ್ಕೆ ರೂ.3 ಲಕ್ಷ ಅನುದಾನ*

ಸೆಪ್ಟೆಂಬರ್ 12, 2026

*ಸೆ.14 ರಂದು ಇತಿಹಾಸ ಪ್ರಸಿದ್ದ ಶ್ರೀಕ್ಷೇತ್ರ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಣೆ*

ಸೆಪ್ಟೆಂಬರ್ 12, 2026

*ಸೆ.15 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ : ಅಗತ್ಯ ಸಿದ್ಧತೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ ಸೂಚನೆ*

ಸೆಪ್ಟೆಂಬರ್ 12, 2026

*ಸೆ.19 ರಂದು ಕೊಡಗು ಮಹಿಳಾ ಸಹಕಾರ ಸಂಘದ 86ನೇ ವಾರ್ಷಿಕ ಮಹಾಸಭೆ*

ಸೆಪ್ಟೆಂಬರ್ 12, 2026

*ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬಾಲಕಾರ್ಮಿಕ ತಪಾಸಣೆ : ಕಾನೂನು ಅರಿವು*

ಸೆಪ್ಟೆಂಬರ್ 12, 2026

*ಅರಣ್ಯ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಿ ವರದಿ ಜಾರಿಗೆ ಪ್ರಸ್ತಾವನೆ ಸಲ್ಲಿಸಲಿ : ಸೇವ್ ಕೊಡಗು ಸಂಘಟನೆ ಒತ್ತಾಯ*

ಸೆಪ್ಟೆಂಬರ್ 12, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.