ಮಡಿಕೇರಿ ಅ.20 : ತಾಳತ್ತಮನೆಯ ಶ್ರೀ ದುರ್ಗಾಭಗವತಿ ದೇವಾಲಯದಲ್ಲಿ ದುರ್ಗಾಷ್ಠಮಿಯ ಪ್ರಯುಕ್ತ ಅ.22 ರಂದು ಗಣಪತಿ ಹೋಮ, ಶ್ರೀ ದುರ್ಗಾ ಹವನ ಹಾಗೂ ವಿಶೇಷ ಅಲಂಕಾರ ಪೂಜೆ ನಡೆಯಲಿದೆ.
ಅಂದು ಬೆಳಿಗ್ಗೆ 9.30 ಗಂಟೆಗೆ ಗಣಪತಿ ಹೋಮ, ಶ್ರೀ ದುರ್ಗಾ ಹವನ ಹಾಗೂ ವಿಶೇಷ ಅಲಂಕಾರ ಪೂಜೆ ನಡೆಯಲಿದ್ದು, 11 ಗಂಟೆಗೆ ದೇವಾಲಯದ ಪ್ರವೇಶ ದ್ವಾರದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಮಹಾಧ್ವಾರ ಭೂಮಿ ಪೂಜೆ ನೆರವೇರಲಿದೆ.
ಸಂಜೆ 7 ಗಂಟೆಗೆ ದುರ್ಗಾ ಪೂಜೆಯೊಂದಿಗೆ ಅಲಂಕಾರ ಪೂಜೆ ಜರುಗಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.







