Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಣಿವೆ ಶ್ರೀ ರಾಮಲಿಂಗೇಶ್ವರನ ವೈಭವದ ಬ್ರಹ್ಮ ರಥೋತ್ಸವ*
  • *ಉಪಚುನಾವಣೆ ಉಸ್ತುವಾರಿಯಾಗಿ ಬಿ.ಎಸ್.ಆನಂದ್ ನೇಮಕ*
  • *ನಿಧನ ಸುದ್ದಿ*
  • *ಸೋಮವಾರಪೇಟೆ : ಕಲಾವಿದೆ ವರ್ಷಗೆ ಸನ್ಮಾನ*
  • *ಗಣಗೂರು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ : ಬೆಳೆಗಾರರಲ್ಲಿ ಆತಂಕ* 
  • *ಕಣಿವೆ ಬ್ರಹ್ಮ ಶ್ರೀ ರಾಮಲಿಂಗೇಶ್ವರ ಸ್ವಾಮಿ ರಥೋತ್ಸವ : ಸೀತಾ ಕಲ್ಯಾಣೋತ್ಸವ*
  • *ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ : ಹೆಲ್ತಿ ಹ್ಯಾಬಿಟ್ ಹ್ಯಾಪಿ ಲೈಫ್ ಕಾಯಾ೯ಗಾರ : ತಂತ್ರಜ್ಞಾನದ ಹೆಚ್ಚಿನ ಬಳಕೆ ಮನಸ್ಸಿನ ಕ್ರಿಯಾಶೀಲತೆಯ ನಾಶಕ್ಕೆ ಕಾರಣವಾಗಬಹುದು : ಡಾ.ಶುಭಾ ಕೆ.ಜಿ ಎಚ್ಚರಿಕೆ*
  • *ಶ್ರೀಕೋದಂಡ ರಾಮೋತ್ಸವ ಸಮಿತಿಯಿಂದ ಶ್ರೀ ರಾಮೋತ್ಸವ ಭವ್ಯ ಮೆರವಣಿಗೆ*
  • *ಕೂಡಿಗೆ ಡಯಟ್ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಮೇಳ : ಯಶಸ್ಸಿಗೆ  ಪ್ರಾಂಶುಪಾಲರ ಮನವಿ*
  • *ಸುಂಟಿಕೊಪ್ಪದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ರಾಮನವಮಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಬಿಜೆಪಿಯನ್ನು ಬಗ್ಗು ಬಡಿಯುವುದು ತಿರುಕನ ಕನಸು : ಕೊಡಗಿನಲ್ಲಿ ಹಿಟ್ಲರ್ ಸಂಸ್ಕೃತಿ ನಡೆಯಲ್ಲ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಬಿಜೆಪಿಯನ್ನು ಬಗ್ಗು ಬಡಿಯುವುದು ತಿರುಕನ ಕನಸು : ಕೊಡಗಿನಲ್ಲಿ ಹಿಟ್ಲರ್ ಸಂಸ್ಕೃತಿ ನಡೆಯಲ್ಲ*

ಜೂನ್ 24, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜೂ.24 NEWS DESK : ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿ, ಬೆದರಿಸಿ, ಹಿಟ್ಲರ್ ಸಂಸ್ಕೃತಿ ಅನುಸರಿಸಿ ಬಿಜೆಪಿಯನ್ನು ಬಗ್ಗು ಬಡಿಯುವುದು ತಿರುಕನ ಕನಸು. ಕೊಡಗಿನಲ್ಲಿ ಹಿಟ್ಲರ್ ಸಂಸ್ಕೃತಿ ನಡೆಯಲ್ಲ ಎಂದು ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಬಿಜೆಪಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ಜನವಿರೋಧಿ ಧೋರಣೆಗಳನ್ನು ವಿರೋಧಿಸುವುದು ಕರ್ತವ್ಯವಾಗಿದೆ. ಅದರಂತೆ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ವೈಜ್ಞಾನಿಕವಾಗಿ ಏರಿಕೆ ಮಾಡಿದ ಕಾರಣಕ್ಕಾಗಿ ಬಿಜೆಪಿ ವಿರಾಜಪೇಟೆಯಲ್ಲಿ ಪ್ರತಿಭಟನೆ ಮಾಡಿದೆ. ಇದನ್ನೇ ನೆಪ ಮಾಡಿಕೊಂಡು ಪ್ರತಿಭಟನೆ ಮಾಡಿದವರ ವಿರುದ್ಧವೇ ಪ್ರಕರಣ ದಾಖಲಿಸುವುದು ಖಂಡನೀಯವೆಂದರು. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದ ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ಏನೆಂದೇ ತಿಳಿದಿಲ್ಲ. ಸರ್ವಾಧಿಕಾರಿ ಧೋರಣೆ ಅನುಸರಿಸಿದವರ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಚರಿತ್ರೆ ಹೇಳುತ್ತದೆ. ಕೊಡಗು ಜಿಲ್ಲೆಯ ಜನ ಬುದ್ಧಿವಂತರಾಗಿದ್ದು, ಈಗಾಗಲೇ ಲೋಕಸಭಾ ಮತ್ತು ಶಿಕ್ಷಕರ ಕೇತ್ರದ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯನವರು ಪ್ರತಿಭಟನೆ ಮಾಡಲಿಲ್ಲವೇ, ಮೇಕೆದಾಟು ಹೋರಾಟದ ಸಂದರ್ಭ ಸೆಕ್ಷನ್ 144 ನ್ನು ಉಲ್ಲಂಘಸಿಲಿಲ್ಲವೇ ಎಂದು ಪ್ರಶ್ನಿಸಿದ ಕೆ.ಜಿ.ಬೋಪಯ್ಯ ಅವರು, ವಿರಾಜಪೇಟೆಯ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ಜಾತಿಯ ಬಣ್ಣ ಬಳಿದು ಸಮಾಜವನ್ನು ಒಡೆಯುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು. ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಒತ್ತಡಕ್ಕೆ ಮಣಿದು ಬಿಜೆಪಿ ಕಾರ್ಯಕರ್ತರ ವಿರುದ್ಧ ವಿನಾಕಾರಣ ಪ್ರಕರಣಗಳನ್ನು ದಾಖಲಿಸಿಕೊಂಡರೆ ಜಿಲ್ಲಾ ವ್ಯಾಪಿ ಪೊಲೀಸರ ವಿರುದ್ಧವೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ ನಮ್ಮ ಪ್ರತಿಕೃತಿಗಳನ್ನು ಕೂಡ ದಹಿಸಿದ್ದಾರೆ. ನಾವೆಲ್ಲೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲ್ಲ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಪ್ರತಿಭಟನೆಯನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕಾಗಿತ್ತು. ಅವರು ಕೇವಲ ಕೊಡವರಿಗೆ ಮಾತ್ರ ಶಾಸಕರಲ್ಲ, ವಿರಾಜಪೇಟೆ ಕ್ಷೇತ್ರದ ಎಲ್ಲಾ ಜನರ ಶಾಸಕರು. ಸಮಾಜಗಳ ಅಧ್ಯಕ್ಷರು ಸಮಾಜದ ಕೆಲಸ ಮಾಡಬೇಕೆ ಹೊರತು ರಾಜಕೀಯ ಮಾಡಬಾರದು ಎಂದರು.ಶಾಸಕರಾದವರು ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಮನಸ್ಸನ್ನು ಗೆಲ್ಲಬೇಕೆ ಹೊರತು ಅಧಿಕಾರ ಚಲಾಯಿಸಬಾರದು. ಅಧಿಕಾರ ಚಲಾಯಿಸಿ ಬಿಜೆಪಿಯ ಹುಟ್ಟಡಗಿಸುತ್ತೇವೆ ಎನ್ನುವುದು ಕನಸಿನ ಮಾತು. ಈ ಹಿಂದೆ ಶಾಸಕರುಗಳಾಗಿದ್ದ ನಾವಿಬ್ಬರು ಐದು ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ 3600 ಕೋಟಿ ರೂ.ಗಳನ್ನು ತಂದಿದ್ದು, ಈಗಿನ ಇಬ್ಬರು ಶಾಸಕರುಗಳು ತಮ್ಮ ಅವಧಿಯಲ್ಲಿ ಅರ್ಧದಷ್ಟು ಹಣ ತರಲಿ ಎಂದು ಅಪ್ಪಚ್ಚು ರಂಜನ್ ಸವಾಲು ಹಾಕಿದರು. ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ವಿರಾಜಪೇಟೆಯಲ್ಲಿ ಪ್ರತಿಭಟನೆಯ ಸಂದರ್ಭ ಸಾಂಕೇತಿಕವಾಗಿ ಮಾತ್ರ ಪೊನ್ನಣ್ಣ ಅವರ ಪ್ರತಿಕೃತಿ ದಹಿಸಲಾಗಿದೆ. ಆದರೆ ಕೆಲವರು ಇದನ್ನು ನೈಜತೆಯಂತೆ ಪ್ರತಿಬಿಂಬಿಸುತ್ತಿದ್ದಾರೆ. ಲೋಕಸಭೆ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಕಾರಣದಿಂದ ಕುಗ್ಗಿ ಹೋಗಿರುವ ಕಾಂಗ್ರೆಸ್ಸಿಗರು ಅಧಿಕಾರ ದುರುಪಯೋಗ ಪಡಿಸಿಕೊಂಡು ಬಿಜೆಪಿ ಕಾರ್ಯಕರ್ತರನ್ನು ದಮನ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ, ಅಲ್ಲದೆ ಜಾತೀಯ ಬಣ್ಣ ಬಳಿಯುತ್ತಿದ್ದಾರೆ ಎಂದು ಆರೋಪಿಸಿದರು. ಸಮಾಜಗಳು ಸಮಾಜದ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯಗಳ ಬೆಳವಣಿಗೆಗಾಗಿ ಶ್ರಮಿಸಬೇಕೆ ಹೊರತು ರಾಜಕೀಯ ಬೆರೆಸಿ ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು. ಕೊಡವರಲ್ಲಿ ಅನೇಕರು ಬಡವರಿದ್ದಾರೆ, ಸಂಕಷ್ಟದಲ್ಲಿರುವ ಕೊಡವರ ಸಹಾಯಕ್ಕೆ ರಾಜಕೀಯ ಮಾಡುತ್ತಿರುವ ಕೊಡವ ಸಮಾಜಗಳು ಬಂದಿವೆಯೇ ಎಂದು ಪ್ರಶ್ನಿಸಿದರು. ವಿರಾಜಪೇಟೆ ಪ್ರತಿಭಟನೆ ಸಂದರ್ಭ ಪೊನ್ನಣ್ಣ ಅವರದ್ದು ಮಾತ್ರವಲ್ಲದೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿಯನ್ನು ಕೂಡ ದಹಿಸಲಾಗಿದೆ. ಆದರೆ ಪೊನ್ನಣ್ಣ ಅವರನ್ನು ಮಾತ್ರ ಗುರಿ ಮಾಡಿ ಕೊಡವ ಸಮುದಾಯಕ್ಕೆ ಸೀಮಿತಗೊಳಿಸಿ ಕೆಲವರು ಟೀಕೆಗಳನ್ನು ಮಾಡುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಎಂ.ಎಂ.ರವೀಂದ್ರ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ತೆನ್ನಿರ ಮೈನಾ ಎಂಬ ವ್ಯಕ್ತಿ ಬಿಜೆಪಿ ಕಾರ್ಯಕರ್ತರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ. ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ವಿರಾಜಪೇಟೆ ಪ್ರತಿಭಟನೆಗೆ ಸಂಬಂಧಿಸಿದಂತೆ ಮುಂದೆ ಜಾತಿ ಸಂಘರ್ಷಗಳು ನಡೆದರೆ ಅದಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಅವರೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿ.ಕೆ.ಲೋಕೇಶ್ ಹಾಗೂ ಮಹೇಶ್ ಜೈನಿ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕಣಿವೆ ಶ್ರೀ ರಾಮಲಿಂಗೇಶ್ವರನ ವೈಭವದ ಬ್ರಹ್ಮ ರಥೋತ್ಸವ*

ಮಾರ್ಚ್ 27, 2026

*ಉಪಚುನಾವಣೆ ಉಸ್ತುವಾರಿಯಾಗಿ ಬಿ.ಎಸ್.ಆನಂದ್ ನೇಮಕ*

ಮಾರ್ಚ್ 27, 2026

*ನಿಧನ ಸುದ್ದಿ*

ಮಾರ್ಚ್ 26, 2026

*ಉಪಚುನಾವಣೆ ಉಸ್ತುವಾರಿಯಾಗಿ ಬಿ.ಎಸ್.ಆನಂದ್ ನೇಮಕ*

ಮಾರ್ಚ್ 27, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.27 : ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿಯಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ…

*ನಿಧನ ಸುದ್ದಿ*

ಮಾರ್ಚ್ 26, 2026

*ಸೋಮವಾರಪೇಟೆ : ಕಲಾವಿದೆ ವರ್ಷಗೆ ಸನ್ಮಾನ*

ಮಾರ್ಚ್ 26, 2026

*ಗಣಗೂರು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ : ಬೆಳೆಗಾರರಲ್ಲಿ ಆತಂಕ* 

ಮಾರ್ಚ್ 26, 2026

*ಕಣಿವೆ ಬ್ರಹ್ಮ ಶ್ರೀ ರಾಮಲಿಂಗೇಶ್ವರ ಸ್ವಾಮಿ ರಥೋತ್ಸವ : ಸೀತಾ ಕಲ್ಯಾಣೋತ್ಸವ*

ಮಾರ್ಚ್ 26, 2026

*ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ : ಹೆಲ್ತಿ ಹ್ಯಾಬಿಟ್ ಹ್ಯಾಪಿ ಲೈಫ್ ಕಾಯಾ೯ಗಾರ : ತಂತ್ರಜ್ಞಾನದ ಹೆಚ್ಚಿನ ಬಳಕೆ ಮನಸ್ಸಿನ ಕ್ರಿಯಾಶೀಲತೆಯ ನಾಶಕ್ಕೆ ಕಾರಣವಾಗಬಹುದು : ಡಾ.ಶುಭಾ ಕೆ.ಜಿ ಎಚ್ಚರಿಕೆ*

ಮಾರ್ಚ್ 26, 2026

*ಶ್ರೀಕೋದಂಡ ರಾಮೋತ್ಸವ ಸಮಿತಿಯಿಂದ ಶ್ರೀ ರಾಮೋತ್ಸವ ಭವ್ಯ ಮೆರವಣಿಗೆ*

ಮಾರ್ಚ್ 26, 2026

*ಕೂಡಿಗೆ ಡಯಟ್ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಮೇಳ : ಯಶಸ್ಸಿಗೆ  ಪ್ರಾಂಶುಪಾಲರ ಮನವಿ*

ಮಾರ್ಚ್ 26, 2026

*ಸುಂಟಿಕೊಪ್ಪದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ರಾಮನವಮಿ*

ಮಾರ್ಚ್ 26, 2026

*ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಮಹಿಳಾ ಘಟಕದಿಂದ ವಿಶ್ವ ಮಹಿಳಾ ದಿನಾಚರಣೆ ಸಂಭ್ರಮ*

ಮಾರ್ಚ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.