ಲೇಖಕ: admin

ನಾಪೋಕ್ಲು ಜು.29 NEWS DESK : ಅಯ್ಯ೦ಗೇರಿ ಗ್ರಾಮ ವ್ಯಾಪ್ತಿಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿದೆ. ಕಡವಡಿರ ತಮ್ಮಯ್ಯ ಹಾಗೂ ಸುತ್ತಮುತ್ತಲ ಕಾಫಿ ತೋಟಗಳಿಗೆ ಧಾಳಿ ಮಾಡಿರುವ ಕಾಡಾನೆಗಳು. ಕಾಫಿಯ ಗಿಡಗಳ ರೆಂಬೆಗಳನ್ನು ಮುರಿದು ನಷ್ಟಪಡಿಸಿವೆ . ಕಾಫಿ ತೋಟಗಳಲ್ಲೇ ಕಾಡಾನೆಗಳು ಬೀಡುಬಿಟ್ಟಿದ್ದು, ಕಾರ್ಮಿಕರು ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಮಾತ್ರವಲ್ಲದೇ ಹಗಲು ಹೊತ್ತಿನಲ್ಲಿ ಸುತ್ತಾಡುವ ಕಾಡಾನೆಗಳಿಂದಾಗಿ ಗ್ರಾಮಸ್ಥರು, ವಿದ್ಯಾರ್ಥಿಗಳು ಆತಂಕದಲ್ಲೇ ಶಾಲಾ, ಕಾಲೇಜುಗಳಿಗೆ ತೆರಳುವಂತಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಕಾಡಾನೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. – ವರದಿ : ದುಗ್ಗಳ ಸದಾನಂದ.

Read More

ಮಡಿಕೇರಿ ಜು.29 NEWS DESK : ದೇಚೂರು ಶ್ರೀರಾಮ ಮಂದಿರದ 106 ನೇ ವರ್ಷದ ದಸರಾ ಸಮಿತಿಯ ನೂತನ ಅಧ್ಯಕ್ಷರಾಗಿ ಚಂದ್ರಶೇಖರ್ ಆರ್.ಪಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾಗಿ ದಿನೇಶ್ ಕೆ.ಆರ್, ನಿರಂಜನ್ ಪಿ.ಜೆ, ಖಜಾಂಚಿಯಾಗಿ ಕೆ.ಎಸ್.ವಾಸುದೇವ್, ಉಪಾಧ್ಯಕ್ಷರಾಗಿ ದೇವರಾಜ್, ಪಾಪು ರವಿ, ಉಮೇಶ್ ಗೌಡ, ಕಾರ್ಯದರ್ಶಿಗಳಾಗಿ ಧನುಷ್, ಹರ್ಷಿತ್, ಕಿರಣ್, ರಾಹುಲ್, ಗೌರವ್, ಅರುಣ್ ಗೌಡ ಹಾಗೂ ಗೌರವ ಅಧ್ಯಕ್ಷರಾಗಿ ವಿಜಯಕುಮಾರ್ (ಬಾಬು) ನೇಮಕಗೊಂಡಿದ್ದಾರೆ. ದೇಚೂರು ಶ್ರೀರಾಮ ವಿದ್ಯಾಗಣಪತಿ ದೇವಾಲಯದ ಅಧ್ಯಕ್ಷ ಮೋಹನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

Read More

ಮಡಿಕೇರಿ ಜು.29 NEWS DESK : ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ 15 ನಿರ್ದೇಶಕ ಸ್ಥಾನದ ಆಯ್ಕೆಗೆ ಆ.18 ರಂದು ಚುನಾವಣೆ ನಡೆಯಲಿದೆ. ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಸಂಜಯ ಪಿ.ಕುರಳುಪ್ಪೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆಂದು ಮುಖ್ಯ ಪ್ರವರ್ತಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ 9, ಹಿಂದುಳಿದ ಪ್ರವರ್ಗ ಎ ಕ್ಷೇತ್ರದಿಂದ 2, ಮಹಿಳಾ ಕ್ಷೇತ್ರದಿಂದ 2, ಪರಿಶಿಷ್ಟ ಜಾತಿ ಕ್ಷೇತ್ರದಿಂದ 1, ಪರಿಶಿಷ್ಟ ಪಂಗಡ ಕ್ಷೇತ್ರದಿಂದ 1 ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆ.4 ರಿಂದ 10 ರವರೆಗೆ ನಾಮಪತ್ರ ಸಲ್ಲಿಸಬಹುದು. ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು. ಸಹಕಾರಿ ನಿಯಮಿತ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುತ್ತದೆ. ಆ.11 ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಪರಿಶೀಲನೆ ಮಾಡಲಾಗುತ್ತದೆ. ಪರಿಶೀಲನೆಯ ನಂತರ ಸಂಘದ ನೋಟೀಸ್ ಬೋರ್ಡ್ ನಲ್ಲಿ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ.…

Read More

ವಿರಾಜಪೇಟೆ ಜು.29 NEWS DESK : ಆರ್.ಐ.ಹೆಚ್.ಪಿ.ಆಸ್ಪತ್ರೆ ಅಮ್ಮತ್ತಿ, ಕೆದಮುಳ್ಳೂರು ಗ್ರಾ.ಪಂ ಹಾಗೂ ವಿರಾಜಪೇಟೆ ತಾಲ್ಲೂಕು ಕರ‍್ಯನಿರತ ಪತ್ರರ‍್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಕೆದಮುಳ್ಳೂರು ಗ್ರಾ.ಪಂ ವ್ಯಾಪ್ತಿಯ ತೋರ ಗ್ರಾಮದಲ್ಲಿ ಜು.31 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ತೋರ ಗ್ರಾಮದ ಸಮುದಾಯ ಭವನದಲ್ಲಿ ಬೆಳಗ್ಗೆ 10.30 ರಿಂದ ಮದ್ಯಾಹ್ನ 1.30 ರವರೆಗೆ ಶಿಬಿರ ನಡೆಯಲಿದ್ದು, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಜನರಲ್ ಮೆಡಿಸಿನ್, ಮತ್ತು ಫಿಜಿಸಿಯನ್ ತಜ್ಞರು ಭಾಗವಹಿಸಲಿದ್ದಾರೆ. ಕೆದಮುಳ್ಳೂರು ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.   

Read More

ಕುಶಾಲನಗರ ಜು.29 NEWS DESK : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾ ಘಟಕ ಹಾಗೂ ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್, ಸಂಗಮ ಟಿ.ವಿ. ಹಾಗೂ ವಂಶಿ ನ್ಯೂಸ್ ಸಹಯೋಗದೊಂದಿಗೆ ಜು.31ರಂದು ಕುಶಾಲನಗರದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕುಶಾಲನಗರ ಗಾಯಿತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಾಜಿ ಕ್ರೀಡಾ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಹೆಚ್.ಎಂ.ರಘುಕೋಟಿ ಅಧ್ಯಕ್ಷತೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಲಿದ್ದಾರೆ. ನಿವೃತ್ತ ಚಿತ್ರಕಲಾ ಶಿಕ್ಷಕ ಉ. ರಾ.ನಾಗೇಶ್ ಮುಖ್ಯ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ,  ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಜಿ.ಪಂ ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ, ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್ ನ ಕಾನೂನು ಸಲಹೆಗಾರ ಆರ್.ಕೆ.ನಾಗೇಂದ್ರ…

Read More

ಮಡಿಕೇರಿ ಜು.29 NEWS DESK : ಕಾಫಿ ತೋಟದಲ್ಲಿ ಕಾಡಾನೆ ಸಾವನ್ನಪ್ಪಿರುವ ಘಟನೆ ಬಾಡಗ ಬಾಣಂಗಾಲ ಹುಂಡಿ ಗ್ರಾಮದಲ್ಲಿ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read More

ನವದೆಹಲಿ NEWS DESK ಜು.28 : (ಕೋವರ್‌ ಕೊಲ್ಲಿ ಇಂದ್ರೇಶ್‌) ದೇಶದ ಜೀವವಿಮಾ ಮಾರುಕಟ್ಟೆ ದಿನೇ ದಿನೇ ವಿಸ್ತರಿಸುತ್ತಾ ಸಾಗಿದ್ದು  ಒಂದೆಡೆ ಖಾಸಗೀ ಕಂಪೆನಿಗಳು ಆರೋಗ್ಯ ವಿಮೆಗೆ ದುಬಾರಿ ದರ ವಿಧಿಸುತಿದ್ದರೆ ಸರ್ಕಾರಿ ಸಂಸ್ಥೆ  ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (IPPB)   ಬಡವರ ಕೈಗೆಟುಕುವ ವಿಮೆಯೊಂದನ್ನು  ಕಳೆದ ತಿಂಗಳು  ಬಿಡುಗಡೆ ಮಾಡಿದೆ.   ಇಷ್ಟೊಂದು ಅಗ್ಗದ ದರದಲ್ಲಿ ಜೀವವಿಮೆ ಒದಗಿಸುತ್ತಿರುವುದು  ಬಹುಶಃ  ವಿಶ್ವದಲ್ಲೇ ಮೊದಲು ಆಗಿದೆ. ಇಂದಿಗೂ ಜೀವವಿಮೆ ಪಡೆಯಲು ಬಡ ವರ್ಗದ ಜನ ಹಿಂದೇಟು ಹಾಕುತ್ತಿರುವುದು ದುಬಾರಿ ಆಗಿರುವ ಪ್ರೀಮಿಯಂ ದರದ ಕಾರಣದಿಂದಾಗಿ ಮಾತ್ರ.   ಆದರೆ ಇಧಿಗ  ಇಷ್ಟು ಅಗ್ಗದ ದರದಲ್ಲಿ ಜೀವವಿಮೆ ಒದಗಿಸುತ್ತಿರುವುದು  ಎಲ್ಲರಿಗೂ ವಿಮಾ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ. ಈಗ  ನೀವು ವರ್ಷಕ್ಕೆ  ಕೇವಲ 755 ರೂ. ಪಾವತಿಸಿ ಪಾಲಿಸಿ ಪಡೆದುಕೊಂಡು, ಅಪಘಾತಕ್ಕೀಡಾಗಿ  ಮೃತಪಟ್ಟರೇ ನಾಮಿನಿಯಾದ ಕುಟುಂಬದ ಸದಸ್ಯನಿಗೆ 15 ಲಕ್ಷ ರೂ. ಪಾವತಿಸುತ್ತಾರೆ. ಇನ್ನೂ ವಿಮೆ ತೆಗೆದುಕೊಂಡವರು ಮೃತಪಟ್ಟಾಗ ಮಾತ್ರವಲ್ಲದೇ, ಶಾಶ್ವತ ಅಂಗವೈಕಲ್ಯಕ್ಕೆ ಒಳಾಗದರೂ 15 ಲಕ್ಷ ರೂ.…

Read More

ಮಡಿಕೇರಿ NEWS DESK ಜು.28 : ಮಡಿಕೇರಿಯ ಕೊಡಗು ವಿದ್ಯಾಲಯ ಶಾಲೆಯಲ್ಲಿ ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಮತ್ತು ಶಿಕ್ಷಣ ಸಚಿವಾಲಯವು ಜುಲೈ 22ರಿಂದ 28ರವರೆಗೆ “ಶಿಕ್ಷಣ ಸಪ್ತಾಹ ಆಚರಿಸಿತು. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ 4ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದಭ೯ ಪರಿವರ್ತನಾತ್ಮಕ ಸುಧಾರಣೆಗಳನ್ನು ಪುನಃ ದೃಢಪಡಿಸಲು  ಸೂಕ್ತ ವೇದಿಕೆಯನ್ನು ಈ ಸಪ್ತಾಹ  ಒದಗಿಸಿತು. ಶಿಕ್ಷಣ ಸಪ್ತಾಹವು ಕಲಿಕೆಗೆ ಹೊಸ ಪ್ರಜ್ಞೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಿತು. ಕಲಿಯುವವರು, ಶಿಕ್ಷಕರು, ತಜ್ಞರು ಮತ್ತು ಶಿಕ್ಷಣ ಕ್ಷೇತ್ರದ ಪಾಲುದಾರರು ಉತ್ತಮ ಚರ್ಚೆಗಳನ್ನು ನಡೆಸಿದರು. NEP 2020ರ ದೃಷ್ಟಿಕೋನವನ್ನು ತಳಮಟ್ಟದಲ್ಲಿ  ನಿರ್ವಹಿಸುವತ್ತ ಈ ಕಾರ್ಯಕ್ರಮವು ಮಹತ್ವದ ಹೆಜ್ಜೆಯಿಟ್ಟಿತು. ಪ್ರತಿ ದಿನವೂ  ಒಂದೊಂದು ವಿಶೇಷ  ವಿಷಯ ಮತ್ತು ವಿವಿಧ ಚಟುವಟಿಕೆಗಳು ಮಕ್ಕಳನ್ನೊಳಗೊಂಡಂತೆ ಆಯೋಜಿಸಲಾಗಿತ್ತು,   ಕ್ರೀಡಾದಿನ, ಪರಿಸರ ದಿನ, ಕಾಯಾ೯ಗಾರಗಳು, ನೈಪುಣ್ಯ ಮತ್ತು ಡಿಜಿಟಲ್ ಚಟುವಟಿಕೆಗಳು, ಸಾಂಸ್ಕೖತಿಕ ಕಾಯ೯ಕ್ರಮಗಳು, ಸಸಿ ನೆಡುವಿಕೆ,  ತಂತ್ರಜ್ಞಾನದ ಬದಲಾವಣೆಗಳಿಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಕಾರ್ಯಾಗಾರಗಳು, ಸ್ಥಳೀಯ ಸಮುದಾಯಗಳೊಂದಿಗೆ,…

Read More

ಸುಂಟಿಕೊಪ್ಪ NEWS DESK ಜು.28 : ಸೋಮವಾರಪೇಟೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಶೆಟ್ಟಿ ಅವರನ್ನು ಪುಷ್ಪಗಿರಿ ರೈತ ಉತ್ಪಾದಕ ಸಂಸ್ಥೆ ವತಿಯಿಂದ ರೈತರ ಪರವಾಗಿ ಬೀಳ್ಕೊಡಲಾಯಿತು. ತೋಟಗಾರಿಕಾ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿರುವ ಮಂಜುನಾಥ್ ಶೆಟ್ಟಿ ಇದೀಗ ಹಾಸನ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ.

Read More

ನವದೆಹಲಿ NEWS DESK ಜು.28 :  ಒಲಿಂಪಿಕ್ಸ್ 2024ರ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ. ಇದು ಭಾರತಕ್ಕೆ ಬಂದ ಮೊದಲ ಪದಕವಾಗಿದೆ. 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಮನು ಭಾಕರ್ 221.7 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದು ಕಂಚಿನ ಪದಕ ಗೆದ್ದಿದ್ದಾರೆ. ಇನ್ನು ದಕ್ಷಿಣ ಕೊರಿಯಾದ ವೈಜೆ ಓ 243.2 ಅಂಕಗಳೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟರೆ ದಕ್ಷಿಣ ಕೊರಿಯಾದ ವೈಜೆ ಕಿಮ್ 241.3 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಹರಿಯಾಣ ಮೂಲದ ಮನು ಭಾಕರ್ ಚೊಚ್ಚಲ ಪದಕ ಗೆದ್ದಿದ್ದಾರೆ. ಇನ್ನು ಒಲಿಂಪಿಕ್ಸ್ ನಲ್ಲಿ ಮೊದಲ ಪದಕ ಗೆದ್ದ ಭಾರತೀಯ ಮಹಿಳೆ ಎಂಬ ಖ್ಯಾತಿಗೂ ಮನು ಭಾಕರ್ ಭಾಜನರಾಗಿದ್ದಾರೆ.

Read More