ವಿರಾಜಪೇಟೆ ಜು.27 NEWS DESK : ಭಾರಿ ಮಳೆಗೆ ಬೈರಂಬಾಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಮೇಲೆ ಉರುಳಿ ಬಿದ್ದಿದ್ದ ಬೃಹತ್ ಗಾತ್ರದ ಮರವನ್ನು ಬೈರಂಬಾಡ ಗ್ರಾಮಸ್ಥರು ತೆರವುಗೊಳಿಸಿದರು. ಕ್ರೇನ್ ಕೇಬಲ್ ಗಳ ಬಳಕೆ ಮಾಡಿದ್ದರೂ ಶಾಲಾ ಗೋಡೆಯಿಂದ ಸ್ವಲ್ಪ ಜರುಗಿದ ಮರವನ್ನು ಸುಲಭದಲ್ಲಿ ತೆರವುಗೊಳಿಸಲಾಗಲಿಲ್ಲ. ನಂತರಗ್ರಾಮಸ್ಥರ ಸಹಕಾರದಿಂದ ಮರವನ್ನು ನೆಲಕುರುಳಿಸಲಾಯಿತು. ಈ ಸಂದರ್ಭ ಹಾಲುಗುಂದ ಗ್ರಾ.ಪಂ ಅಧ್ಯಕ್ಷ ಪಂಡಿಕಂಡ ದಿನೇಶ್, ಸದಸ್ಯರಾದ ಪೂವಯ್ಯ, ಶಾಲಾ ಮುಖ್ಯ ಶಿಕ್ಷಕಿ ಪದ್ಮ, ಶಿಕ್ಷಕಿ ಪ್ರತಿಮಾ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಲೇಖಕ: admin
ಸೋಮವಾರಪೇಟೆ ಜು.27 NEWS DESK : ದೇವಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಅಂಗವಾಗಿ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು. ಚಾಮುಂಡೇಶ್ವರಿ ಭಜನಾ ಮಂಡಳಿ ವತಿಯಿಂದ ದೇವಾಲಯದಲ್ಲಿ ಆಷಾಡ ಮಾಸದ ಅಂಗವಾಗಿ ಪ್ರತಿ ಶುಕ್ರವಾರವೂ ದೇವಿಗೆ ವಿಶೇಷ ಪೂಜೆ ನಡೆಯುತ್ತಿದೆ. ಇಂದು ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವ ಅಂಗವಾಗಿ ಅರ್ಚಕ ಮೋಹನಮೂರ್ತಿ ಶಾಸ್ತ್ರಿಗಳ ಪುರೋಹಿತ್ವದಲ್ಲಿ ಅಷ್ಟೋತ್ತರ, ಅರ್ಚನೆ ವಿಶೇಷ ಪೂಜೆ ಸೇರಿದಂತೆ ವಿಶೇಷ ಪೂಜೆ ನಡೆಯಿತು. ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು. ಈ ಸಂದರ್ಭ ಭಜನಾ ಮಂಡಳಿಯ ಪ್ರಮುಖರುಗಳಾದ ನಾಗಮಣಿ ಯುವರಾಜ್, ಕವಿತಾ ಸಂಜಯ್, ಗೀತಾರಾಜ್, ಭಗವತಿ ದೇಶಮುಖ್, ಲತಾ ಮಂಜುನಾಥ್, ವೀರಶೈವ ಸಮಾಜದ ನಿರ್ದೇಶಕರುಗಳಾದ ಭಾಗ್ಯಶಡಾಕ್ಷರಿ, ಯುವರಾಜ್, ಯೋಗೇಶ್ ಹಾಗೂ ಮಂಜುನಾಥ್ ಮುಂತಾದವರು ಹಾಜರಿದ್ದರು.
ಮೈಸೂರು ಜು.27 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸೂಕ್ತ ಕ್ರಮದ ಭರವಸೆ ನೀಡಿದರು.
ಮಡಿಕೇರಿ ಜು.27 NEWS DESK : ಕಾಗಿ೯ಲ್ ಕದನದಲ್ಲಿ ಹುತಾತ್ಮರಾದ 527 ಯೋಧರ ಸ್ಮರಣೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ 527 ಹಣತೆಗಳನ್ನು ಬೆಳಗಿಸುವ ಮೂಲಕ ವಿನೂತನವಾಗಿ ಕಾಗಿ೯ಲ್ ವಿಜಯ ದಿನವನ್ನು ಭಾವನಾತ್ಮಕಾಗಿ ಆಚರಿಸಲಾಯಿತು. ನಗರದ ಗಾಂಧಿ ಭವನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾಯ೯ಕ್ರಮದಲ್ಲಿ ಸಾವ೯ಜನಿಕರೂ ಸೇರಿದಂತೆ ರೋಟರಿ ಸದಸ್ಯರು 527 ಹಣತೆಗಳನ್ನು ಬೆಳಗಿಸಿದರು, ಕಾಗಿ೯ಲ್ ಸಮರದಲ್ಲಿ ಭಾರತದ ಹೆಮ್ಮೆಯ 527 ಯೋಧರು 25 ವಷ೯ಗಳ ಹಿಂದೆ ಪ್ರಾಣತ್ಯಾಗ ಮಾಡಿದ್ದರು, ಈ ಯೋಧರ ತ್ಯಾಗಬಲಿದಾನದ ಸ್ಮರಣೆಯಲ್ಲಿ 527 ಹಣತೆಗಳನ್ನು ಬೆಳಗಿಸಿ ಅವರನ್ನು ಸ್ಮರಿಸುವ ಪ್ರಯತ್ನ ಇದಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಹೇಳಿದರು. ಕಾಗಿ೯ಲ್ ವಿಜಯ್ ದಿವಸ್ ಅಂಗವಾಗಿ ಮಡಿಕೇರಿಯ ಮದ್ರಾಸ್ ರೆಜಿಮೆಂಟ್ ನಲ್ಲಿ 22 ವಷ೯ಗಳ ಕಾಲ ಸೇವೆ ಸಲ್ಲಿಸಿ ಅನೇಕ ಸೇವಾ ಮೆಡಲ್ ಗಳನ್ನು ಪಡೆದು ಸೇನೆಯಿಂದ ನಿವೖತ್ತರಾದ ಸೇನಾಧಿಕಾರಿ ಬಿ,ಕೆ, ಲೋಕೇಶ್ ಮತ್ತು ಪತ್ನಿ ಕಲ್ಪನ ಲೋಕೇಶ್ ಅವರನ್ನು ಮಿಸ್ಟಿ…
ಮಡಿಕೇರಿ ಜು.27 NEWS DESK : ಸರ್ಕಾರಿ ಕೆಲಸಕ್ಕೆ ಸೇರುವ ಪ್ರತಿಯೊಬ್ಬರು ಸರ್ಕಾರಿ ಕರ್ತವ್ಯ ಎಂದು ಭಾವಿಸದೆ ಅದನ್ನು ಜನರ ಸೇವೆ ಎಂದೇ ಪರಿಗಣಿಸಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕಿವಿಮಾತು ಹೇಳಿದರು. ವಿಧಾನಸೌಧದಲ್ಲಿರುವ ಪೊನ್ನಣ್ಣ ಅವರ ಕಛೇರಿಗೆ ಆಡಳಿತಾತ್ಮಕ ಸಲಹೆ ಕೇಳಲು ಬಂದ ನೂತನವಾಗಿ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು. ಯಾವುದೇ ಸರ್ಕಾರಿ ಅಧಿಕಾರಿ ಕೆಲಸ ಆರಂಭಿಸುವಾಗ ಜನರ ಸೇವೆ ಮಾಡುತ್ತೇನೆ ಎಂಬ ಸಂಕಲ್ಪತೊಟ್ಟು ವೃತ್ತಿ ಆರಂಭಿಸಬೇಕು. ಸಾಮಾನ್ಯ ಜನರಿಗೆ ಅಧಿಕಾರಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬ ಜ್ಞಾನ ಪೂರ್ಣವಾಗಿ ಇರುವುದಿಲ್ಲ. ಹಾಗಾಗಿ ಅವರನ್ನು ಅರ್ಥೈಸಿಕೊಂಡು ಕೆಲಸ ಮಾಡಬೇಕು. ಆಗ ಮಾತ್ರ ಜನಾನುರಾಗಿ ಅಧಿಕಾರಿ ಎಂದು ಗುರುತಿಸಿಕೊಳ್ಳಲು ಸಾಧ್ಯ ಎಂದು ಪೊನ್ನಣ್ಣ ಸಲಹೆ ನೀಡಿದರು.
ಮಡಿಕೇರಿ ಜು.27 NEWS DESK : ಜಿಲ್ಲೆಯ ವಿವಿಧೆಡೆ ಮಳೆಯಿಂದ ಹಾನಿ ಉಂಟಾದ ಪ್ರದೇಶಗಳಿಗೆ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಪರಿಶೀಲಿಸಿದರು. ವಿಧಾನಸಭಾ ಅಧಿವೇಶನ ಮುಕ್ತಾಯವಾದ ಬೆನ್ನಲ್ಲೇ ಜಿಲ್ಲೆಗೆ ಆಗಮಿಸಿ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಗೊಳಗಾದ ಬೇಳೂರು ಬಾಣೆ, ಸೂರ್ಲಬ್ಬಿ, ಜಂಬೂರು ಪುನರ್ವಸತಿ ಕೇಂದ್ರ, ಮಾದಾಪುರ, ಸೂರ್ಲಬ್ಬಿ ರಸ್ತೆ, ಶಾಂತಳ್ಳಿ ಗುಡ್ಡ ಕುಸಿತ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತ್ವರಿತ ಕ್ರಮಕ್ಕೆ ಸೂಚನೆ ನೀಡಿದರು.
ಸಿದ್ದಾಪುರ ಜು.27 NEWS DESK : ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಹಿರಿಯ ಪತ್ರಕರ್ತ ಅಂಚೆಮನೆ ಸುಧಿ ಕುಮಾರ್ ಅವರು ಕಾವೇರಿ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾ ಘಟಕ, ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್, ಸಂಗಮ ಟಿ.ವಿ ಹಾಗೂ ವಂಶಿ ನ್ಯೂಸ್ ಸಹಯೋಗದೊಂದಿಗೆ ಜು.31ರಂದು ಕುಶಾಲನಗರ ಗಾಯಿತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆಯುವ ಪತ್ರಿಕಾ ದಿನಾಚರಣೆಯಲ್ಲಿ ಸುಧಿ ಕುಮಾರ್ ಅವರಿಗೆ ಕಾವೇರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಿದ್ದಾಪುರ ಸಮೀಪದ ಅಭ್ಯತ್ ಮಂಗಲ ಗ್ರಾಮದ ಅಂಚೆಮನೆ ದಿ.ನಂಜುಂಡ ಹಾಗೂ ಜಯಮ್ಮ ದಂಪತಿಗಳ ಪುತ್ರ ಅಂಚೆಮನೆ ಸುಧಿ ಕುಮಾರ್ ಅವರು ಕಳೆದ 25 ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮಡಿಕೇರಿ ಜು.27 NEWS DESK : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜು.28 ರಂದು ಪತ್ರಿಕಾ ದಿನಾಚರಣೆ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10.30 ಗಂಟೆಗೆ ನಗರದ ಪತ್ರಿಕಾ ಭವನದಲ್ಲಿ ಕಾರ್ಯಕ್ರಮ ಸಂಚಾಲಕ ಟಿ.ಎನ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್ ಭಾಗವಹಿಸಲಿದ್ದಾರೆ. ಮುಖ್ಯ ಭಾಷಣಗಾರರಾಗಿ ವೀರಾಜಪೇಟೆ ಲಿಟಲ್ ಸ್ಕಾಲರ್ ಅಕಾಡೆಮಿ ಅಧ್ಯಕ್ಷೆ ಪೂಜಾ ರವೀಂದ್ರ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ ಹಿರಿಯ ಪತ್ರಿಕಾ ವಿತರಕರುಗಳಾದ ಸುಂಟಿಕೊಪ್ಪದ ಮುಕ್ಕಾಟಿರ ವಸಂತ್, ಚೆಟ್ಟಳ್ಳಿಯ ಟಿ.ಎನ್. ಧನಲಕ್ಷ್ಮಿ, ವೀರಾಜಪೇಟೆಯ ದೀಪಕ್ ದಾಸ್ ಅವರುಗಳನ್ನು…
ಮಡಿಕೇರಿ ಜು.27 NEWS DESK : ರಸ್ತೆ ಬದಿಯಲ್ಲಿ ನಿಲ್ಲಿಸಿದ ಆಟೋ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮದಲ್ಲಿ ನಡೆದಿದೆ. ಜಯಪ್ಪ ಎಂಬುವರ ಆಟೋದ ಮೇಲೆ ವಿದ್ಯುತ್ ಕಂಬ ಬಿದ್ದಿದ್ದು, ಆಟೋ ಸಂಪೂರ್ಣ ಜಖಂ ಗೊಂಡಿದೆ. ವಿದ್ಯುತ್ ಇಲಾಖೆ ಆಟೋ ಚಾಲಕನಿಗೆ ಪರಿಹಾರ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಮಡಿಕೇರಿ ಜು.27 NEWS DESK : ಭಾಗಮಂಡಲ ಹೋಬಳಿಯ ದೋಣಿಕಾಡು ಎಂಬಲ್ಲಿ ಕಾವೇರಿ ನದಿ ನೀರಿನ ಪ್ರವಾಹದ ರಕ್ಷಣೆಗೆ ದೋಣಿ ಸಹಾಯದಿಂದ ನದಿ ದಾಟುವ ಜನರಿಗೆ ಸುರಕ್ಷತೆಗಾಗಿ ಜಿಲ್ಲಾಡಳಿತದಿಂದ ಜೀವ ರಕ್ಷಕ ಜಾಕೆಟ್ ಗಳನ್ನು ವಿತರಿಸಲಾಯಿತು.






