Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಬೇಕಲ್ ಆಯುರ್ವೇದ ಪಂಚಕರ್ಮ ಮತ್ತು ಬಾಣಂತಿ ಆರೈಕೆ ಕೇಂದ್ರ ಉದ್ಘಾಟನೆ*
  • *ವಾರಾಂತ್ಯದ ಪಾರ್ಟಿ ಹೆಸರಿನಲ್ಲಿ ಹಣ ವಸೂಲಿ : ಕೊಡಗು ಪೊಲೀಸರ ಎಚ್ಚರಿಕೆ*
  • *ಆತ ಜಗ್ಗಬಾರದು…. ಕುಗ್ಗಬಾರದು ಎಂದಾದರೆ…. ತಡಮಾಡದೆ ಜಗ್ಗನ ನೆರವಿಗೆ ಮುಂದಾಗಿ… ಪ್ಲೀಸ್…*
  • *ವಿರಾಜಪೇಟೆಯಲ್ಲಿ ಭರತನಾಟ್ಯ ವಿದ್ಯಾರ್ಥಿನಿಯರಿಗೆ ಪವಿತ್ರ ಗೆಜ್ಜೆ ಪೂಜೆ*
  • *ಶ್ರೀ ಬಸವೇಶ್ವರ ದೇವಾಲಯದಲ್ಲಿ ‘ವಾಯ್ಸ್ ಆಫ್ ವಿರಾಜಪೇಟೆ’ ಗಾಯನ ಸ್ಪರ್ಧೆ*
  • *ಪಂಜರಪೇಟೆಯಲ್ಲಿ ದೇವಾಲಯದ ಮಾದರಿಯ ವಿಶಿಷ್ಟ ಗಣಪತಿ ಮಂಟಪ: ಆಕರ್ಷಕ ಕಾರಂಜಿಗೆ ಸಾರ್ವಜನಿಕರ ಮೆಚ್ಚುಗೆ*
  • *ಸೆ.19 ರಂದು ರಾಷ್ಟ್ರೀಯ ಲೋಕ ಅದಾಲತ್*
  • *ಪೌಷ್ಟಿಕ ಆಹಾರ ಸೇವನೆ ಹಾಗೂ ಮಾತೃ ವಂದನಾ ಯೋಜನೆ ಸದುಪಯೋಗಕ್ಕೆ ಸುಮಂಗಲ ಜಿ. ಹಿರೇಮನಿ ಕರೆ*
  • *ಕೊಡವ ಸಂಸ್ಕೃತಿಯ ಜೀವಂತಿಕೆಗೆ ಕೃಷಿಯೇ ಮೂಲ : ಮಹೇಶ್ ನಾಚಯ್ಯ*
  • *ಶ್ರೀ ಭಗವಾನ್ ವಿಶ್ವಕರ್ಮರ ಆರಾಧನೆಗೆ ಆದ್ಯತೆ ನೀಡಿ : ಹೆಚ್.ಬಿ.ಲಿಂಗಮೂರ್ತಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಆತ ಜಗ್ಗಬಾರದು…. ಕುಗ್ಗಬಾರದು ಎಂದಾದರೆ…. ತಡಮಾಡದೆ ಜಗ್ಗನ ನೆರವಿಗೆ ಮುಂದಾಗಿ… ಪ್ಲೀಸ್…*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಆತ ಜಗ್ಗಬಾರದು…. ಕುಗ್ಗಬಾರದು ಎಂದಾದರೆ…. ತಡಮಾಡದೆ ಜಗ್ಗನ ನೆರವಿಗೆ ಮುಂದಾಗಿ… ಪ್ಲೀಸ್…*

ಸೆಪ್ಟೆಂಬರ್ 17, 20265 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಆತ ಜಗ್ಗಬಾರದು…. ಕುಗ್ಗಬಾರದು ಎಂದಾದರೆ…. ತಡಮಾಡದೆ ಜಗ್ಗನ ನೆರವಿಗೆ ಮುಂದಾಗಿ… ಪ್ಲೀಸ್

ನಮ್ ಜಗ್ಗನಿಗೆ ಹುಷಾರಿಲ್ಲವಂತೆ ಎಂಬ ಸುದ್ದಿ ಬರಸಿಡಿಲಿನಂತೆ ಬಡಿದಾಗ.. ನಂಬಲೇ ಆಗಲಿಲ್ಲ.. ಛೇ.. ಏನಾಯಿತು ಎಂದು ವಿವರ ಕೇಳಿದಾಗ.. ಮನ ಮುದುಡಿಹೋಗಿತ್ತು. ಆದ್ರೂ ಎಲ್ಲೋ ಒಂದು.. ಸಮಾಧಾನ.. ಎಂಥಹದ್ದೇ ಸಂಕಷ್ಟ ಎದುರಾಗಲಿ.. ಆ ಕಲ್ಲು ಬಂಡೆಯಂತೆ, ಅವನ್ನೆಲ್ಲಾ ಎದುರಿಸುವ ಶಕ್ತಿ ಜಗ್ಗನಿಗೆ ಸಿದ್ದಿಸಿದೆ. ಎಂತೆಂಥ ಛಾಲೆಂಜ್ ಗಳು, ಜೀವನದ ಕಷ್ಟಗಳನ್ನು ಕಳೆದ 30 ವಷ೯ಗಳಲ್ಲಿ ನೋಡಿರುವ ಜಗ್ಗ ಈಗ ತನಗೊದಗಿರುವ ಈ ಆರೋಗ್ಯದ ಮಹಾ ಛಾಲೆಂಜ್ ನ್ನು ಕೂಡ ಗೆಲ್ಲಬಲ್ಲ.. ಆ ಆತ್ಮಸ್ಥೆಯ೯ ಜಗ್ಗನಲ್ಲಿದೆ. ಇದು ಜಗ್ಗನನ್ನು ಗೊತ್ತಿರುವ ಪ್ರತೀಯೋವ೯ ಗೆಳೆಯನಿಗೂ ತಿಳಿದಿರುವ ಸತ್ಯ. ಜಗ್ಗ ಒಂಥರಾ ಜಗ್ಗು ದಾದಾನಂತೆ.. ಸುಲಭವಾಗಿ ಮಣಿಯಲಾರ.. ಮಣಿಸಲಾಗದಂಥ ಆತ್ಮ ವಿಶ್ವಾಸ ನಮ್ಮ ಜಗ್ಗನಲ್ಲಿದೆ.. …………..… ಜಗ್ಗ… ಎಂದೇ ಪತ್ರಿಕಾವಲಯದಲ್ಲಿ ಚಿರಪರಿಚಿತನಾಗಿರುವ ಜಗದೀಶ್ ಬೆಳ್ಯಪ್ಪ, ವೖತ್ತಿಯನ್ನು ಪ್ರಾರಂಭ ಮಾಡಿದ್ದೇ ಕೊಡಗಿನ ಪತ್ರಕತ೯ರ ಗರಡಿ ಮನೆ ಶಕ್ತಿ ಪತ್ರಿಕೆಯಿಂದ .. ಶಕ್ತಿಯಲ್ಲಿ ಅದಾಗಷ್ಟೇ, ಎಂ.ಎನ್. ಮಂಜುನಾಥ್, ಎಂ.ಇ. ಮಹಮ್ಮದ್ ಮತ್ತು ಚಿ. ನಾ. ಸೋಮೇಶ್ ಎಂಬ ತ್ರಿಮೂರ್ತಿಗಳು ಉಪಸಂಪಾದಕರಾಗಿದ್ದರು. ಇವರು ಶಕ್ತಿಯಿಂದ ಕಾಲು ಹೊರಕ್ಕಿಡುತ್ತಿದ್ದಂತೆಯೇ ಅಲ್ಲಿನ ಸೀಟ್ ಗೆ ಬಂದು ಕುಳಿತವರು. ಕೆ.ವಿ. ಪರಮೇಶ್ ಮತ್ತು ಜಗದೀಶ್ ಬೆಳ್ಯಪ್ಪ ಎಂಬಿಬ್ಬರು ಹದಿಹರೆಯದವರು. ಹೇಳಿಕೇಳಿ, ಈ ಪರಮೇಶ್.. ಸಾಧು ಸಜ್ಜನ.. ನಗುಮುಖದಿಂದ ಎಲ್ಲವನ್ನೂ ಗಮನಿಸುವ ಸಾಮಥ್ಯ೯ ಹೊಂದಿದ್ದವರು. ಈ ಪರಮೇಶ್ ಗೆ ಉಲ್ಟಾ ವ್ಯಕ್ತಿತ್ವದವನೇ ಈ ಜಗ್ಗ….. ಬಹಳ ಮೂಡಿ ವ್ಯಕ್ತಿತ್ವ. ತನಗನ್ನಿಸಿದ್ದನ್ನು ಎಂಥವರೇ ಆಗಿರಲಿ ಮುಖಕ್ಕೆ ಹೊಡೆದಂತೆ ಹೇಳಿಬಿಡುತ್ತಿದ್ದ. ತಾನು ನಂಬಿದ್ದನ್ನು ಸರಿ ಎಂದೇ ವಾದಿಸುತ್ತಿದ್ದ, ಕೊನೆಗೆ ಅದನ್ನು ಸಾಧಿಸಿಬಿಡುತ್ತಿದ್ದ. ಆಮೇಲೊಂದು ತುಂಟ ನಗು…. ಶಕ್ತಿಯ ಸುದ್ದಿ ಡೆಸ್ಕ್ ಗಳನ್ನು ಸದಾ ಕಾಲ ನಗು, ತುಂಟತನ, ಬೇಕೆಂದಾಗ ಗಾಂಭೀಯ೯ದಲ್ಲಿರಿಸಿಕೊಂಡು ಜೀವಿಸುತ್ತಿದ್ದ ಪರಮೇಶ್ ಮತ್ತು ಜಗ್ಗನ ಜತೆ ಆಮೇಲೆ ಕುಡೆಕಲ್ ಸಂತೋಷ್ ಕೂಡ ಸೇರಿಕೊಂಡರು. ಇವರೆಲ್ಲರ ಮಧ್ಯೆ ಶಕ್ತಿಗೆ ಆಗಿಂದಾಗ್ಗೆ ಭೇಟಿ ನೀಡುತ್ತಿದ್ದ ನಾನು.. !! ಇವರಿಗೆಲ್ಲಾ ಜಗಳವಾದರೆ ಅದನ್ನು ಬಿಡಿಸುವ ದೊಡ್ಡ ಸವಾಲು ನನ್ನ ಮೇಲಿತ್ತು.!!! …………… ಶಕ್ತಿ ಕಛೇರಿಯಲ್ಲಿ ಹಿರಿಯರು ಇಲ್ಲದೇ ಹೋದಾಗ ಈ ಹೈಕಳದ್ದೇ ದಬಾ೯ರು. ಒಬ್ಬರನ್ನೊಬ್ಬರು ಕಾಲೆಳೆದುಕೊಂಡು ನಗುತ್ತಿದ್ದರೆ ಸಮಯ ಕೂಡ ಮೌನವಾಗಿರುತ್ತಿದ್ದಂಥ ಕಾಲವದು. ಜಗ್ಗ, ಎಲ್ಲಿದೆ ಸ್ಪೆಷಲ್ ಸುದ್ದಿ ಎಂದು ಹಿರಿಯರಾದ ಶ್ರೀ ಜಿ.ರಾಜೇಂದ್ರ ಅಬ್ಬರಿಸಿದರೆ.. ಜಗ್ಗನಿಂದ ನಂಗೊಂದು ಫೋನು.. ದೊರೆ. ಒಂದ್ ರೌಂಡ್ ಹೋಗಿಬರೋಣ.. ಬಾ. ಸರಿ.. ನನ್ನ ವ್ಯಾನಿನಲ್ಲಿ ಸಿಕ್ಕಸಿಕ್ಕ ಕಡೆ ಹೊರಟರೆ, ವಾಪಾಸ್ ಬರುವಾಗ ವಾರಕ್ಕೆ ಆಗುವಷ್ಟು, ಪ್ರತೀ ದಿನಕ್ಕೆ ಆಗುವಷ್ಟು ಸ್ಪೆಷಲ್ ಸ್ಟೋರಿ ರೆಡಿ. ಇದ್ಯಾಕೋ. ನನ್ ಸ್ಟ್ಲೆಲಿಗೆ ಅಲ್ಲ. ನೀನೇ ಬರೆದು ಬಿಡು.. ಎಂದು ಮಾನವೀಯ ವರದಿಗಳನ್ನು ನನಗೆ ಬರೆಯಲು ಕೊಡುತ್ತಾ ಕ್ರೆಡಿಟ್ ನಲ್ಲಿ ಪಾಲನ್ನೂ ಕೇಳದ ನಿಸ್ವಾಥಿ೯ ಹುಡುಗ ಈ ಜಗ್ಗ. ರಾಜಕಾರಣ, ಕ್ರೈಂ ಅಂದರೆ ಜಗ್ಗ ಬಿಡುತ್ತಿರಲಿಲ್ಲ. ಆಳಕ್ಕಿಳಿದು ವಿಶೇಷವಾದದ್ದನ್ನು ಹೊರತೆಗೆಯುತ್ತಿದ್ದ ಅಪರೂಪದ ಪತ್ರಕತ೯, ಕೊಂಚ ತುಂಟ, ಭಂಡ, ಒರಟ, ಮೂಗಿನ ಮೇಲೆ ಸಿಟ್ಟು ಇವೆಲ್ಲ ಇದ್ದರೂ ಕೆಲಸದ ವಿಚಾರಕ್ಕೆ ಬಂದರೆ.. ಜಗ್ಗ ದೈತ್ಯನಂತೆ ಕೆಲಸ ಮಾಡುತ್ತಿದ್ದ, ಸುದ್ದಿ ಬರೆಯುವುದು ಮಾತ್ರವಲ್ಲ, ಶಕ್ತಿಯಲ್ಲಿ ಪ್ರಿಟಿಂಗ್ ಮೇಷಿನ್ ಚಾಲನೆ ಗೊತ್ತಿತ್ತು. ಅದಾಗ ತಾನೇ ಉದ್ಯಮಕ್ಕೆ ಪರಿಚಯವಾಗಿದ್ದ ಕಂಪ್ಟೂಟರ್ ಕೂಡ ಗೊತ್ತಿತ್ತು. ಕಲಿಯಬೇಕೆಂಬ ಹಂಬಲ ಸದಾ ಇತ್ತು. ಬೇಕೆಂದಾಗ ಸೋಮಾರಿಯಾಗಿ ಬಿಡುತ್ತಿದ್ದ, ಅದೇ ಅನಿವಾರ್ಯತೆ ಎದುರಾದಾಗ ರಾಕ್ಷಸನಂತೆ ಕೆಲಸ ಮಾಡುತ್ತಿದ್ದ. ತಾನು ಪ್ರೀತಿಸಿದ ರೋಹಿಣಿಯನ್ನು ಕೂಡ ಯಾರಿಗೂ ಬೆದರದೆ ತಲಕಾವೇರಿಗೆ ಕರೆದೊಯ್ದು ತಾಳಿ ಕಟ್ಟಿ ಮಡಿಕೇರಿಗೆ ಬಂದು ನಮ್ಮಿಬ್ಬರಿಗೂ ಮದುವೆಯಾಯಿತು ಎಂದು ಅಬ್ಬರಿಸಿದ್ದ ಜಗ್ಗ… ಮಡಿಕೇರಿಯ ನವೀನ್ ಎಲೆಕ್ಟ್ರಾನಿಕ್ಸ್ ನ ನವೀನ್ ಮನೆಯಲ್ಲಿ ಈ ದಂಪತಿ ವಾಸ. ಒಂದು ಕಡೆ ಸಂಸಾರ ತಾಪತ್ರಯದ ಜತೆಜತೆಗೇ ಆಗ ಪ್ರಪಂಚಕ್ಕೆ ಕಾಲಿಟ್ಟಿದ್ದ ಗೆಜೆಟ್ ಗಳ ಕುತೂಹಲವೂ ಶುರುವಾಯಿತು. Geget ಗಳ ವಿಷಯವನ್ನು ಜಗ್ಗ ಎಲ್ಲರಿಗಿಂತಲೂ ಹೆಚ್ಚಾಗಿಯೇ ತಿಳಿದುಕೊಂಡ. ಶಕ್ತಿಯಲ್ಲಿದ್ದಷ್ಟು ವಷ೯ ಎಂಥೆಂಥ ಸ್ಪೆಷಲ್ ಸ್ಟೋರಿ ಮಾಡಿ ರಾಜ್ಯಮಟ್ಟದ ಪ್ರಶಸ್ತಿಗಳನ್ನೂ ಜಗ್ಗ ತನ್ನದಾಗಿಸಿಕೊಂಡಿದ್ದ. ಶಕ್ತಿಯ ಎದುರಿದ್ದ ಪುಟ್ಟ ಕ್ಯಾಂಟೀನ್ ನಲ್ಲಿ ಮಸಾಲೆ ವಡೆ, ಖಾರರೊಟ್ಟಿ, ಬೈಟು ಕಾಫಿಯೇ ಜಗ್ಗ ನಮಗಲ್ಲಾ ನೀಡುತ್ತಿದ್ದ ಪಾಟಿ೯… ಖಡಕ್ ವ್ಯಕ್ತಿತ್ವದ ಜಗ್ಗ ಸುದ್ದಿ ವಿಚಾರದಲ್ಲಿಯೇ ಇರಲಿ, ವೈಯಕ್ತಿಕ ವಿಚಾರದಲ್ಲಿಯೇ ಆಗಿರಲಿ, ತಾನು ನಂಬಿದ್ದ ತತ್ವ, ಆದಶ೯ಗಳನ್ನು ಎಂದಿಗೂ ಬಿಟ್ಟುಕೊಡುತ್ತಿರಲಿಲ್ಲ. ಮುಂದೆ ಆತ ಟಿವಿ 9 ಸೇರಿಕೊಂಡು ಕೊಡಗು ಜಿಲ್ಲಾ ವರದಿಗಾರನಾದ. ವಿಧಾನಸಭೆ, ಲೋಕಸಭೆ  ಎಲೆಕ್ಷನ್  ವರದಿಗಳನ್ನು ಜಗ್ಗ ಯಾವುದೇ ಆಮಿಷಗಳಿಗೆ ಬಲಿಯಾಗದೇ ಅದ್ಬುತವಾಗಿಯೇ ಮಾಡಿದ್ದ. ಅವನ ಜತೆ ನಾನೂ ಎಲೆಕ್ಷನ್ ರಿಪೋಟಿ೯ಂಗ್ ಗೆ ತೆರಳುತ್ತಿದ್ದೆ. ಅದೊಂದು ಕಡೆ, ರಾಜಕಾರಣಿಯೋವ೯ರು ನಮ್ಮ ಕಾರ್ ತಡೆದರು. ಕೈಯಲ್ಲಿ ದೊಡ್ಡದೊಂದು ಪ್ಯಾಕೇಟ್, ಹೌ ಆರ್ ಯು ಜಗದೀಶ್, ನಿಮ್ಮ ವರದಿ ನೋಡ್ತಾ ಇರುತ್ತೇನೆ. ನಮಗೂ ಸ್ವಲ್ಪ ಮೈಲೇಜ್ ಕೊಡಿ ಎಂದರು ಅವರು. ಜಗ್ಗ ಎoದಿನಂತೆ ಮುಗಳುನಕ್ಕು ಮೀಸೆ ತಿರುವಿದ. ಆ ರಾಜಕಾರಣಿ, ಕೈಯಲ್ಲಿದ್ದ ಪ್ಯಾಕೇಟ್ ಜಗ್ಗನ ಕೈಯಲ್ಲಿ ಇಟ್ಟು, ಬೇಕಾಗುತ್ತೆ.. ಇಟ್ಟುಕೊಳ್ಳಿ ಎಂದರು. ಜಗ್ಗನಿಗೆ ಎಲ್ಲಿತ್ತೋ ಕೋಪ.. ಹಿಗ್ಗಾಮುಗ್ಗಾ ಬೈಯ್ದುಬಿಟ್ಟ. ಜಗದೀಶನ ಶಿವ ತಾಂಡವ ನೋಡಿದ್ದೇ ಆ ವ್ಯಕ್ತಿ ಪ್ಯಾಕೇಟ್ ಸಹಿತ ಅಲ್ಲಿಂದ ಕಾಲ್ತಿತ್ತರು. ನಂಗೆ ದುಡ್ಡು ಕೊಡೋಕೇ ಬರುತ್ತಾನೆ. ನಿಯತ್ತಿಲ್ಲದವನು. ಇನ್ನು ಇವನ ಒಂದೇ ಒಂದು ಸುದ್ದೀನೂ ಕವರ್ ಮಾಡೋಲ್ಲ ಕಣೋ ಎಂಬ ಪ್ರತಿಜ್ಞೆ ಕೈಗೊಂಡು ಬಿಟ್ಟ ಜಗ್ಗ… ಅದೊಂದು ವರ್ಷದ
ಅಕ್ಟೋಬರ್ ನಲ್ಲಿ ನಮಗಿಬ್ಬರಿಗೂ ರಿಲ್ಯಾಕ್ಸ್ ಬೇಕೆನ್ನಿಸಿತ್ತು. ಊಟಿಗೆ ಹೋಗಿ ಬರೋಣ ಎಂದು ವ್ಯಾನ್ ಹಿಂಬದಿ ಗ್ಯಾಸ್ ಸಿಲಿಂಡರ್ ಹೇರಿಕೊಂಡು ಊಟಿಗೆ ತೆರಳಿ ಮೂರು ದಿನ ಹಾಯಾಗಿ ಕಾಲಕಳೆದೆವು. ಊಟಿಯಿಂದ ಮಡಿಕೇರಿಗೆ ಪ್ರವೇಶಿಸುತ್ತಿದ್ದಂತೆಯೇ ಮಂಗಳೂರಿನಲ್ಲಿ ವಿಮಾನ ಪತನದ ಸುದ್ದಿ ಅಪ್ಪಳಿಸಿತ್ತು. ಜಗ್ಗ ತಾನಾಗಿಯೇ ರಜೆ ಕ್ಯಾನ್ಸಲ್ ಮಾಡಿ ಮಂಗಳೂರಿಗೆ ದೌಡಾಯಿಸಿಬಿಟ್ಟ..ವೃತ್ತಿ ಪರತೆ ಮೆರೆದುಬಿಟ್ಟ. ಮಂಗಳೂರು ಏರ್ ಕ್ರಾಶ್ ಬಗ್ಗೆ ಜಗ್ಗ ಟಿವಿ 9 ಗೆ ಮಾಡಿದ್ದ ಸುದ್ದಿ ಇಂದಿಗೂ ಜನಮನದಲ್ಲಿದೆ. ಊಟ, ತಿಂಡಿಯಿಲ್ಲದೇ ಇಂಥ ಅನೇಕ ರಿಪೋಟ್೯ಗಳನ್ನು ಟಿವಿ 9, ಶಕ್ತಿ, ಸಂಯುಕ್ತ ಕರ್ನಾಟಕ, ವಿಜಯಕನಾ೯ಟಕ ಪತ್ರಿಕೆಗಳಿಗೆ ಜಗ್ಗ ಮಾಡಿದ್ದ ಇತಿಹಾಸ.. ದಾಖಲಾಗಿದೆ. ಟಿವಿ 9 ಎಂಬ ಕನ್ನಡದ ಪ್ರಸಿದ್ದ ವಾಹಿನಿಗೆ ಕೊಡಗನ್ನು ಮೊದಲು ತೆರೆದಿಟ್ಟದ್ದು ಆ ಮೂಲಕ ಕೊಡಗಿನ ಅನೇಕ ವಿಶೇಷತೆಗಳನ್ನು ( ಹಬ್ಬ, ದೇವಾಲಯ ಉತ್ಸವ, ಪುಪ್ಪವನ, ಮಹಿಳೆಯರ ಕಾರ್ ಕಲಿಕೆಯ ಆಸಕ್ತಿ,..ಹೀಗೆ ಒಂದೇ ಎರಡೇ…) ಟಿವಿ ವೀಕ್ಷಕರಿಗೆ ಪರಿಚಯಿಸಿದ್ದೇ ಈ ಜಗ್ಗ.. ಇವನ ಸುದ್ದಿ ಸಂಗ್ರಹಣಾ ಸಾಮಥ್ಯ೯ ನೋಡಿಯೇ ಟಿವಿ 9 ನವರು ಜಿಲ್ಲೆಯಲ್ಲಿ ಕೆಲಸ ಮಾಡಿದ್ದು ಸಾಕಿನ್ನು, ಬೆಂಗಳೂರಿಗೆ ಬನ್ನಿ ಎಂದು ಅಲ್ಲಿಗೆ ಕರೆಯಿಸಿಕೊಂಡರು. ಜಗ್ಗ ಟಿವಿ 9 ನ ಡಿಜಿಟಲ್ ವಿಭಾಗದಲ್ಲಿ ಈಗ ಡೆಪ್ಯೂಟಿ ಎಡಿಟರ್ ಆಗಿದ್ದಾರೆ. ಕಳೆದ ವಷ೯ ಮುದ್ದಿನ ಮಗಳು ರುಶಾಲಿಯನ್ನು ಬೆಂಗಳೂರಿನಲ್ಲಿ ಬಹಳ ಚಂದವಾಗಿ ಮದುವೆ ಮಾಡಿಕೊಟ್ಟ ಜಗ್ಗ, ಅಲ್ಲಿ ಗೆಳೆಯರೊಂದಿಗೆ ಸಂಭ್ರಮಿಸಿದ್ದ.. ಮಗಳ ಮದುವೆಯಾಗಿ 6 ತಿಂಗಳು ಕಳೆಯುವದರೊಳಗಾಗಿ ಜಗ್ಗನಿಗೆ ಮಾರಕ ಕಾಯಿಲೆ ಮತ್ತೆ ಬಡಿದುಕೊಂಡು ಬಿಟ್ಟಿತ್ತು. ಸರಿಸುಮಾರು 35 ಲಕ್ಷ ವೆಚ್ಚ ಮಾಡಿ ಚಿಕಿತ್ಸೆ ಪಡೆದು ಗುಣಮುಖನಾಗುವಷ್ಟರಲ್ಲಿಯೇ ಇದೀಗ ಮತ್ತೆ ಆ ಕಾಯಿಲೆಯ ಪುನರಾವತ೯ನೆಯಾಗಿದೆ. ಈಗ ಚಿಕಿತ್ಸೆಗೆ ಕನಿಷ್ಟ 15 ಲಕ್ಷ  ಬೇಕಾಗಿದೆ. ಏನಾದರು, ಯಾರಿಂದಲಾದರೂ ಸಹಾಯ ಆಗುತ್ತಾ ಎಂದ ಜಗ್ಗನ ಮಾತಿನಲ್ಲಿ ವಿನಂತಿಯಿ
ಸಮಾಜದ ಜನತೆಗೊಂದು ವಿನಂತಿಯಿತ್ತು. ನನ್ನನ್ನು ಉಳಿಸಿಕೊಳ್ಳಿ ಎಂಬ ಕೋರಿಕೆಯಿತ್ತು.. … ಈ ಜಗ್ಗ, ಇದ್ದ ಕೆಲಸಕ್ಕೆ, ಇದ್ದ ಹುದ್ದೆಗೆ, ಇದ್ದ ಜಿಲ್ಲೆಯಲ್ಲಿ, ಮನಸ್ಸು ಮಾಡಿದ್ದರೆ ಕೋಟ್ಯಾಧೀಶನಾಗಲು ಎಲ್ಲಾ ಅವಕಾಶಗಳಿತ್ತು. ಆತನ ಸಂಪಕ೯ವೂ ಹಾಗೇ ಇತ್ತು.. ಆಗಿನ ಕಾಲದಲ್ಲಿ ರಾಜಕಾರಣಿಗಳನ್ನು ಸುದ್ದಿಗೋಷ್ಟಿಗಳಲ್ಲಿ ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಈ ಜಗ್ಗ, ಪ್ರಶ್ನೆಗಳ ಸುರಿಮಳೆಯೊಂದಿಗೆ ಅವರ ಬೆವರಿಳಿಸಿಬಿಡುತ್ತಿದ್ದ. ಕಕ್ಕಾಬಿಕ್ಕಿಯನ್ನಾಗಿ ಮಾಡುತ್ತಿದ್ದ. ಆಗ ಮಡಿಕೇರಿ ಕೋಟೆಯಲ್ಲಿದ್ದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂದಿನ ಕೇಂದ್ರ ಸಚಿವ ಎಂ.ಧನಂಜಯ್ ಕುಮಾರ್ ಸುದ್ದಿಗೋಷ್ಟಿ. ಅನೇಕ ಪ್ರಮುಖರು ಅಲ್ಲಿದ್ದರು ಜಗ್ಗನಿಗೆ ಏನಾಯಿತೋ… ಮಿಸ್ಟರ್ ಧನಂಜಯ್ ಕುಮಾರ್… ಎಂದವನೇ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿಬಿಟ್ಟ.. ಧನಂಜಯ್ ಕುಮಾರ್ ಅನೇಕ ವಿವಾದಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಹೇಗೆಲ್ಲಾ ಮಾಡಿ ತಪ್ಪಿಸಿಕೊಂಡು ಬಿಟ್ಟರು… ಸುದ್ದಿಗೋಷ್ಟಿ ಮುಗಿದ ಬಳಿಕ ಧನಂಜಯ್ ಕುಮಾರ್,, ದೆಹಲಿಯಲ್ಲಿಯೂ ಇಂಥ ಪ್ರಶ್ನೆ ಕೇಳಿರಲಿಲ್ಲ ಮಾರಾಯ್ರೆ. ನೀವು ಸಿಕ್ಕಿಸಿ ಹಾಕಿಬಿಟ್ರಿ… ಮುಂದೆ ಎಂದಾದರೂ ಉತ್ತರ ಕೊಡುತ್ತೇನೆ ಎಂದು ಹೋಗಿದ್ದು ಇನ್ನೂ ನೆನಪಿದೆ. ಹೆಂಗೆ ಎಂದು ಜಗ್ಗ ಆಗ ನಕ್ಕಿದ್ದ.. ಶಕ್ತಿಗಾಗಿ ನಾನು 50 ದಿನಗಳ ಕಾಲ ಸತತವಾಗಿ ವೀರಪ್ಪನ್ ನಿಂದ ಡಾ. ರಾಜ್ ಕುಮಾರ್ ಅಪಹರಣದ ವರದಿ ಬರೆದಾಗ ಅದನ್ನು ತನ್ನದೇ ವರದಿಯೇನೋ ಎಂಬಂತೆ ಅತ್ಯಂತ ಕಾಳಜಿಯಿಂದ ಪೇಜ್ ಡಿಸೈನ್ ( ಪುಟ ವಿನ್ಯಾಸ ) ಮಾಡಿ ಆ ವರದಿಗೊಂದು ಚಂದ ಕಾಣಿಸಿದ್ದ ಜಗ್ಗ. ಆಮೇಲೆ ಗೊತ್ತಾದದ್ದು,, ಈ ಸರಣಿ ಮುಗಿಯುವವರೆಗೆ ನಂಗೆ ನೈಟ್ ಶಿಫ್ಟ್ ಕೊಡಿ ಎಂದು ತಾನೇ ರಾತ್ರಿ ಪಾಳಿ ಹಾಕಿಸಿಕೊಂಡು ರಾತ್ರಿಯೆಲ್ಲಾ ಪೇಪರ್ ಬಂಡಲ್ ಮೇಲೆ ಮಲಗಿ ಪೇಪರ್ ಪ್ರಿಂಟ್ ಆದ ಮೇಲೆ ಅದರ ಅಂದ ನೋಡಿ ಮನೆಗೆ ಹೋಗುತ್ತಿದ್ದನಂತೆ ಈ ಜಗ್ಗ.. ……… ಬರೆಯುತ್ತಾ ಹೋದರೆ.. ಅದು ನೆನಪುಗಳ ಮೆರವಣಿಗೆ. * ಜಗ್ಗ ಈಗ ಸಂಕಷ್ಟದಲ್ಲಿದ್ದಾನೆ. ಕೊಡಗಿನ ಜನತೆಗೆ ಅನೇಕ ಸಂಕಷ್ಟಗಳು ಎದುರಾದಾಗ ತನ್ನ ವರದಿಗಳ ಮೂಲಕ ಇದೇ ಜಗ್ಗ ಜನತೆಯ ಧ್ವನಿಯಾಗಿದ್ದ..
ಜನತೆಯ ಭರವಸೆಯಾಗಿದ್ದ.. ಜನತೆಯ ಆಸರೆಯಾಗಿದ್ದ… *ಈಗ ಸಮಾಜದ ಸರದಿ….* ಜಗ್ಗನಿಗೆ ನೆರವಾಗಿ… ಆಥಿ೯ಕ ಸಹಾಯ ಮಾಡಿ, ತನ್ನ 30 ವಷ೯ಗಳ ಪತ್ರಿಕೋದ್ಯಮದಲ್ಲಿ ಎಲ್ಲಿಯೂ, ಯಾರಿಗೂ ಹಣಕ್ಕಾಗಿ ಕೈಚಾಚದ ಜಗ್ಗ, ಕೊಟ್ಟದನ್ನೂ ಸ್ವೀಕರಿಸದೇ ತನಗೊಲಿದ ಜೀವನವನ್ನೇ ಸುಖವಾಗಿ ಜೀವಿಸಿದ್ದ ಜಗದೀಶ್ ಬೆಳ್ಯಪ್ಪ ಮತ್ತೆ ಎಂದಿನಂತೆ ಆಗಬೇಕಾಗಿದೆ. ಹನಿಹನಿ ಕೂಡಿ ಹಳ್ಳ ಎಂಬಂತೆ ನಾವೆಲ್ಲರೂ ನಮ್ಮಿಂದಾದಷ್ಟು ಆಥಿ೯ಕ ನೆರವನ್ನು ಜಗ್ಗನ ಬ್ಯಾಂಕ್ ಅಕೌಂಟ್ ಗೆ ಹಾಕಿ.. ಅವನಿಗೆ ನೆರವಾಗಿ. ತಡಮಾಡಬೇಡಿ, ಮತ್ತಷ್ಟು ಯೋಚಿಸಬೇಡಿ… ಜಗ್ಗನನ್ನು ಸುದ್ದಿಗಳಿಗಾಗಿ ಉಪಯೋಗಿಸಿಕೊಂಡ ಈ ಸಮಾಜದ ಪರವಾಗಿ ನಾವೀಗ ಆತನ ಆರೋಗ್ಯಕ್ಕಾಗಿ ನೆರವಾಗಬೇಕಾಗಿದೆ. ನಿಮ್ಮ ಸಹಾಯ ನೀಡಿ ಎಂದು ಜಗ್ಗನ ಗೆಳೆಯರೆಲ್ಲರ ಪರವಾಗಿ ಕೋರಿಕೆ.

ಜಗ್ಗನ ಬ್ಯಾಂಕ್ ಅಕೌಂಟ್ ನಂಬರ್…
Bank Name: Axis Bank
Account Number: 009010101338636
Primary Account Holder:
Jagadish P B
IFSC Code: UTIB0000009
Account Type: Savings A/c
—————
*Phone, Google Pay*
9060137282
8660529389
8217409303
8762986572
………… ಜಗ್ಗ… ಎಂದೂ ಜಗ್ಗಿಲ್ಲ.. ಎಂದಿಗೂ ಕುಗ್ಗಿಲ್ಲ.. ಕುಗ್ಗಬಾರದು… ಜಗ್ಗಬಾರದು.. ಅಷ್ಟೇ ಪ್ರಾಥ೯ನೆ. ಪ್ರೀತಿಯಿಂದ – *ಅನಿಲ್ ಹೆಚ್.ಟಿ.* ಮಡಿಕೇರಿ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಬೇಕಲ್ ಆಯುರ್ವೇದ ಪಂಚಕರ್ಮ ಮತ್ತು ಬಾಣಂತಿ ಆರೈಕೆ ಕೇಂದ್ರ ಉದ್ಘಾಟನೆ*

ಸೆಪ್ಟೆಂಬರ್ 18, 2026

*ವಾರಾಂತ್ಯದ ಪಾರ್ಟಿ ಹೆಸರಿನಲ್ಲಿ ಹಣ ವಸೂಲಿ : ಕೊಡಗು ಪೊಲೀಸರ ಎಚ್ಚರಿಕೆ*

ಸೆಪ್ಟೆಂಬರ್ 18, 2026

*ವಿರಾಜಪೇಟೆಯಲ್ಲಿ ಭರತನಾಟ್ಯ ವಿದ್ಯಾರ್ಥಿನಿಯರಿಗೆ ಪವಿತ್ರ ಗೆಜ್ಜೆ ಪೂಜೆ*

ಸೆಪ್ಟೆಂಬರ್ 17, 2026

*ವಾರಾಂತ್ಯದ ಪಾರ್ಟಿ ಹೆಸರಿನಲ್ಲಿ ಹಣ ವಸೂಲಿ : ಕೊಡಗು ಪೊಲೀಸರ ಎಚ್ಚರಿಕೆ*

ಸೆಪ್ಟೆಂಬರ್ 18, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ NEWS DESK ಸೆ.18 : ಹೊರ ಜಿಲ್ಲೆಗಳ ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳ ಮೂಲಕ “ವಾರಾಂತ್ಯದ ಪಾರ್ಟಿ” ಆಯೋಜಿಸುವುದಾಗಿ…

*ಆತ ಜಗ್ಗಬಾರದು…. ಕುಗ್ಗಬಾರದು ಎಂದಾದರೆ…. ತಡಮಾಡದೆ ಜಗ್ಗನ ನೆರವಿಗೆ ಮುಂದಾಗಿ… ಪ್ಲೀಸ್…*

ಸೆಪ್ಟೆಂಬರ್ 17, 2026

*ವಿರಾಜಪೇಟೆಯಲ್ಲಿ ಭರತನಾಟ್ಯ ವಿದ್ಯಾರ್ಥಿನಿಯರಿಗೆ ಪವಿತ್ರ ಗೆಜ್ಜೆ ಪೂಜೆ*

ಸೆಪ್ಟೆಂಬರ್ 17, 2026

*ಶ್ರೀ ಬಸವೇಶ್ವರ ದೇವಾಲಯದಲ್ಲಿ ‘ವಾಯ್ಸ್ ಆಫ್ ವಿರಾಜಪೇಟೆ’ ಗಾಯನ ಸ್ಪರ್ಧೆ*

ಸೆಪ್ಟೆಂಬರ್ 17, 2026

*ಪಂಜರಪೇಟೆಯಲ್ಲಿ ದೇವಾಲಯದ ಮಾದರಿಯ ವಿಶಿಷ್ಟ ಗಣಪತಿ ಮಂಟಪ: ಆಕರ್ಷಕ ಕಾರಂಜಿಗೆ ಸಾರ್ವಜನಿಕರ ಮೆಚ್ಚುಗೆ*

ಸೆಪ್ಟೆಂಬರ್ 17, 2026

*ಸೆ.19 ರಂದು ರಾಷ್ಟ್ರೀಯ ಲೋಕ ಅದಾಲತ್*

ಸೆಪ್ಟೆಂಬರ್ 17, 2026

*ಪೌಷ್ಟಿಕ ಆಹಾರ ಸೇವನೆ ಹಾಗೂ ಮಾತೃ ವಂದನಾ ಯೋಜನೆ ಸದುಪಯೋಗಕ್ಕೆ ಸುಮಂಗಲ ಜಿ. ಹಿರೇಮನಿ ಕರೆ*

ಸೆಪ್ಟೆಂಬರ್ 17, 2026

*ಕೊಡವ ಸಂಸ್ಕೃತಿಯ ಜೀವಂತಿಕೆಗೆ ಕೃಷಿಯೇ ಮೂಲ : ಮಹೇಶ್ ನಾಚಯ್ಯ*

ಸೆಪ್ಟೆಂಬರ್ 17, 2026

*ಶ್ರೀ ಭಗವಾನ್ ವಿಶ್ವಕರ್ಮರ ಆರಾಧನೆಗೆ ಆದ್ಯತೆ ನೀಡಿ : ಹೆಚ್.ಬಿ.ಲಿಂಗಮೂರ್ತಿ*

ಸೆಪ್ಟೆಂಬರ್ 17, 2026

*ಮೋದಿ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ: 76 ಮಂದಿ ರಕ್ತದಾನ*

ಸೆಪ್ಟೆಂಬರ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.