Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿ ಬ್ರಹ್ಮಾಕುಮಾರಿ ಲೈಟ್ ಹೌಸ್ ನಲ್ಲಿ ರಕ್ತದಾನ ಶಿಬಿರ*
  • *ಎಸ್‍ಐಆರ್ ಪ್ರಕ್ರಿಯೆ, ಸೆ.23 ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ : ಕರಡು ಮತದಾರರ ಪಟ್ಟಿ : ಜಿಲ್ಲೆಯಲ್ಲಿ 4,05,803 ಮಂದಿ ಮತದಾರರು : ಡಿಸಿ ಮಾಹಿತಿ *
  • *ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ)ಗೆ ಮಾರುಕಟ್ಟೆ ವಿಭಾಗದಲ್ಲಿ ರಾಜ್ಯ ಮಟ್ಟದ ಶ್ರೇಷ್ಠತಾ ಪ್ರಶಸ್ತಿ*
  • *ಪೂಂಪುಹಾರ್ ವರೆಗೆ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ : ಅ.26ರಿಂದ ತಲಕಾವೇರಿಯಿಂದ ಆರಂಭ*
  • *ಕಟ್ಟೆಮಾಡು ಸಕಾ೯ರಿ ಶಾಲೆಯಲ್ಲಿ ಹಿರಿಯ ಜೀವಿಗಳಿಗೆ ಗೌರವ ನಮನ*
  • *ಬುಡಕಟ್ಟು ಸಾಂಸ್ಕೃತಿಕ ಕಾರ್ಯಕ್ರಮ, ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ : ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಯುವಜನರ ಪಾತ್ರ ಮಹತ್ವದ್ದು : ಶಾಸಕ ಎ.ಎಸ್.ಪೊನ್ನಣ್ಣ*
  • *ಹಿರಿಯ ಜೀವಿಗಳಿಗೆ  ಮರಗೋಡು ಸಕಾ೯ರಿ ಶಾಲೆಯಲ್ಲಿ ಗೌರವ ನಮನ*
  • *ಪಾರಾಣೆಯ ಸಕಾ೯ರಿ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ಗೌರವ ಸಲ್ಲಿಕೆ ; ಕನ್ನಡದಲ್ಲಿ ಓದಿಯೂ ಉತ್ತಮ ಹುದ್ದೆಗೇರಲು ಸಾಧ್ಯ – ಕೆ.ಎ.ಉಮ್ಮರ್*
  • *ಮಳೆಗಾಗಿ ಸಚಿವರಿಂದ ವಿಶೇಷ ಪೂಜೆ*
  • *ಮುಖ್ಯಮಂತ್ರಿಗಳ ಕಾರ್ಯದರ್ಶಿ ನಕುಲ್ ಗೆ  ಕುಶಾಲನಗರದಲ್ಲಿ ಸನ್ಮಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಚೇನಂಡ ಕಪ್ ಹಾಕಿ ನಮ್ಮೆಯ ಆಯೋಜನಾ ಸಮಿತಿಯಿಂದ ಕೊಡಗಿನ ವಿವಿಧೆಡೆ 2200ಕ್ಕೂ ಹೆಚ್ಚಿನ ವೃಕ್ಷಾರೋಪಣ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಚೇನಂಡ ಕಪ್ ಹಾಕಿ ನಮ್ಮೆಯ ಆಯೋಜನಾ ಸಮಿತಿಯಿಂದ ಕೊಡಗಿನ ವಿವಿಧೆಡೆ 2200ಕ್ಕೂ ಹೆಚ್ಚಿನ ವೃಕ್ಷಾರೋಪಣ*

ಮೇ 7, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 7 NEWS DESK : ಹಾಕಿ ಕ್ರೀಡಾ ಪ್ರೇಮಿಗಳನ್ನು ತಿಂಗಳ ಕಾಲ ರಂಜಿಸಿದ ನಾಪೋಕ್ಲುವಿನ ಚೇನಂಡ ಕಪ್ ಹಾಕಿ ಉತ್ಸವದ ಹಂತದಲ್ಲಿಯೇ, “ಗೋಲಿಗೊಂದು ಗಿಡ” ಎನ್ನುವ ಚಿಂತನೆಯೊಂದಿಗೆ ಹಾಕಿ ಉತ್ಸವ ಆಯೋಜನಾ ಸಮಿತಿ ಸದ್ದುಗದ್ದಲವಿಲ್ಲದೆ ಜಿಲ್ಲೆಯ ವಿವಿಧೆಡೆಗಳಲ್ಲಿ 2200ಕ್ಕೂ ಹೆಚ್ಚಿನ ವೃಕ್ಷಾರೋಪಣ ಮಾಡುವ ಮೂಲಕ ಹಸಿರ ಪರಿಸರ ಸಂರಕ್ಷಣೆಗೆ ವಿಶಿಷ್ಟವಾದ ಕೊಡುಗೆಯನ್ನು ನೀಡಿದೆ. ಸುದ್ದಿಗೋಷ್ಠಿಯಲ್ಲಿ ಚೇನಂಡ ಕಪ್ ಹಾಕಿ ನಮ್ಮೆಯ ಆಯೋಜನಾ ಸಮಿತಿಯ ಪದಾಧಿಕಾರಿಗಳು ಉತ್ಸವದ ಯಶಸ್ವಿ ಆಯೋಜನೆಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಮಾತನಾಡಿ, ಚೇನಂಡ ಕಪ್ ಹಾಕಿ ಉತ್ಸವದಲ್ಲಿ ಪ್ರದರ್ಶನ ಪಂದ್ಯಗಳನ್ನು ಒಳಗೊಂಡಂತೆ ಒಟ್ಟು 385 ಪಂದ್ಯಗಳು ನಡೆದು 1520 ಗೋಲುಗಳು ದಾಖಲಾಗಿದೆ. ಗೋಲಿಗೊಂದು ಗಿಡ ಎನ್ನುವ ನಮ್ಮ ಪರಿಕಲ್ಪನೆಯನ್ನು ಮೀರಿ ಹೆಚ್ಚಿನ ಪ್ರಮಾಣದ ಗಿಡಗಳನ್ನು ವಿವಿಧೆಡೆಗಳಲ್ಲಿ ನೆಟ್ಟು, ಅವುಗಳ ಬೆಳವಣಿಗೆಯತ್ತ ನಿಗಾ ವಹಿಸಲಾಗಿದೆಯೆಂದು ಮಾಹಿತಿಯನ್ನಿತ್ತರು. ಚೇನಂಡ ಕುಟುಂಬಸ್ಥರ ಗೋಮಾಳ ಜಾಗದಲ್ಲಿ ನೆಟ್ಟ ಗಿಡಗಳು ಚೆನ್ನಾಗಿ ಬೆಳೆಯುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ವಿಭಾಗದಲ್ಲು ವೃಕ್ಷಾರೋಪಣ ಮಾಡಲಾಗಿದೆಯೆಂದು ತಿಳಿಸಿದರು. :: ಕಾಡು ಹಣ್ಣು ಹಂಪಲು ಗಿಡಗಳ ರಕ್ಷಣೆ :: ಚೇನಂಡ ಕಪ್ ಹಾಕಿ ಉತ್ಸವ ಸಮಿತಿ ಹಸಿರ ಪರಿಸರಕ್ಕೆ ಒತ್ತು ನೀಡುವ ಗಿಡಗಳನ್ನು ನೆಡುವ ಕಾರ್ಯಕ್ರಮದೊಂದಿಗೆ, ಕಾಡು ಜಾತಿಯ ಹಣ್ಣು ಹಂಪಲು ಗಿಡಗಳ ಸಸ್ಯಾಭಿವೃದ್ಧಿ ಮಾಡಿ, ಮತ್ತೆ ಅರಣ್ಯ ಭಾಗಗಳಲ್ಲಿ ಅವುಗಳನ್ನು ಬೆಳೆಸುವ ಚಿಂತನೆಯನ್ನು ಹೊಂದಿರುವುದಾಗಿ ತಿಳಿಸಿದ ಅವರು, ಜಿಲ್ಲೆಯ ಯಾವುದೇ ಭಾಗದಲ್ಲಿರುವವರು ಅಪರೂಪದ ಕಾಡು ಜಾತಿಯ ಹಣ್ಣು ಹಂಪಲು ಗಿಡಗಳನ್ನು ಹೊಂದಿದ್ದು, ಆ ಬಗ್ಗೆ ಮಾಹಿತಿ ನೀಡಿದಲ್ಲಿ ಚೇನಂಡ ಹಾಕಿ ನಮ್ಮೆ ಸಮಿತಿ ಆ ಗಿಡಗಳ ಸಸ್ಯಾಭಿವೃದ್ಧಿಗೆ ಅಗತ್ಯ ಪ್ರಯತ್ನಗಳನ್ನು ಮಾಡಲಿದೆಯೆಂದು ಸ್ಪಷ್ಟಪಡಿಸಿದರು. :: 500ಕ್ಕೂ ಹೆಚ್ಚಿನ ಜೇನುಪೆಟ್ಟಿಗೆ ವಿತರಣೆ :: ಚೇನಂಡ ಕಪ್ ಹಾಕಿ ಉತ್ಸವದ ಸಂದರ್ಭ ಪ್ರತಿ ಪಂದ್ಯದಲ್ಲಿ ಪರಾಭವಗೊಂಡ ತಂಡಕ್ಕೆ ಜೇನು ಪೆಟ್ಟಿಗೆಯನ್ನು ವಿತರಿಸಿದೆ. ಅದರಂತೆ ಒಟ್ಟು ಪಂದ್ಯಾವಳಿಯಲ್ಲಿ 500 ಕ್ಕೂ ಹೆಚ್ಚಿನ ಜೇನುಪೆಟ್ಟಿಗೆ ವಿತರಿಸಲಾಗಿದೆ. ಈ ಪೆಟ್ಟಿಗೆಗಳಿಗೆ ಜೇನುಹುಳುಗಳ ಅಗತ್ಯವಿರುವವರು ಸಮಿತಿಯನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿಕೊಂಡರು. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಗಳೊಂದಿಗೆ ಜೇನುಪೆಟ್ಟಿಗೆ ವಿತರಣೆಯ ಮೂಲಕ ಜೇನುಕೃಷಿಗೆ ಉತ್ತೇಜನ ನೀಡುವ ಮೂಲಕ ಹಾಕಿ ಉತ್ಸವದ ಆಯೋಜನೆಯೊಂದಿಗೆ ಚೇನಂಡ ಕುಟುಂಬವು ಪರಿಸರ ಸಂರಕ್ಷಣೆಯ ನೆಲೆಯಲ್ಲಿ ಮಹತ್ವದ ಹೆಜ್ಜೆಯೊಂದನ್ನಿರಿಸಿರುವುದಾಗಿ ಸಂತಸ ವ್ಯಕ್ತಪಡಿಸಿದರು. :: ಪೂರ್ಣ ಸಹಕಾರ :: ಮುಂದಿನ 2027ನೇ ಸಾಲಿನಲ್ಲಿ ಪೊನ್ನಂಪೇಟೆಯಲ್ಲಿ “ಅಜ್ಜಿಕುಟ್ಟೀರ ಕಪ್ ಹಾಕಿ ನಮ್ಮೆ” ನಡೆಯಲಿದ್ದು, ಉತ್ಸವ ಆಯೋಜನೆ ಮಾಡುವ ಅಜ್ಜಿಕುಟ್ಟೀರ ಕುಟುಂಬಕ್ಕೆ ಸರ್ವ ಸಹಕಾರವನ್ನು ಚೇನಂಡ ಕುಟುಂಬ ನೀಡಲಿದೆಯೆಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಚೇನಂಡ ಕಪ್ ಹಾಕಿ ನಮ್ಮೆ ಆಯೋಜನಾ ಸಮಿತಿಯ ಅಧ್ಯಕ್ಷರಾದ ಚೇನಂಡ ಕಂಬಣಿ ಕರುಂಬಯ್ಯ, ಕಾರ್ಯಾಧ್ಯಕ್ಷರಾದ ಚೇನಂಡ ದೀನಾ ಚಂಗಪ್ಪ, ಕಾರ್ಯದರ್ಶಿ ಚೇನಂಡ ಮಧು ಮಾದಯ್ಯ, ಸಹ ಕಾರ್ಯದರ್ಶಿ ಚೇನಂಡ ತಮ್ಮಿ ತಮ್ಮಯ್ಯ, ವಕ್ತಾರರಾದ ಚೇನಂಡ ಸುರೇಶ್ ನಾಣಯ್ಯ ಉಪಸ್ಥಿತರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿ ಬ್ರಹ್ಮಾಕುಮಾರಿ ಲೈಟ್ ಹೌಸ್ ನಲ್ಲಿ ರಕ್ತದಾನ ಶಿಬಿರ*

ಆಗಷ್ಟ್ 24, 2026

*ಎಸ್‍ಐಆರ್ ಪ್ರಕ್ರಿಯೆ, ಸೆ.23 ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ : ಕರಡು ಮತದಾರರ ಪಟ್ಟಿ : ಜಿಲ್ಲೆಯಲ್ಲಿ 4,05,803 ಮಂದಿ ಮತದಾರರು : ಡಿಸಿ ಮಾಹಿತಿ *

ಆಗಷ್ಟ್ 24, 2026

*ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ)ಗೆ ಮಾರುಕಟ್ಟೆ ವಿಭಾಗದಲ್ಲಿ ರಾಜ್ಯ ಮಟ್ಟದ ಶ್ರೇಷ್ಠತಾ ಪ್ರಶಸ್ತಿ*

ಆಗಷ್ಟ್ 24, 2026

*ಎಸ್‍ಐಆರ್ ಪ್ರಕ್ರಿಯೆ, ಸೆ.23 ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ : ಕರಡು ಮತದಾರರ ಪಟ್ಟಿ : ಜಿಲ್ಲೆಯಲ್ಲಿ 4,05,803 ಮಂದಿ ಮತದಾರರು : ಡಿಸಿ ಮಾಹಿತಿ *

ಆಗಷ್ಟ್ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಆ.24:-ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‍ಐಆರ್)-2026 ರ ಪರಿಷ್ಕøತ ವೇಳಾ ಪಟ್ಟಿಯ ಕರಡು ಮತದಾರರ ಪಟ್ಟಿಯನ್ನು…

*ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ)ಗೆ ಮಾರುಕಟ್ಟೆ ವಿಭಾಗದಲ್ಲಿ ರಾಜ್ಯ ಮಟ್ಟದ ಶ್ರೇಷ್ಠತಾ ಪ್ರಶಸ್ತಿ*

ಆಗಷ್ಟ್ 24, 2026

*ಪೂಂಪುಹಾರ್ ವರೆಗೆ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ : ಅ.26ರಿಂದ ತಲಕಾವೇರಿಯಿಂದ ಆರಂಭ*

ಆಗಷ್ಟ್ 24, 2026

*ಕಟ್ಟೆಮಾಡು ಸಕಾ೯ರಿ ಶಾಲೆಯಲ್ಲಿ ಹಿರಿಯ ಜೀವಿಗಳಿಗೆ ಗೌರವ ನಮನ*

ಆಗಷ್ಟ್ 24, 2026

*ಬುಡಕಟ್ಟು ಸಾಂಸ್ಕೃತಿಕ ಕಾರ್ಯಕ್ರಮ, ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ : ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಯುವಜನರ ಪಾತ್ರ ಮಹತ್ವದ್ದು : ಶಾಸಕ ಎ.ಎಸ್.ಪೊನ್ನಣ್ಣ*

ಆಗಷ್ಟ್ 24, 2026

*ಹಿರಿಯ ಜೀವಿಗಳಿಗೆ  ಮರಗೋಡು ಸಕಾ೯ರಿ ಶಾಲೆಯಲ್ಲಿ ಗೌರವ ನಮನ*

ಆಗಷ್ಟ್ 24, 2026

*ಪಾರಾಣೆಯ ಸಕಾ೯ರಿ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ಗೌರವ ಸಲ್ಲಿಕೆ ; ಕನ್ನಡದಲ್ಲಿ ಓದಿಯೂ ಉತ್ತಮ ಹುದ್ದೆಗೇರಲು ಸಾಧ್ಯ – ಕೆ.ಎ.ಉಮ್ಮರ್*

ಆಗಷ್ಟ್ 24, 2026

*ಮಳೆಗಾಗಿ ಸಚಿವರಿಂದ ವಿಶೇಷ ಪೂಜೆ*

ಆಗಷ್ಟ್ 23, 2026

*ಮುಖ್ಯಮಂತ್ರಿಗಳ ಕಾರ್ಯದರ್ಶಿ ನಕುಲ್ ಗೆ  ಕುಶಾಲನಗರದಲ್ಲಿ ಸನ್ಮಾನ*

ಆಗಷ್ಟ್ 23, 2026

*ಚೆಟ್ಟಳ್ಳಿ ಪ್ರೌಡಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ಜೀವಿಗಳಿಗೆ ಗೌರವ ನಮನ*

ಆಗಷ್ಟ್ 23, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.