ಮಡಿಕೇರಿ ಜು.28 NEWS DESK : ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ ಆರೋಗ್ಯ ಸೌಲಭ್ಯಗಳನ್ನು ಆಸ್ಪತ್ರೆಯ ಹಳೆಯ ಕಟ್ಟಡದಿಂದ ನೂತನ ಕಟ್ಟಡಕ್ಕೆ ಭಾನುವಾರ ಸ್ಥಳಾಂತರಿಸಲಾಯಿತು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ|| ಮಂತರ್‌ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೊರ ರೋಗಿಗಳ ವಿಭಾಗದ ಸ್ಥಳಾಂತರಕ್ಕೆ ಚಾಲನೆ ನೀಡಿದರು. ನೂತನ ಆಸ್ಪತ್ರೆ ಕಟ್ಟಡ ಪೂರ್ಣಗೊಳಿಸಲು ಸರ್ಕಾರದಿಂದ 60 ಕೋಟಿ ರೂ. ಬಿಡುಗಡೆಯಾಗಲಿದೆ ಎಂದು ಮಡಿಕೇರಿ ಶಾಸಕರು ಇದೇ ಸಂದರ್ಭ ತಿಳಿಸಿದರು. ನೂತನ ಕಟ್ಟಡಕ್ಕೆ ಸ್ಥಳಾಂತರವಾಗಿರುವ ಹೊರ ರೋಗಿಗಳ ವಿಭಾಗದ ಜನರಲ್ ಮೆಡಿಸನ್, ಕಣ್ಣು, ಕಿವಿ-ಮೂಗು-ಗಂಟಲು, ಕೀಲು ಮತ್ತು ಮೂಳೆ, ಮಾನಸಿಕ ರೋಗ, ಶ್ವಾಸಕೋಶ ಮತ್ತು ಚರ್ಮ ರೋಗ ವಿಭಾಗಗಳಿಗೆ ಶಾಸಕ ಡಾ|| ಮಂತರ್‌ಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಅವರು ಪ್ರತ್ಯೇಕವಾಗಿ ಭೇಟಿ ನೀಡಿ ವೀಕ್ಷಿಸಿದರು. ಅಲ್ಲಿನ ‘ಡಿ’ ದರ್ಜೆ ನೌಕರರು, ಶೂಶ್ರುಷಕರು, ಸಿಬ್ಬಂದಿಗಳು, ವೈದ್ಯರ…
ಲೇಖಕ: admin
ಮಡಿಕೇರಿ ಜು.28 NEWS DESK : ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿವಿನಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಮಹತ್ತರ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಹಾಗೂ ವಿರಾಜಪೇಟೆಯ ಮಾಜಿ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ಶೈಕ್ಷಣಿಕವಾಗಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕಾರಂಗ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದೆ. ಪತ್ರಿಕಾ ರಂಗ ಉಳಿದರೆ ಪ್ರಜಾಪ್ರಭುತ್ವ ಸದೃಢವಾಗಿರುತ್ತದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಹಾದಿ ತಪ್ಪಿದರೆ ಅದನ್ನು ವಿಮರ್ಶೆಗೆ ಒಳಪಡಿಸಿ ಎಚ್ಚರಿಸಿ ಕಾವಲುಪಡೆಯಂತೆ ಮಾಧ್ಯಮ ಕ್ಷೇತ್ರ ಮುನ್ನಡೆಯುತ್ತಿದೆ. ಹಲವು ಹಗರಣ, ಅವ್ಯವಹಾರ, ಸಮಾಜದ್ರೋಹಿ ಚಟುವಟಿಕೆಗಳು ಪತ್ರಿಕೆ ಹಾಗೂ ವಾಹಿನಿಗಳಿಂದ ಹೊರಬರುತ್ತಿವೆ. ಕರ್ತವ್ಯ ನಿಷ್ಠರಾಗಿ, ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಪ್ರತ್ರಕರ್ತರು ಸಮಾಜದ ಪ್ರತಿಬಿಂಬ ಎಂದು ಬಣ್ಣಿಸಿದ ಅವರು, ಇಂದಿನ ಕಾಲಘಟ್ಟದಲ್ಲಿ ಪತ್ರಿಕೆ ನಡೆಸುವುದು ಸವಾಲಿನ ಕೆಲಸವಾಗಿದೆ. ಇದರೊಂದಿಗೆ ಪತ್ರಿಕೆ ವಿತರಣೆ ಮಾಡುವುದು…
ವಿರಾಜಪೇಟೆ NEWS DESK ಜು.27 :ಇತ್ತೀಚಿಗೆ ಸುರಿದ ಭಾರಿ ಮಳೆಗೆ ಕಳತ್ಮಾಡು ಗ್ರಾಮದ ಕೂಲಿ ಕಾರ್ಮಿಕರಾದ ಸತ್ಯವೇಲು ರವರ ಮನೆ ಮೇಲೆ ದೊಡ್ಡ ಮರವೊಂದು ಬಿದ್ದಿದ್ದು ಶೌರ್ಯ ವಿಪತ್ತು ತಂಡದವರು ಬಿದ್ದ ಮರವನ್ನು ಕಡಿದು ತೆರವುಗೊಳಿಸಿದರು. ತದನಂತರ ಸ್ಥಳೀಯ ಗ್ರಾಮ ಪಂಚಾಯತ್ ನ ವತಿಯಿಂದ ಶೀಟ್ ಗಳನ್ನು ತರಿಸಿ, ಮನೆ ಮೇಲೆ ಹಾಕಿಸಿ ಸೂರನ್ನು ಕಲ್ಪಿಸಿದರು. ಮರ ತೆರವು ಕಾರ್ಯದಲ್ಲಿ ಶೌರ್ಯ ವಿಪತ್ತು ತಂಡದ ಸ್ವಯಂ ಸೇವಕರಾದ ಜಯಪ್ರಕಾಶ್, ದಿನೇಶ್, ರಾಜು, ಚಂದ್ರ, ಸತೀಶ್, ಚಂದ್ರು, ಕುಶಾಲ್ ರವರು ಪಾಲ್ಗೊಂಡಿದ್ದರು.
ಮಡಿಕೇರಿ ಜು.27 NEWS DESK : ಕೊಡಗು ಜಿಲ್ಲೆಯ ವಿವಿಧೆಡೆ ಗಾಳಿ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದ ಮತ್ತು ಮನೆಗಳಿಗೆ ಹಾನಿಯಾದ ಘಟನೆ ಶನಿವಾರವೂ ಸಂಭವಿಸಿದೆ. ಪ್ರತ್ಯೇಕ ಘಟನೆಯಲ್ಲಿ ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್ ವ್ಯಾಪ್ತಿಯ ಹರೀಶ್ ಹಾಗೂ ಬಿಳುಗುಂದ ಗ್ರಾಮದ ನಿವಾಸಿ ಕೆ.ಎಂ.ಕುಶಾಲಪ್ಪ ಅವರ ವಾಸದ ಮನೆಗೆ ಬೃಹತ್ ಮರ ಬಿದ್ದು ಹಾನಿಯಾಗಿದೆ. ಮಡಿಕೇರಿಯ ಬಿಳಿಗೇರಿ ಬಳಿ ಮೇಕೇರಿಯಿಂದ ಹಾಕತ್ತೂರು ಭಾಗದ ರಸ್ತೆ ಬದಿ ಕುಸಿದಿದೆ. ಮಡಿಕೇರಿ ತಾಲ್ಲೂಕಿನ ಹೊದ್ದೂರು ಬಳಿ ಮೂರ್ನಾಡು-ನಾಪೋಕ್ಲು ರಸ್ತೆಯಲ್ಲಿ, ವಿರಾಜಪೇಟೆ ಬೈಂದೂರು ರಸ್ತೆ, ಸೋಮವಾರಪೇಟೆ ತಾಲ್ಲೂಕಿನ ಹಾಲೇರಿ ಗ್ರಾಮದ ಬಳಿ ಬರೆ ಕುಸಿದಿದೆ. ಜೋಡುಪಾಲದ ಸಮೀಪದ ಮುಖ್ಯ ರಸ್ತೆಯ ಉದ್ದಮ ಮೊಟ್ಟೆಗೆ ತೆರಳುವ ಮಾರ್ಗದಲ್ಲಿ ಸೇತುವೆ, ಕಾಟಕೇರಿ-ಅಪ್ಪಂಗಳ ಮಾರ್ಗದಲ್ಲಿ, ಪೂಕಲ ಬಿರುನಾಣಿ ರಸ್ತೆಯಲ್ಲಿ ಮತ್ತು ಐಗೂರು ಹೊಸತೋಟದ ನಡುವೆ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಯಿತು. ಭಾರೀ ಗಾಳಿ ಮಳೆಯಿಂದಾಗಿ ಕರ್ಣಂಗೇರಿ ಗ್ರಾಮದ…
ಮಡಿಕೇರಿ ಜು.27 NEWS DESK : ನಿಟ್ಟೂರು ಗ್ರಾಮದ ನಾಗರಹೊಳೆ ರಕ್ಷಿತಾರಣ್ಯದಂಚಿನಲ್ಲಿರುವ ಕಾರ್ಮಾಡು ಚಿಣ್ಣನ ಹಾಡಿ ಕಳೆದ ಮೂರು ವಾರಗಳಿಂದ ಸುರಿಯುತ್ತಿರುವ ಗಾಳಿ ಮಳೆಯಿಂದ ಸಂಕಷ್ಟವನ್ನು ಎದುರಿಸುತ್ತಿದೆ. ಹಾಡಿ ಬಳಿಯ ಇರುವ ತೋಡಿನಲ್ಲಿ ನೀರು ತುಂಬಿ ಹರಿಯುತ್ತಿದ್ದು, ಇಲ್ಲಿರುವ ಮನೆಯ ಸಮೀಪಕ್ಕೆ ಬಂದು ಆತಂಕ ಸೃಷ್ಟಿಸಿದೆ. ಕಳೆದ ಬಾರಿ ಸುರಿದ ಮಳೆಗೆ ಈ ತೋಡಿನ ಸೇತುವೆ ಕೊಚ್ಚಿಕೊಂಡು ಹೋಗಿತ್ತು. ಈ ಸಂದರ್ಭ ಅಧಿಕಾರಿಗಳ ದಂಡು ಸ್ಥಳಕ್ಕೆ ಭೇಟಿ ನೀಡಿ ಭರವಸೆಯ ಮಾತುಗಳನ್ನಾಡಿದ್ದರು. ಹೊಸ ಸೇತುವೆ, ರಸ್ತೆಯ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಿಸಿ, ರಸ್ತೆಯನ್ನು ಎತ್ತರಿಸಿ ತೋಡಿನ ಹೂಳೆತ್ತುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ನೀಡಿದ ಭರವಸೆಯೂ ಈಡೇರಿಲ್ಲ, ಕಾಮಗಾರಿಯೂ ಆರಂಭಗೊಂಡಿಲ್ಲವೆಂದು ಹಾಡಿ ಜನ ಭೇಸರ ವ್ಯಕ್ತಪಡಿಸಿದ್ದಾರೆ. ಈ ಕ್ಷೇತ್ರದ ಶಾಸಕರು ಇಲ್ಲಿನ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಅಗತ್ಯವಿದೆ.
ವಿರಾಜಪೇಟೆ ಜು.27 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ವಿರಾಜಪೇಟೆಯಲ್ಲಿ ನಡೆಯಿತು. ಉಡುಪಿ ವಿಭಾಗದ ಸಂಘದ ಪ್ರಾದೇಶಿಕ ನಿರ್ದೇಶಕರಾದ ದುಗ್ಗೆ ಗೌಡ ರವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸೇವಾ ಪ್ರತಿನಿಧಿಗಳೆಲ್ಲರೂ ಕ್ರಿಯಾಶೀಲರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮ ಸಂಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು. 2024-25 ನೇ ಸಾಲಿನ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚೆ ನಡೆಯಿತು. ವಿವಿಧ ಸೇವಾ ಪ್ರತಿನಿಧಿಗಳ ಹಾಗೂ ಮೇಲ್ವಿಚಾರಕರುಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.ಜಿಲ್ಲಾ ನಿರ್ದೇಶಕಿ ಲೀಲಾವತಿ, ತಾಲೋಕು ಯೋಜನಾಧಿಕಾರಿಗಳಾದ ದಿನೇಶ್, ಎಲ್ಲಾ ವಲಯದ ಮೇಲ್ವಿಚಾರಕರು, ಎಲ್ಲಾ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು, ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಶಾಲನಗರ ಜು.27 NEWS DESK : ಪತ್ರಿಕಾರಂಗ ನೈಜ ಸಮಸ್ಯೆಗಳ ವಸ್ತು ಸ್ಥಿತಿ ವಿಚಾರಗಳನ್ನು ಪ್ರಕಟಿಸುವ ಮೂಲಕ ಕಾರ್ಯಾಂಗದ ಕಿವಿ ಹಿಂಡುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಸಮಗ್ರ ಪಾತ್ರ ವಹಿಸುತ್ತಿವೆ ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅಭಿಪ್ರಾಯಪಟ್ಟಿದ್ದಾರೆ. ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಸ್ಯೆಗಳನ್ನು ಮತ್ತು ವಸ್ತುಸ್ಥಿತಿ ವಿಚಾರಗಳನ್ನು ಅರಿತು ನೈಜ ಸುದ್ಧಿಯಾಗಿ ಪ್ರಕಟಿಸಿದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಾಣುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಅನುವು ಮಾಡಿದಂತಾಗುತ್ತದೆ ಎಂದರು. ಈ ಸಂದರ್ಭ ಮಾತನಾಡಿದ ಅವರು ಕುಶಾಲನಗರ ತಾಲೂಕು ಪತ್ರಕರ್ತರ ಕಾರ್ಯವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ಮಾತನಾಡಿ ನಾಲ್ಕನೇ ಅಂಗವಾದ ಪತ್ರಿಕಾ ರಂಗ ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸುದ್ದಿ ಮಾಡುವ ಭರಾಟೆಯ ನಡುವೆ ಸತ್ಯಾಸತ್ಯತೆ ಬಗ್ಗೆ ಕೂಡ ಅವಲೋಕನ ಮಾಡಬೇಕಾಗಿದೆ ಎಂದರು.…
ಸುಂಟಿಕೊಪ್ಪ ಜು.27 NEWS DESK : 7ನೇ ಹೊಸಕೋಟೆ ಕಲ್ಲುಕೋರೆಯ ಜನಾರ್ಧನ ಪೂಜಾರಿ ಎಂಬವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮನೆಯ ಮೇಲ್ಚಾವಣಿ ಹಾಗೂ ಗೃಹ ಉಪಯೋಗಿ ವಸ್ತುಗಳು ಹಾನಿಗೊಂಡಿದೆ. ಕೂಡಲೇ 7ನೇ ಹೊಸಕೋಟೆ ಮತ್ತು ಕಲ್ಲುಕೋರೆ ನಿವಾಸಿಗಳು ಹಾಗೂ ಅಕ್ಕ ಪಕ್ಕದ ನಿವಾಸಿಗಳು ಆಗಮಿಸಿ ಮನೆಯ ಹೆಂಚುಗಳನ್ನು ಅಳವಡಿಸಿ ಮನೆಯನ್ನು ದುರಸ್ತಿ ಪಡಿಸುವಲ್ಲಿ ನೆರವಾದರು.
ಸುಂಟಿಕೊಪ್ಪ ಜು.27 NEWS DESK : ಜಿಲ್ಲೆಯಲ್ಲಿ ವರುಣನ ಆರ್ಭಟ ಕೊಂಚ ಮಟ್ಟಿಗೆ ಇಳಿಮುಖಗೊಂಡಿದ್ದರೂ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಹಾನಿ ಪ್ರಮಾಣ ಹೆಚ್ಚಾಗುತ್ತಿದೆ. ಸುಂಟಿಕೊಪ್ಪ ಗ್ರಾಮ ಪಂಚಾಯತಿಗೆ ಸೇರಿದ ಪಂಪ್ ಹೌಸ್ ರಸ್ತೆಯ ನಿವಾಸಿ ಸುಲೈಕ ಎಂಬವರ ವಾಸದ ಮನೆಯು ಭಾಗಶಃ ಕುಸಿದು ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯತಿ ಸದಸ್ಯ ಪ್ರಸಾದ್ ಕುಟ್ಟಪ್ಪ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ನಾಗೇಂದ್ರ ಭೇಟಿ ನೀಡಿದರು.
ಹರಿಹರ ಜು 27 NEWS DESK : ಸರ್ಕಾರ ಮತ್ತು ಸಂಘಟನೆ ಒಟ್ಟಿಗೆ ಹೋದಾಗ ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು. ತಾಲ್ಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಶ್ರೀಮಂತರ ಮನೆಯ ಮಕ್ಕಳು ಪತ್ರಿಕಾ ವೃತ್ತಿಗೆ ಬರುವುದು ಕಡಿಮೆ. ಉಳಿದ ಎಲ್ಲಾ ವರ್ಗದ ಜನತೆ ಸರ್ಕಾರದ ಸವಲತ್ತುಗಳನ್ನು ಕೇಳಿ ಪಡೆದುಕೊಳ್ಳುವ ಹಾಗೆಯೇ, ಪತ್ರಕರ್ತರೂ ಕೂಡ ಸರ್ಕಾರದ ಕಾರ್ಯಕ್ರಮಗಳನ್ನು ತಮ್ಮ ಹಕ್ಕು ಎಂದು ಭಾವಿಸಿ ಪಡೆದುಕೊಳ್ಳಬೇಕು ಎಂದರು. ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ಅನುಭವಿಸಿದ ಸಂಕಷ್ಟಗಳನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಆದ್ದರಿಂದ ಸರ್ಕಾರದ ಜನಪರ ಕಾರ್ಯಕ್ರಮಗಳ ಅನುಕೂಲ ಪಡೆದುಕೊಳ್ಳಲು ಪತ್ರಕರ್ತರು ಹಿಂಜರಿಯಬಾರದು ಎಂದರು. ದಾವಣಗೆರೆ ಪತ್ರಕರ್ತರ ಸಮ್ಮೇಳನದ ಫಲಪ್ರದದಿಂದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸಿಗುವಂತಾಗಿದೆ. ಕಾರ್ಯನಿರತ ಮತ್ತು ಕಾರ್ಯಮರೆತ ಪತ್ರಕರ್ತರಿಬ್ಬರೂ ಬಸ್ ಪಾಸ್ ಕೇಳುತ್ತಿದ್ದಾರೆ. ಇದು ಸಾಧ್ಯವಿಲ್ಲ. ಏಕೆಂದರೆ ಸರ್ಕಾರದ ಸವಲತ್ತು ದುರುಪಯೋಗ ಆಗಬಾರದು. ಈ ಬಗ್ಗೆ ಪತ್ರಕರ್ತರೂ ಸ್ವಯಂ ತೀರ್ಮಾನ ಮಾಡಿಕೊಳ್ಳಬೇಕು ಎಂದರು. ತಾಲ್ಲೂಕು…






