ಲೇಖಕ: admin

ಸುಂಟಿಕೊಪ್ಪ ಸೆ.9 NEWS DESK : ಸುಂಟಿಕೊಪ್ಪದ ವಿವಿಧೆಡೆ ಗೌರಿ-ಗಣೇಶೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಶ್ರೀರಾಮ ಮಂದಿರದಲ್ಲಿ 60ನೇ ವರ್ಷದ ಸ್ವರ್ಣ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿತು. ಹಿರಿಯ ಅರ್ಚಕರಾದ ದರ್ಶನ್ ಭಟ್, ಮನೋಜ್ ಭಟ್ ಅವರ ನೇತೃತ್ವದಲ್ಲಿ ಗಣಹೋಮ ಸೇರಿದಂತೆ ಮಹಾಪೂಜೆ, ಮಂಗಳಾರತಿ ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಶ್ರೀ ಗೌರಿಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಸ್.ವಿಘ್ನೇಶ್, ಉಪಾಧ್ಯಕ್ಷ ಬಿ.ಕೆ.ಪ್ರಶಾಂತ್, ಎಂ.ಗಣೇಶ್, ಸಿ.ಸುನಿಲ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಹೆಚ್.ನಿಖಿಲ್, ಖಜಾಂಜಿ ಬಿ.ಡಿ.ಪದ್ಮನಾಭ, ಕಾರ್ಯದರ್ಶಿಗಳಾದ ಎಂ.ಪಾಂಡ್ಯನ್,ಹೃತೀಕ್, ನವೀನ್ ಸಹಕಾರ್ಯದರ್ಶಿಗಳಾದರ್.ಮಣಿ, ಪಿ.ಕೆ.ಸೂರ್ಯ ಆರ್.ಪ್ರಶಾಂತ್, ಸಂಘಟನಾ ಕಾರ್ಯದರ್ಶಿ ಎಸ್.ರಾಜೇಶ್, ಬಿ.ಡಿ.ಅಶ್ವತ್, ಹೆಚ್.ಸಿ.ಯೋಗೇಶ್, ಮಧು, ಚೇತನ್, ಶಿವು, ಪುನಿತ್, ಗುಣಶೇಖರ್, ತ್ರಿಜಲ್ ಮಹೇಶ, ಸಮಿತಿ ಸದಸ್ಯರುಗಳಾದ ಎಂ.ಮಹೇಂದ್ರ, ಎಸ್.ಶ್ರೀನಿವಾಸ್, ಹೆಚ್.ಎ.ಶಶಿ, ಆರ್.ವಿಶ್ವ, ಆರ್.ಪ್ರಜ್ವಲ್, ಹೆಚ್.ಎನ್.ಗಣೇಶ್, ವಿ.ದರಣೇಶ್, ಜೀವ, ಸಿ.ರಾಜೇಶ್, ಹೆಚ್.ಎ.ಚಂದ್ರ, ಹೆಚ್.ಎ.ದಿವಾಕರ,ಹೆಚ್.ಸಿ.ದಿನೇಶ್, ಎಸ್.ಗಣೇಶ್, ಆರ್.ಧರ್ಮೇಂದ್ರ, ಸಿದ್ದು, ಕೆ.ಕಾರ್ತಿಕ್, ಪವನ್,…

Read More

ಪುತ್ತೂರು ಸೆ.9 NEWS DESK : ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ಐಇಇಇ ವಿದ್ಯಾರ್ಥಿ ಶಾಖೆ, ವೆನಿರ್ ಇಂಟನ್ರ್ಯಾಷನಲ್ ಕನ್ಸಲ್ಟೆನ್ಸಿ, ಕೆನರಾ ಬ್ಯಾಂಕ್, ಎಚ್.ಪಿ.ಸಿ.ಎಲ್ ಮತ್ತು ಇತರ ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಸಮ್ಮೇಳನ “ದೃಷ್ಟಿ-2024” ನ್ನು ಸೆ.11 ರಂದು ಆಯೋಜಿಸಲಾಗಿದೆ. ಆನ್ಲೈನ್ ಹಾಗೂ ಆಫ್ಲೈನ್ ವಿಧಾನಗಳೆರಡರಲ್ಲೂ ನಡೆಸಲಾಗುವ ಈ ಸಮ್ಮೇಳನ ಶಿಕ್ಷಣ ತಜ್ಞರು ಮತ್ತು ಸಂಶೋಧಕರು ತಮ್ಮ ಸಂಶೋಧನಾ ಕಾರ್ಯಗಳನ್ನು ಪ್ರಸ್ತುತಪಡಿಸಲು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ನಿರ್ವಹಣೆ ಮತ್ತು ತಂತ್ರಜ್ಞಾನದಲ್ಲಿ ನಾವೀನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಪ್ರಗತಿಪರ ಮಾರ್ಗವನ್ನು ರೂಪಿಸಲು ಶೈಕ್ಷಣಿಕ ಮತ್ತು ಉದ್ಯಮದ ತಜ್ಞರನ್ನು ಒಗ್ಗೂಡಿಸಲು ಈ ಸಮ್ಮೇಳನದ ಮೂಲಕ ಪ್ರಯತ್ನಿಸಲಾಗುತ್ತದೆ. ನಿರ್ವಹಣೆ ಮತ್ತು ತಂತ್ರಜ್ಞಾನದ ಅಭ್ಯಾಸಗಳನ್ನು ಮುನ್ನಡೆಸಲು ಜಾಗತಿಕ ಸಹಯೋಗ ಮತ್ತು ಜ್ಞಾನ ವಿನಿಮಯವನ್ನು ಉತ್ತೇಜಿಸುವುದು, ಸಾಂಸ್ಥಿಕ ಸವಾಲುಗಳಿಗೆ ನವೀನ ಪರಿಹಾರಗಳನ್ನು ರಚಿಸಲು ಬೋಧಕವರ್ಗ ಮತ್ತು ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಮತ್ತು ವಿವಿಧ ಕೈಗಾರಿಕೆಗಳಲ್ಲಿ ನಾವೀನ್ಯತೆಯನ್ನು ನಿರ್ವಹಿಸಲು ಉತ್ತಮ ಅಭ್ಯಾಸಗಳನ್ನು ಗುರುತಿಸುವುದು ಸಮ್ಮೇಳನದ ಉದ್ದೇಶವಾಗಿದೆ. ಅಮೆರಿಕ,…

Read More

ಮಡಿಕೇರಿ ಸೆ.9 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗೋಣಿಕೊಪ್ಪಲು ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಕಲಾವಿದ ದಿ. ವಿ.ಟಿ ಶ್ರೀನಿವಾಸ್ ನೆನಪು, ಗಾನ ಮತ್ತು ನುಡಿ ನಮನ ಕಾರ್ಯಕ್ರಮವು ಗೋಣಿಕೊಪ್ಪಲು ಪ್ರೌಢಶಾಲಾ ಸಭಾಂಗಣದಲ್ಲಿ ಸೆ.11 ರಂದು ನಡೆಯಲಿದೆ. ಅಂದು ಬೆಳಿಗ್ಗೆ 11 ಗಂಟೆಗೆ  ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು  ಪೊನ್ನಂಪೇಟೆಯ ನೀನಾದ ಸಂಗೀತ ನೃತ್ಯ ಸಂಸ್ಥೆಯ ಅಧ್ಯಕ್ಷರಾದ ಚೇಂದಿರ ನಿರ್ಮಲ ಬೋಪಣ್ಣ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಚಾನಲ್ ಕೂರ್ಗ್ ನ ಸಂಪಾದಕರಾದ ಶ್ರೀಧರ ನೆಲ್ಲಿತ್ತಾಯ, ಆಕಾಶವಾಣಿ ಕಲಾವಿದ ಬಿ.ಎ.ಗಣೇಶ್, ವಿರಾಜಪೇಟೆಯ ಸ್ವರಾರ್ಣವ ಸಂಗೀತ ಶಾಲೆಯ ವ್ಯವಸ್ಥಾಪಕರಾದ ವಿದ್ವಾನ್ ದಿಲಿ ಕುಮಾರ್ , ಅದ್ಯಾಪಕರು ಮತ್ತು ಕಲಾವಿದರಾದ ಕೆ ಚಂದ್ರಶೇಖರ್, ತಬಲ ಕಲಾವಿದರಾದ ಮುರ್ನಾಡಿನ ಚಂದ್ರು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ…

Read More

ಕುಶಾಲನಗರ, ಸೆ.9 NEWS DESK : ಕೊಡಗು ಜಿಲ್ಲೆಯಲ್ಲಿ ಗೌರಿ- ಗಣೇಶ ಹಬ್ಬದ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ತಯಾರಾಗುತ್ತಿರುವ ಪರಿಸರ ಸ್ನೇಹಿ ಅರಿಶಿಣ ಮತ್ತು ಜೇಡಿಮಣ್ಣಿನ ಗಣೇಶ ಮೂರ್ತಿ ತಯಾರಿಕೆಗೆ ಉತ್ತಮ ಸ್ಪಂದನೆ ದೊರೆತಿದೆ. ಕೊಡಗು ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಶಾಲಾ-ಕಾಲೇಜಿನ ಇಕೋ ಕ್ಲಬ್/ಎನ್.ಎಸ್.ಎಸ್.ಘಟಕಗಳ ಮೂಲಕ ಮಕ್ಕಳು ಸಮುದಾಯದಲ್ಲಿ ರಾಸಾಯನಿಕ ಬಣ್ಣ ಮತ್ತು ಪಿ.ಓ.ಪಿ.ರಹಿತ ಪರಿಸರ ಸ್ನೇಹಿ ಅರಿಶಿಣ ಮತ್ತು ಜೇಡಿಮಣ್ಣಿನಿಂದ ಗಣೇಶ ಮೂರ್ತಿ ತಯಾರಿಕೆಯ ಪರಿಸರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕೊಡಗು ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ಶಾಲಾ-ಕಾಲೇಜಿನ ಇಕೋ ಕ್ಲಬ್/ಎನ್.ಎಸ್.ಎಸ್.ಘಟಕಗಳು, ಮೂಲಕ ಮಕ್ಕಳು & ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ‌ಸಂಸ್ಥೆಯ ಸಹಯೋಗದೊಂದಿಗೆ…

Read More

ಮಡಿಕೇರಿ NEWS DESK ಸೆ.8 : ಹಾಕತ್ತೂರು- ತೊಂಭತ್ತಮನೆಯಲ್ಲಿ 25ನೇ ವರ್ಷದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶ್ರೀವಿನಾಯಕ ಸಮಿತಿಯ ವತಿಯಿಂದ ಭಜನಾ ಮಂದಿರದಲ್ಲಿ ವಿಶೇಷ ಪೂಜೆ, ಭಜನೆ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಗಣಪನ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಮುತ್ತಾರ್ಮುಡಿ ಹೊಳೆಯಲ್ಲಿ ವಿಸರ್ಜಿಸಲಾಯಿತು. ವಿನಾಯಕನಿಂದ ರಾಕ್ಷಸ ಸಂಹಾರದ ಕಥಾ ಭಾಗದ ಕಲಾಕೃತಿಯ ಚಲನವಲನ ಜನಸ್ತೋಮವನ್ನು ಆಕರ್ಷಿಸಿತು. ಶ್ರೀವಿನಾಯಕ ಸಮಿತಿಯ ಅಧ್ಯಕ್ಷ ರಮೇಶ್ ರೈ, ಕಾರ್ಯದರ್ಶಿ ಟಿ.ಬಿ.ಮಂಜುನಾಥ್. ಉತ್ಸವ ಸಮಿತಿ ಅಧ್ಯಕ್ಷ ಪಿ.ಇ.ದೇವಿಪ್ರಸಾದ್, ಸಮಿತಿ ಸದಸ್ಯರು, ಭಕ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Read More

ಬೆಳಗಾವಿ NEWS DESK ಸೆ.8 : ಬೋಟ್ ಮಗುಚಿ ಇಬ್ಬರು ಯೋಧರು ಸಾವನ್ನಪ್ಪಿರುವ ಘಟನೆ ಭಾನುವಾರ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಘಡ ತಾಲ್ಲೂಕಿನ ಹಾಜಗೋಳಿ ಬಳಿ ನಡೆದಿದೆ. ರಾಜಸ್ಥಾನದ ವಿಜಯಕುಮಾರ್(28) ಹಾಗೂ ಪಶ್ಚಿಮ ಬಂಗಾಳದ ದಿವಾಕರ್ ರಾಯ್(26) ಮೃತಪಟ್ಟಿರುವ ಜೂನಿಯರ್ ಕಮಾಂಡೋಗಳು. ಭಾರತೀಯ ಸೇನೆಯ ಕಮಾಂಡೋಗಳ ತರಬೇತಿ ವೇಳೆ ದುರಂತ ಸಂಭವಿಸಿದೆ. ಬೋಟ್ ನಲ್ಲಿದ್ದ 6 ಮಂದಿಯಲ್ಲಿ ನಾಲ್ವರು ಈಜಿ ಜೀವ ಉಳಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Read More

ನವದೆಹಲಿ NEWS DESK ಸೆ.8 : ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಚೀನಾ ವಿರುದ್ಧ ಭಾರತದ ಪುರುಷರ ಹಾಕಿ ತಂಡ 3-0 ಗೋಲುಗಳಿಂದ ಗೆಲುವು ಸಾಧಿಸಿದೆ. ಭಾರತದ ಪರ ಸುಖ್ ಜೀತ್ ಸಿಂಗ್ (14ನೇ ನಿಮಿಷ), ಉತ್ತಮ್ ಸಿಂಗ್ (27ನೇ), ಮತ್ತು ಅಭಿಷೇಕ್ (32ನೇ) ಗೋಲು ಗಳಿಸಿದರು. ಚೀನಾ ಶೂನ್ಯ ಸಾಧನೆ ಮಾಡಿತು.

Read More

ವಿರಾಜಪೇಟೆ NEWS DESK ಸೆ.8 : ಗ್ರಾಮೀಣ ಭಾಗದ ಜನರು ಒಗ್ಗಟ್ಟಿನಿಂದ ಒಂದೆಡೆ ಸೇರಲು ಸಾರ್ವಜನಿಕ ಗಣೇಶೋತ್ಸವವು ವೇದಿಕೆಯಾಗಿದೆ ಎಂದು ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ಅವರು ಅಭಿಪ್ರಾಯಪಟ್ಟರು. ಬೇಟೋಳಿ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗಣೇಶೋತ್ಸವದ ಪ್ರಯುಕ್ತ ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಗ್ರಾಮೀಣ ಪ್ರದೇಶದ ಮಕ್ಕಳು ಪ್ರತಿಭೆಯನ್ನು ಅಸಾಧಾರಣವಾಗಿ ಪ್ರದರ್ಶಿಸುತ್ತಿದ್ದಾರೆ. ಮನುಷ್ಯನು ಏನನ್ನು ಬೇಕಾದರೂ ಹಣವನ್ನು ಬಳಸಿ ಪಡೆಯಬಹುದು ಆದರೇ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ. ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸುವಂತಾಗಬೇಕು ಎಂದರು. ಗಣೇಶೋತ್ಸವದ ಆಚರಣೆಯು ಸಮಾಜದಲ್ಲಿ ಐಕ್ಯತೆ, ಸಾಮರಸ್ಯವನ್ನು ಮೂಡಿಸುತ್ತದೆ ಎಂದು ಹೇಳಿದರು. ಗ್ರಾಮೀಣ ಮಕ್ಕಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಧನೆಯನ್ನು ತೋರುತ್ತಿರುವುದು ಗಮನಾರ್ಹವಾಗಿದೆ ಎಂದರು. ಈ ಸಂದರ್ಭದಲ್ಲಿ ಹೆಗ್ಗಳ ಶಾಲಾ ಮಕ್ಕಳು ಹಾಗೂ…

Read More

ವಿರಾಜಪೇಟೆ NEWS DESK ಸೆ.8 : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ನ ಸ್ಥಾಪಕ ಅಧ್ಯಕ್ಷರೂ ಆಗಿರುವ ಹಿರಿಯ ಪತ್ರಕರ್ತ ಮತ್ತು ಕಿತ್ತಳೆ ನಾಡು ಕನ್ನಡ ವಾರಪತ್ರಿಕೆಯ ಪ್ರಧಾನ ಸಂಪಾದಕರಾದ ಕುವೇಂಡ ವೈ.ಹಂಝತುಲ್ಲಾ ಅವರಿಗೆ  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಅಕಾಡೆಮಿ ಅಧ್ಯಕ್ಷರಾದ ಯು. ಎಚ್. ಉಮರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕುವೇಂಡ  ವೈ. ಹಂಝತುಲ್ಲಾ ಅವರು, ಕಡಲ ತೀರದ ಶಿಕ್ಷಣ ಪ್ರೇಮಿ, ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಅವರಿಂದ ರೂ.50000/- ಸಾವಿರ ನಗದು ಬಹುಮಾನವನ್ನು ಒಳಗೊಂಡ ಈ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕರಾದ ಡಾ. ಅಬೂಬಕ್ಕರ್ ಸಿದ್ದೀಕ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸ್ಟ್ಯಾನಿ ಜೋಕಿಂ ಆಳ್ವಾರಿಸ್, ಕರ್ನಾಟಕ…

Read More

ಮಡಿಕೇರಿ NEWS DESK ಸೆ.8 : ನಾಪೋಕ್ಲು ಕೊಡವ ಸಮಾಜ ರಸ್ತೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆಯನ್ನು ಸುಗಮಗೊಳಿಸಬೇಕೆಂದು ಒತ್ತಾಯಿಸಿ ಕೊಡವ ಸಮಾಜದ ಪ್ರಮುಖರು ನಾಪೋಕ್ಲು ಠಾಣಾಧಿಕಾರಿ ಮಂಜುನಾಥ ಅವರಿಗೆ ಮನವಿ ಪತ್ರ ಸಲ್ಲಿಸಿದರು. ನಾಪೋಕ್ಲು ಪಟ್ಟಣದ ಮುಖ್ಯ ರಸ್ತೆ ಹಾಗೂ ಕೊಡವ ಸಮಾಜ ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚಾಗುತ್ತಿದೆ. ಕೊಡವ ಸಮಾಜದಲ್ಲಿ ವಿವಾಹ ಮತ್ತಿತರ ಕಾರ್ಯಕ್ರಮಗಳು ನಡೆಯುವಾಗ ಅತಿ ಹೆಚ್ಚಿನ ವಾಹನಗಳು ಮತ್ತು ಸಾವಿರಾರು ಜನರ ಓಡಾಟವಿರುತ್ತದೆ. ಈ ರಸ್ತೆಯ ಎರಡೂ ಬದಿಯಲ್ಲಿ ಸುಮಾರು ಅರ್ಧ ಕಿ.ಮೀ ದೂರದವರೆಗೂ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಅಲ್ಲದೆ ವಾಹನ ನಿಲುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಚಾಲಕರುಗಳ ನಡುವೆ ಕಲಹ ಏರ್ಪಡುತ್ತಿದೆ. ಆದ್ದರಿಂದ ಪೊಲೀಸ್ ಇಲಾಖೆ ಒಂದೇ ಬದಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಠಾಣಾಧಿಕಾರಿಗಳ ಬಳಿ ಕೊಡವ ಸಮಾಜದ ಪದಾಧಿಕಾರಿಗಳು ಮನವಿ ಮಾಡಿಕೊಂಡರು. ಮನವಿ ಪತ್ರ ಸಲ್ಲಿಸುವ ಸಂದರ್ಭ ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ,…

Read More