ವಿರಾಜಪೇಟೆ ಮೇ 27 NEWS DESK : ಬೇಸಿಗೆ ಶಿಬಿರಗಳ ಆಯೋಜನೆಯಿಂದ ಮಕ್ಕಳ ಮನಸ್ಸನ್ನು ಬದಲಾಯಿಸಬಹುದು ಎಂದು ವಿರಾಜಪೇಟೆ ರೋಟರಿ ಶಾಲೆಯ ಮುಖ್ಯೋಪಧ್ಯಾಯರಾದ ವಿಶಾಲಾಕ್ಷಿ ಅಭಿಪ್ರಾಯಪಟ್ಟರು. ವಿರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ರೋಟರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಒಂದು ತಿಂಗಳ ಅವಧಿಯ ಕಲಾರ್ಣವ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ನಂತರ ಬೇಸಿಗೆ ಶಿಬಿರಗಳನ್ನು ಆಯೋಜಿಸುವ ಪರಿಪಾಠ ವಿವಿಧಡೆ ನಡೆಯುತ್ತಾ ಬಂದಿದೆ. ಹಾಕಿ, ಕ್ರಿಕೆಟ್ ಸೇರಿದಂತೆ ಕ್ರೀಡಾ ಹಾಗೂ ವೃತ್ತಿಪರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಮುಖ್ಯ ಅಲ್ಲ. ಅದಕ್ಕಿಂತಲೂ ಮಿಗಿಲಾಗಿ ಮಕ್ಕಳಿಂದ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಪುಟ್ಟ ಮಕ್ಕಳ ಭವಿಷ್ಯವನ್ನು ರೂಪಿಸಲು ಶಿಬಿರಗಳು ಅಗತ್ಯ. ಸ್ವತಂತ್ರವಾಗಿ ಬದುಕುವ ವ್ಯವಸ್ಥೆಯನ್ನು ಇಂತಹ ಶಿಬಿರದಲ್ಲಿ ಕಲಿಸಿಕೊಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗೂ ಇದು ಅತ್ಯಂತ ಉಪಯುಕ್ತ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಾಹಿತಿ ರಜಿತ ಕಾರ್ಯಪ್ಪ, ಉತ್ತಮ ಆಶಯದೊಂದಿಗೆ ಮಕ್ಕಳ ಭವಿಷ್ಯ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿರುವ…
ಲೇಖಕ: admin
ಮಡಿಕೇರಿ ಮೇ 27 NEWS DESK : ಪ್ರವಾಹ ಪೀಡಿತ ಮತ್ತು ಭೂಕುಸಿತ ಪ್ರದೇಶದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಲು ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಡಿಕೇರಿ ತಾಲ್ಲೂಕು ಮಟ್ಟದ ಟಾಸ್ಕ್‍ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪ ಎದುರಿಸುವುದು ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಗರದ ಉಪ ವಿಭಾಗಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವುದು, ಪ್ರವಾಹ ಪೀಡಿತ ಪ್ರದೇಶ ಹಾಗೂ ಭೂಕುಸಿತ ಪ್ರದೇಶದಲ್ಲಿ ಅಗತ್ಯ ಮುನ್ನೆಚ್ಚರ ವಹಿಸುವುದು ಮತ್ತಿತರ ಸಂಬಂಧ ಸುದೀರ್ಘ ಚರ್ಚೆ ನಡೆಯಿತು. ಪ್ರತೀ ಗ್ರಾ.ಪಂ. ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸಬೇಕು. ಜೊತೆಗೆ ಪ್ರತಿ ನಿತ್ಯ ಕುಡಿಯುವ ನೀರನ್ನು ಪರೀಕ್ಷೆ ಮಾಡಬೇಕು ಎಂದು ವಿನಾಯಕ ನರ್ವಾಡೆ ಅವರು ಸೂಚಿಸಿದರು. ಹಾಗೆಯೇ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಅಗತ್ಯ…
ಮಡಿಕೇರಿ ಮೇ 27 NEWS DESK : ದಕ್ಷಿಣದ ಕಾಶ್ಮೀರವೆಂದೇ ಖ್ಯಾತಿ ಹೊಂದಿರುವ ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಮಿತಿ ಮೀರುತ್ತಲೇ ಇದೆ. ಅಪಾಯದಂಚಿನ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ನಿರ್ಲಕ್ಷ್ಯದ ನಡೆ ಅಪಾಯವನ್ನು ಆಹ್ವಾನಿಸುತ್ತಿದೆ. ನಗರದ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಮಂಗಳೂರು ರಸ್ತೆ ಕಡೆಗೆ ತೆರಳುವ ಮಾರ್ಗದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಪ್ರದೇಶ ಇದೀಗ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರಾಜಾಸೀಟು ಉದ್ಯಾನವನದ ಬೆಟ್ಟದ ಕೆಳಗಿರುವ ಈ ತಡೆಗೋಡೆಯ ಅಸುರಕ್ಷಿತ ಪ್ರದೇಶ ಸಾವಿರ ಅಡಿಗೂ ಹೆಚ್ಚು ಪ್ರಪಾತವನ್ನೂ ಹೊಂದಿದೆ. ಇದರ ಅರಿವೇ ಇಲ್ಲದ ಪ್ರವಾಸಿಗರು ಇಲ್ಲಿ ನಿಂತು ತಮ್ಮ ಮೊಬೈಲ್ ಕ್ಯಾಮರಾಗಳ ಮೂಲಕ ಪರಿಸರದ ಸೊಬಗನ್ನು ಸೆರೆ ಹಿಡಿಯುತ್ತಿದ್ದಾರೆ, ಜೊತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಅಪಾಯದ ಪರಿವಿಲ್ಲದ ಪ್ರವಾಸಿಗರ ಈ ನಡೆ ಅತ್ಯಂತ ಅಜಾಗರೂಕತೆಯಿಂದ ಕೂಡಿದೆ. ಕೆಲವರು ತಡೆಗೋಡೆ ತುತ್ತ ತುದಿಯಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿದರೆ ಮತ್ತೆ ಕೆಲವರು, ರೀಲ್ಸ್ ಮಾಡೋ ನೆಪದಲ್ಲಿ ಹುಚ್ಚು ಧೈರ್ಯ ತೋರುತ್ತಿದ್ದಾರೆ. ಯುವಕ, ಯುವತಿಯರು ಮಾತ್ರವಲ್ಲದೆ ದಂಪತಿಗಳು…
ಮಡಿಕೇರಿ ಮೇ 27 NEWS DESK : ಸಂಸ್ಕೃತಿಯ, ಪರಂಪರೆ, ಪದ್ಧತಿ ಮತ್ತು ಆಚಾರ ವಿಚಾರಗಳು ಉಳಿಯಬೇಕಾದರೆ ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಅಗತ್ಯವಾಗಿದೆ ಎಂದು ಸಾಹಿತಿ ಪಿ.ಎಸ್.ವೈಲೇಶ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಕೊಡವ ಮಕ್ಕಡ ಕೂಟದ 91ನೇ ಪುಸ್ತಕ, ಲೇಖಕಿ ಚೀರಮ್ಮನ ವಾಣಿ ಚಂಗುವಮ್ಮಯ್ಯ ಅವರ 3ನೇ ಪುಸ್ತಕ “ತಾಳ್ಮೆರ ತಾವರೆ”ಯ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡಗಿನ ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ, ಪರಂಪರೆ ಇಂದಿಗೂ ಶ್ರೀಮಂತವಾಗಿರಲು ಸಾಹಿತ್ಯವೇ ಕಾರಣ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ಕೊಡಗಿನ ಗೌರಮ್ಮ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಅವರ ಹೆಸರು, ಖ್ಯಾತಿ ಉಳಿದುಕೊಂಡಿರುವುದು ಸಾಹಿತ್ಯದಿಂದ ಎಂದರು. ಕೊಡಗಿನ ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತಿಗಳೇ ಇಲ್ಲ ಎಂಬ ಕಾಲಘಟ್ಟವಿತ್ತು. ಆದರೆ ಇಂದು ಜಿಲ್ಲೆಯಲ್ಲ್ಲಿ ಸಾಹಿತ್ಯದ ಸುವರ್ಣಕಾಲ ಆರಂಭವಾಗಿದೆ. ಆದರೆ ನೈಜ ಸಾಧಕರು ಮೂಲೆ ಗುಂಪಾಗುತ್ತಿದ್ದು, ಎಲ್ಲರನ್ನೂ ಗುರುತಿಸುವ ಕೆಲಸ ಆಗಬೇಕು. ಪ್ರಸ್ತುತ…
ವಿರಾಜಪೇಟೆ ಮೇ 27 NEWS DESK : ಆರ್ಜಿ ಗ್ರಾಮದ ಕಲ್ಲುಬಾಣೆ ಬದ್ರಿಯಾ ಶಾಲಾ ಮೈದಾನದಲ್ಲಿ ಮೊದಲ ವರ್ಷದ ವಿಲೇಜ್ ಲೆವೆಲ್ ಸೂಪರ್ ನೈನ್ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಕಲ್ಲು ಕಪ್ ತಂಡದ ವತಿಯಿಂದ ನೂರುದ್ದೀನ್, ಹರ್ಷದ್, ಫಂಸಿರ್ ಹಾಗೂ ರಾಶಿ ಅವರ ಆಯೋಜಕತ್ವದಲ್ಲಿ ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಕೊಡಗಿನ ಹಲವಾರು ಭಾಗಗಳಿಂದ ಒಟ್ಟು 30 ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಚಂಕ್ಸ್ ವಿರಾಜಪೇಟೆ ತಂಡವು 3 ವಿಕೆಟ್ ನಷ್ಟದಲ್ಲಿ 5 ಓವರ್ ಗಳಿಗೆ 66 ರನ್ ಗಳನ್ನು ಬಾರಿಸಿ ಫ್ರೆಂಡ್ಸ್ ವಿರಾಜಪೇಟೆ ತಂಡವನ್ನು ಆಲ್ ಔಟ್ ಮಾಡುವುದರ ಮೂಲಕ ಚಂಕ್ಸ್ ವಿರಾಜಪೇಟೆ ತಂಡವು 45 ರನ್‍ಗಳ ಭರ್ಜರಿ ಗೆಲುವನ್ನು ಸಾಧಿಸಿ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿತು. ಪಂದ್ಯಾವಳಿಯ ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಶಾರುಖ್, ಮ್ಯಾನ್ ಆಫ್ ದಿ ಸಿರೀಸ್ ಇಚಾವೋ, ಬೆಸ್ಟ್ ಬ್ಯಾಟ್ಸ್ ಮ್ಯಾನ್ ರಜಾಕ್, ಬೆಸ್ಟ್ ಬೌಲರ್ ಅಜಯ್, ಬೆಸ್ಟ್ ಕ್ಯಾಚ್ ಸಕ್ಲೇನ್, ಉತ್ತಮ…
ದಕ್ಷಿಣ ಕನ್ನಡ ಮೇ 27 : ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕರ್ತರ ಸಭೆಯು ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್ ಕಾರ್ಕಳ, ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್ ಎಲ್ ಭೋಜೇಗೌಡ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಶಾಸಕರುಗಳಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್ ಯು, ಹರೀಶ್ ಪೂಂಜಾ, ಮಂಗಳೂರು ಬಿಜೆಪಿ ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಬಿಜೆಪಿ ಪ್ರಮುಖರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿಜೆಪಿ ಪ್ರಮುಖರು ಮತ್ತು ಜೆಡಿಎಸ್ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಡಿಕೇರಿ ಮೇ 27 NEWS DESK : ಮಾನ್ಸೂನ್ ಆರಂಭಕ್ಕೆ ಇನ್ನು ನಾಲ್ಕೇ ದಿನ ಬಾಕಿ ಉಳಿದಿದೆ. ರಾಜ್ಯವ್ಯಾಪಿ ಕಳೆದ ಎರಡು ವಾರಗಳಿಂದ ಉತ್ತಮ ಮಳೆಯಾಗುತ್ತಿದೆ. ಆದರೆ ಮಳೆಗಾಲದ ಮಳೆ ಮೇ ಮೇ 31 ರಿಂದ ಆರಂಭಗೊಳ್ಳಲಿದೆ ಎಂದು ಹವಾಮಾನ ತಿಳಿಸಿದೆ. ಕೊಡಗು, ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಕಡೆ ಮುಂದಿನ ವಾರದಿಂದ ಮಳೆ ಆರಂಭಗೊಳ್ಳಲಿದೆ. ಚಂಡಮಾರುತದಿಂದ ವ್ಯತ್ಯಾಸಗಳಾದರೆ ಮುಂಗಾರು ನಾಲ್ಕೈದು ದಿನ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ, ವಿಶೇಷವಾಗಿ ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗಲಿದೆ. ಒಟ್ಟಿನಲ್ಲಿ ಜೂನ್ 5 ರ ನಂತರ ರಾಜ್ಯವ್ಯಾಪಿ ಉತ್ತಮ ಮಳೆಯನ್ನು ನಿರೀಕ್ಷಿಸಲಾಗಿದೆ.
ಸಿದ್ದಾಪುರ ಮೇ 27 NEWS DESK : ಮೂರ್ನಾಡು ಪ್ರೌಢಶಾಲಾ ಮೈದಾನದಲ್ಲಿ ಜರುಗಿದ ಪ್ರಥಮ ವರ್ಷದ ನಾಯ್ಡೂಸ್ ಕ್ರಿಕೆಟ್ ಚಾಂಪಿಯನ್ ಆಗಿ ಬೈಲುಕುಪ್ಪೆಯ ಆರ್‌ಸಿ.ಬಿ.ತಂಡ ಹೊರ ಹೊಮ್ಮಿದೆ. ಫೈನಲ್ ಪಂದ್ಯಾವಳಿಯಲ್ಲಿ ಆರ್.ಸಿ.ಬಿ.ಬೈಲುಕುಪ್ಪೆ ತಂಡವು( 67/0) ವಿರಾಜಪೇಟೆ ಕೊಡಗು ಯುವ ವಾರಿಯರ್ಸ್ (66/5) ತಂಡವನ್ನು ಸೋಲಿಸಿತು. ವಿಜೇತ ತಂಡದ ಪರ ಕಿರಣ್ ಅಜೇಯ (48) ಹಾಗೂ ವಿಜಯ್ ಅಜೇಯ(14) ಅವರ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಚೊಚ್ಚಲ ನಾಯ್ಡೂಸ್ ಕಪ್ ಗೆದ್ದು ಸಂಭ್ರಮಿಸಿದರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ನಲ್ಲಿ ಕೊಡಗು ಯೂತ್ ವಾರಿಯರ್ಸ್ ವೀರಾಜಪೇಟೆ ತಂಡವು 6 ನಿಗಧಿತ ಓವರ್ ನಲ್ಲಿ ಒಟ್ಟು 74 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮೂರ್ನಾಡು ಎಕ್ಸ್ ಟ್ರೀಮ್ ಬ್ಲಾಸ್ಟರ್ಸ್ ತಂಡವು ಕೇವಲ 34 ರನ್ ಗಳಿಸಿ ಸೋಲನ್ನಪ್ಪಿತು. ದ್ವಿತೀಯ ಸೆಮಿಫೈನಲ್ ನಲ್ಲಿ ಆರ್.ಸಿ.ಬಿ.ಬೈಲುಕುಪ್ಪೆ (64) ತಂಡವು ಪೆರುಂಬಾಡಿ ಪ್ಯಾಂಥರ್ಸ್ (62) ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಪಂದ್ಯದ ವ್ಯಕ್ತಿ ಕಿರಣ್ ಬೈಲುಕುಪ್ಪೆ, ಸರಣಿ ಪುರುಷೋತ್ತಮ ವಿಜಯ್…
ಕೋಲ್ಕತ್ತಾ ಮೇ 27 NEWS DESK : ರೆಮಲ್ ಚಂಡಮಾರುತ ನಿನ್ನೆ ಭಾನುವಾರ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಯ ನಡುವೆ ಅಪ್ಪಳಿಸಿದ್ದು ತೀವ್ರ ಬಿರುಗಾಳಿಯಿಂದ ಭೂಕುಸಿತ ಉಂಟಾಗಿದೆ, ಗಾಳಿಯ ವೇಗ ಗಂಟೆಗೆ 110-135 ಕಿಮೀ ವೇಗ ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ರೆಮಲ್ ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳದ ದಕ್ಷಿಣ ಮತ್ತು ಉತ್ತರ 24 ಪರಗಣಗಳು, ಪುರ್ಬಾ ಮೇದಿನಿಪುರ್, ಕೋಲ್ಕತ್ತಾ ಹೌರಾ ಮತ್ತು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಗಳಲ್ಲಿ ಭಾರೀ ಮಳೆಯನ್ನು ತರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನಿನ್ನೆ ಮತ್ತು ಇಂದು ರಾಜ್ಯದ ಪಶ್ಚಿಮ ಮೇದಿನಿಪುರ್, ಪುರ್ಬಾ ಬರ್ಧಮಾನ್ ಮತ್ತು ನಾಡಿಯಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮೀನುಗಾರರಿಗೆ ನಾಳೆಯವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾಗರ ದ್ವೀಪ, ಸುಂದರ್‌ಬನ್ಸ್ ಮತ್ತು ಕಾಕದ್ವೀಪ್ ಸೇರಿದಂತೆ ಕರಾವಳಿ ಪ್ರದೇಶಗಳಿಂದ ಸುಮಾರು 1.10 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.…
ತಾಷ್ಕೆಂಟ್ ಮೇ 26 NEWS DESK : ಭಾನುವಾರ ನಡೆದ ಮಹಿಳೆಯರ ವಾಲ್ಟ್ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಅಥ್ಲೀಟ್ ದೀಪಾ ಕರ್ಮಾಕರ್ ಅಗ್ರ ಜಿಮ್ನಾಸ್ಟ್ ಚಿನ್ನದ ಪದಕ ಗೆದ್ದರು. ಏಷ್ಯನ್ ಸೀನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ದೇಶದ ಮೊದಲ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ವರ್ಷದ ದೀಪಾ ಸ್ಪರ್ಧೆಯ ಕೊನೆಯ ದಿನದ ವಾಲ್ಟ್ ಫೈನಲ್‌ನಲ್ಲಿ ಸರಾಸರಿ 13.566 ಸ್ಕೋರ್ ಗಳಿಸಿದರು. ಉತ್ತರ ಕೊರಿಯಾದ ಕಿಮ್ ಸನ್ ಹಯಾಂಗ್ (13.466) ಮತ್ತು ಜೋ ಕ್ಯೊಂಗ್ ಬೈಯೊಲ್ (12.966) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ವಾಲ್ಟ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ದೀಪಾ, 2015ರ ಆವೃತ್ತಿಯಲ್ಲಿ ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು.






