ಲೇಖಕ: admin

ಮಡಿಕೇರಿ NEWS DESK ಅ.1 : ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣದಲ್ಲಿ ತೊಡಗಿರುವ ಉದ್ಯಮಪತಿ ಬಂಡವಾಳಶಾಹಿಗಳು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮೂಲಕ ಕೊಡವರ ಮಾತೃಭೂಮಿ ಕೊಡವಲ್ಯಾಂಡ್ ಮೇಲೆ ನಡೆಸುತ್ತಿರುವ ನಯವಂಚನೆಯ ಸಂಚನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬಯಲು ಮಾಡಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಶ್ರೀಮಂಗಲದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಗಣೇಶೋತ್ಸವ, ದಸರಾ, ಹಾಕಿ ಉತ್ಸವ, ದೇವಾಲಯಗಳ ಹಬ್ಬಗಳಿಗೆ ದೇಣಿಗೆ ನೀಡುತ್ತಿರುವ ಭೂಮಾಫಿಯಾಗಳು ದಾನ, ಧರ್ಮ, ಪರಿಸರ ಸಂರಕ್ಷಣೆಯ ನಾಟಕವಾಡುತ್ತಿದ್ದಾರೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಸಮಾಜಸೇವೆಯ ಮುಖವಾಡ ತೊಟ್ಟುಕೊಂಡಿದ್ದಾರೆ. ಈ ನಯವಂಚಕತನದ ಷಡ್ಯಂತ್ರವನ್ನು ಸಿಎನ್‌ಸಿ ಸಂಘಟನೆ ಹೋರಾಟದ ಮೂಲಕ ಬಯಲು ಮಾಡಲಿದೆ ಎಂದರು. ತೆಲಂಗಾಣ ಮತ್ತು ಆಂಧ್ರ ಭಾಗದ ಬಂಡವಾಳಶಾಹಿಗಳು ಕೊಡವರ ಭೂಮಿಯನ್ನು ದೊಡ್ಡ…

Read More

ಮಡಿಕೇರಿ ಅ.1 NEWS DESK : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಅಕ್ಷರ ಹಬ್ಬ” ಒಂದು ದಿನದ ಸಾಹಿತ್ಯ ಉತ್ಸವ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಪರಿಷತ್ ನ ಅಧ್ಯಕ್ಷ ಅನಂತಶಯನ ಉದ್ಘಾಟಿಸಿದರು. ಕಾರ್ಯಕ್ರಮದ ಸಂಯೋಜಕರಾದ ದೀಕ್ಷಿತಾ ವರ್ಕಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಡಿಕೇರಿ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಸ.ಪ.ಪೂ ಕಾಲೇಜಿನ ಪ್ರಾಚಾರ್ಯರಾದ ಪಿ.ಆರ್.ವಿಜಯ, ಕರಾಮುವಿ ಪ್ರಾದೇಶಿಕ ನಿರ್ದೇಶಕರಾದ ಸ್ಮಿತಾ ಸುಬ್ಬಯ್ಯ  ಭಾಗವಹಿಸಿದ್ದರು. ಪ್ರಗತಿಪರ ಕೃಷಿ ಮಂದ್ರೀರಾ ತೇಜಸ್ ನಾಣಯ್ಯ ತಮ್ಮ ಅನುಭವವನ್ನು ಹಂಚಿಕೊಂಡರು. ವಿಜ್ಞಾನಿ ಡಾ. ಜೆ.ಜಿ.ಮಂಜುನಾಥ್ ಅವರನ್ನು ವಿದ್ಯಾರ್ಥಿಗಳು ಸಂದರ್ಶಿಸಿದರು. ಕಥಾ ವಚನ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್ ನಡೆಸಿಕೊಟ್ಟರು. ಕನ್ನಡ ಉಪನ್ಯಾಸಕ  ಪೂರ್ಣಿಮಾ ಕವಿತೆ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಸ್ಪರ್ಧೆಗಳು, ರಸಪ್ರಶ್ನೆ, ಪುಸ್ತಕ ಪ್ರದರ್ಶನ, ಕಲಾಪ್ರದರ್ಶನ, ಸಾಧಕರ ಸಂದರ್ಶನ, ಪುಸ್ತಕ ಪರಿಚಯ, ಟ್ರೆಶರ್ ಹಂಟ್  ಇತ್ಯಾದಿ ಕಾರ್ಯಕ್ರಮಗಳು …

Read More

ಪೊನ್ನಂಪೇಟೆ ಅ.1 NEWS DESK : ಕೊಡಗು ಅನ್ವಾರುಲ್ ಹುದಾ ಯುಎಇ ಸಮಿತಿ ವತಿಯಿಂದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷರಾದ ದುದ್ದಿಯಂಡ ಹೆಚ್.ಸೂಫಿ ಹಾಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಮಿಲಾದ್ ಸಮಾವೇಶದಲ್ಲಿ ಪಾಲ್ಗೊಳ್ಳಲು ದುಬೈಗೆ ಆಗಮಿಸಿದ್ದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಕೊಡಗು ಅನ್ವಾರುಲ್ ಹುದಾ ಯುಎಇ ಸಮಿತಿ ಪದಾಧಿಕಾರಿಗಳು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ  ಕೊಡಗು ಅನ್ವಾರುಲ್ ಹುದಾ ಯುಎಇ ಸಮಿತಿಯ ಉಪಾಧ್ಯಕ್ಷ ಅಶ್ರಫ್ ಕುಂಜಿಲ, ಜುಬೈರ್ ಎಮ್ಮೆಮಾಡು, ಕೋಶಾದಿಕಾರಿ ರಫೀಕ್ ಹಾಜಿ ಚಾಮಿಯಾಲ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡು, ಜಂಟಿ ಕಾರ್ಯದರ್ಶಿ ಮುಜೀಬ್ ಕಡಂಗ, ಸಹ ಕಾರ್ಯದರ್ಶಿಗಳಾದ ನಿಸಾರ್ ಗುಂಡಿಕೆರೆ, ಮುಜ್ಹಮ್ಮಿಲ್ ಚಾಮಿಯಾಲ, ಸಂಯೋಜಕರಾದ ಮಮ್ಮದಲಿ ಉಸ್ತಾದ್ ಹಾಗೂ ಅಫ್ಸಲ್ ಅನ್ವಾರಿ ಮೊದಲಾದವರು ಹಾಜರಿದ್ದರು.

Read More

ಮಡಿಕೇರಿ ಅ.1 NEWS DESK : ಕುಶಾಲನಗರದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ(ಎ.ಪಿ.ಸಿ.ಎಂ.ಎಸ್‌.ನಿ) ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ವತಿಯಿಂದ ನೀಡುವ‌ 2023-24 ನೇ ಸಾಲಿನ ಜಿಲ್ಲಾ ಮಟ್ಟದ ಪ್ರಶಸ್ತಿ ಹಾಗೂ ಬಹುಮಾನ ದೊರಕಿದೆ. ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಪೈಕಿ ಉತ್ತಮ ಕಾರ್ಯನಿರ್ವಹಿಸಿ ಈ ಸಾಲಿನಲ್ಲಿ ಪ್ರಥಮ ಸ್ಧಾನ ಪಡೆದಿದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಕೇಂದ್ರ ಬ್ಯಾಂಕ್ ನ ಅಧ್ಯಕ್ಷ ಬಾಂಡ್ ಗಣಪತಿ ಸಂಘದ ಅಧ್ಯಕ್ಷರಾದ ಎಂ.ಎನ್. ಕುಮಾರಪ್ಪ ಅವರಿಗೆ ಬಹುಮಾನವನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಗದೀಶ್ ಹಾಜರಿದ್ದರು.

Read More

ಮಡಿಕೇರಿ NEWS DESK ಸೆ.30 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಅ.3 ರಿಂದ ಅ.12ರ ವರೆಗೆ ದೇವಿಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ ಎಂದು ದೇವಾಲಯದ ಟ್ರಸ್ಟಿ ಹಾಗೂ ಅಲಂಕಾರ ಸಮಿತಿಯ ಅಧ್ಯಕ್ಷ ಸಿ.ಎಸ್.ರಂಜಿತ್ ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ದಂಡಿನ ಮಾರಿಯಮ್ಮ ದೇವಾಲಯವು 94ನೇ ವರ್ಷದ ಅದ್ದೂರಿ ದಸರಾ ಉತ್ಸವವನ್ನು ಆಚರಿಸುತ್ತಿದ್ದು, ಹತ್ತು ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದೆ ಎಂದು ಹೇಳಿದರು. ಅ.3 ರಂದು ಬೆಳ್ಳಿಯ ಅಲಂಕಾರ, ಅ.4 ರಂದು ಹೂವಿನ ಅಲಂಕಾರ, ಅ.5 ರಂದು ಬೇವಿನ ಅಲಂಕಾರ, ಅ.6 ರಂದು ವಿಶೇಷ ಖಾದ್ಯ ಅಲಂಕಾರ, ಅ.7 ರಂದು ನಿಂಬೆ ಹಣ್ಣಿನ ಅಲಂಕಾರ, ಅ.8 ರಂದು ಮಹಾಲಕ್ಷ್ಮಿ ಅಲಂಕಾರ, ಅ.9 ರಂದು ಶಾರದ ದೇವಿಯ ಅಲಂಕಾರ, ಅ.10 ರಂದು ಬಳೆಯ ಅಲಂಕಾರ, ಅ.11 ರಂದು ಹಣ್ಣಿನ ಅಲಂಕಾರ, ಅ.12…

Read More

ಮಡಿಕೇರಿ NEWS DESK ಸೆ.30 : ಮಡಿಕೇರಿ ದಸರಾ ಕ್ರೀಡಾ ಸಮಿತಿ ವತಿಯಿಮದ ಐತಿಹಾಸಿಕ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅ.5, 6, 7 ಮತ್ತು 9 ರಂದು ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗಿದೆಯೆಂದು ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅ.5 ರಂದು ಬೆಳಗ್ಗೆ 6.30 ಗಂಟೆಗೆ ರಸ್ತೆ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪುರುಷರಿಗೆ ಮತ್ತು ಮಹಿಳೆೆಯರಿಗೆ ಜನರಲ್ ತಿಮ್ಮಯ್ಯ ವೃತ್ತದಿಂದ ಕ್ಯಾಪಿಟಲ್ ವಿಲೇಜ್‌ವರೆಗೆ, 1 ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಜ.ತಿಮ್ಮಯ್ಯ ವೃತ್ತದಿಂದ ಆಸ್ಪತ್ರೆ ಗೇಟ್‌ವರೆಗೆ, 5 ರಿಂದ 7ನೇ ತರಗತಿ ಮಕ್ಕಳಿಗೆ ಹೋಟೆಲ್ ಓಲ್ಡ್ ಈಸ್ಟ್ ಅಂಡ್‌ವರೆಗೆ, 8 ರಿಂದ 10ನೇ ತರಗತಿ ಮಕ್ಕಳಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಪೋವರೆಗೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸುದರ್ಶನ್ ವೃತ್ತದವರೆಗೆ ರಸ್ತೆ ಓಟ ನಡೆಯಲಿದೆಯೆಂದು ತಿಳಿಸಿದರು. ಅಂದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಪುರುಷರ ವಾಲಿಬಾಲ್ ಪಂದ್ಯಾವಳಿ, ಸಾರ್ವಜನಿಕ ಮುಕ್ತ ವಿಭಾಗದ ಫುಟ್ಬಾಲ್(5+2) ಪಂದ್ಯಾವಳಿ ನಡೆಯಲಿದೆ.…

Read More

ಮಡಿಕೇರಿ NEWS DESK ಸೆ.30 : ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಅ.19 ಮತ್ತು 20 ರಂದು ನಗರದಲ್ಲಿ ಚೆಸ್ ತರಬೇತಿ ಮತ್ತು “ಮುಕ್ತ ರ‍್ಯಾಪಿಡ್ ಚೆಸ್ ಪಂದ್ಯಾವಳಿ”ಯನ್ನು ಆಯೋಜಿಸಲಾಗಿದೆಯೆಂದು ಕ್ಲಬ್ ಅಧ್ಯಕ್ಷ ಸುದಯ್ ನಾಣಯ್ಯ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತ ಮಾಹಿತಿ ನೀಡಿದ ಅವರು, ನಗರದ ಜೂನಿಯರ್ ಕಾಲೇಜಿನಲ್ಲಿ ಅ.19 ರಂದು 10 ವರ್ಷದೊಳಗಿನ ಮಕ್ಕಳಿಗೆ ಫಿಡೆ ಇನ್‌ ಸ್ಟ್ರಕ್ಟರ್ ಮತ್ತು ಫಿಡೆ ಆರ್ಬಿಟರ್ ಶ್ರೀಪದ್ ಕೆ.ವಿ. ಅವರು ಚೆಸ್ ತರಬೇತಿಯನ್ನು ನೀಡಲಿದ್ದಾರೆ ಎಂದರು. ಅ.20 ರಂದು ಚೆಸ್ ಪಂದ್ಯಾವಳಿಯು 10 ವರ್ಷದೊಳಗಿನ ವಿಭಾಗ, 16 ವರ್ಷದೊಳಗಿನ ವಿಭಾಗ ಮತ್ತು ಮುಕ್ತ ವಿಭಾಗಗಳಲ್ಲಿ ನಡೆಯಲಿದೆ. ಮುಕ್ತ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 5 ಸಾವಿರ, ದ್ವಿತೀಯ 4 ಸಾವಿರ, ತೃತೀಯ 3500, ನಾಲ್ಕನೇ ಸ್ಥಾನ 3 ಸಾವಿರ, 5ನೇ ಸ್ಥಾನ 2500, 6ನೇ ಸ್ಥಾನ 2 ಸಾವಿರ, 7ನೇ ಸ್ಥಾನ 1500 ಮತ್ತು 8 ನೇ ಸ್ಥಾನ ಪಡೆಯುವವರಿಗೆ 1 ಸಾವಿರ…

Read More

ಕುಶಾಲನಗರ NEWS DESK ಸೆ.30 : ಕುಶಾಲನಗರ ಸಮೀಪದ ಕೂಡ್ಲೂರು ಬಳಿ ವೀರಭೂಮಿ ಜನಪದ ಗ್ರಾಮದಲ್ಲಿ ಜನರ ಬಳಿಗೆ ಜಾನಪದ ಅದ್ದೂರಿ ಕಾರ್ಯಕ್ರಮ ನಡೆಯಿತು. ಕನ್ನಡದ ಖ್ಯಾತ ದೇಸಿ ವಾಹಿನಿ ಜನಪದ ಸಿರಿ ಕನ್ನಡ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಪ್ರಖ್ಯಾತ ಜಾನಪದ ಕಲಾವಿದೆ ಪದ್ಮಶ್ರೀ ಡಾ ರಾಣಿ ಮಾಚಯ್ಯ ಅವರ ತಂಡದಿಂದ ಕೊಡಗಿನ ಉಮ್ಮತ್ತಾಟ್ ನೃತ್ಯ, ಜೇನು ಕುರುಬ ಬುಡಕಟ್ಟು ಜನಪದ ಖ್ಯಾತರಾದ ಜೆ ಕೆ ರಾಮ ಅವರ ತಂಡದಿಂದ ಬುಡಕಟ್ಟು ನೃತ್ಯ, ಮಂಡ್ಯದ ಖ್ಯಾತ ಸೋಭಾನೆ ಕಲಾವಿದರು, ವೀರಗಾಸೆ, ಗೊರವ ಕುಣಿತ, ಅಂತರರಾಷ್ಟ್ರೀಯ ಖ್ಯಾತಿಯ  ಕಲಾವಿದ ಕೆ ಪಿ ದೇವರಾಜ್ ತಂಡದಿಂದ ಪೂಜಾ ಕುಣಿತ, ಕಂಸಾಳೆ ಕಲಾವಿದ ಮಂಜು ತಂಡದಿಂದ ಕಂಸಾಳೆ ನೃತ್ಯ, ಜಾನಪದ ಗಾಯನ, ಬಂಜಾರ ನೃತ್ಯ ಪ್ರದರ್ಶನ, ಡೊಳ್ಳು ಕುಣಿತ, ಸಿದ್ಧಿ ಬುಡಕಟ್ಟು ನೃತ್ಯ ಜಾದು ಪ್ರದರ್ಶನ ನಡೆಯಿತು. ಜನಪದ ಸಿರಿ ಕನ್ನಡದ ಸಂಪಾದಕರಾದ ಜರಗನಹಳ್ಳಿ ಕಾಂತರಾಜು ಅವರು ಕಾರ್ಯಕ್ರಮ ಉಸ್ತುವಾರಿ ವಹಿಸಿದ್ದರು. ಇದೇ ಸಂದರ್ಭ ಸ್ಥಳೀಯ ಗಣ್ಯರು ಮತ್ತು ಕಲಾವಿದರಿಗೆ ಜನಪದ ಸಿರಿ…

Read More

ವಿರಾಜಪೇಟೆ NEWS DESK ಸೆ.30 : ವಿರಾಜಪೇಟೆ ಪುರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನ ದೇಚಮ್ಮ ಕಾಳಪ್ಪ ಹಾಗೂ ಉಪಾಧ್ಯಕ್ಷರಾಗಿ ಫಸಿಹಾ ತಬುಸುಮ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಬಿಜೆಪಿಯ ಬೊಪ್ಪಂಡ ಸುನಿತಾ ಜೂನಾ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ಬೋವಿರಿಯಂಡ ಆಶಾ ಸುಬ್ಬಯ್ಯ ಅವರಿಗೆ ಸೋಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ 9 ಮತಗಳು ಮತ್ತು ಬಿಜೆಪಿ ಅಭ್ಯರ್ಥಿಗಳ ಪರವಾಗಿ 6 ಮತಗಳು ಚಲಾವಣೆಗೊಂಡವು. ಸುಮಾರು 15 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದಿರುವ ಬಗ್ಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಹರ್ಷ ವ್ಯಕ್ತಪಡಿಸಿದರು. ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು.

Read More

ಮಡಿಕೇರಿ ಸೆ.30 NEWS DESK : ಐತಿಹಾಸಿಕ ಮಡಿಕೇರಿ ದಸರಾ ಉತ್ಸವ ಒಂದೂವರೆ ಶತಮಾನದ ಉದ್ದಕ್ಕೂ ನಡೆದು ಬಂದ ಹಾದಿಯ ಪಥವನ್ನು ಗುರುತಿಸುವ ನಿಟ್ಟಿನಲ್ಲಿ ಹಿರಿಯ ಪತ್ರಕರ್ತ ಅನಿಲ್ ಹೆಚ್.ಟಿ. ಅವರು ರಚಿಸಿರುವ ‘ಮಡಿಕೇರಿ ಜನೋತ್ಸವ ದಸರಾ ಕಾಫಿ ಟೇಬಲ್ ಪುಸ್ತಕ’ವನ್ನು ಭಾನುವಾರ ಅನಾವರಣಗೊಳಿಸಲಾಯಿತು. ನಗರದ ರೆಡ್ ಬ್ರಿಕ್ಸ್ ಹೋಟೆಲ್‍ನ ಸತ್ಕಾರ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಡಿಕೇರಿ ದಸರಾ ಜನೋತ್ಸವ ಪುಸ್ತಕವನ್ನು ಅನಾವರಣಗೊಳಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿಗಳು, ಸುಮಾರು ಒಂದೂವರೆ ಶತಮಾನದ ಮಡಿಕೇರಿ ದಸರಾ ಉತ್ಸವ ನಡೆದು ಬಂದ ಹಾದಿಯ ಬಗ್ಗೆ ಸ್ಪಷ್ಟವಾದ ಮಾಹಿತಿಗಳಿಲ್ಲ. ಇಂತಹ ಸಂದರ್ಭ ಅನಿಲ್ ಅವರು ದಸರಾ ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಪುಸ್ತಕವೊಂದನ್ನು ಹೊರ ತಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂಬರುವ ದಿನಗಳಲ್ಲಿ ಮಡಿಕೇರಿ ದಸರಾ ಉತ್ಸವ ನಡೆಸಿರುವ ಬಗ್ಗೆ ಸಮಗ್ರ ‘ದಾಖಲೀಕರಣ’ ಮಾಡಲಾಗುತ್ತದೆಂದು ತಿಳಸಿದರು. ಮಡಿಕೇರಿ ಮತ್ತು ಮೈಸೂರು ದಸರಾ ಉತ್ಸವ ಆಚರಣೆಗೆ ಸಾಕಷ್ಟು…

Read More