ಸಿದ್ದಾಪುರ NEWS DESK ಸೆ.23 : ತೋಟದಲ್ಲಿ ಬೀಡುಬಿಟ್ಟಿದ್ದ ಸುಮಾರು 15 ಕಾಡಾನೆಗಳನ್ನು ಕಾರ್ಮಿಕರೇ ಕಾಡಿಗಟ್ಟಿದ ಘಟನೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟವೊಂದರಲ್ಲಿ ನಡೆದಿದೆ. ಪ್ರತಿದಿನದಂತೆ ಇಂದು ಕೂಡ ಕೆಲಸಕ್ಕೆಂದು ಬಂದ ಕಾರ್ಮಿಕರಿಗೆ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿತ್ತು. ತೋಟದೊಳಗಿದ್ದ ಕಾಡಾನೆಗಳನ್ನು ಹೇಗಾದರೂ ಮಾಡಿ ಓಡಿಸಬೇಕೆಂದು ಧೈರ್ಯ ಮಾಡಿಕೊಂಡ ಕಾರ್ಮಿಕರು ಮರವೊಂದರ ಮೇಲೆ ಹತ್ತಿ ಜೋರಾಗಿ ಕಿರುಚಿದರು, ಶಬ್ಧ ಮಾಡಿದರು, ಆನೆಗಳನ್ನು ಬೆದರಿಸಿದರು. ಕಾಫಿ ತೋಟದಿಂದ ಚಿಕ್ಕನಹಳ್ಳಿ ಮಾರ್ಗವಾಗಿ ಒಂದು ಕಿಲೋಮೀಟರ್ ವರೆಗೆ ಆನೆಗಳನ್ನು ಓಡಿಸಿ ಅರಣ್ಯ ಸೇರುವಂತೆ ಮಾಡಿದರು. (ವರದಿ : ಕೃಷ್ಣ ಸಿದ್ದಾಪುರ)
ಲೇಖಕ: admin
ಮಡಿಕೇರಿ NEWS DESK ಸೆ.23 : ಹಚ್ಚ ಹಸಿರಿನ ಕಾಫಿ ತೋಟಗಳ ನಡುವಿನ ಗದ್ದೆಯಲ್ಲಿ ಆಯೋಜಿಸಿದ್ದ ವಿವಿಧ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮರಾಟಿ ಸಮುದಾಯ ಬಾಂಧವರು ಮಿಂದೆದ್ದರು. ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಸಮುದಾಯ ಬಾಂಧವರಿಗಾಗಿ ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿಯ ಮರಾಟಿ ಸೋಮಪ್ಪ ಅವರ ಗದ್ದೆಯಲ್ಲಿ ಆಯೋಜಿಸಿದ್ದ ಗ್ರಾಮೀಣ ಗುಡ್ಡಗಾಡು ಕೆಸರು ಗದ್ದೆ ಕ್ರೀಡಾಕೂಟ ಗಮನ ಸೆಳೆಯಿತು. ಕ್ರೀಡಾ ಪ್ರೇಮಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಹೊರ ಹಾಕಿದರು. ಕೆಸರಿನಲ್ಲಿ ಆಟಗಾರರ ಏಳುಬೀಳುಗಳು ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣವನ್ನು ನೀಡಿತು. ಚುಮು ಚುಮು ಚಳಿಯ ನಡುವೆ ಮಳೆಯ ಸಿಂಚನ ಕೂಡ ಕೀಡಾಪಟುಗಳಿಗೆ ಮತ್ತಷ್ಟು ಉತ್ತೇಜನ ನೀಡಿತು. ಮೊಣಕಾಲಿನ ವರೆಗೆ ನೀರು ತುಂಬಿದ ಕೆಸರು ಗzಯಲ್ಲಿ ಹಗ್ಗಜಗ್ಗಾಟ, ಹಿಮ್ಮುಖ ಓಟ, ಗೂಟ ಓಟ, ಮಡಿಕೆ ಹೊಡೆಯುವುದು, ಪಾಸಿಂಗ್ ದಿ ಬಾಲ್, ಕೆಸರುಗದ್ದೆ ವಾಲಗ ಕುಣಿತ ಸ್ಪರ್ಧೆ ರೋಚಕವಾಗಿತ್ತು. ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ವಾಮನ ನಾಯ್ಕ್ ಕ್ರೀಡಾಕೂಟವನ್ನು…
ಮಾಲ್ದಾರೆ NEWS DESK ಸೆ.23 : ತಟ್ಟಳ್ಳಿ ಗ್ರಾಮ, ಮಾಲ್ದಾರೆ ಹಾಡಿಯಲ್ಲಿ ಆಯೋಜಿಸಿದ್ದ ಶ್ರೀ ಗೌರಿ ಗಣೇಶ ಉತ್ಸವದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಪಾಲ್ಗೊಂಡರು. ಹಾಡಿವಾಸಿಗಳು ತಮ್ಮ ಸಂಪ್ರದಾಯದಂತೆ ಶಾಸಕರನ್ನು ಗೌರವದಿಂದ ಸ್ವಾಗತಿಸಿದರು. ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ಹಾಡಿಯ ಜನರು ಆಯೋಜಿಸುವ ಕಾರ್ಯಕ್ರಮಗಳಿಗೆ ಅನುಕೂಲ ಆಗಲಿ ಎಂದು ತಮ್ಮ ಸ್ವಂತ ವೆಚ್ಚದಲ್ಲಿ ಸೌಂಡ್ ಸಿಸ್ಟಮ್ ಕೊಡುಗೆಯಾಗಿ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಹಾಡಿ ಮುಖಂಡರು ಹಾಜರಿದ್ದರು.
ಮಡಿಕೇರಿ NEWS DESK ಸೆ.23 : ಅಕ್ಟೋಬರ್ 10 ರಂದು ನಡೆಯುವ ಯುವ ದಸರಾ ಕಾರ್ಯಕ್ರಮದಲ್ಲಿ ಯುವ ಜನರನ್ನು ರಂಜಿಸುವುದರ ಜೊತೆಗೆ, ಉತ್ಸಾಹ, ಮಾರ್ಗದರ್ಶನ ನೀಡುವಲ್ಲಿ ಪ್ರಖ್ಯಾತ ಚಲನಚಿತ್ರ ನಟರು ಹಾಗೂ ನಿರ್ದೇಶಕನ್ನು ಈ ಬಾರಿ ಆಹ್ವಾನಿಸಲಾಗಿದೆ. ಆ ದಿಸೆಯಲ್ಲಿ *ಮಾದಕ ವ್ಯಸನ ನಿರ್ಮೂಲನೆಯಲ್ಲಿ ಯುವಜನರ ಪಾತ್ರ* ಕುರಿತು ಹೆಸರಾಂತ ನಟ ಹಾಗೂ ನಿರ್ದೇಶಕರಾದ ದುನಿಯಾ ವಿಜಯ್ ಅವರು ಯುವ ಜನರ ಕುರಿತು ಮಾತನಾಡಲಿದ್ದಾರೆ. ಹಾಗೆಯೇ ಯುವ ಸಮೂಹವು ಸರಿಯಾದ ಮಾರ್ಗದಲ್ಲಿ ಮುನ್ನಡೆಯುವ ಬಗ್ಗೆ ಹೆಸರಾಂತ ನಟ ಹಾಗೂ ನಿರ್ದೇಶಕರಾದ ಉಪೇಂದ್ರ ಅವರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ ಎಂದು ಮಡಿಕೇರಿ ದಸರಾ ಸಮಿತಿ ಪ್ರಕಟಣೆ ತಿಳಿಸಿದೆ.
ಮಡಿಕೇರಿ NEWS DESK ಸೆ.23 : ನಗರದ ಜನತೆಯ ಕುಡಿಯುವ ನೀರಿನ ಸಮಸ್ಯೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ವಿಶೇಷ ಪ್ರಯತ್ನದಿಂದ ಮುಕ್ತಿ ದೊರಕಿದಂತಾಗಿದೆ. ಸುಮಾರು 35 ಸಾವಿರ ಜನಸಂಖ್ಯೆ ಹೊಂದಿರುವ ಮಡಿಕೇರಿ ನಗರದ ಜನತೆಗೆ ಕುಡಿಯುವ ನೀರನ್ನು ಪೂರೈಸುವ ಕೂಟು ಹೊಳೆ ಘಟಕದಲ್ಲಿ 300 ಹೆಚ್.ಪಿ ಯ ಎರಡು ಮೋಟಾರು ಪಂಪ್ ಇದ್ದು ಹನ್ನೆರಡರಿಂದ ಹದಿನಾರು ಗಂಟೆಗಳ ಕಾಲ ಚಾಲನೆ ಮಾಡುವ ಸಾಮರ್ಥ್ಯ ಹೊಂದಿತ್ತು. ಕೆಲವೊಮ್ಮೆ ಒಂದು ಮೋಟಾರ್ ಕೆಟ್ಟು ನಿಂತಾಗ ಕೇವಲ 8 ಗಂಟೆಗಳ ಕಾಲ ಪಂಪ್ ಮಾಡುವುದರಿಂದ ನೀರು ಪೂರೈಕೆಯಲ್ಲಿ ವ್ಯತಯ ಉಂಟಾಗುತ್ತಿತ್ತು. ಇದನ್ನು ಕಳೆದ ವರ್ಷ ಗಮನಿಸಿದ ಮಂತರ್ ಗೌಡ ರವರು ನಗರ ಸಭೆಯಿಂದ ವೆಚ್ಚ ಭರಿಸುವುದು ಅಸಾಧ್ಯ ವಾದ ಹಿನ್ನಲೆಯಲ್ಲಿ ವಿಶೇಷವಾಗಿ ಅನುದಾನ ಬಳಕೆಗೆ ನಿರ್ಧರಿಸಿದ್ದರು.ಹಾಗಾಗಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನಿಧಿಯಿಂದ 46 ಲಕ್ಷ ರೂಗಳ ವೆಚ್ಚದಲ್ಲಿ ನೂತನ 300 ಹೆಚ್.ಪಿ ಸಾಮರ್ಥ್ಯ ದ ಪಂಪ್ ಅಳವಡಿಕೆಗೆ ನಿರ್ದೇಶನ ನೀಡಿದ…
ಮಡಿಕೇರಿ NEWS DESK ಸೆ.23 : ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ ಸಂಘಟನೆ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಿಐಟಿಯು ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕ ಸಂಘಟನೆಗಳ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳುತ್ತಿದೆ. ವಾರ್ಷಿಕ ರಿಟರ್ನ್ಸ್ ಸಲ್ಲಿಸುವಲ್ಲಿ ಕಾರ್ಮಿಕ ಸಂಘಗಳು ವಿಳಂಬ ಮಾಡಿದರೆ ಸಂಘದ ನೋಂದಣಿಯನ್ನು ರದ್ದು ಮಾಡುವುದು ಅಥವಾ ಭಾರೀ ದಂಡ ವಿಧಿಸುವ ಮೂಲಕ ಸಂಘಟನೆಗಳ ಅಸ್ತಿತ್ವಕ್ಕೆ ದಕ್ಕೆ ತರುವ ಕೆಲಸ ಮಾಡುತ್ತಿದೆ. ಕಾರ್ಮಿಕರ ಮುಷ್ಕರದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವಾಗಿ ಎಲ್ಲಾ ರೀತಿಯ ಪ್ರತಿಭಟನೆಗಳನ್ನು ಕಾನೂನುಬಾಹಿರವೆಂದು ಪರಿಗಣಿಸುವ ಸಾಧ್ಯತೆ ಇದೆ ಎಂದು ಆರೋಪಿಸಿದರು. ಮತ್ತೊಂದೆಡೆ…
ಮಡಿಕೇರಿ ಸೆ.23 NEWS DESK : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಕರ್ನಾಟಕ ಮೆದುಳು ಅರೋಗ್ಯ ಉಪಕ್ರಮ, ರಾಷ್ಟ್ರೀಯ ಮಾನಸಿಕ ಅರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ ಬೆಂಗಳೂರು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ಅಲ್ಝೈಮರ್ ದಿನ-2024“ಮರೆವಿನ ಕಾಯಿಲೆ, ಅಲ್ಝೈಮರ್ ರೋಗಗಳನ್ನು ನಿರ್ವಹಿಸಲು ಇದು ಸಕಾಲ”ಎಂಬ 2024ರ ಘೋಷ ವಾಕ್ಯದೊಂದಿಗೆ ವಿಶ್ವ ಅಲ್ಝೈಮರ್ ದಿನವನ್ನು ಆಚರಿಸಲಾಯಿತು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ , ಬೋಧಕ ಆಸ್ಪತ್ರೆಯ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (KABHI) ಕ್ಲಿನಿಕ್ , ಸಾಮಾನ್ಯ ವೈದ್ಯ ಶಾಸ್ತ್ರ ವಿಭಾಗದಲ್ಲಿ ಹಾಗೂ ತನಲ್ ವೃದ್ಧಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ KaBHI ಕೊಡಗು ಜಿಲ್ಲಾ ಸಂಯೋಜಕ ಆರ್.ವಿಕ್ರಮ್ ಅಲ್ಝೈಮರ್ ಕಾಯಿಲೆ ಹಾಗೂ ಡಿಮೆಂಷಿಯ ಕಾಯಿಲೆಯ ಬಗೆಗೆ ಹಾಗೂ KaBHI ಕಾರ್ಯಕ್ರಮದ ಬಗೆಗೆ ನೆರೆದಿದ್ದ ವಯೋ ವೃದ್ಧರಿಗೆ ಹಾಗೂ ಜನರಿಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ (ಮನಶ್ಶಾಸ್ತ್ರಜ್ಞೆ) ರಾದ ಫಿರೋದೋಸ್ ಸುಲ್ತಾನ ಮಾತನಾಡಿ, ಡಿಮೆಂಷಿಯ ಕಾಯಿಲೆಯ…
ಮಡಿಕೇರಿ ಸೆ.23 NEWS DESK : ವಿರಾಜಪೇಟೆ ತಾಲ್ಲೂಕು ಕೊಡಗು ಮಾಜಿ ಸೈನಿಕರ ಸಹಕಾರ ಸಂಘ ವತಿಯಿಂದ ಸೆ.25 ರಂದು ಬೆಳಗ್ಗೆ 10.30 ಗಂಟೆಗೆ ಚಪ್ಪಂಡ ಹರೀಶ್ ಉತ್ತಯ್ಯ ಅವರ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯ ಭಾರತೀಯ ಸ್ಟೇಟ್ ಬ್ಯಾಂಕ್ ಮುಂಭಾಗದಲ್ಲಿರುವ ‘ಅಮರ್ ಜವಾನ್’ ಸ್ಮಾರಕದಲ್ಲಿ ಹುತಾತ್ಮ ದಿನಾಚರಣೆ ನಡೆಯಲಿದೆ. ಹಾಗೆಯೇ ಯೋಧರ ಸ್ಮಾರಕ ಸ್ಥಂಭದ ಆವರಣದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ತುಕಡಿಯ ಗೌರವದೊಂದಿಗೆ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ದೇಶ ರಕ್ಷಣೆಗಾಗಿ ಹುತಾತ್ಮರಾದ ಯೋಧರಿಗೆ ಹಾಗೂ ದಿವಂಗತ ಮಾಜಿ ಯೋಧರಿಗೆ ಶ್ರದ್ಧಾಂಜಲಿಯನ್ನು ಸಂಘದ ವತಿಯಿಂದ ಅರ್ಪಿಸಲಾಗುವುದು. ಕರ್ನಲ್ ಪುಟ್ಟಿಚಂಡ ಗಣಪತಿ, ಮಡಿಕೇರಿ ಗೋಲ್ಡನ್ ಫಾಮ್ ಕ್ಯಾಂಟಿನ್ ವ್ಯವಸ್ಥಾಪಕರಾದ ಲೆಫ್ಟಿನೆಂಟ್ ಕರ್ನಲ್ ಮುಲ್ಲೇರ ಕಾವೇರಪ್ಪ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ರಾಮಚಂದ್ರ, ವಿರಾಜಪೇಟೆ ತಾ. ಡಿವೈಎಸ್‍ಪಿ ಮೋಹನ್ ಕುಮಾರ್, ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಕೆಡಿಸಿಸಿ…
ಮಡಿಕೇರಿ ಸೆ.23 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯು ಅ.1 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ(ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಹತ್ತಿರ) ನಡೆಯಲಿದೆ. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ, ಶಾಸಕರಾದ ಡಾ.ಮಂತರ್ ಗೌಡ, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ, ಲೋಕಸಭಾ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಶಾಸಕರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಡಾ.ಧನಂಜಯ ಸರ್ಜಿ, ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕೊಡಗು…
ಮಡಿಕೇರಿ ಸೆ.23 NEWS DESK : ಆರವತ್ತರ ದಶಕದ ಆರಂಭದಿಂದಲೂ ಇ.ಎಂ.ಇ. ಹಾಕಿ ಕ್ಷೇತ್ರದಲ್ಲಿ ತನ್ನದೇ ಆದ ಖ್ಯಾತಿಯನ್ನು ಉಳಿಸಿಕೊಂಡಿದೆ. ಪ್ರಾರಂಭದ ದಿನಗಳಲ್ಲಿ ಸಾಮಾನ್ಯ ಆಟಗಾರರನ್ನು ಹೊಂದಿದ್ದ ತಂಡ ಕೆಲವೇ ವರ್ಷಗಳಲ್ಲಿ ಹಲವು ಪ್ರತಿಭಾನ್ವಿತ ಆಟಗಾರರೊಂದಿಗೆ ಕೆಲವು ಭರವಸೆಯ ಆಟಗಾರರ ಪಡೆಯನ್ನು ಸಿದ್ಧಪಡಿಸಿ ಸಾಂಘಿಕ ಹೋರಾಟದಲ್ಲಿ ಹೆಸರುಗಳಿಸುತ್ತಾ ಪ್ರವರ್ಧಮಾನಕ್ಕೆ ಬಂತು. ಪಂದ್ಯಗಳನ್ನು ಗೆಲ್ಲಿಸಿ ಕೊಡುವಂತಹ ಆತ್ಮವಿಶ್ವಾಸದ ಆಟಗಾರರು ತಂಡದಲ್ಲಿ ಕಾಣಿಸಿಕೊಂಡರು. ಇ.ಎಂ.ಇ ಇತಿಹಾಸ : : ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರ ತಮ್ಮ ಆಡಳಿತದಲ್ಲಿ ಸೇನೆಯನ್ನು ಇನ್ನಷ್ಟು ಬಲಪಡಿಸಲು 1943ರಲ್ಲಿ ಕೋರ್ ಆಫ್ ರಾಯಲ್ ಬ್ರಿಟೀಷ್ ಆರ್ಮಿ ಎಕ್ಯೂಪ್ ಮೆಂಟ್ ಘಟಕವನ್ನು ಆರಂಭಿಸಿತು. ಇದರ ಕಾರ್ಯವೈಖರಿ ಏನೆಂದರೆ ಯುದ್ಧದಲ್ಲಿ ಬಳಸಿದ ಯುದ್ಧ ಸಾಮಗ್ರಿಗಳನ್ನು, ವಾಹನಗಳನ್ನು ರಿಪೇರಿ ಮಾಡುವುದು ಮತ್ತು ಅಭಿವೃದ್ಧಿಪಡಿಸುವುದು. ಸ್ವಾತಂತ್ರ್ಯ ನಂತರ ಬ್ರಿಟೀಷರು ದೇಶ ಬಿಟ್ಟು ಹೋದ ನಂತರ ಹಲವು ಬದಲಾವಣೆಯೊಂದಿಗೆ ಅಧಿಕೃತವಾಗಿ ಇ.ಎಂ.ಇ (ಎಲೆಕ್ಟ್ರಿಕ್ ಮೆಕ್ಯಾನಿಕ್ ಇಂಜಿನಿಯರ್ಸ್) ಎಂದು ನಾಮಕರಣ ಮಾಡಲಾಯಿತು. ಇದರ ಕೇಂದ್ರ ಕಚೇರಿ ಸಿಕಂದರಾಬಾದ್ ನಲ್ಲಿದೆ.…






