ಮಡಿಕೇರಿ ನ.1 NEWS DESK : ಕೊಡವ ಮಕ್ಕಡ ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಬೊಳ್ಳಜಿರ ಬಿ.ಅಯ್ಯಪ್ಪ, ಉಪಾಧ್ಯಕ್ಷರಾಗಿ ಬಾಳೆಯಡ ಪ್ರತೀಶ್ ಪೂವಯ್ಯ, ಚೆಪ್ಪುಡಿರ ರಾಕೇಶ್ ದೇವಯ್ಯ ಹಾಗೂ ತೆನ್ನೀರ ಟೀನಾ ಚಂಗಪ್ಪ ನೇಮಕಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಪುತ್ತರಿರ ಕರುಣ್ ಕಾಳಯ್ಯ, ಜಂಟಿ ಕಾರ್ಯದರ್ಶಿಯಾಗಿ ಕೇಲೇಟಿರ ದೇವಯ್ಯ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಪೊನ್ನೋಲತಂಡ ವಿನೋದ್ ಉತ್ತಪ್ಪ, ಮಡ್ಲಂಡ ಮೋನೀಶ್ ಸುಬ್ಬಯ್ಯ, ಚೊಟ್ಟೇಯಂಡ ಕಾರ್ಸನ್ ಮುತ್ತಪ್ಪ, ಬಾಳೆಯಂಡ ದಿವ್ಯಾ ಮಂದಪ್ಪ, ಪುತ್ತರಿರ ಶಿವು ನಂಜಪ್ಪ, ಕುಳುವಂಡ ಶೃತಿ ಪೂಣಚ್ಚ, ಪಚ್ಚಾರಂಡ ನಿಶಾ ಸುಬ್ರಮಣಿ ಪೇರಿಯಂಡ ಜಯಂತಿ ಉತ್ತಪ್ಪ, ಶಾಂತೆಯಂಡ ಶ್ವೇತ ಕಾರ್ಯಪ್ಪ, ಆಪಾಡಂಡ ಝಾನ್ಸಿ ಗಣಪತಿ, ಪೆಬ್ಬಟ್ಟೀರ ಶೀತಲ್ ಕಾರ್ಯಪ್ಪ, ಕರವಂಡ ಸೀಮಾ ಗಣಪತಿ, ಪೇರಿಯಂಡ ಯಶೋಧ, ಬೋಟ್ಟೊಳಂಡ ನಿವ್ಯಾ ದೇವಯ್ಯ, ಚೀಯಕ್ ಪೂವಂಡ ಶ್ವೇತನ್ನ್ ಚಂಗಪ್ಪ ಆಯ್ಕೆಯಾಗಿದ್ದಾರೆ. ಸಂಘದ ಸಲಹೆಗಾರರಾಗಿ ಕುಲ್ಲೇಟಿರ ಅಜಿತ್ ನಾಣಯ್ಯ, ಐಚಂಡ ರಶ್ಮಿ ಮೇದಪ್ಪ, ಉಡುವೇರ ರೇಖಾರಘು ಆಯ್ಕೆಯಾಗಿದ್ದು, ಹಿರಿಯ ವಕೀಲರಾದ ಮಂಡೇಟಿರ ಬಿದ್ದಪ್ಪ ಕಾನೂನು…
ಲೇಖಕ: admin
ಮಡಿಕೇರಿ ನ.1 NEWS DESK : ಕೊಡಗು ಜಿಲ್ಲಾಡಳಿತ ವತಿಯಿಂದ 69 ನೇ ಕನ್ನಡ ರಾಜ್ಯೋತ್ಸವವನ್ನು ನಗರದ ಕೋಟೆ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಕನ್ನಡಾಂಬೆ ಭುವನೇಶ್ವರಿಗೆ ಪುಷ್ಪಾರ್ಚನೆಯ ಮೂಲಕ ಗೌರವ ಸಲ್ಲಿಸಿ ಸಚಿವರು ನಾಡಿನ ಜನತೆಗೆ ಸಂದೇಶ ನೀಡಿದರು. ಸಚಿವರ ಕನ್ನಡ ರಾಜ್ಯೋತ್ಸವ ಸಂದೇಶದ ಬಳಿಕ ಸಂತ ಮೈಕೆಲರ ಪ್ರೌಢ ಶಾಲೆ, ಸಂತ ಜೋಸೆಫg ಪ್ರೌಢ ಶಾಲೆ, ರಾಜ ರಾಜೇಶ್ವರಿ ಪ್ರೌಢ ಶಾಲೆ, ಕೊಡಗು ವಿದ್ಯಾಲಯ, ಜನರಲ್ ತಿಮ್ಮಯ್ಯ ಶಾಲೆ,ಬಾಲಕರ ಬಾಲಮಂದಿರ ವಿದ್ಯಾರ್ಥಿಗಳು, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ವಿದ್ಯಾಥಿರ್ಧಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸ್ತಬ್ಧ ಚಿತ್ರಗಳ ಹಾಗೂ ಕಲಾ ತಂಡಗಳ ಮೆರವಣಿಗೆ ನಡೆಯಿತು. ಶಾಸಕ ಡಾ.ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ,…
ಮಡಿಕೇರಿ ನ.1 NEWS DESK : ಭಾರತದಲ್ಲಿ, ಬ್ಯಾಂಕಿಂಗ್ ವೃತ್ತಿಯನ್ನು ಆರಿಸಿಕೊಳ್ಳುವ ಹೊಸಬರಿಗೆ ಮತ್ತು ಅನುಭವಿ ವೃತ್ತಿಪರರಿಗೆ ಅತ್ಯಂತ ಪ್ರತಿಷ್ಠಿತ ಉದ್ಯೋಗಗಳಲ್ಲಿ ಒಂದಾಗಿದೆ. ಬ್ಯಾಂಕ್ಗಳು ತನ್ನ ಉದ್ಯೋಗಿಗಳಿಗೆ ಸುಂದರವಾದ ಪ್ಯಾಕೇಜ್ಗಳು, ಆಕರ್ಷಕ ಸಂಬಳ, ಉದ್ಯೋಗ ಭದ್ರತೆಯ ಜೊತೆಗೆ ಇತರ ಸವಲತ್ತುಗಳನ್ನು ನೀಡುತ್ತವೆ ಎಂಬುದು ಬಹಿರಂಗ ಸತ್ಯವಾಗಿದೆ. ಪ್ರತಿ ವರ್ಷ ದೇಶದಾದ್ಯಂತ ವಿವಿಧ ಬ್ಯಾಂಕ್ಗಳು ಮತ್ತು ಪರೀಕ್ಷಾ ಏಜೆನ್ಸಿಗಳು ನಡೆಸುವ ಬಹು ಬ್ಯಾಂಕ್ ಪರೀಕ್ಷೆಗಳಿವೆ.ಇಂತಹ ಕಾರಣಗಳಿಂದಾಗಿ ಬ್ಯಾಂಕ್ ಉದ್ಯೋಗಗಳನ್ನ ಪಡೆದುಕೊಳ್ಳಲು ಪೈಪೋಟಿ ಅತ್ಯಂತ ವೇಗದಲ್ಲಿ ಹೆಚ್ಚುತ್ತಿದೆ. ಆಕಾಂಕ್ಷಿಗಳು ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಮತ್ತು ಬ್ಯಾಂಕ್ ಉದ್ಯೋಗಿಯಾಗಿ ಆಯ್ಕೆಯಾಗಲು ಸರಿಯಾದ ತಯಾರಿಯನ್ನು ಹೊಂದಿರಬೇಕು ಎಂಬುದನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಸಂಖ್ಯೆ ಸೂಚಿಸುತ್ತದೆ. ಒಂದು ಕಾಲದಲ್ಲಿ ಕಾಮರ್ಸ್ ಪದವಿ ಓದಿದವರೂ, ಕೃಷಿ ಪದವಿ ಅಧ್ಯಯನ ಮಾಡಿದವರಿಗಷ್ಟೇ ಬ್ಯಾಂಕ್ ನಲ್ಲಿ ಉದ್ಯೋಗ ಎನ್ನುವಂತಿತ್ತು.ಆದರೆ ಇಂದು ಬದಲಾಗಿದೆ. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಮುಂಬೈನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಯೂನಿಯನ್ ಬ್ಯಾಂಕ್ ಆಫ್ ಪ್ಯಾನ್ ಇಂಡಿಯಾ ಉಪಸ್ಥಿತಿಯನ್ನು…
ಕೊಯನಾಡು NEWS DESK ಅ.31 : ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ತಮ್ಮ ಬಲಗಾಲನ್ನು ಕಳೆದುಕೊಂಡಿದ್ದ ಶ್ಯಾಮ್ ಕೊಯನಾಡು ರವರ ಮನೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಹಾಗೂ ಕೊಡಗು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಶ್ಯಾಮ್ ಅವರು ಸಂಪಾಜೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯೆ, ಪ್ರಸ್ತುತ ಮಡಿಕೇರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯೆ ರಾಜೇಶ್ವರಿ ಅವರ ಪತಿಯಾಗಿದ್ದಾರೆ. ಕುಟುಂಬಕ್ಕೆ ಆಸರೆಯಾಗಿದ್ದ ಶ್ಯಾಮ್ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸಹಕಾರ ನೀಡುವುದಾಗಿ ಶಾಸಕ ಪೊನ್ನಣ್ಣ ಭರವಸೆ ನೀಡಿದರು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಮಡಿಕೇರಿ NEWS DESK ಅ.31 : ಕೊಡಗು ಜಿಲ್ಲೆಯಲ್ಲಿ ಸುರಿದ ಹಿಂಗಾರು ಮಳೆ, ಬೆಳೆ ಹಾನಿ, ಜನ ಜಾನುವಾರುಗಳಿಗೆ ಮೇವು ಪೂರೈಕೆ ಮತ್ತಿತರ ವಿಷಯಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಡೆಯಿತು. ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಹಲವು ವಿಷಯಗಳ ಕುರಿತು ಚರ್ಚಿಸಿದರು. ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡು ಮಾಹಿತಿ ನೀಡಿದರು.
ಚೆಟ್ಟಳ್ಳಿ NEWS DESK ಅ.31 : ಚೆಟ್ಟಳ್ಳಿಯ ವೀರಾಂಜನೇಯ ಯುವಕ ಸಂಘದ ವತಿಯಿಂದ ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿ ದೀಫಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಗಣಪತಿ, ಮಹಾವಿಷ್ಣು, ವೀರಾಂಜನೇಯ, ಪಶುಪತಿನಾಥ ಹಾಗೂ ಕಾವೇರಿ ಮಾತೆಯ ಪ್ರತಿಮೆ ಎದುರು ಭಕ್ತರು ಹಣತೆ ಬೆಳಗುವ ಮೂಲಕ ದೀಪಾವಳಿ ಆಚರಿಸಿದರು. ಕಳೆದ ಹಲವು ವರ್ಷಗಳಿಂದ ಸಂಘದ ಕಾರ್ಯಕರ್ತರು ಗ್ರಾಮದ ಭಕ್ತಾಧಿಗಳೆಲ್ಲ ಸೇರಿ ದೀಪಾವಳಿಯಂದು ಹಣತೆ ಬೆಳಗಿ ಸಾಂಪ್ರದಾಯಿಕವಾಗಿ ದೀಪಾವಳಿ ಆಚರಿಸಲಾಗುತ್ತದೆ. ಈ ಬಾರಿಯೂ ಸಂಘದ ವತಿಯಿಂದ ನೂರಾರು ದೀಪ ಬೆಳಗಿ ದೀಪಾವಳಿಯನ್ನು ಆಚರಿಸಿದ್ದೇವೆ ಎಂದು ವೀರಾಂಜನೆಯ ಯುವಕ ಸಂಘದ ಅಧ್ಯಕ್ಷ ಬಲ್ಲಾರಂಡ ಕಂಠಿಕಾರ್ಯಪ್ಪ ತಿಳಿಸಿದರು.
ಮಡಿಕೇರಿ NEWS DESK ಅ.31 : ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ ಕುರಿತು ಮತ್ತು ಅಮರ ಸುಳ್ಯ ದಂಗೆಯ ಹೋರಾಟಗಾರರ ವಿಷಯವನ್ನು ಪಠ್ಯಪುಸ್ತಕದಲ್ಲಿ ಮರು ಸೇರ್ಪಡೆ ಮಾಡುವ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೋಟೆ ಆವರಣದಲ್ಲಿ ಗುರುವಾರ ಏರ್ಪಡಿಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. 1837 ರಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಡನೆ ಹೊರಾಡಿ ಗಲ್ಲಿಗೇರಿಸಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರು ಹಾಗೂ ಅಮರ ಸುಳ್ಯ ದಂಗೆ ಬಗ್ಗೆ ಈ ಹಿಂದೆ 2012 ರಿಂದ 2019 ರ ವರೆಗೆ 6 ನೇ ತರಗತಿ ರಾಜ್ಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಉಲ್ಲೇಖವಾಗಿತ್ತು ಎಂಬ ಬಗ್ಗೆ ಕೊಡಗು…
ಮಡಿಕೇರಿ NEWS DESK ಅ.31 : ವಿರಾಜಪೇಟೆ ತಾಲ್ಲೂಕಿನ ಎಡಪಾಲ ಗ್ರಾಮದ ಜಮಾಯತ್‌ನ ಅರೇಬಿಕ್ ಶಾಲೆ ‘ದರ್ಸ್’ನ 25ನೇ ವರ್ಷದ ‘ಬೆಳ್ಳಿ ಮಹೋತ್ಸವ’ ನ.1 ರಿಂದ 3 ರವರೆಗೆ ನಡೆಯಲಿದೆಯೆಂದು ಜಮಾಯತ್ ಅಧ್ಯಕ್ಷರಾದ ಬಶೀರ್ ಕೆ.ಎ. ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ಳಿ ಮಹೋತ್ಸವದ ಎರಡನೇ ದಿನವಾದ ನ.2 ರಂದು ಅರೇಬಿಕ್ ಶಾಲೆಯ ನೂತನ ಕಟ್ಟಡವನ್ನು ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣನವರು ಉದ್ಘಾಟಿಸಲಿದ್ದಾರೆ ಎಂದರು. ಬೆಳ್ಳಿ ಮಹೋತ್ಸವ ಕಾರ್ಯಕ್ರಮಗಳಿಗೆ ನ.1ರಂದು ಮಧ್ಯಾಹ್ನ ಜುಮಾ ನಮಾಝಿನ ಬಳಿಕ ಜಮಾಯತ್ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಚಾಲನೆ ದೊರಕಲಿದೆ. ಈ ಸಂದರ್ಭ ಆಯೋಜಿತ ಉದ್ಘಾಟನಾ ಸಮ್ಮೇಳನಕ್ಕೆ ಕೊಡಗು ಜಿಲ್ಲಾ ಉಪ ಖಾಝಿ ಶೈಖುನಾ ಮೂರ್ಯಾಡ್ ಉಸ್ತಾದ್ ಚಾಲನೆ ನೀಡಲಿದ್ದಾರೆ. ಮುಖ್ಯ ಭಾಷಣ ಬಹು ರಫೀಕ್ ಸಅದಿ ದೇಲಂಬಾಡಿ ಮಾಡಲಿದ್ದಾರೆಂದರು. ನ.2 ರಂದು ಬೆಳಿಗ್ಗೆ 10 ಗಂಟೆಗೆ ‘ಮಹಲ್ ಸಂಗಮ’ ಮಧ್ಯಾಹ್ನ 2 ಗಂಟೆಗೆ ಯೂತ್ ಮೀಟ್, ಸಂಜೆ 4 ಗಂಟೆಗೆ ‘ಸಾಂಸ್ಕೃತಿಕ ಸಮಾವೇಶ ನಡೆಯಲಿದೆ.ಇದರಲ್ಲಿ ವಿರಾಜಪೇಟೆ…
ಸಿದ್ದಾಪುರ NEWS DESK ಅ.31 : ಸಿದ್ದಾಪುರದಲ್ಲಿ ಗ್ಯಾರಂಟಿ ಯೋಜನೆಗಳ ಜಾಗೃತಿ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅವರು ಅರ್ಹ ಫಲಾನುಭವಿಗಳು ಸರಕಾರದ ಸೌಲಭ್ಯಗಳಿಂದ ವಂಚಿತರಾಗಬಾರದು. ಕಾರ್ಯಕರ್ತರು ಯೋಜನೆಗಳ ಯಶಸ್ವೀ ಅನುಷ್ಠಾನದ ಬಗ್ಗೆ ಕಾಳಜಿ ವಹಿಸಬೇಕು ಎಂದರು. ನುಡಿದಂತೆ ನಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಜನಸಾಮಾನ್ಯರಿಗೆ ಅತ್ಯವಶ್ಯಕವಾಗಿರುವ ಯೋಜನೆಗಳನ್ನು ನೀಡಿದೆ. ಪ್ರತಿಯೊಬ್ಬ ಫಲಾನುಭವಿಗೂ ಯೋಜನೆಗಳು ತಲುಪುವಂತಾಗಲು ಕಾರ್ಯಕರ್ತರು ಕೈಜೋಡಿಸಬೇಕು ಎಂದರು. ಗ್ಯಾರಂಟಿ ಯೋಜನೆಗಳಿಂದಲೇ ಜನರು ನೆಮ್ಮದಿಯ ಮತ್ತು ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದ ಜನರಿಗೂ ಎಲ್ಲಾ ಯೋಜನೆಗಳು ತಲುಪುವಂತಾಗಲು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾಂತ್ರಿಕ ಸಮಸ್ಯೆಗಳಿಂದ ಕೆಲವು ಫಲಾನುಭವಿಗಳಿಗೆ ಸೌಲಭ್ಯ ಸಿಗುತ್ತಿಲ್ಲ, ಈ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯಲಿದೆ ಎಂದು ಧರ್ಮಜ ಉತ್ತಪ್ಪ ವಿಶ್ವಾಸ ವ್ಯಕ್ತಪಡಿಸಿದರು. ವಿರಾಜಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪಿ.ವಿ.ಜಾನ್ಸನ್ ಮಾತನಾಡಿ ರಾಜ್ಯದಲ್ಲೇ ಮೊದಲ ಬಾರಿಗೆ…
ಮಡಿಕೇರಿ NEWS DESK ಅ.31 : ಕೊಡಗು- ಕೇರಳದ ಗಡಿ ಗ್ರಾಮ ಕರಿಕೆಯಲ್ಲಿ ಚಿರತೆ ಆತಂಕ ಎದುರಾಗಿದೆ. ಕರಿಕೆ ಗ್ರಾಮದ ಪೆಚ್ಚೆಪಿಲಾವ್ ಎಂಬಲ್ಲಿ ಹರೀಶ್ ಎಂಬುವವರ ಮನೆಯ ಸಾಕು ನಾಯಿಯನ್ನು ಚಿರತೆಯೊಂದು ಎಳೆದೊಯ್ದ ಘಟನೆ ಅ.30ರ ರಾತ್ರಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಪಡೆದರು. ಕರಿಕೆಯ ವಿವಿಧ ಗ್ರಾಮಗಳಲ್ಲಿ ವನ್ಯಜೀವಿಗಳ ಉಪಟಳ ಹೆಚ್ಚಾಗಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. (ವರದಿ : ಶಿವಗಿರಿ ರಾಜೇಶ್, ಕರಿಕೆ)






