ಮಡಿಕೇರಿ ಮೇ 28 NEWS DESK : 2024-25 ನೇ ಸಾಲಿಗೆ ಅನುದಾನಿತ ಕೋರ್ಸುಗಳಾದ ಆರ್ಕಿಟೆಕ್ಟರ್ ಅಸಿಸ್ಟೆಂಟ್‍ಷಿಪ್, ಕಮರ್ಷಿಯಲ್ ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಅನುದಾನ ರಹಿತ ಕೋರ್ಸುಗಳಾದ ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಷನ್ಸ್ (ಫಾರ್ ವಿಜ್ಯುವಲಿ ಇಂಪೇರ್ಡ್) ಹಾಗೂ ಅಪಾರೇಲ್ ಡಿಸೈನ್ ಮತ್ತು ಫ್ಯಾಬ್ರಿಕೇಷನ್ ಟೆಕ್ನಾಲಜಿ ಮೂರು ವರ್ಷಗಳ ಅವಧಿಯ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ (ಅಖಿಲ ಭಾರತ ಮಟ್ಟದಲ್ಲಿ) ವಿಶೇಷ ಚೇತನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ.35 ಅಂಕಗಳೊಂದಿಗೆ ತೇರ್ಗಡೆ ಹಾಗೂ ಮೂಳೆ ಮತ್ತು ಕೀಲು ಅಂಗವಿಕಲತೆ ಶೇ.40 ಮತ್ತು ಮೇಲ್ಪಟ್ಟು, ಕಿವುಡು ಮತ್ತು ಮೂಗು ಅಂಗವಿಕಲತೆ ಶೇ.60 ಡಿಬಿ ಮತ್ತು ಮೇಲ್ಪಟ್ಟು, ಭಾಗಶಃ ಮತ್ತು ಪೂರ್ಣ ಅಂಧತ್ವ 6/60 ಅಥವಾ 20/200 ಸ್ನೆಲೆನ್(ಕಂಪ್ಯೂಟರ್ ಅಪ್ಲಿಕೇಷನ್ಸ್ (ಫಾರ್ ವಿಜ್ಯುವಲಿ ಇಂಪೇರ್ಡ್) ಕೋರ್ಸಿಗೆ) ಅಂಗವೈಕಲ್ಯತೆಯ ಲಕ್ಷಣಗಳು ಹೊಂದಿರಬೇಕು. ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ…
ಲೇಖಕ: admin
ಮಡಿಕೇರಿ ಮೇ 28 NEWS DESK : 2023-24 ನೇ ಸಾಲಿನಲ್ಲಿ ಆರ್‍ಎಸ್‍ಪಿಡಿ ಲೆಕ್ಕ ಶೀರ್ಷಿಕೆಯಡಿ ಬೆಳೆಸಿರುವ ಸಸಿಗಳನ್ನು 2024 ನೇ ಸಾಲಿನ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಚಾಲ್ತಿಯಲ್ಲಿರುವ ಕಾನೂನು ನಿಯಮಗಳಿಗೆ ಅನುಸಾರವಾಗಿ ವಿತರಿಸಲು ಉದ್ದೇಶಿಸಿದೆ. ಅದರಂತೆ, ವಿರಾಜಪೇಟೆ ವಿಭಾಗದ ತಿತಿಮತಿ ವಲಯದ ಮಜ್ಜಿಗೆಹಳ್ಳ ಸಸ್ಯ ಕ್ಷೇತ್ರದಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಲು ಬೆಳೆಸಲಾದ 6*9 ಗಾತ್ರದ 75 ಸಾವಿರ ಹಾಗೂ 8*12 ಗಾತ್ರದ 5 ಸಾವಿರ ಒಟ್ಟು 80 ಸಾವಿರ ಸಸಿಗಳು ದಾಸ್ತಾನಿರುತ್ತದೆ. ಆಸಕ್ತ ಫಲಾನುಭವಿಗಳು ತಮ್ಮ ವೈಯಕ್ತಿಕ ವಿವರಗಳಾದ ಗುರುತಿನ ಚೀಟಿ, ಆರ್‍ಟಿಸಿ, ಆಧಾರ್ ಕಾರ್ಡ್ ಮತ್ತಿತರ ಅಗತ್ಯ ದಾಖಲಾತಿಗಳನ್ನು ಅರ್ಜಿಯೊಂದಿಗೆ ಜೂ.1 ರಿಂದ ವಲಯ ಅರಣ್ಯಾಧಿಕಾರಿ, ತಿತಿಮತಿ ವಲಯ, ತಿತಿಮತಿಯವರ ಕಚೇರಿಗೆ ತೆರಳಿ ನಗದು ಪಾವತಿಸಿ ರಶೀದಿ ಪಡೆದುಕೊಂಡು ಸಸಿಗಳನ್ನು ಪಡೆದುಕೊಳ್ಳಬಹುದು ಎಂದು ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ಸೋಮವಾರಪೇಟೆ ಮೇ 28 NEWS DESK : ಪ್ರವಾಸಿತಾಣ ಎಂದೇ ಕರೆಸಿಕೊಳ್ಳುವ ಮಕ್ಕಳ ಗುಡಿ ಬೆಟ್ಟಕ್ಕೆ ತೆರಳುವ ರಸ್ತೆ ಎರಡೂ ಬದಿಯಲ್ಲಿ ಕಾಡು ಬೆಳೆದು, ಅಲ್ಲಲ್ಲಿ ಇದ್ದ ತ್ಯಾಜ್ಯದ ರಾಶಿಯನ್ನು ಕಂಡ ಬೆಂಗಳೂರಿನ ಉದ್ಯಮಿಯೊಬ್ಬರು ಜೇಸಿಬಿ ಮೂಲಕ ಸ್ವಚ್ಛಗೊಳಿಸಿದ್ದು, ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಿರಗಂದೂರು ಗ್ರಾ.ಪಂ ವ್ಯಾಪ್ತಿಯ ಮಕ್ಕಳ ಗುಡಿ ಪ್ರವಾಸಿ ತಾಣವಾಗಿದ್ದು, ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಪ್ರಕೃತಿಯ ಸೊಬಗನ್ನು ಸವಿಯುತ್ತಾರೆ. ಆದರೆ ಪ್ರವಾಸೋದ್ಯಮ ಇಲಾಖೆಗೆ ಸೇರ್ಪಡೆಗೊಳ್ಳದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಸೂಕ್ತ ಭದ್ರತೆಯೂ ಇಲ್ಲದಂತಾಗಿದೆ. ಆದರೂ ಪ್ರವಾಸಿಗರನ್ನು ಸೆಳೆಯುತ್ತಿದೆ. ಮಕ್ಕಳಗುಡಿ ಬೆಟ್ಟದ ವ್ಯೂ ಪಾಯಿಂಟ್ ನಲ್ಲಿ ಯಾವುದೇ ರೀತಿಯ ಸುರಕ್ಷತೆಗಳು ಇಲ್ಲ. ಇಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲು, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದೆ. ರಸ್ತೆಯ ಎರಡೂ ಬದಿಯ ಕಾಡುಗಳು ರಸ್ತೆಯನ್ನು ಆಕ್ರಮಿಸಿಕೊಂಡಿತ್ತು. ಇದರ ಸ್ವಚ್ಛತೆಗೆ ಸ್ಥಳೀಯ ಗ್ರಾ.ಪಂ ಮುಂದಾಗದಿರುವುದರಿಂದ, ಪ್ರವಾಸಿಗರು ಕಷ್ಟದಲ್ಲಿ ಈ ಸ್ಥಳಕ್ಕೆ ಆಗಮಿಸುತ್ತಿದ್ದರು. ಸಂಜೆ ಸಮಯವಾದರೆ ಬೆಟ್ಟಕ್ಕೆ ಹೋಗಲು ಜನರು ಭಯಪಡುವಂತಾಗಿತ್ತು. ಉದ್ಯಮಿ ಸುರೇಶ್ ಮಾತನಾಡಿ,…
ಸೋಮವಾರಪೇಟೆ ಮೇ 28 NEWS DESK : ಆಲೇಕಟ್ಟೆ ರಸ್ತೆಯಲ್ಲಿರುವ ಹಾಲು ಸಂಗ್ರಹ ಡೈರಿಗೆ ಯಡೂರು ಬಿಟಿಸಿಜಿ ಕಾಲೇಜಿನ ವಿದ್ಯಾರ್ಥಿಗಳು ಭೇಟಿ ನೀಡಿ ಹೈನುಗಾರಿಕೆಯ ಬಗ್ಗೆ ಮಾಹಿತಿ ಪಡೆದರು. ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಡೈರಿಗೆ ಭೇಟಿ ನೀಡಿದ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ.ವಿದ್ಯಾರ್ಥಿಗಳಾದ ಕಾವ್ಯ, ಅಂಕಿತ, ಚೈತನ್ಯ ಡೈರಿಯ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಸರ್ಕಾರದಿಂದ ಡೈರಿಗಳ ಮೂಲಕ ಹೈನುಗಾರರಿಗೆ ಸಿಗುವ ಸೌಲಭ್ಯಗಳು, ಫೀಡ್ಸ್, ಔಷಧಿಗಳ ಬಗ್ಗೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಯೋಗೇಂದ್ರ ವಿವರಣೆ ನೀಡಿದರು. ಹಾಲಿನ ಗುಣಮಟ್ಟ, ಹವಾಮಾನ ವೈಪರೀತ್ಯದಿಂದ ಹಾಲಿನ ಉತ್ಪಾದನೆ ಮೇಲೆ ಆಗುವ ಏರಿಳಿತ, ಹಸುಗಳ ಸಾಕಾಣಿಕೆ, ಮೇವು, ಹಾಲಿನ ಸಾಗಾಟ, ಸಂಗ್ರಹ, ಉತ್ಪಾದನಾ ವೆಚ್ಚ, ಮಾರುಕಟ್ಟೆಯ ಬೇಡಿಕೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದರು.
ಮಡಿಕೇರಿ ಮೇ 28 NEWS DESK : ದಾವಣಗೆರೆಯ ನೇತಾಜಿ ಸುಭಾಶ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಯೋನೆಕ್ಸ್ ಸನ್ ರೈಸ್ ಕರ್ನಾಟಕ ರಾಜ್ಯ ಮಟ್ಟದ ಸಬ್ ಜೂನಿಯರ್ ಬ್ಯಾಡ್ಮಿಂಟನ್ ಪಂದ್ಯಾವಳಿಯ 17 ವರ್ಷದ ಬಾಲಕಿಯರ ವಿಭಾಗದಲ್ಲಿ ಕೊಡಗಿನ ಬೊಪ್ಪಂಡ ದಿಯಾ ಭೀಮಯ್ಯ ಸಿಂಗಲ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ದಿಯಾ ಭೀಮಯ್ಯ, ಮೈಸೂರಿನ ಸ್ಪೋರ್ಟ್ಸ್ ಪಾರ್ಕ್ ಅಕಾಡಮಿಯಲ್ಲಿ ಮೇದುರ ಅರುಣ್ ಪೆಮ್ಮಯ್ಯ ಹಾಗೂ ಬಿ.ಪಿ.ಭೀಮಯ್ಯ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ದಿಯಾ ಮಡಿಕೇರಿಯ ದೇಚೂರಿನ ಬೊಪ್ಪಂಡ ಕುಸುಮ ಹಾಗೂ ಭೀಮಯ್ಯ ಅವರ ಪುತ್ರಿ.
ಮಡಿಕೇರಿ ಮೇ 27 NEWS DESK : ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಮೂವರು ಪತ್ರಕರ್ತರು ಭಾಜನರಾಗಿದ್ದಾರೆ. ಹಿರಿಯ ಪತ್ರಕರ್ತ ಕೆ.ಬಿ.ಮಹಂತೇಶ್ ಅವರ ಸ್ಮರಣಾರ್ಥ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ‘ಏಜೆಂಟರ ಮೋಸಕ್ಕೆ ಬಲಿಯಾಗಿ ವಿದೇಶದಲ್ಲಿ ಸಿಲುಕಿದ ಮಹಿಳೆ’ ಎಂಬ ವರದಿಗೆ ಎ.ಎನ್.ವಾಸು ಪಡೆದುಕೊಂಡಿದ್ದಾರೆ. ಕೋವರ್ ಕೊಲ್ಲಿ ಇಂದ್ರೇಶ್ ಮತ್ತು ಕುಟುಂಬವರ್ಗ ತಮ್ಮ ತಂದೆ ಬಿ.ವಿ ಚಂದ್ರಶೇಖರ್ ಹಾಗೂ ತಾಯಿ ಪುಷ್ಪಲತಾ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಗೆ ಸ್ಟಾರ್ ಆಫ್ ಮೈಸೂರು ಪತ್ರಿಕೆಯಲ್ಲಿ ಪ್ರಕಟವಾದ ‘Daredevil act by kodagu born vet saves leopard in mangaluru’ ಎಂಬ ವರದಿಗೆ ಪಿ.ವಿ.ಅಕ್ಷಯ್ ಪಡೆದುಕೊಂಡಿದ್ದಾರೆ. ಎಂ.ಎನ್. ಚಂದ್ರಮೋಹನ್ ಅವರು ತಮ್ಮ ತಂದೆ ಎಂ.ನಾರಾಯಣ ಹಾಗೂ ತಾಯಿ ಎನ್. ಪದ್ಮಾವತಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಪರಿಸರ ವರದಿ ಪ್ರಶಸ್ತಿಗೆ ಟಿ.ವಿ. 9 ವಾಹಿನಿಯಲ್ಲಿ ಪ್ರಕಟವಾದ…
ಹುಣುಸೂರು ಮೇ 27 NEWS DESK : ಟೈಲ್ಸ್ ಸಾಗಿಸುತ್ತಿದ್ದ ಲಾರಿಯ ಚಕ್ರ ಕಳಚಿ ಹಳ್ಳಕ್ಕುರುಳಿದ ಘಟನೆ ಹುಣಸೂರು-ಮೈಸೂರು ಹೆದ್ದಾರಿಯ ಬಿಳಿಕೆರೆ ಜಂಕ್ಷನ್ ನಲ್ಲಿ ನಡೆದಿದೆ. ಆಂಧ್ರದಿಂದ ಮಂಗಳೂರಿಗೆ ಟೈಲ್ಸ್ ಸಾಗಾಟ ಮಾಡುತ್ತಿದ್ದ ಲಾರಿಯ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿಗೆ ಹಾಕಿರುವ ರಸ್ತೆ ಹುಬ್ಬನ್ನು ಗಮನಿಸದೆ ವೇಗವಾಗಿ ಬಂದಿದ್ದರಿಂದ ಲಾರಿ ಕಿರು ಸೇತುವೆಗೆ ಡಿಕ್ಕಿ ಹೊಡೆದು, ಆಕ್ಸಲ್ ಕಟ್ ಆಗಿದೆ, ಚಕ್ರಗಳು ಕಳಚಿ ಬಿದ್ದು ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಡಿಕೇರಿ ಮೇ 27 NEWS DESK : ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಳುಗಳಲೆ ಕಾಲೋನಿಯಲ್ಲಿ ಮೇ 24 ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಳುಗಳಲೆ ನಿವಾಸಿ ಜೀವನ್ (25) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿಂದ 43 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳೀಯ ನಿವಾಸಿ ಸುಂದರ್.ಬಿ.ಕೆ ಎಂಬುವವರು ಮನೆಗೆ ಬೀಗ ಹಾಕಿ ಕೆಲಸಕ್ಕೆಂದು ತೆರಳಿದ್ದಾಗ ಕಳ್ಳತನ ನಡೆದಿತ್ತು. ಈ ಕುರಿತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿ ಜೀವನ್ ನನ್ನು ಬಂಧಿಸಿದರು. ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಸಿದಾಗ ಫೆ.11 ರಂದು ಶನಿವಾರಸಂತೆಯ ತ್ಯಾಗರಾಜ ಕಾಲೋನಿಯಲ್ಲಿನ ಶ್ರೀ ವಿಜಯ ವಿನಾಯಕ ದೇವಾಸ್ಥಾನದ ಕಚೇರಿಯ ಬೀಗವನ್ನು ಒಡೆದು ದೇವಸ್ಥಾನದ ಕಾಣಿಕೆ ಹುಂಡಿಯನ್ನು ಕಳವು ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಶನಿವಾರಸಂತೆ ಪಿಐ ಪ್ರೀತಂ.ಡಿ, ಪಿಎಸ್‌ಐಗಳಾದ ರವಿಶಂಕರ್.ಕೆ.ಆರ್, ಗೋವಿಂದರಾಜು ಹಾಗೂ…
ಮಡಿಕೇರಿ ಮೇ 27 NEWS DESK : ಕೊಡಗಿನ ಕಾವೇರಿ ಮಾತೆಯ ಸ್ಪೂರ್ತಿಯೊಂದಿಗೆ, ಕೈಯಲ್ಲಿ ಹಾಕಿ ಸ್ಟಿಕ್ ಹಿಡಿದು, ಸದೃಢತೆಯೊಂದಿಗೆ ಕೊಡಗಿನ ಹೆಮ್ಮೆಯ ಸಂಕೇತವಾಗಲು, ಸವಾಲುಗಳನ್ನು ಮೀರಿ, ಮಹಿಳಾ ಶಕ್ತಿಯಾಗಿ ಬೆಳದಿದ್ದಾಳೆ. ಅವಳು ಕೇವಲ ಆಟಗಾರ್ತಿಯಲ್ಲ, ಹಲವು ಯುವ ಹಾಕಿ ಆಟಗಾರ್ತಿಯರಿಗೆ ದಾರಿ ದೀಪ, ಅಂತಹ ಒಬ್ಬಳು ಅಂತರಾಷ್ಟ್ರೀಯ ಹಾಕಿ ಆಟಗಾರ್ತಿಯೇ ಪಟ್ಟಮಾಡ ಜಮುನ ಅನೂಪ್. ಕೆಚ್ಚೆಟ್ಟೀರ ಬೆಳ್ಳಿಯಪ್ಪ ಹಾಗು ಬೇಬಿ(ತಾಮನೆ ನಂದಿನೆರುವಂಡ) ದಂಪತಿಯರ ಪುತ್ರಿಯಾಗಿ ಜಮುನ ಅವರು ಮಡಿಕೇರಿಯ ಕಡಗದಾಳು ಗ್ರಾಮದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಡಗದಾಳಿನಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಗೋಣಿಕೊಪ್ಪಲಿನಲ್ಲಿ, ಪಿಯುಸಿಯನ್ನು ಕಾವೇರಿ ಕಾಲೇಜು ಗೋಣಿಕೊಪ್ಪಲು ಹಾಗೂ ಪದವಿಯನ್ನು ತೆರೆಸಿಯನ್ ಕಾಲೇಜು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಬಾಲ್ಯದಲ್ಲಿ ಹಾಕಿಯ ಬಗ್ಗೆ ಆಸಕ್ತಿ ಹಾಗೂ ಕೌತುಕವನ್ನು ಹೊಂದಿದ್ದ ಜಮುನಾ ಅವರು ಹಾಕಿಯನ್ನು ಆಡಲು ಪ್ರಾರಂಭಿಸಿದ್ದರು. ಅವರ ಈ ಆಸಕ್ತಿಯೇ ಅವರನ್ನು ಅಂತರಾಷ್ಟ್ರೀಯ ಹಾಕಿ ಆಟಗಾರ್ತಿಯಾಗಲು ಪ್ರೇರೇಪಿಸಿತು. :: ಸಬ್ ಜೂನಿಯರ್ ನ್ಯಾಷನಲ್ :: ಜಮುನ ಅವರು 1979ರ ಬಿಹಾರ…
ಮಡಿಕೇರಿ ಮೇ 27 NEWS DESK : ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಎಸ್.ಟಿ ಟ್ಯಾಗ್, ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳನ್ನು ಮಾನ್ಯ ಮಾಡಬೇಕು ಸೇರಿದಂತೆ ಇಡೀ ಕೊಡವ ಜನಾಂಗದ ಯೋಗಕ್ಷೇಮಕ್ಕಾಗಿ ತಲಕಾವೇರಿ ಮತ್ತು ಪಾಡಿ ಶ್ರೀಇಗ್ಗುತ್ತಪ್ಪ ದೇವನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವಿಶೇಷ ಪ್ರಾರ್ಥನೆ ಸಲ್ಲಿಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಆದಿಮಸಂಜಾತ ಕೊಡವರ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ ಹಾಗೂ ಶ್ರೀಇಗ್ಗುತ್ತಪ್ಪ ದೇವನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಮುಖರು ರಾಜ್ಯಾಂಗದತ್ತವಾಗಿ ಕರ್ನಾಟಕದ ಅಧೀನದಲ್ಲಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಎಸ್.ಟಿ ಟ್ಯಾಗ್ ಮತ್ತು ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕನ್ನು ಮಾನ್ಯ ಮಾಡುವುದರೊಂದಿಗೆ ಕೊಡವ ಜನಾಂಗದ ಅಭ್ಯುದಯಕ್ಕೆ ಆಶೀರ್ವದಿಸುವಂತೆ ಕೋರಿದರು. ::: ಭೂಪರಿವರ್ತನೆ ವಿರುದ್ಧ ಜನಜಾಗೃತಿ ::: ಸಿದ್ದಾಪುರದ ಕಾಫಿ ತೋಟದ ಭೂಪರಿವರ್ತನೆ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಭೂಪರಿವರ್ತನೆಗಳ ವಿರುದ್ಧ ಜೂ.3 ರಿಂದ ಜಿಲ್ಲಾವ್ಯಾಪಿ ಸಿಎನ್‌ಸಿ ಮಾನವ ಸರಪಳಿ ಜನಜಾಗೃತಿ…






