ಮಡಿಕೇರಿ ಜು.4 NEWS DESK : ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಜನ್ಮ ದಿನ ಅಂಗವಾಗಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಈ ಸಂದರ್ಭ ಬಿಜೆಪಿ ಜಿಲ್ಲಾ ವಕ್ತಾರ ಬಿ.ಕೆ.ಅರುಣ್ ಕುಮಾರ್, ನಗರ ಯುವ ಮೋರ್ಚಾ ಅಧ್ಯಕ್ಷ ಪಾಡಿರ ಪೂಣಚ್ಚ, ಓಬಿಸಿ ಮೋರ್ಚಾ ಅಧ್ಯಕ್ಷ ಕುಶಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್, ನಗರಸಭಾ ಸದಸ್ಯರಾದ ಸವಿತಾ ರಾಕೇಶ್, ನಗರ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಸೌಮ್ಯ, ಪ್ರಧಾನ ಕಾರ್ಯದರ್ಶಿ ಸಂಗೀತ, ಕಾರ್ಯದರ್ಶಿ ವೈಭವಿ ಹಾಗೂ ಕೀರ್ತಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಗ್ನೇಶ್, ಮಂಜುಳಾ ಮತ್ತು ಇತರ ಕಾರ್ಯಕರ್ತರು ಹಾಜರಿದ್ದರು.
ಲೇಖಕ: admin
ಮಡಿಕೇರಿ ಜು.4 NEWS DESK : ತಿರುಮಲ ತಿರುಪತಿ ದೇವಸ್ಥಾನಂ ಬೋರ್ಡ್ ಮತ್ತು ಆಂಧ್ರದ “ಸಾಫ್ಟ್ ಮನಿ” ಫಲಾನುಭವಿಗಳು ಸರ್ಕಾರ ನೀಡುತ್ತಿರುವ ಬಡ್ಡಿ ರಹಿತ ಸಾಲದ ಮೊತ್ತವನ್ನು ಕೊಡವ ಲ್ಯಾಂಡ್ ನ ಕೃಷಿ ಭೂಮಿ ಖರೀದಿಗಾಗಿ ಬಳಕೆ ಮಾಡುತ್ತಿದ್ದು, ಕೊಡವರ ಹಿತದೃಷ್ಟಿಯಿಂದ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ. “ಸಾಫ್ಟ್ ಮನಿ” ಫಲಾನುಭವಿಗಳು ವಾಣಿಜ್ಯ ದುಸ್ಸಾಹಸಕ್ಕಾಗಿ ಕೊಡಗಿನ ಕೃಷಿ ಭೂಮಿಯನ್ನು ಯುದ್ಧೋಪಾದಿಯಲ್ಲಿ ಖರೀದಿಸುತ್ತಿದ್ದಾರೆ ಮತ್ತು ನಮ್ಮ ಪರ್ವತಗಳು, ಅರಣ್ಯ ಪ್ರದೇಶಗಳು, ಸಸ್ಯ ಸಂಕುಲ ಮತ್ತು ಜಲಮೂಲಗಳನ್ನು ನಾಶಪಡಿಸಲಾಗುತ್ತಿದೆ. ಇದು ಕಾವೇರಿ ಜಲಾನಯನ ಪ್ರದೇಶದ ನರ ಕೇಂದ್ರ ಮತ್ತು ನೀರಿನ ತಳಹದಿಯ ಜಲ ಗರ್ಭಕ್ಕೆ ಹಾನಿಯುಂಟುಮಾಡುತ್ತಿದೆ. ಪವಿತ್ರ ನದಿ ಕಾವೇರಿಯು ದುಃಖದಿಂದ ಬಳಲುತ್ತಿರುವುದನ್ನು ಭಗವಾನ್ ವೆಂಕಟೇಶನು ಸಹಿಸುವುದಿಲ್ಲ. ತಿರುಪತಿ ದೇವಸ್ಥಾನಂ ಮಂಡಳಿಯ ಸಾವಿರಾರು ಕೋಟಿ ಹಣವನ್ನು ಕೊಡವ ಲ್ಯಾಂಡ್‍ನಲ್ಲಿ ಭೂಮಿಯನ್ನು ಖರೀದಿಸಲು…
ಮಡಿಕೇರಿ ಜು.4 NEWS DESK : ಹಿಂದೂ ಮಲಯಾಳಿ ಸಮಾಜದ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜು.7 ರಂದು ನಗರದ ಅಂಬೇಡ್ಕರ್ ಭವನದಲ್ಲಿ ವಾರ್ಷಿಕ ಮಹಾಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆಯೆಂದು ಸಮಿತಿಯ ಅಧ್ಯಕ್ಷ ವಿ.ಎಂ.ವಿಜಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹಿಂದೂ ಮಲಯಾಳಿ ಸಮಾಜದಿಂದ 2022-23 ಮತ್ತು 2023-24 ನೇ ಸಾಲಿಗೆ ಸಂಬಂಧಿಸಿದಂತೆ ಜಿಲ್ಲಾ ವ್ಯಾಪ್ತಿಯ ಹಿಂದೂ ಮಲಯಾಳಿ ಸಮಾಜದ 9 ಘಟಕಗಳಿಂದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ತಲಾ ನಾಲ್ವರು ವಿದ್ಯಾರ್ಥಿಗಳಂತೆ ಒಟ್ಟು 36 ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಧನವನ್ನು ನೀಡಿ ಪುರಸ್ಕರಿಸಲಾಗುತ್ತದೆಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಮತ್ತು ಉನ್ನತ ವ್ಯಾಸಂಗ ಮಾಡಿದ ಸುಮಾರು 40 ಮಂದಿಯನ್ನು ಸನ್ಮಾನಿಸಿ ಗೌರವಿಸಲಾಗುತ್ತದೆಂದು ಹೇಳಿದರು. ನೂತನ ಸಂಸದರಿಗೆ ಸನ್ಮಾನ : ಸನ್ಮಾನ ಕಾರ್ಯಕ್ರಮವನ್ನು ಜು.7 ರಂದು ಬೆಳಗ್ಗೆ 10.30 ಗಂಟೆಗೆ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್…
ಮಡಿಕೇರಿ ಜು.4 NEWS DESK : ದಾನಿಗಳ ಸಹಕಾರದಿಂದ ಮೂರ್ನಾಡಿನಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸುಸಜ್ಜಿತ ಹಿಂದೂ ರುದ್ರಭೂಮಿ ಇಂದು ಉದ್ಘಾಟನೆಗೊಂಡಿತು. ಊರಿನ ಹಿರಿಯರಾದ ಕೆರೆಮನೆ ವಿಜಯಲಕ್ಷ್ಮಿ ಪಾಲಾಕ್ಷ ಅವರು ದಾನವಾಗಿ ನೀಡಿದ ಸುಮಾರು 40 ಸೆಂಟ್ ಜಾಗದಲ್ಲಿ ರುದ್ರಭೂಮಿ ನಿರ್ಮಾಣಗೊಂಡಿದೆ. ಕೊಡಗು ಜಿಲ್ಲೆಯಲ್ಲೇ ಮೊದಲು ಎನ್ನಬಹುದಾದ ವಿಶೇಷ ವ್ಯವಸ್ಥೆ ಈ ರುದ್ರಭೂಮಿಯಲ್ಲಿದೆ. ಎರಡು ಸಿಲಿಕಾನ್ ಚೇಂಬರ್, ಹರಿಶ್ಚಂದ್ರ ಗುಡಿ, ಉದ್ಯಾನವನ, ಕಚೇರಿ, ಪ್ರತ್ಯೇಕ ಕೋಣೆ, ಸ್ನಾನದ ಕೋಣೆ, ಸೌದೆ ಶೇಖರಣಾ ಶೆಡ್, ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯ ಇಲ್ಲಿದೆ. ದಾನಿಗಳು, ಸ್ವಯಂಸೇವಕರು, ಸಂಘ ಸಂಸ್ಥೆಗಳು, ಗ್ರಾಮಸ್ಥರು, ಗ್ರಾ.ಪಂ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಸುಸಜ್ಜಿತವಾದ ಈ ಹಿಂದೂ ರುದ್ರಭೂಮಿಯನ್ನು ನಿರ್ಮಿಸಲು ಸಾಧ್ಯವಾಯಿತು ಎಂದು ಮೂರ್ನಾಡು ಹಿಂದೂ ರುದ್ರಭೂಮಿ ಸಮಿತಿಯ ಪ್ರಮುಖರು ತಿಳಿಸಿದರು. ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಕುಶನ್ ರೈ, ರುದ್ರಭೂಮಿ ಸಮಿತಿಯ ಅಧ್ಯಕ್ಷ ಅರುಣ್ ಬಾಬ, ಉಪಾಧ್ಯಕ್ಷ ಮೋಹನ್, ಖಜಾಂಚಿ ಜಯರಾಂ, ಕಾರ್ಯದರ್ಶಿ ಹೀರ…
ಸೋಮವಾರಪೇಟೆ ಜು.4 NEWS DESK : ಕೊಡಗು ಜಿಲ್ಲಾ ಮೊಗೇರಾ ಸೇವಾ ಸಮಿತಿ ವತಿಯಿಂದ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಸಮಿತಿಯ ಪ್ರಮುಖರು, ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಶಾಲೆಯ ಆವರಣದಲ್ಲಿದ್ದ ಗಿಡಗಂಟಿಗಳನ್ನು ಕಡೆದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಡಿಸಿದರು. ಈ ಸಂದರ್ಭ ಮೊಗೇರಾ ಸೇವಾ ಸಮಿತಿಯ ಸದಸ್ಯರಾದ ಕಿಟ್ಟು, ರಾಮು, ಸಂಜು, ಐತ್ತಪ್ಪ, ಜಗದೀಶ್, ಸುರೇಶ್ ಇದ್ದರು.
ಸೋಮವಾರಪೇಟೆ ಜು.4 NEWS DESK : ಜೆಸಿಐ ವಲಯ 14 ರ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕ ಹಲವು ಪ್ರಶಸ್ತಿಗಳನ್ನು ಗಳಿಸಿದೆ. ಇತ್ತೀಚೆಗೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಔಟ್ ಸ್ಟ್ಯಾಂಡಿಗ್ ಪ್ರೋಗ್ರಾಮ್ ವಿನ್ನರ್ ಅವಾರ್ಡ್ ಮತ್ತು ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ಪುರಸ್ಕಾರವನ್ನು ಜೆಸಿಐ ಸೋಮವಾರಪೇಟೆ ಘಟಕದ ಅಧ್ಯಕ್ಷ ಎಸ್.ಆರ್.ವಸಂತ್ ಪಡೆದುಕೊಂಡಿದ್ದಾರೆ. ವಲಯ 14 ರ ಅಧ್ಯಕ್ಷೆ ಆಶಾ ಜೈನ್, ಉಪಾಧ್ಯಕ್ಷ ರಾಕೇಶ್, ಕಾರ್ಯದರ್ಶಿ ಮಾಯಾ ಗಿರೀಶ್, ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕದ ಜೆಎಸಿ ಉಪಾಧ್ಯಕ್ಷರಾದ ಮಮತಾ, ರಾಷ್ಟ್ರೀಯ ಅಧಿಕಾರಿ ನೆಲ್ಸನ್ ಡಿಸೋಜ, ಸೋಮವಾರಪೇಟೆ ಘಟಕದ ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ವಿನುತ ಸುದೀಪ್, ಸದಸ್ಯರಾದ ಪುಷ್ಪಕ್, ನಿಕಟಪೂರ್ವ ವಲಯ ಅಧಿಕಾರಿ ಗಿರೀಶ್, ಪ್ರಮುಖರಾದ ಗುರುಪ್ರಸಾದ್, ಜೂನಿಯರ್ ಜೇಸಿ ವಲಯ ಅಧ್ಯಕ್ಷ ದಿಶಾಗಿರೀಶ್ ಇದ್ದರು.
ಮಡಿಕೇರಿ ಜು.4 NEWS DESK : ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ನೂತನ ಎಂ.ಆರ್.ಐ ಸ್ಕ್ಯಾನಿಂಗ್ ಯಂತ್ರದ ಅಳವಡಿಕೆ ಕಾರ್ಯವು ಭರದಿಂದ ಸಾಗಿದ್ದು, ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂ.ಆರ್.ಐ) ಸೇವೆಯು ಕೊಡಗಿನ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಿದ್ದು, ಈ ಸೇವೆಯಿಂದ ಕೀಲು ಮತ್ತು ಮೂಳೆ ಸಮಸ್ಯೆ, ಹೃದಯ ರಕ್ತನಾಳಗಳ ಕಾಯಿಲೆಗಳನ್ನು ಗುರುತಿಸಲು, ಸ್ತನ ಕ್ಯಾನ್ಸರ್ ಅಪಾಯವನ್ನು ಗುರುತಿಸಲು, ಎಂಡೊಮೆಟ್ರಿಯಾಸೀಸ್ ಮತ್ತು ವಿವಿಧ ರೋಗಗಳನ್ನು ಪತ್ತೆಹಚ್ಚಲು ಸಹಕಾರಿಯಾಗಲಿದೆ ಎಂದರು.
ವಿರಾಜಪೇಟೆ ಜು.4 NEWS DESK : ಕಾಡಾನೆಯೊಂದು ಕಾಫಿ ತೋಟದೊಳಗೆ ನುಗ್ಗಿ ದಾಂಧಲೆ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿ ಫಸಲು ನಾಶಗೊಳಿಸಿದ ಘಟನೆ ಒಂದನೇ ರುದ್ರಗುಪ್ಪೆಯಲ್ಲಿ ನಡೆದಿದೆ. ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ರುದ್ರಗುಪ್ಪೆ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗ ದಾಂಧಲೆ ನಡೆಸಿ ಗ್ರಾಮದ ಎ.ಹೆಚ್. ಸರಸ್ವತಿ ಮತ್ತು ಟೋಮಿ ಎಂಬುವವರಿಗೆ ಸೇರಿದ ತೋಟಗಳಲ್ಲಿನ ಕಾಫಿ ಗಿಡಗಳು, ಅಡಿಕೆ, ತೆಂಗು, ಬಾಳೆ ಎಲ್ಲವನ್ನು ದ್ವಂಸಗೊಳಿಸಿವೆ. ಅಲ್ಲದೆ ವಿದ್ಯುತ್ ಪರಿವರ್ತಕದಿಂದ ಕೊಳವೆ ಬಾವಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಯನ್ನು ತುಂಡರಿಸಿದೆ. ಇದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ವಿದ್ಯುತ್ ಪೂರೈಕೆಯಾಗುವ ತಂತಿ ನೆಲದ ಮೇಲೆ ಬಿದ್ದಿರುವ ಕಾರಣ ಕೆಲಸಕ್ಕೆ ತೆರಳುವ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.
ಸುಂಟಿಕೊಪ್ಪ, ಜು.3 NEWS DESK : ಮದ್ಯವರ್ಜನದ ಕುರಿತು ರಾಜ್ಯದ 17,548 ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮವನ್ನು ನಡೆಸಿ 20 ಮಿಕ್ಕಿ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ಪಿ.ಪಿ.ನಂದಕುಮಾರ್ ಹೇಳಿದರು. ಮಡಿಕೇರಿ ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿಯ ಅಖಿಲ ಕರ್ನಾಟಕಬಜನಜಾಗೃತಿ ವೇದಿಕೆ, ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ, ಮಡಿಕೇರಿ ತಾಲ್ಲೂಕು ಪ್ರಗತಿಬಂದು ಸ್ವಸಹಾಯ ಸಂಘಗಳ ಒಕ್ಕೂಟ, ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜು ಅವರ ಸಂಯುಕ್ತಾಶ್ರಯದಲ್ಲಿ ಸ್ವಸ್ಥ್ಯ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ‘ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ’ ದಲ್ಲಿ ಅವರು ಮಾತನಾಡಿದರು. ಇದುವರೆಗೆ 1805 ಮದ್ಯವರ್ಜನ ಶಿಬಿರಗಳನ್ನು ನಡೆಸಿ 1 ಲಕ್ಷದ 46 ಸಾವಿರ ಮದ್ಯವ್ಯಸನಿಗಳನ್ನು ವ್ಯಸನಮುಕ್ತಗೊಳಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕಳೆದ ಸಂಶೋಧನೆಯ ಪ್ರಕಾರ ನಮ್ಮ ದೇಶದಲ್ಲಿ ಒಂದು ವರ್ಷಕ್ಕೆ 5 ಲಕ್ಷ ಜನರು ಮದ್ಯಪಾನದಿಂದ ಮರಣ…
ಹಾಸನ ಜು.4 NEWS DESK : ಭಾರತದೇಶದಲ್ಲಿ ರಾಜಮಹಾರಾಜರ ಕಾಲದಿಂದಲೂ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಭಾರತದ ಸಾಂಸ್ಕೃತಿಕ ಜಗತ್ತನ್ನು ಶ್ರೀಮಂತಗೊಳಿಸಿದ್ದು, ಇಂದಿನ ಜನಪ್ರತಿನಿಧಿಗಳು ಕೂಡ ಅದನ್ನು ಪೋಷಿಸುವುದು ಅಗತ್ಯವಿದೆ ಎಂದು ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಸಿ.ಸುವರ್ಣ ತಿಳಿಸಿದ್ದಾರೆ. ನಗರದಲ್ಲಿ ಚಿತ್ರಕಲಾವಿದ ವಸಂತಕುಮಾರ್ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಲೆ ಮನುಷ್ಯನ ಸೌಂದರ್ಯ ಪ್ರಜ್ಞೆಯನ್ನು ಹೆಚ್ಚಿಸುವುದರ ಜೊತೆಗೆ ಪಂಚೇಂದ್ರಿಯಗಳ ಬೆಳವಣಿಗೆಯ ಹೊಸಹೊಸ ಯೋಚನೆಗಳು, ಚಿಂತನೆಗಳು ಬೆಳೆಯಲು ಇದು ಪ್ರೇರಣೆಯಾಗಿದೆ. ಅಲ್ಲದೆ ಮನುಷ್ಯನ ಬದುಕನ್ನು ರೂಪಿಸಲು ಇದು ಸಹಕಾರಿಯಾಗಿದೆ ಎಂದರು. ಹಾಸನದಲ್ಲಿ ಕಳೆದ ಇಪ್ಪತ್ತೈದು ವರ್ಷದಿಂದಲೂ ಕಲಾಗ್ಯಾಲರಿಯನ್ನು ನಿರ್ಮಿಸಿ ಕಲೆಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡುವಂತೆ ಜನರು ಬೇಡಿಕೆ ಇಟ್ಟಿದ್ದರೂ ಕೂಡ ಕಲಾವಿದರ ಹಾಗೂ ನಾಗರಿಕರ ಕನಸು ಕನಸಾಗಿಯೇ ಉಳಿದಿರುವುದು ನೋವಿನ ಸಂಗತಿ. ಹಾಸನ ಜಿಲ್ಲೆ ಕಲೆಗಳ ತವರೂರು ಇಲ್ಲಿಯ ಕಲೆಗಳು ಜಗತ್ ವಿಖ್ಯಾತಿಯನ್ನು ಪಡೆದಿದೆ ಜೊತೆಗೆ ಕಲಾವಿದರು ಕೂಡ ಕಲೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯುದಿರುವುದು ಹೆಮ್ಮೆಯ ಸಂಗತಿ.…






