Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸಚಿವ ನಾಗೇಂದ್ರ ವಜಾಕ್ಕೆ ಒತ್ತಾಯ : ಸೋಮವಾರಪೇಟೆ ಬಿಜೆಪಿಯಿಂದ ಆ.20 ರಂದು ಮಡಿಕೇರಿಯಲ್ಲಿ ಪ್ರತಿಭಟನೆ*
  • *ಸುಂಟಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ : ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ*
  • *ಹೆಚ್ಚುವರಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕಾವೇರಮ್ಮೆ ಕೊಡವ ಅಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್*
  • *ಲಿಟಲ್ ಸ್ಕಾಲರ್ಸ್ ಅಕಾಡೆಮಿಯಿಂದ ರೈನ್‌ಕೋಟ್, ಪುಸ್ತಕ ವಿತರಣೆ*
  • *ಆದರ್ಶ ಸೇವಾ ರತ್ನ ಪ್ರಶಸ್ತಿ ಪ್ರದಾನ : ಕಲೆ, ಸಂಸ್ಕೃತಿಯ ಅನಾವರಣಕ್ಕೆ ಸಾಹಿತ್ಯ ಪರಿಷತ್ತು ವೇದಿಕೆಯಾಗಿದೆ : ಡಾ.ರಘುನಾಥ್ ಬಿ.ಎನ್*
  • *ಸಮಾಜ ವಿಜ್ಞಾನ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ*
  • *ಕಾಡಾನೆ ಹಾವಳಿ ತಡೆಗೆ ಒತ್ತಾಯ : ಸುಂಟಿಕೊಪ್ಪ ರೈತ ಸಂಘದಿಂದ ಪ್ರತಿಭಟನೆ*
  • *ಪೊನ್ನಂಪೇಟೆಯಲ್ಲಿ ಮಿನಿ ಉದ್ಯೋಗ ಮೇಳ : ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ದುಡಿಮೆಯ ದಾರಿ : ಸಿ.ಎಸ್.ಸಂಜನಾ*
  • *ಮಾನವ–ಪ್ರಾಣಿ ಸಂಘರ್ಷ, ಜಮ್ಮಾಮಲೆ ಸಮಸ್ಯೆ : ಅರಣ್ಯ ಸಚಿವರೊಂದಿಗೆ ಶಾಸಕ ಎ.ಎಸ್.ಪೊನ್ನಣ್ಣ ಚರ್ಚೆ*
  • *ಅಪ್ರಾಪ್ತ ಮಕ್ಕಳನ್ನು ದುಡಿಮೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ : ಮಧು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ತಲಕಾವೇರಿಯಲ್ಲಿ ಸ್ವಾಮೀಜಿಗಳಿಂದ ವಿಶೇಷ ಪೂಜೆ : ಕಾವೇರಿ ವಿವಾದವನ್ನು ಸೌಹಾರ್ದಯುತವಾಗಿ ಬಗೆ ಹರಿಸಿಕೊಳ್ಳಲು ಕರೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ತಲಕಾವೇರಿಯಲ್ಲಿ ಸ್ವಾಮೀಜಿಗಳಿಂದ ವಿಶೇಷ ಪೂಜೆ : ಕಾವೇರಿ ವಿವಾದವನ್ನು ಸೌಹಾರ್ದಯುತವಾಗಿ ಬಗೆ ಹರಿಸಿಕೊಳ್ಳಲು ಕರೆ*

ಅಕ್ಟೋಬರ್ 25, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಅ.25 NEWS DESK : ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಣ ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಆರಂಭಗೊಂಡು ಶತಮಾನ ಪೂರೈಸಿದೆ. ಈ ಸಂಕಷ್ಟದಿಂದ ಜನರು ನೆಮ್ಮದಿಯನ್ನು ಕಳೆದುಕೊಂಡಿದ್ದು, ಸುದೀರ್ಘ ಅವಧಿಯಿಂದ ನಡೆದುಕೊಂಡು ಬಂದಿರುವ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಮೈಸೂರು ಆದಿ ಚುಂಚನಗಿರಿ ಶಾಖಾ ಮಠದ ಶ್ರೀಸೋಮನಾಥ ಸ್ವಾಮೀಜಿ ತಿಳಿಸಿದ್ದಾರೆ. ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಕಾವೇರಿ ನದಿ ರಕ್ಷಣಾ ಸಮಿತಿಯಿಂದ ಆಯೋಜಿತ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, ಮಾತೆ ಕಾವೇರಿಗೆ ಪೂಜೆ ನೆರವೇರಿಸಿ, ನದಿ ವಿವಾದ ಪರಿಹಾರಕ್ಕೆ ನೋಂದಾವಣೆ ಮಾಡಿರುವ ಸಮಿತಿಗೆ ಶುಭ ಹಾರೈಸಿ ಅವರು ಮಾತನಾಡಿದರು. ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ರಾಜ್ಯದ ವಿವಿಧ ಮಠಾಧೀಶರು, ಸವೋಚ್ಚ ನ್ಯಾಯಾಲಯ ಮತ್ತು ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ನೀರಾವರಿ ತಜ್ಞರು, ಕಾನೂನು ತಜ್ಞರನ್ನು ಒಳಗೊಂಡ ನೂರು ಮಂದಿಯ ವಿಶೇಷ ಸಮಿತಿಯನ್ನು ರಚಿಸಿ ಅದನ್ನು ನೋಂದಾವಣೆ ಮಾಡಲಾಗಿದೆ. ಈ ಸಮಿತಿ, ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಪರಿಹಾರಕ್ಕೆ ಮುಂದಾಗಿರುವುದಾಗಿ ಮಾಹಿತಿ ನೀಡಿದರು.
ನೋಂದಣಿ ಪತ್ರ ಹಸ್ತಾಂತರ-ಕಾವೇರಿ ನದಿ ವಿವಾದ ಪರಿಹಾರಕ್ಕೆ ರಚಿಸಲಾಗಿರುವ ಕಾವೇರಿ ನದಿ ರಕ್ಷಣಾ ಸಮಿತಿಯನ್ನು ಬೆಂಗಳೂರಿನಲ್ಲಿ ನೋಂದಾವಣೆ ಮಾಡಲಾಗಿದೆ. ಅದರ ಮೂಲ ದಾಖಲಾತಿಯನ್ನು ಇದೇ ಸಂದರ್ಭ ಸಮಿತಿ ಅಧ್ಯಕ್ಷ ಎಚ್.ಕೆ. ರಾಮು ಅವರಿಗೆ ಮೈಸೂರು ಆದಿ ಚುಂಚನಗಿರಿ ಶಾಖ ಮಠದ ಶ್ರೀ ಸೋಮನಾಥ ಸ್ವಾಮೀಜಿ ಹಸ್ತಾಂತರಿಸಿ ಶುಭ ಹಾರೈಸಿದರು. ಸಮಿತಿ ಅಧ್ಯಕ್ಷ ಎಚ್.ಕೆ. ರಾಮು ಈ ಸಂದರ್ಭ ಮಾತನಾಡಿ, ಬ್ರಿಟೀಷರ ಕಾಲದಿಂದಲೇ ವಿವಾದದ ರೂಪ ಪಡೆದಿರುವ ನದಿ ನೀರಿನ ಹಂಚಿಕೆ ವಿಚಾರವನ್ನು ಶಾಂತ ರೀತಿಯಲ್ಲಿ ಪರಿಹರಿಸಬೇಕು ಎಂಬುದು ಸಂತರ ಆಶಯವಾಗಿದೆ. ಎರಡೂ ರಾಜ್ಯಗಳು ಕೂಡ ಈ ವಿಚಾರವನ್ನು ಸೌಹಾರ್ದತೆಯಿಂದ ಪರಿಹರಿಸಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಸಮಿತಿ ಪಕ್ಷ ಭೇದ ಮರೆತು ಕಾರ್ಯೋನ್ಮುಖವಾಗಲಿದೆ ಎಂದರು. ಸಮಿತಿ ಮೂಲಕ ಕಾವೇರಿ ನದಿ ಹರಿಯುವ ಎಲ್ಲಾ ಜಿಲ್ಲೆಗಳಿಗೂ ತೆರಳಿ ಅಲ್ಲಿ ಸಭೆ ನಡೆಸಿ ವ್ಯಾಜ್ಯ ಪರಿಹಾರಕ್ಕೆ ಸಲಹೆ ಸೂಚನೆ ಪಡೆಯಲಾಗುತ್ತದೆ. ಈ ಅಭಿಪ್ರಾಯವನ್ನು ರಾಜ್ಯ ಮತ್ತು ಕೇಂದ್ರ ಸರಕಾರ, ಕೇಂದ್ರ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರಕ್ಕೂ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆಂದರು. ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಾಗಿನೆಲೆ ಮಠದ ಶಿವಾನಂದ ಸ್ವಾಮೀಜಿ, ಚೆನ್ನಬಸವ ದೇಶಿ ಕೇಂದ್ರ ಮಠದ ಸದಾಶಿವ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಅಪ್ಪಯ್ಯ ಸ್ವಾಮೀಜಿ, ಅಪ್ಪಾಜಿ ಸ್ವಾಮೀಜಿ, ಕಾವೇರಿ ನದಿ ರಕ್ಷಣಾ ಸಮಿತಿ ಗೌರವಾಧ್ಯಕ್ಷರು ಹಾಗೂ ಮಾಜಿ ಎಂಎಲ್‍ಸಿಗಳಾದ ಡಿ.ಎಸ್. ವೀರಯ್ಯ, ದೇವೇಗೌಡ, ಸಮಿತಿ ಪ್ರಧಾನ ಕಾರ್ಯದರ್ಶಿ ರಾಜುಗೌಡ, ಸಮಿತಿ ಪ್ರಮುಖರಾದ ರಾಜಣ್ಣ, ಜಗದೀಶ್, ಯಶೋಧ ರಾಜಣ್ಣ, ಮಂಜುಳಾ ಗೋಪಾಲ್, ಸಿ.ಆರ್.ಸುರೇಶ್ ಸೇರಿದಂತೆ ರಾಮನಗರ, ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜನಗರದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸಚಿವ ನಾಗೇಂದ್ರ ವಜಾಕ್ಕೆ ಒತ್ತಾಯ : ಸೋಮವಾರಪೇಟೆ ಬಿಜೆಪಿಯಿಂದ ಆ.20 ರಂದು ಮಡಿಕೇರಿಯಲ್ಲಿ ಪ್ರತಿಭಟನೆ*

ಆಗಷ್ಟ್ 19, 2026

*ಸುಂಟಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ : ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ*

ಆಗಷ್ಟ್ 19, 2026

*ಹೆಚ್ಚುವರಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕಾವೇರಮ್ಮೆ ಕೊಡವ ಅಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್*

ಆಗಷ್ಟ್ 18, 2026

*ಸುಂಟಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ : ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ*

ಆಗಷ್ಟ್ 19, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಸುಂಟಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ ದಿನಾಂಕ 09-08-2026 ರಂದು ಬೆಳಿಗ್ಗೆ…

*ಹೆಚ್ಚುವರಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕಾವೇರಮ್ಮೆ ಕೊಡವ ಅಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್*

ಆಗಷ್ಟ್ 18, 2026

*ಲಿಟಲ್ ಸ್ಕಾಲರ್ಸ್ ಅಕಾಡೆಮಿಯಿಂದ ರೈನ್‌ಕೋಟ್, ಪುಸ್ತಕ ವಿತರಣೆ*

ಆಗಷ್ಟ್ 18, 2026

*ಆದರ್ಶ ಸೇವಾ ರತ್ನ ಪ್ರಶಸ್ತಿ ಪ್ರದಾನ : ಕಲೆ, ಸಂಸ್ಕೃತಿಯ ಅನಾವರಣಕ್ಕೆ ಸಾಹಿತ್ಯ ಪರಿಷತ್ತು ವೇದಿಕೆಯಾಗಿದೆ : ಡಾ.ರಘುನಾಥ್ ಬಿ.ಎನ್*

ಆಗಷ್ಟ್ 18, 2026

*ಸಮಾಜ ವಿಜ್ಞಾನ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ*

ಆಗಷ್ಟ್ 18, 2026

*ಕಾಡಾನೆ ಹಾವಳಿ ತಡೆಗೆ ಒತ್ತಾಯ : ಸುಂಟಿಕೊಪ್ಪ ರೈತ ಸಂಘದಿಂದ ಪ್ರತಿಭಟನೆ*

ಆಗಷ್ಟ್ 18, 2026

*ಪೊನ್ನಂಪೇಟೆಯಲ್ಲಿ ಮಿನಿ ಉದ್ಯೋಗ ಮೇಳ : ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ದುಡಿಮೆಯ ದಾರಿ : ಸಿ.ಎಸ್.ಸಂಜನಾ*

ಆಗಷ್ಟ್ 18, 2026

*ಮಾನವ–ಪ್ರಾಣಿ ಸಂಘರ್ಷ, ಜಮ್ಮಾಮಲೆ ಸಮಸ್ಯೆ : ಅರಣ್ಯ ಸಚಿವರೊಂದಿಗೆ ಶಾಸಕ ಎ.ಎಸ್.ಪೊನ್ನಣ್ಣ ಚರ್ಚೆ*

ಆಗಷ್ಟ್ 18, 2026

*ಅಪ್ರಾಪ್ತ ಮಕ್ಕಳನ್ನು ದುಡಿಮೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ : ಮಧು*

ಆಗಷ್ಟ್ 18, 2026

*ಆ.22 ರಂದು “ಗದ್ದೆಹಳ್ಳ ಗದ್ದೆ ಆಟ”(ಜಿಜಿಎ) ವಿಶಿಷ್ಟ ಕಾರ್ಯಕ್ರಮ*

ಆಗಷ್ಟ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.