ಲೇಖಕ: admin

ಮಡಿಕೇರಿ ಸೆ.25 NEWS DESK : ಜಾತ್ಯತೀತ ಜನತಾದಳ ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಪ್ರಬಲವಾಗಿದೆ. ಪಕ್ಷಕ್ಕೆ ಮತ್ತಷ್ಟು ಬಲ ತುಂಬಿ ಮುಂಬರುವ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸೆ.27 ರಿಂದ ಜಿಲ್ಲೆಯಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಾಗುತ್ತಿದೆ ಎಂದು ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಸಿ.ಎಲ್.ವಿಶ್ವ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಬೆಳಿಗ್ಗೆ ಬೆಳಿಗ್ಗೆ 11.30 ಗಂಟೆಗೆ ಮಡಿಕೇರಿಯ ಹೊಟೇಲ್ ರಾಜದರ್ಶನ ಸಭಾಂಗಣದಲ್ಲಿ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹಾಗೂ ಶಾಸಕ ಎ.ಮಂಜು ಅವರ ನೇತೃತ್ವದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲಾ ಮುಖಂಡರು, ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು. ಲೋಕಸಭಾ ಚುನಾವಣೆಯ ನಂತರ ವರಿಷ್ಠರ ಆದೇಶದಂತೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಜಿ.ಪಂ ಹಾಗೂ ತಾ.ಪಂ ಚುನಾವಣೆಗಳು ಬರಲಿದ್ದು, ಸದಸ್ಯತ್ವ ಅಭಿಯಾನದ ಮೂಲಕ ಜೆಡಿಎಸ್ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲಿದೆ. ಜಿಲ್ಲೆಯ ಗ್ರಾಮೀಣ ಭಾಗದಿಂದಲೇ ಸದಸ್ಯತ್ವವನ್ನು ಹೆಚ್ಚು…

Read More

ಮಡಿಕೇರಿ ಸೆ.25 NEWS DESK :  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸೋಮವಾರಪೇಟೆ ಬಿ.ಸಿ.ಟ್ರಸ್ಟ್, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಶಾಂತಳ್ಳಿ ವಲಯದ ಕಿಬ್ಬೆಟ್ಟ ಗ್ರಾಮದಲ್ಲಿ ಸರಸ್ವತಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್ ಉದ್ಘಾಟಿಸಿ ಮಾತನಾಡಿ, ಯೋಜನೆಯಿಂದ ಸಿಕ್ಕಿರುವಂತಹ ಹಲವು ಅನುದಾನಗಳ ಬಗ್ಗೆ ಹಾಗೂ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಮಹಿಳೆಯರ ಜವಾಬ್ದಾರಿಗಳ ಕುರಿತು ವಿವರಿಸಿದ ಅವರು, ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಬುದ್ಧತೆಯನ್ನು ಹೊಂದಬೇಕು ಎಂದರು. ಒಕ್ಕೂಟದ ಮಾಜಿ ಅಧ್ಯಕ್ಷ ಸುಂದರ್ ಮಾತನಾಡಿ, ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರವೇನು, ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಕುರಿತು ಮಾಹಿತಿಯನ್ನು ನೀಡಿದರು. ವಲಯದ ಮೇಲ್ವಿಚಾರಕರಾದ ಲಕ್ಷ್ಮಣ್  ಜ್ಞಾನ ವಿಕಾಸ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ತಿಳಿಸಿದರು. ಒಕ್ಕೂಟದ ಅಧ್ಯಕ್ಷರಾದ ರೇಷ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯದ ಅಧ್ಯಕ್ಷ ಜಗನ್ನಾಥ್, ಪಂಚಾಯಿತಿ ಮಾಜಿ ಸದಸ್ಯರಾದ ಜಾನಕಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕವನ, ಸೇವಾ…

Read More

ಸೋಮವಾರಪೇಟೆ ಸೆ.25 NEWS DESK : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಘಟದ ನಿರ್ದೇಶಕರಾಗಿ ಕೊಡ್ಲಿಪೇಟೆಯ ರಾಜೇಶ್ವರಿ ನಾಗರಾಜ್ ಹಾಗೂ ವಿರಾಜಪೇಟೆಯ ಅನುಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 2024/29ನೆ ಸಾಲಿನ ರಾಜ್ಯ ಘಟಕದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಆಯ್ಕೆ ಮಾಡಲಾಯಿತು.ಇತ್ತೀಚೆಗೆ ಬೆಂಗಳೂರಿನ ವೀರಶೈವ ಲಿಂಗಾಯತ ಮಹಾಸಭಾದ ಹಾನಗಲ್ಲ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಾಸಭೆಯ ಚುನಾಯಿತ ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರುಗಳಿಗೆ ಅಭಿನಂದನೆ ಸಮಾರಂಭ ಹಾಗೂ ಧೃಡೀಕರಣ ಪತ್ರ ವಿತರಣೆ ಮಾಡಲಾಯಿತು. ಈ ಸಂದರ್ಭ ಸಚಿವರರಾದ ಈಶ್ವರ್ ಖಂಡ್ರೆಜಿ, ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ, ಮುಖ್ಯ ಚುನಾವಣ ಅಧಿಕಾರಿಗಳಾದ ದ್ಯಾಬೇರಿ, ಸಚಿವ ಶರಣ ಬಸಪ್ಪ ದರ್ಶನಾಪುರ , ಮಾಜಿ ಸಚಿವ ರಾಜಶೇಖರ್ ಪಾಟೀಲ್, ಸಂಸದ ರಾಘವೇಂದ್ರ ಯಡಿಯೂರಪ್ಪ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Read More

ವಿರಾಜಪೇಟೆ ಸೆ.25 NEWS DESK : ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ರಾಷ್ಟೀಯ ಸೇವಾ ಯೋಜನಾ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಆರ್.ಸಲ್ದಾನ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸೇವಾ ಮನೋಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು. ಅದರಲ್ಲೂ ಪ್ರಮುಖವಾಗಿ ಯುವಕರು ಪ್ರಕೃತಿಯನ್ನು ಆದಷ್ಟು ಮಾಲಿನ್ಯ ಮುಕ್ತ ಮಾಡುವುದರ ಕಡೆಗೆ ಗಮನಹರಿಸಬೇಕು. ನನ್ನ ಮನೆ, ನನ್ನ ಕಾಲೇಜು, ನಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಶುಚಿತ್ವವನ್ನು ಕಾಪಾಡುವುದಲ್ಲ. ನಾವು ಎಲ್ಲೇ ಇದ್ದರೂ ನಮ್ಮ ಸುತ್ತಲಿನ ಪ್ರದೇಶವನ್ನು ಸದಾ ಸ್ವಚ್ಛವಾಗಿರಬೇಕು ಎಂಬ ಮನೋಭಾವನೆ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸುವ ಭಾವನೆ ಮೊದಲು ನಮ್ಮಲ್ಲಿ ಬಂದರೆ ನಮ್ಮನ್ನು ನೋಡಿ ಇತರರು ಬದಲಾಗುತ್ತಾರೆ ಎಂದರು.  ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಪ್ರಿಯ ಮಾತನಾಡಿ ಸ್ವಚ್ಛತೆ ಎಂಬುದು ಮನದಿಂದ ಆರಂಭವಾಗಬೇಕು. ನಾವು ದೇಹ ಸ್ವಚ್ಛತೆಗೆ ಎಷ್ಟು ಪ್ರಾತಿನಿಧ್ಯವನ್ನು ನೀಡುತ್ತೇವೋ ಅದೇ ರೀತಿ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಯುವಜನತೆ ದೇಶದ ಶಕ್ತಿ ಎಂಬ ನಾನುಡಿಯಂತೆ ಯುವ ಜನತೆ ಬದಲಾದರೆ ದೇಶ…

Read More

ಮಡಿಕೇರಿ ಸೆ.25 NEWS DESK : ವಿರಾಜಪೇಟೆ ಕೊಡವ ಸಮಾಜದ ವತಿಯಿಂದ ಕೈಲ್ ಪೊಳ್ದ್ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ಕ್ರೀಡಾ ಕಾರ್ಯದರ್ಶಿ ಅಮ್ಮಣಿಚಂಡ ರತ್ನ ಸುಬ್ರಮಣಿ ಮತ್ತು ನಿರ್ದೇಶಕ ಪುಲಿಯಂಡ ಎ.ಪೊನ್ನಣ್ಣ ಅವರ ನೇತೃತ್ವದಲ್ಲಿ ನಡೆದ ಕ್ರೀಡಾ ಕೂಟವನ್ನು ಬೆಳ್ಳಿ ರೋಲಿಂಗ್ ಟ್ರೋಫಿ ದಾನಿಗಳಾದ ಪಟ್ಟಡ ದರ್ಶನ್ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು. ಕ್ರೀಡಾ ಕೂಟದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ತೆಂಗಿನಕಾಯಿಗೆ ಕಲ್ಲು ಎಸೆಯುವುದು, ಓಲಗತ್ತಾಟ್ ಸ್ಪರ್ಧೆ, ಬಾರದ ಗುಂಡು ಎಸೆತ, ಮಕ್ಕಳಿಗೆ ಬರ್ನಿಂಗ್ ಟ್ರೇನ್, ಕಾಳು ಹೆಕ್ಕುವ ಸ್ಪರ್ಧೆ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಸಮಾಜದ ವತಿಯಿಂದ ನಗದು ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಮಾಜದ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್  ಸ್ವಾಗತಿಸಿ, ವಂದಿಸಿದರು. ಕ್ರೀಡಾಕೂಟದಲ್ಲಿ ಸಮಾಜದ ನಿರ್ದೇಶಕರು, ಸದಸ್ಯರು, ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Read More

ಚೆಟ್ಟಳ್ಳಿ ಸೆ.25 NEWS DESK : ಮಂಗಳೂರಿನಲ್ಲಿ ನಡೆದ ಸೀಜನ್-4 ಕುಡ್ಲ ಚಾಲೆಂಜ್ 2024 ಆಫ್ ರೋಡ್ ರ‍್ಯಾಲಿ ಆಯೋಜಿಸಿರುವ ಕೆ ಎ 19 -20 ಯುನೈಟೆಡ್ ಹಾಫ್ ರೋಡ್ ಚಾಲೆಂಜ್ ನಲ್ಲಿ ಕೊಡಗಿನ ಅಮ್ಮತ್ತಿ ಕಾವಾಡಿಯ ಮಂಡೆಪಂಡ ಮಿಥುನ್ ಕಾರ್ಯಪ್ಪ, ಎಡೂರಿನ ಬೊಪ್ಪಂಡ ಸೋನು ಪೊನ್ನಪ್ಪ, ಮೂರ್ನಾಡಿನ ಕಂಬೀರಂಡ ದಿವ್ಯ ಮುತ್ತಪ್ಪ ಹಾಗೂ ಅಮ್ಮ ತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಉತ್ತಮ ಸಾಧನೆ ಮಾಡಿದ್ದಾರೆ. ಲೇಡಿಸ್ ಕ್ಲಾಸ್ ನಲ್ಲಿ ಕಂಬೀರಂಡ ದಿವ್ಯ ಮುತ್ತಪ್ಪ ಡ್ರೈವರ್ ಹಾಗೂ ಉದ್ಧಪಂಡ ಚೇತನ್ ಚಂಗಪ್ಪ ಕೋಡ್ರೈವರಾಗಿ ಲೇಡೀಸ್ ಕ್ಲಾಸ್ ನಲ್ಲಿ ಪ್ರಥಮ ಸ್ಥಾನ ಪಡೆದರು. ಮಂಡೆಪಂಡ ಸ್ಟಾಕ್ ಡೀಸೆಲ್ ಕ್ಲಾಸ್ ನಲ್ಲಿ ಮಿಥುನ್ ಕಾರ್ಯಪ್ಪ ಡ್ರೈವರ್ ಹಾಗೂ ಬೊಪ್ಪಂಡ ಸೋನು ಪೊನ್ನಪ್ಪ ಕೋಡ್ರೈವರಾಗಿ ಎರಡನೇ ಸ್ಥಾನ ಪಡೆದಿದ್ದಾರೆ. ಕೊಡಗಿನ “ವಿ 5 ಆಫ್ ರೋಡ್ ಕೂರ್ಗ್” ಟೀಮ್ ನ ಚೇತನ್ ಚಂಗಪ್ಪ, ಮಿಥುನ್ ಕಾರ್ಯಪ್ಪ ಸೋನು ಪೊನ್ನಪ್ಪ, ದಿವ್ಯ ಮುತ್ತಪ್ಪ, ಗೋಣಿಕೊಪ್ಪದ ಎಸ್.ಎಸ್.ಆಟೋ ಗ್ಯಾರೇಜ್ ನ…

Read More

ಸುಂಟಿಕೊಪ್ಪ ಸೆ.25 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ವಲಯ ಗದ್ದೆಹಳ್ಳ ಒಕ್ಕೂಟದ ತ್ರೈಮಾಸಿಕ ಸಭೆಯು ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮಾತನಾಡಿ, ಆರೋಗ್ಯ ಮಾಹಿತಿ ಹಾಗೂ ಸಾಂಕ್ರಾಮಿಕ ರೋಗಗಳು ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ವಿವರಣೆ ನೀಡಿದರು. ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ತಾಯಿ ಮಾಡಬೇಕಾದ ಮುಂಜಾಗ್ರತೆಗಳ ಬಗ್ಗೆ ಮಾಹಿತಿ ನೀಡಿ, ಸ್ವಚ್ಛತಾ ಅಭಿಯಾನದ ಪ್ರತಿಜ್ಞಾವಿಧಿ ಬೋಧಿಸಿದರು. ವಲಯದ ಮೇಲ್ವಿಚಾರಕ ಪ್ರಗತಿ ನಿಧಿ ಸಾಲದ ಬಡ್ಡಿಯ ಬಗ್ಗೆ, ದಶಾಂಶದ ಬಗ್ಗೆ, ಸಂಘದ ವಾರದ ಸಭೆಯ ಮಹತ್ವ, ವಿನಿಯೋಗದಾರರ ಬದಲಾವಣೆಯಾದ ಬಗ್ಗೆ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾವಿತ್ರಿ ಮಾತನಾಡಿ ಸಂಘವು ಒಳ್ಳೆಯ ರೀತಿಯಲ್ಲಿ ನಡೆಯಬೇಕಿದ್ದಲ್ಲಿ ನಮ್ಮಲ್ಲಿ ಶಿಸ್ತು, ಸಂಯಮ ಅಗತ್ಯ ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಎತ್ತರಕ್ಕೆ ಬೆಳೆಯಲೆಂದು ಹಾರೈಸಿದರು. ಒಕ್ಕೂಟ ಉಪಾಧ್ಯಕ್ಷ ಆನಂದ್ ಅವರ…

Read More

ಸುಂಟಿಕೊಪ್ಪ ಸೆ.25 NEWS DESK : ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 40,55,195 ರೂಗಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡಿದರು. ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಸಾಧಿಸುತ್ತಾ ಬರುತ್ತಿದೆ ಎಂದು ಸಂಘದ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ ಹೇಳಿದರು. ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 93ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಸದಸ್ಯರುಗಳಿಗೆ ಭೂ ದಾಖಲಾತಿ ಆಧಾರದ ಮೇಲೆ ಕೆಪಿಸಿ ಫಸಲು ಸಾಲ ಕೃಷಿಯೇತರ ಸಾಲ, ಮಧ್ಯಮಾವದಿ ಕೃಷಿ ಸಾಲ, ವಾಹನ ಸಾಲ, ವೇತನ ಆಧಾರಿತ ಸಾಲ, ಆಭರಣ ಸಾಲ, ವ್ಯಾಪಾರ ಅಭಿವೃದ್ಧಿ ಸಾಲ, ಪಿಗ್ಮಿಠೇವಣಿ ಜವರ್ ಡ್ರಾಪ್ಟ್ ಸಾಲ, ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ನೀಡಲಾಗುತ್ತಿದೆ ಎಂದರು. ಸಂಘದಲ್ಲಿ 1576 ಮಂದಿ ಸದಸ್ಯರುಗಳಿದ್ದು, ಪಾಲು ಬಂಡವಾಳ ರೂ.1,14,80,35 ಇರುತ್ತದೆ. ಸಂಘದಲ್ಲಿ 9 ಕೋಟಿ 52 ಲಕ್ಷ 32328 ಠೇವಣಿ ಸಂಗ್ರಹಿಸಲಾಗಿದೆ. ಕೆಸಿಸಿ ಸಾಲದ 350 ಸದಸ್ಯರಿಗೆ…

Read More

ಮಡಿಕೇರಿ ಸೆ.25 NEWS DESK : ಮೇಲ್ನೋಟಕ್ಕೆ ನಮಗೆ ಪರಿಸರ ತನ್ನ ವೈಭವ ಕಳೆದು ಕೊಂಡಿದೆ ಎಂದು ಕಾಣುವುದಿಲ್ಲ. ಏಕೆಂದರೆ ನಾವು ನೋಡುವಾಗ ಎಲ್ಲ ಕಡೆ ಹಸಿರು ಹಾಗೆ ಕಾಣುತ್ತದೆ. ನಾವು ಪ್ರಕೃತಿಯ ಒಳ ಹೊಕ್ಕು ನೋಡಿದಾಗ ಮಾತ್ರ ನಮಗೆ ಪ್ರಕೃತಿಯ ನಾಶದ ಅರಿವಾಗುತ್ತದೆ. ಪ್ರಕೃತಿಯಲ್ಲಿ ಏನು ಇಲ್ಲ. ನಾವು ನಮಗೆ ಅರಿವಾದಲ್ಲಿಂದ ಗಮನಿಸಿದರೆ ಸಾಕು ಪ್ರತಿ ಸಿಸೆನ್‍ನಲ್ಲಿ ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಬೆಳೆಯುತ್ತ ಇದ್ದ ಹಣ್ಣುಗಳು, ಕಾಡು ಹೂವುಗಳು, ಅನೇಕ ರೀತಿಯ ಸಣ್ಣ ಸಣ್ಣ ಸಸ್ಯಗಳು, ಗಿಡಗಳು, ಕಾಡು ಜಾತಿಯ ಮರಗಳು ಇತಿಹಾಸದ ಪುಟ ಸೇರಿವೆ. ಸಾವಿರಾರು ಸಂಖ್ಯೆಯ ಮದ್ದಿನ ಗಿಡಗಳು ಕಣ್ಮರೆಯಾಗಿದೆ. ಅದೇ ರೀತಿ ಅನೇಕ ಸಣ್ಣ ಸಣ್ಣ ಪ್ರಾಣಿ ಪಕ್ಷಿಗಳು, ಜಲಚರಗಳು ಇಂದು ಕಾಣೆಯಾಗಿದೆ. ಅದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿ ಕೃಷಿಗಾಗಿ ಅರಣ್ಯ ಒತ್ತುವರಿ, ಅವಶ್ಯಕತೆಗಿಂತ ಹೆಚ್ಚಾಗಿ ರಾಸಾಯನಗಳ ಬಳಕೆ, ಅಣೆಕಟ್ಟುಗಳ ನಿರ್ಮಾಣ, ಕಾಲುವೆಗಳ ಒತ್ತುವರಿ, ನಗರಿಕರಣ, ಮೊಬೈಲ್ ತರಂಗಂತರ ಹೀಗೆ ಹಲವು ಕಾರಣ ಗಳೊಂದಿಗೆ ಪ್ರವಾಸೋದ್ಯಮವು ಒಂದು…

Read More

ಮಡಿಕೇರಿ ಸೆ.25 NEWS DESK : ಸೇವಾ ಭಾರತಿ ಕೊಡಗು, ವೈದ್ಯಕೀಯ ವಿಜ್ಞಾನ ಸಂಸ್ಥೆ ಕೊಡಗು ಮತ್ತು ಎನ್.ಎಂ.ಓ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಆಶ್ರಯದಲ್ಲಿ ಕಾನ್ ಬೈಲ್ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ಔಷಧಿ ವಿತರಣಾ ಕಾರ್ಯಕ್ರಮ ನಡೆಯಿತು. ಶಿಬಿರದಲ್ಲಿ ಕಾನ್ ಬೈಲ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸುಮಾರು 126 ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಶಿಬಿರದಲ್ಲಿ ಅವಶ್ಯಕತೆ ಇದ್ದವರಿಗೆ ಉಚಿತ ಔಷಧಿಯನ್ನೂ ವಿತರಿಸಲಾಯಿತು. ಸೇವಾ ಭಾರತಿ ಕೊಡಗು ಅಧ್ಯಕ್ಷ ಟಿ.ಸಿ.ಚಂದ್ರನ್, ಕಾರ್ಯದರ್ಶಿ ಡಿ.ಎಚ್.ತಮ್ಮಪ್ಪ ನೇತೃತ್ವದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ಶಶಾಂಕ ಎಂ.ಜೆ, ಡಾ.ಚಿತ್ರಾ, ಡಾ. ಗಗನ ವಿ, ಡಾ. ಸುಷ್ಮಿತಾ, ಡಾ. ಹೆಚ್ ಹರಿ ನಾರಾಯಣ, ಡಾ. ಪವನ್ ಪವಾರ್, ಡಾ. ಪ್ರಫುಲ್ ಎಸ್.ವಿ, ಡಾ. ಜ್ಯೋತಿ ಪಿ.ವಿ, ಡಾ. ಮನೀಷಾ ದೇವಿ, ಡಾ. ದಿಶಾ ರಘುನಾಥ್, ಡಾ. ಹರ್ಷ, ಡಾ. ಲೋಹಿತ್ ಎಂ.ಎಸ್, ಫಾರ್ಮಾಶಿಸ್ಟ್ ಆಶೀಕ್…

Read More