ಲೇಖಕ: admin

ವಿರಾಜಪೇಟೆ ಜೂ.24 NEWS DESK : ಪಟ್ಟಣದ ಮಗ್ಗುಲ ದಲ್ಲಿರುವ ಲಿಟಲ್ ಸ್ಕಾಲರ್ಸ್ ಶಾಲೆಯಲ್ಲಿ ಸಾರ್ವಜನಿಕ ಸೇವಾ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿರಾಜಪೇಟೆ ಪುರಸಭಾ ಸ್ವಚ್ಛತಾ ಸಿಬ್ಬಂದಿಗಳು, ಮಕ್ಕಳಿಗೆ ಕಸ ವಿಂಗಡಣೆ ಮಾಡುವ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಮಕ್ಕಳು  ಅನೇಕ ಪ್ರಶ್ನೆಗಳನ್ನು ಕೇಳುವುದರ ಮೂಲಕ ಮಾಹಿತಿ ಪಡೆದರು. ಶಾಲಾ ಮುಖ್ಯಸ್ಥರು ಹಾಗೂ ಸಮಾಜ ಸೇವಕರಾದ ಪೂಜಾ ಸಜೇಶ್ ಮಾತನಾಡಿ, ಪಟ್ಟಣದ ಶುಚಿತ್ವದಲ್ಲಿ ಸ್ವಚ್ಛತಾ ಸಿಬ್ಬಂದಿಗಳ ಪಾತ್ರ ಬಹಳಷ್ಟಿದ್ದು ಮಳೆ, ಬಿಸಿಲು ಎನ್ನದೇ ನಿರಂತರ ಸೇವೆಯನ್ನು ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.  ಸ್ವಚ್ಛತಾ ಸಿಬ್ಬಂದಿಗಳ ಜೊತೆಗೆ ಸಂವಹನ ನಡೆಸಿ ಅವರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು. ಕಾರ್ಯಕ್ರಮದಲ್ಲಿ ವಿರಾಜಪೇಟೆ ಪುರಸಭೆಯ ಸ್ವಚ್ಛತಾ ಸಿಬ್ಬಂದಿಗಳನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕರಾದ ಮೀರಾ ಪೂಣಚ್ಚ, ಶಿಕ್ಷಕರು, ಸಿಬ್ಬಂದಿಗಳು, ಶಾಲಾ ಮಕ್ಕಳು ಹಾಜರಿದ್ದರು.

Read More

ಮಡಿಕೇರಿ ಜೂ.24 NEWS DESK : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರನ್ನು ಅವಹೇಳನ ಮಾಡಿ ಅಶಾಂತಿ ಮೂಡಿಸುವ ರೀತಿಯಲ್ಲಿ ಮಡಿಕೇರಿ ನಗರದ ನಿವಾಸಿ ತೆನ್ನಿರ ಮೈನಾ ಅವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪ್ರಮುಖರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರಿಗೆ ದೂರು ಸಲ್ಲಿಸಿದ್ದಾರೆ. ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡು “ಕೋತಿಗಳು ಸಾರ್ ಕೋತಿಗಳು ಕಳ್ಳು ಕುಡಿದ ಕೋತಿಗಳು” ಎಂಬ ಹೆಸರಿನ ಪ್ರಚೋದನಾಕಾರಿ ಬರಹದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರನ್ನು ದಂಧೆಕೋರರು ಎಂದು ದೂಷಿಸಿ ಅವಹೇಳನ ಮಾಡಲಾಗಿದೆ. ಇದರಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುವ ಸಾಧ್ಯತೆಯಿದೆ. ತೆನ್ನಿರ ಮೈನಾ ಅವರು ಬಹಳ ದಿನಗಳಿಂದ ಬಿಜೆಪಿ ಪಕ್ಷ, ಪಕ್ಷದ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಬರಹಗಳನ್ನು ಬರೆದು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಉದ್ದೇಶಪೂರ್ವಕವಾಗಿ…

Read More

ಮಡಿಕೇರಿ ಜೂ.24 NEWS DESK : ಜಮಾಅತೆ ಇಸ್ಲಾಮೀ ಹಿಂದ್ ನೂತನ ಕೊಡಗು ಸಂಚಾಲಕರಾಗಿ ಸಿ.ಹೆಚ್.ಅಫ್ಸರ್ ಆಯ್ಕೆಯಾಗಿದ್ದಾರೆ. ಹುಣಸೂರಿನಲ್ಲಿ ನಡೆದ ಮೈಸೂರು ವಲಯ ಹೊಣೆಗಾರರ ಸಭೆಯಲ್ಲಿ ವಲಯಕ್ಕೆ ಓರ್ವ ಕಾರ್ಯದರ್ಶಿಯನ್ನು ನೇಮಕಗೊಳಿಸಬೇಕೆಂಬ ಬೇಡಿಕೆಯ ಹಿನ್ನೆಲೆಯಲ್ಲಿ, ಹಾಸನದಲ್ಲಿ ನಡೆದ ರಾಜ್ಯ ಸಲಹಾ ಸಮಿತಿ ಸಭೆಯಲ್ಲಿ ನೂತನ ಕೊಡಗು ಜಿಲ್ಲಾಸಂಚಾಲಕರಾಗಿ ಸಿ.ಹೆಚ್.ಅಫ್ಸರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಮೈಸೂರು ವಲಯ ಸಂಚಾಲಕ ಯು.ಅಬ್ದುಲ್ ಸಲಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಸಿ.ಹೆಚ್.ಅಫ್ಸರ್ಪ್ರಸ್ತುತ ಜಮಾಅತೆ ಇಸ್ಲಾಮೀ ಹಿಂದ್ ಮಡಿಕೇರಿ ಸ್ಥಾನಿಯ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಲಯ ಕಾರ್ಯದರ್ಶಿಯಾಗಿ ವಿರಾಜಪೇಟೆಯ ಪಿ.ಕೆ.ಅಬ್ದುಲ್ ರೆಹಮಾನ್  ಅವರನ್ನು ಮೈಸೂರು ವಲಯ ಹೊಣೆಗಾರರ ಸಲಹೆಯ ಮೇರೆಗೆ ಆಯ್ಕೆ ಮಾಡಲಾಗಿದೆ.

Read More

ವಿರಾಜಪೇಟೆ ಜೂ.24 NEWS DESK : ವಿರಾಜಪೇಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗೋಣಿಕೊಪ್ಪಲು ಶೌರ್ಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಹೊಸೂರು ಶ್ರೀ ಮಹದೇಶ್ವರ ದೇವಾಲಯದಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ದೇವಾಲಯದ ಹೊರ ಆವರಣದಲ್ಲಿ ತಂಡದ ಸ್ವಯಂ ಸೇವಕರು ಹಣ್ಣಿನ ಗಿಡಗಳು ಮತ್ತು ಇತರ ಮರಗಳ ಗಿಡಗಳನ್ನು ನೆಟ್ಟರು. ಈ ಸಂದರ್ಭ ಕೃಷಿ ಅಧಿಕಾರಿಗಳಾದ ಹರೀಶ್, ವೇಣು ಮಂದಣ್ಣ ಮತ್ತು ಸ್ವಯಂ ಸೇವಕರಾದ ಜಯಪ್ರಕಾಶ್, ಅಭಿಷೇಕ್, ದಿನೇಶ್, ತೀರ್ಥಕುಮಾರ್, ಕಿರಣಕುಮಾರ್, ಪದ್ಮ, ಗೌರಿ, ಅವ್ವಿ, ಚಂದ್ರು, ಸಂದೀಪ್ ಹಾಜರಿದ್ದರು.

Read More

ಮಡಿಕೇರಿ ಜೂ.24 NEWS DESK : ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಆರಂಭಿಸಿರುವ ಉಚಿತ ಡಯಾಲಿಸಿಸ್ ಕೇಂದ್ರವನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಈ ಸಂದರ್ಭ ಶಾಸಕ ಮಂಥರ್ ಗೌಡ, ಜಿಲ್ಲಾಧಿಕಾರಿ ವೆಂಕಟರಾಜ, ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

Read More

ಸುಂಟಿಕೊಪ್ಪ ಜೂ.24 NEWS DESK : ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲ್ಲಿರುವ ದುರ್ಗಾಲಕ್ಷ್ಮಿ ದೇವಿಯ ಪಾದುಕ ಪೂಜೆ ದೇವಾಲಯದ ಆವರಣದಲ್ಲಿ ಶ್ರದ್ಧಾಭಕತಿಯಿಂದ ಜರುಗಿತು. ದೇವಾಲಯದ ಪ್ರಧಾನ ಆರ್ಚಕರಾದ ಗಣೇಶ್‍ಭಟ್ ನೇತೃತ್ವದಲ್ಲಿ ಸ್ಥಳ ಶುದ್ಧಿಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ನಂತರ ದಕ್ಷಿಣ ಕನ್ನಡ ಜಿಲ್ಲೆಯ ವಾಸ್ತು ಶಿಲ್ಪಿ ಜಗ್ಗನಿವಾಸುದೇವ್ ಅವರು ದೇವಿಯ ಪಾದುಕೆಕಲ್ಲನ್ನು ದೇವಸ್ಥಾನ ಆಡಳಿತ ಮಂಡಳಿಗೆ ಒಪ್ಪಿಸಿ ಅದಕ್ಕೆ ಶುದ್ಧಿಪೂಜೆಯನ್ನು ಸಲ್ಲಿಸುವ ಮೂಲಕ ಗುಡಿಯ ನಿರ್ಮಾಣಕ್ಕೆ ಚಾಲನೆ ನೀಡಿದರು. ಅಂದಾಜು ರೂ.18 ರಿಂದ 20 ಲಕ್ಷ ವೆಚ್ಚದಲ್ಲಿ ದುರ್ಗಾಲಕ್ಷ್ಮಿಗುಡಿ, ನಾಗಗುಡಿ, ಮುಖಮಂಟಪ ಹಾಗೂ ಮಹಾದ್ವಾರದ ಕಾಮಗಾರಿಯು ತ್ವರಿತಗತಿಯಲ್ಲಿ ಆರಂಭಿಸಲಾಗಿದ್ದು, ದಾನಿಗಳು ಹಾಗೂ ಭಕ್ತಾಧಿಗಳು ಧನಸಹಾಯ ನೀಡುವಂತೆ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದ ಅಧ್ಯಕ್ಷ ಬಿ.ಎಂ.ಸುರೇಶ್ ಮನವಿ ಮಾಡಿದರು. ಈ ಗುಡಿಗಳ ನಿರ್ಮಾಣ ಕಾರ್ಯವನ್ನು ದಕ್ಷಿಣ ಕನ್ನಡ ಮಾಣಿಯ ಶಿಲ್ಪಕಾರರಾದ ಕೃಷ್ಣಪ್ರಸಾದ್, ಜಗದೀಶ್ ದಯಾನಂದ್ ವಹಿಸಿಕೊಂಡಿದ್ದರು. ದೇವಾಲಯದ ಪದಾಧಿಕಾರಿಗಳಾದ ಚಂದ್ರ, ಧನುಕಾವೇರಪ್ಪ, ಸಿ.ಬಿ.ಚಂದ್ರಶೇಖರ್, ಬಾಲಕೃಷ್ಣ, ಆರ್.ಶಾಂತರಾಂ ಕಾಮತ್, ವಿ.ಎ.ಸಂತೋಷ್,…

Read More

ಮಡಿಕೇರಿ ಜೂ.24 NEWS DESK : ಜೀವನದಿ ಕಾವೇರಿ ಜಾಗೃತಿಗಾಗಿ ಹುಣ್ಣಿಮೆಯಂದು ಹಮ್ಮಿಕೊಂಡು ಬರುತ್ತಿರುವ ಮಹಾ ಆರತಿ ಕಾರ್ಯಕ್ರಮ ಕೊಡಗು ಜಿಲ್ಲೆಯ ಆರು ಕಡೆ ಕಾವೇರಿ ನದಿ ತಟದಲ್ಲಿ ಏಕಕಾಲದಲ್ಲಿ ನಡೆಯಿತು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ನಮಾಮಿ ಕಾವೇರಿ ತಂಡಗಳ ಮೂಲಕ ಭಾಗಮಂಡಲ ತ್ರಿವೇಣಿ ಸಂಗಮ, ಚೆಟ್ಟಿಮಾನಿ, ನಾಪೋಕ್ಲು ಕಲ್ಲುಮೊಟ್ಟೆ, ಚೆರಿಯ ಪರಂಬು, ಕುಶಾಲನಗರದ ಕಾವೇರಿ ಆರತಿ ಕ್ಷೇತ್ರ, ಗಡಿ ಭಾಗದ ಕಾವೇರಿ ಪ್ರತಿಮೆ ಬಳಿ ಸೇರಿದಂತೆ ಒಟ್ಟು ಆರು ಕಡೆ ಕಾವೇರಿ ನದಿ ತಟಗಳಲ್ಲಿ ಮಹಾ ಆರತಿ ಬೆಳಗುವ ಮೂಲಕ ಕಾವೇರಿಯ ಆರಾಧನೆ ಕಾರ್ಯಕ್ರಮಗಳು ಏಕಕಾಲದಲ್ಲಿ ಜರಗಿದವು. ಈ ಮೂಲಕ ಸ್ವಚ್ಛ ಕಾವೇರಿಗಾಗಿ ಜನರಲ್ಲಿ ಅರಿವು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆದವು. ಕಾವೇರಿ ನದಿ ಸಂರಕ್ಷಣೆಯ ಅಂಗವಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ…

Read More

ಸೋಮವಾರಪೇಟೆ ಜೂ.24 NEWS DESK : ಶ್ರೀ ಸೋಮೇಶ್ವರ ದೇವಾಲಯದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನಂಜಮ್ಮ ಕಲ್ಯಾಣ ಮಂಟಪದಲ್ಲಿ ನವದುರ್ಗಾ ಚಂಡಿಕಾ ಹೋಮ, ಮತ್ತು ಏಕಾದಶ ರುದ್ರಹೋಮ ನಡೆಯಿತು. ವೇದಬ್ರಹ್ಮ ಎಂ.ವಿ.ಕೃಷ್ಣಮೂರ್ತಿ ಘನಪಾಠಿಗಳು ಹಾಗೂ ಚಿತ್ರಕುಮಾರ್ ಭಟ್ ಪೌರೋಹಿತ್ಯದಲ್ಲಿ ಪೂಜಾ ವಿಧಿವಿಧಾನಗಳು ನಡೆದವು. ದೇವಾಲಯದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಕಾರ್ಯದರ್ಶಿ ಎಸ್.ಡಿ.ವಿಜೇತ್ ಪದಾಧಿಕಾರಿಗಳಾದ ವೈ.ಪಿ.ಹರೀಶ್, ಸಿ.ಎನ್.ಸತೀಶ್, ಶಾಮ್ ಸುಂದರ್, ರಾಜೇಶ್ ಪದ್ಮನಾಭ, ಸುದರ್ಶನ್ ಕೌಶಿಕ್, ಜಯಂತ್, ಇನ್ನಿತರರು ಇದ್ದರು. ಇಂದು (ಜೂ.24) ಅಮೃತಮನೋತ್ಸವ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಸದ ಯದುವೀರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಶಾಸಕ ಡಾ.ಮಂತರ್‍ಗೌಡ, ಮಾಜಿ ಸಚಿವ ಅಪ್ಪಚ್ಚು ರಂಜನ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

Read More

ಮಡಿಕೇರಿ ಜೂ.24 NEWS DESK : ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಕಲಿಕೆಯ ಸಮಯದಲ್ಲೇ ಚುನಾವಣೆಯ ಮಹತ್ವ, ಚುನಾವಣೆಯ ಪ್ರಕ್ರಿಯೆ, ಮತದಾನದ ಮಹತ್ವ, ಮತದಾನ ಪ್ರಕ್ರಿಯೆ,ಶಾಲಾ ಸಂಬಂಧಿಸಿದ ಸಂಸತ್ತಿನ  ಚಟುವಟಿಕೆಗಳ ಅರಿವು ಮೂಡಿಸುವ ಉದ್ದೇಶದಿಂದ  ತ್ರಿವೇಣಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ತಿನ ಚುನಾವಣೆ ನಡೆಯಿತು. 4ನೇ ತರಗತಿಯಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ನಾಮಪತ್ರ ಸಲ್ಲಿಕೆ ಪ್ರಕಾರದಿಂದ ಹಿಡಿದು, ಮತಯಾಚನೆ, ಮತದಾನ ಪ್ರಕ್ರಿಯೆ, ಗುರುತು ಮಾಡುವಿಕೆ ನಡೆಸಲಾಯಿತು. ಫಲಿತಾಂಶ ಎಣಿಕೆಯ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕರುಗಳು ಮುನ್ನಡೆ-ಹಿನ್ನಡೆ ಗಳಿಸಿಕೊಂಡು ಅಂತಿಮವಾಗಿ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಲಾಯಿತು.

Read More

ನಾಪೋಕ್ಲು ಜೂ.24 NEWS DESK : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ವತಿಯಿಂದ ವಾರ್ಷಿಕ ಮಾಹಿತಿ ಕಾರ್ಯಾಗಾರ ನಡೆಯಿತು. ಮಡಿಕೇರಿಯ ಜ್ಞಾನ ವಿಕಾಸ ಕೇಂದ್ರದ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಉದ್ಘಾಟಿಸಿ, ಜ್ಞಾನ ವಿಕಾಸ ಕೇಂದ್ರದ ಧ್ಯೇಯವೋದ್ದೇಶಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಈ ಸಂದರ್ಭ ಜ್ಞಾನ ವಿಕಾಸ ಕೇಂದ್ರದ ಯೋಜನಾಧಿಕಾರಿ ಪುರುಷೋತ್ತಮ, ಅರಕಲಗೋಡು ತಾಲ್ಲೂಕಿನ ಸಮನ್ವಯಧಿಕಾರಿ ಸಪ್ನಾ, ಮಡಿಕೇರಿ ತಾಲ್ಲೂಕಿನ ಸಮನ್ವಯಧಿಕಾರಿ ಮಾಲಿನಿ ಹಾಗೂ ಎಲ್ಲಾ ತಾಲ್ಲೂಕಿನ ಸೇವಾಪ್ರತಿನಿಧಿಗಳು ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ.  

Read More