Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸುಂಟಿಕೊಪ್ಪದಲ್ಲಿ ಗೌರಿ ಗಣೇಶೋತ್ಸವ: ಮುಸ್ಲಿಂ ಬಾಂಧವರಿಂದ ಸಿಹಿ-ತಂಪುಪಾನೀಯ ವಿತರಣೆ*
  • *ಶಿರಂಗಾಲ ಗ್ರಾಮದಲ್ಲಿ ಮಕ್ಕಳಿಂದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ*
  • *ಸರ್ವದೈವತ ಪ್ರೌಢಶಾಲಾ ವಿದ್ಯಾರ್ಥಿನಿಯರು ವಾಲಿಬಾಲ್ ಕ್ರೀಡೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ*
  • *ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಶಾಸಕ ಪೊನ್ನಣ್ಣ ಭೇಟಿ*
  • *ಕೊಡಗಿನಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದ ಆದ್ಯತೆ : ಶಾಸಕ ಪೊನ್ನಣ್ಣ*
  • *ಸಂಪಾಜೆ: ದಿವಂಗತ ಕೆದಂಬಾಡಿ ಜಗದೀಶ್ ಮನೆಗೆ ಶಾಸಕ ಪೊನ್ನಣ್ಣ ಭೇಟಿ*
  • *2 ಲೀಟರ್‌ಗಿಂತ ಕಡಿಮೆ ಸಾಮರ್ಥ್ಯದ ನೀರಿನ ಬಾಟಲ್‌ಗಳ ನಿಷೇಧ : ವಿರಾಜಪೇಟೆ ಪುರಸಭೆಯ ನಿರ್ಧಾರಕ್ಕೆ ಸಾರ್ವಜನಿಕರ ಆಕ್ಷೇಪ*
  • *ಪ್ರಜಾಪ್ರಭುತ್ವ ಬಲಪಡಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು: ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕರೆ*
  • *ಸುಂಟಿಕೊಪ್ಪ: ವಿವಿಧೆಡೆ ಶ್ರದ್ಧಾಭಕ್ತಿಯಿಂದ ನಡೆದ ಗೌರಿ ಗಣೇಶೋತ್ಸವ*
  • *ಕೊಡಗು ವಿದ್ಯಾ ಇಲಾಖಾ ನೌಕರರ ಸೌಹಾರ್ದ ಸಹಕಾರಿ ಸಂಘಕ್ಕೆ 54.60 ರೂ. ಲಕ್ಷ ನಿವ್ವಳ ಲಾಭ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕಾಡು ಪ್ರಾಣಿಗಳ ದಾಳಿ : ಅರಣ್ಯ ಸಚಿವರಿಂದ ಸಭೆ : ಲಾಂಟನಾ ತೆರವಿಗೆ ಸೂಚನೆ : ಕೊಡಗಿನ ಶಾಸಕರು ಭಾಗಿ*
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

*ಕಾಡು ಪ್ರಾಣಿಗಳ ದಾಳಿ : ಅರಣ್ಯ ಸಚಿವರಿಂದ ಸಭೆ : ಲಾಂಟನಾ ತೆರವಿಗೆ ಸೂಚನೆ : ಕೊಡಗಿನ ಶಾಸಕರು ಭಾಗಿ*

ಜೂನ್ 20, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಬೆಂಗಳೂರು ಜೂ.20 NEWS DESK : ಕೊಡಗು ಮಾನವ ವನ್ಯಪ್ರಾಣಿ ಸಂಘರ್ಷ ಉಪಶಮನ ಪ್ರತಿಷ್ಠಾನ ನಿಧಿಯ ಮಂಡಳಿಯ 6 ನೇ  ಸಭೆಯು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಮುಖ್ಯಮಂತ್ರಿ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು  ಹಾಜರಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು. ನಾಗರಹೊಳೆ, ಬಂಡೀಪುರ, ಬಿ.ಆರ್.ಟಿ. ಸೇರಿದಂತೆ ರಾಜ್ಯದ ಅರಣ್ಯ ಪ್ರದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಲಾಂಟನಾ, ಸನ್ನಾ ಮತ್ತು ಇತರ ಕಳೆಯನ್ನು ತ್ವರಿತವಾಗಿ ತೆರವುಗೊಳಿಸಲು ಕ್ರಮ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ನಡೆದ  ಹುಲಿ ಸಂರಕ್ಷಣಾ ಪ್ರತಿಷ್ಠಾನದ 15ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹುಲಿ ಪ್ರತಿಷ್ಠಾನದ  ಮೂಲ ಉದ್ದೇಶ ಹುಲಿ ಮತ್ತು ಹುಲಿ ಕಾಡಿನ ವೈವಿಧ್ಯಮಯ ವನ್ಯಜೀವಿಗಳು ಮತ್ತು ಪ್ರಾಣಿಗಳ ವಾಸಸ್ಥಾನದ ಸಂರಕ್ಷಣೆಯಾಗಿದ್ದು ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯೋನ್ಮುಖರಾಗಬೇಕು ಎಂದರು. :: ಇಡಿಸಿ ಚಟುವಟಿಕೆಗೆ ಒತ್ತು ನೀಡಲು ಸೂಚನೆ :: ಹುಲಿ ಸಂರಕ್ಷಣಾ ಪ್ರತಿಷ್ಠಾನದ ನಿಧಿಯಿಂದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿರುವ ಆದಿವಾಸಿಗಳ ಕ್ಷೇಮಾಭಿವೃದ್ಧಿಗೆ ಹಣ ವಿನಿಯೋಗಿಸಲು ಅವಕಾಶವಿದ್ದು, ಪರಿಸರ ಅಭಿವೃದ್ಧಿ ಸಮಿತಿಗಳ ವಿವಿಧ ಚಟುವಟಿಕೆಗಳ ಮೂಲಕ ಅರಣ್ಯದೊಳಗಿನ ಆದಿವಾಸಿಗಳ ಸಬಲೀಕರಣಕ್ಕೆ ಶ್ರಮಿಸುವಂತೆ ತಿಳಿಸಿದರು. ಕಾಳಿ, ಬಿಆರ್.ಟಿ., ನಾಗರಹೊಳೆ, ಭದ್ರಾ ಹುಲಿ ಅಭಯಾರಣ್ಯಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಇಡಿಸಿ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಇನ್ನೂ ಹೆಚ್ಚಿನ ಕಾರ್ಯಕ್ರಮ ರೂಪಿಸಿ, ಮಹಿಳೆಯರಿಗೆ ಸ್ವಾವಲಂಬಿಗಳಾಗಿ ಬದುಕಲು ನೆರವು ಒದಗಿಸುವಂತೆ, ಶಾಲೆಗಳಲ್ಲಿ ಸ್ಮಾರ್ಟ್ ತರಗತಿ ಆರಂಭಿಸಲು ಮತ್ತು ಪ್ರತಿಭಾವಂತ ಆದಿವಾಸಿ ಮಕ್ಕಳಿಗೆ ಲ್ಯಾಪ್ ಟಾಪ್ ನೀಡಲು ಸೂಚನೆ ನೀಡಿದರು. :: ಕಳ್ಳಬೇಟೆ ನಿಗ್ರಹ ಶಿಬಿರದ ಸಿಬ್ಬಂದಿ ಆಹಾರಕ್ಕೆ ಹೆಚ್ಚಿನ ಅನುದಾನ :: ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಕಳ್ಳಬೇಟೆ ನಿಗ್ರಹ ಶಿಬಿರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ದಿನವೊಂದಕ್ಕೆ ನೀಡಲಾಗುವ ಆಹಾರದ ಧಾನ್ಯದ ಭತ್ಯೆಯನ್ನು ಪ್ರಸ್ತುತ 80 ರೂಪಾಯಿಗಲಿಂದ 100 ರೂ.ಗೆ ಹೆಚ್ಚಿಸಲಾಗಿದ್ದು, ಇದನ್ನು ಇನ್ನೂ ಹೆಚ್ಚಿಗೆ ಮಾಡಲು ಸಾಧ್ಯವೆ ಎಂಬ ಬಗ್ಗೆ ಪ್ರಸ್ತಾವನೆ ಮಂಡಿಸಲು ಸೂಚಿಸಿದರು. :: ಭದ್ರಾ ಹುಲಿ ಯೋಜನೆಗೆ 25 ವರ್ಷ :: ಭದ್ರಾ ಅರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿ 25 ವರ್ಷ ಆಗಿದ್ದು, ರಜತ ಮಹೋತ್ಸವ ಆಚರಣೆಗೆ ಸಭೆಯಲ್ಲಿ ಅನುಮತಿ ನೀಡಲಾಯಿತು. ಬಿಳಿಗಿರಿ ರಂಗನಾಥ ದೇವಸ್ಥಾನ (ಬಿ.ಆರ್.ಟಿ.)ಯಲ್ಲಿ ಪಾರಂಪರಿಕ ಕಟ್ಟವಿದ್ದು, ಇದನ್ನು ಸಿಬ್ಬಂದಿಯ ವಸತಿಗೃಹವಾಗಿ ಬಳಕೆ ಮಾಡಲಾಗುತ್ತಿದೆ. ಇದು ಶಿಥಿಲಾವಸ್ಥೆಯಲ್ಲಿದ್ದು, ಮೂಲ ಸ್ವರೂಪಕ್ಕೆ ಚ್ಯುತಿ ಆಗದಂತೆ ಇದರ ದುರಸ್ತಿಗೆ ಸಹ ಇಂದಿನ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸುಂಟಿಕೊಪ್ಪದಲ್ಲಿ ಗೌರಿ ಗಣೇಶೋತ್ಸವ: ಮುಸ್ಲಿಂ ಬಾಂಧವರಿಂದ ಸಿಹಿ-ತಂಪುಪಾನೀಯ ವಿತರಣೆ*

ಸೆಪ್ಟೆಂಬರ್ 15, 2026

*ಶಿರಂಗಾಲ ಗ್ರಾಮದಲ್ಲಿ ಮಕ್ಕಳಿಂದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ*

ಸೆಪ್ಟೆಂಬರ್ 15, 2026

*ಸರ್ವದೈವತ ಪ್ರೌಢಶಾಲಾ ವಿದ್ಯಾರ್ಥಿನಿಯರು ವಾಲಿಬಾಲ್ ಕ್ರೀಡೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ*

ಸೆಪ್ಟೆಂಬರ್ 15, 2026

*ಶಿರಂಗಾಲ ಗ್ರಾಮದಲ್ಲಿ ಮಕ್ಕಳಿಂದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ*

ಸೆಪ್ಟೆಂಬರ್ 15, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ, NEWS DESK ಸೆ.15: ಕುಶಾಲನಗರ ತಾಲ್ಲೂಕಿನ ಶಿರಂಗಾಲ ಗ್ರಾಮದ ಕೋಟೆಯ ಎಸ್.ಆರ್. ಶಿವಪ್ರಸಾದ್ ಅವರ ಮನೆಯಲ್ಲಿ ಮಕ್ಕಳಾದ ಎಸ್.…

*ಸರ್ವದೈವತ ಪ್ರೌಢಶಾಲಾ ವಿದ್ಯಾರ್ಥಿನಿಯರು ವಾಲಿಬಾಲ್ ಕ್ರೀಡೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ*

ಸೆಪ್ಟೆಂಬರ್ 15, 2026

*ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಶಾಸಕ ಪೊನ್ನಣ್ಣ ಭೇಟಿ*

ಸೆಪ್ಟೆಂಬರ್ 15, 2026

*ಕೊಡಗಿನಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದ ಆದ್ಯತೆ : ಶಾಸಕ ಪೊನ್ನಣ್ಣ*

ಸೆಪ್ಟೆಂಬರ್ 15, 2026

*ಸಂಪಾಜೆ: ದಿವಂಗತ ಕೆದಂಬಾಡಿ ಜಗದೀಶ್ ಮನೆಗೆ ಶಾಸಕ ಪೊನ್ನಣ್ಣ ಭೇಟಿ*

ಸೆಪ್ಟೆಂಬರ್ 15, 2026

*2 ಲೀಟರ್‌ಗಿಂತ ಕಡಿಮೆ ಸಾಮರ್ಥ್ಯದ ನೀರಿನ ಬಾಟಲ್‌ಗಳ ನಿಷೇಧ : ವಿರಾಜಪೇಟೆ ಪುರಸಭೆಯ ನಿರ್ಧಾರಕ್ಕೆ ಸಾರ್ವಜನಿಕರ ಆಕ್ಷೇಪ*

ಸೆಪ್ಟೆಂಬರ್ 15, 2026

*ಪ್ರಜಾಪ್ರಭುತ್ವ ಬಲಪಡಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು: ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕರೆ*

ಸೆಪ್ಟೆಂಬರ್ 15, 2026

*ಸುಂಟಿಕೊಪ್ಪ: ವಿವಿಧೆಡೆ ಶ್ರದ್ಧಾಭಕ್ತಿಯಿಂದ ನಡೆದ ಗೌರಿ ಗಣೇಶೋತ್ಸವ*

ಸೆಪ್ಟೆಂಬರ್ 15, 2026

*ಕೊಡಗು ವಿದ್ಯಾ ಇಲಾಖಾ ನೌಕರರ ಸೌಹಾರ್ದ ಸಹಕಾರಿ ಸಂಘಕ್ಕೆ 54.60 ರೂ. ಲಕ್ಷ ನಿವ್ವಳ ಲಾಭ*

ಸೆಪ್ಟೆಂಬರ್ 15, 2026

*ನಾವು ಯಾವುದೇ ಸಮುದಾಯದ ವಿರೋಧಿಗಳಲ್ಲ : ಕೊಡಗು ಗೌಡ ಸಮಾಜಗಳ ಒಕ್ಕೂಟ ಸ್ಪಷ್ಟನೆ*

ಸೆಪ್ಟೆಂಬರ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.