
ಮಡಿಕೇರಿ, ಜು 24 NEWS DESK : ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ದಲ್ಲಿ ನಡೆದ ಸಿಬಿಎಸ್‌ಇ ಕ್ಲಸ್ಟರ್ VIII ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಕೊಡಗು ವಿದ್ಯಾಲಯದ 17 ವರ್ಷದೊಳಗಿನ ಬಾಲಕರ ಟೇಬಲ್ ಟೆನ್ನಿಸ್ ತಂಡವು ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ. ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ 200 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಕೊಡಗು ವಿದ್ಯಾಲಯದ ಆಟಗಾರರಾದ ಅವನೀಶ್ ಕೃಷ್ಣ, ದೇವಾರ್ಯ, ಫೆಲಿಕ್ಸ್ ರೊನಾಲ್ಡ್ ಮತ್ತು ಅದಿತ್ ಗೌತಮ್ ಅವರನ್ನು ಒಳಗೊಂಡ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ 3ನೇ ಸ್ಥಾನ ವನ್ನು ಗಳಿಸುವುದರೊಂದಿಗೆ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಈ ತಂಡದ ಆಟಗಾರರನ್ನು ಶುಭಮ್ ಸಾತ್ವಿಕ್ ತರಬೇತಿ ಗೊಳಿಸಿರುತ್ತಾರೆ ಎಂದು ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಸುಮಿತ್ರಾ ಕೆ.ಎಸ್ ಅವರು ತಿಳಿಸಿದ್ದಾರೆ.









