ಮಡಿಕೇರಿ ಏ.13 NEWS DESK : ಕೊಡಗಿನ ಸೈನಿಕ ಶಾಲೆಯಲ್ಲಿ ನಡೆದ 2024-25ನೇ ಸಾಲಿನ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಶಾಲಾ (ಗುಂಪು-ಹೆಚ್) ಫುಟ್ಬಾಲ್ ಪಂದ್ಯಾವಳಿಯಲ್ಲಿ ಕಲಿಕಿರಿ, ಕಜಕೂಟಂ ಮತ್ತು ಅಮರಾವತಿನಗರ ಸೈನಿಕ ಶಾಲೆ ತಂಡಗಳು ಚಾಂಪಿಯನ್ ತಂಡಗಳಾಗಿ ಹೊರಹೊಮ್ಮಿದವು. ವಿದ್ಯಾರ್ಥಿನಿಯರ ತಂಡದಿಂದ ಕಲಿಕಿರಿ ಸೈನಿಕ ಶಾಲೆಯ ಕೆಡೆಟ್ ಎಂ.ಜಿ.ದೀಕ್ಷಿತಾ, ಕಿರಿಯರ ವಿಭಾಗದಿಂದ ಕಜಕೂಟಂನ ಸೈನಿಕ ಶಾಲೆ ಕೆಡೆಟ್ ಕೃಷ್ಣಕಾಂತ್ ಹಾಗೂ ಉಪ ಕಿರಿಯರ ತಂಡದಿಂದ ಅಮರಾವತಿನಗರದ ಸೈನಿಕ ಶಾಲೆ ಕಡೆಟ್ ಎಂ.ಪಿ.ದೀಪಕ್ ಅತ್ಯುತ್ತಮ ಆಟಗಾರರಾಗಿ ಆಯ್ಕೆಯಾದರು. ಪಂದ್ಯಾವಳಿಯಲ್ಲಿ ಭಾರತದ ದಕ್ಷಿಣ ವಲಯದ ಕಜಕೂಟಂ (ಕೇರಳ) ಸೈನಿಕ ಶಾಲೆ, ಅಮರಾವತಿನಗರ (ತಮಿಳುನಾಡು) ಸೈನಿಕ ಶಾಲೆ, ಕಲಿಕೇರಿ (ಆಂಧ್ರ ಪ್ರದೇಶ) ಸೈನಿಕ ಶಾಲೆ, ಅಮರಾವತಿನಗರ (ತಮಿಳುನಾಡು) ಸೈನಿಕ ಶಾಲೆ ಹಾಗೂ ಆತಿಥೇಯ ಶಾಲೆ, ಕೊಡಗು ಸೈನಿಕ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಸೈನಿಕ ಶಾಲೆಯ ಪ್ರಭಾರೆ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಕ್ರೀಡಾಕೂಟದ…
ಲೇಖಕ: admin
ಮಡಿಕೇರಿ ಏ.13 NEWS DESK : ಕೊಡಗು ಜಿಲ್ಲೆಯಲ್ಲಿ ಪಾರದರ್ಶಕ, ಸುಗಮ ಮತ್ತು ಶಾಂತಿಯುತವಾಗಿ ಲೋಕಸಭಾ ಚುನಾವಣೆ-2024 ರ ಮತದಾನ ನಡೆಸುವ ಸಂಬಂಧ ಮತ್ತು ಈ ಅವಧಿಯಲ್ಲಿ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಏ.24 ರ ಸಂಜೆ 5 ಗಂಟೆಯಿಂದ ಏ.26 ರ ಸಂಜೆ 5 ಗಂಟೆವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ಅಭ್ಯರ್ಥಿ ಅಥವಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಪರ ಮತಯಾಚನೆ ನಡೆಸುವುದನ್ನು ಹೊರತುಪಡಿಸಿ, ಉಳಿದಂತೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಭೆ-ಸಮಾರಂಭ ನಡೆಸುವುದು, ಮೆರವಣಿಗೆ ಇನ್ನಿತರೆ ಕಾರ್ಯಕ್ರಮ ನಡೆಸುವುದು, ಛಾಯಾಗ್ರಹಣ, ದೂರದರ್ಶನ ಅಥವಾ ಇತರ ರೀತಿಯ ಉಪಕರಣಗಳ ಮೂಲಕ ಯಾವುದೇ ಚುನಾವಣಾ ವಿಷಯವನ್ನು ಸಾರ್ವಜನಿಕರಿಗೆ ಪ್ರದರ್ಶಿಸುವುದನ್ನು ನಿಷೇಧಿಸಿದೆ. ಅಭ್ಯರ್ಥಿ ಅಥವಾ ಕಾರ್ಯಕರ್ತರು ಮತದಾರರನ್ನು ಮತಗಟ್ಟೆಗೆ ವಾಹನದಲ್ಲಿ ಕರೆತರುವುದು ಹಾಗೂ ಅಲ್ಲಿಂದ ಕರೆದುಕೊಂಡು ಹೋಗುವುದನ್ನು ನಿಷೇಧಿಸಿದೆ. ಐದಕ್ಕಿಂತ ಹೆಚ್ಚಿನ ಜನ ಗುಂಪು…
ಮಡಿಕೇರಿ ಏ.13 NEWS DESK : ಸೋಮವಾರಪೇಟೆ ಲಯನ್ಸ್ ಕ್ಲಬ್ ನ ಮಾಸಿಕ ಸಭೆಯು ಅಧ್ಯಕ್ಷರಾದ ಎ.ಎಸ್.ಮಹೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸೋಮವಾರಪೇಟೆ ಶ್ರೀಗಂಧ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಲಯನ್ಸ್ ಕ್ಲಬ್‌ನ ಸದಸ್ಯರಾದ ಹಾರಂಗಿ ಅಚ್ಚುಕಟ್ಟು ಪ್ರದೇಶದ ಸದಸ್ಯ ಎ.ಪಿ ಸುಬ್ಬಯ್ಯ, ಜಿಲ್ಲಾ ಸಹಕಾರ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾದ ಜಲಜಶೇಖರ್, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಎಸ್.ಮಹೇಶ್, ಜಿಲ್ಲಾ ಶ ಸಾ ಪ ಉಪಾಧ್ಯಕ್ಷ ಜೆ.ಸಿ.ಶೇಖರ್, ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಎ.ಎಂ.ಆನಂದ ಆನಂದ್ ಅವರನ್ನು ಲಯನ್ಸ್ ಕ್ಲಬ್‍ನ ಪ್ರಮುಖರು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ಕ್ಲಬ್‍ನ ವಲಯಾಧ್ಯಕ್ಷ ಚೆಟ್ಟಿಮಾಡ ರೋಹಿತ್, ಕಾರ್ಯದರ್ಶಿ ಚಾವಡಿ ಶಿವಕುಮಾರ್ ಹಾಗೂ ಖಜಾಂಚಿ ಕೆ.ಡಿ.ವೀರಪ್ಪ ಹಾಗೂ ಲಯನ್ಸ್ ಕ್ಲಬ್ ನ ಎಲ್ಲಾ ಸದಸ್ಯರು ಹಾಜರಿದ್ದರು.
ನಾಪೋಕ್ಲು ಫೆ.13 NEWS DESK : ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯಲ್ಲಿ ಕೂತಂಡ ತಂಡ ಮೀದೆರಿರ ವಿರುದ್ಧ 4-0 ಅಂತರದ ಜಯ ಸಾಧಿಸಿತು. ಬಲ್ಲಚಂಡ ಕರವಂಡ ವಿರುದ್ಧ 2-0 ಅಂತರದ ಗೆಲುವು ಸಾಧಿಸಿದರೆ ಬಾಚನದಂಡ ತಂಡ ಕಳ್ಳಿಚಂಡ ವಿರುದ್ಧ ಪರಾಭವಗೊಂಡಿತು. ಕಳ್ಳಿಚಂಡ 4- 0 ಅಂತರದಿಂದ ಬಾಚನದಂಡ ತಂಡದ ವಿರುದ್ಧ ಗೆಲುವು ಸಾಧಿಸಿತು. ಅಲ್ಲಂಡ ಮತ್ತು ಬೇಪಡಿಯಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆದು ಬಳಿಕ ಟ್ರೈ ಬ್ರೇಕರ್ ನಲ್ಲಿ ಬೇಪಡಿಯಂಡ 4-3 ಅಂತರದಿಂದ ಗೆಲುವು ಸಾಧಿಸಿದರೆ, ನಂಬುಡಮಾಡ ಮೇಚಂಡ ವಿರುದ್ಧ 2-1 ಅಂತರದ ಗೆಲುವು ಸಾಧಿಸಿತು. ಚೀಯಕಪೂವಂಡ ಜಮ್ಮಡ ವಿರುದ್ಧ 2-1 ಅಂತರದ ಗೆಲುವು ಸಾಧಿಸಿತು. ಚಿಂದ ಮಾಡ ತಂಡಕ್ಕೆ ಮುಂಡಂಡ ತಂಡದ ವಿರುದ್ಧ 4-1 ಅಂತರದ ಜಯಲಭಿಸಿತು. ಮನೆಯ ಪಂಡ ತಂಡವು ಮಾಣಿಪಂಡ ವಿರುದ್ಧ 1- 0 ಅಂತರದ ಜಯ ಸಾಧಿಸಿದರೆ, ಮಾಪಣಮಾಡ ತಂಡವು ಮಾಲೇಟಿರ(ಕುಂದ) ತಂಡದ…
ವಿರಾಜಪೇಟೆ ಏ.13 NEWS DESK : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಗಡಿ ತಪಾಸಣೆ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ವಾಹನ ತಪಾಸಣೆ ವೇಳೆ ದಾಖಲೆಯಿಲ್ಲದ ರೂ. 95,500 ಹಣವನ್ನು ಚುನಾವಣೆ ನಿಯೋಜಿತ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ವಿರಾಜಪೇಟೆಯ ಪೆರುಂಬಾಡಿ ತಪಾಸಣೆ ಕೇಂದ್ರದಲ್ಲಿ ನಡೆದಿದೆ. ವಿರಾಜಪೇಟೆ ಪೆರುಂಬಾಡಿ ಪೊಲೀಸ್ ತಪಾಸಣೆ ಕೇಂದ್ರಲ್ಲಿ ಚುನಾವಣೆ ಸಂಭಂದಿಸಿದಂತೆ ಕೇರಳ ರಾಜ್ಯದಿಂದ ಗಡಿಯ ಮೂಲಕ ರಾಜ್ಯಕ್ಕೆ ಬರುವ ಎಲ್ಲಾ ರೀತಿಯ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಸಂದರ್ಭ ಮೈಸೂರಿಗೆ ತೆರಳುತ್ತಿದ್ದ ಕೇರಳದ ಇರಿಟಿ ನಗರದ ರಂಶೀದ್ (35) ಅವರ ಕಾರನ್ನು ತಪಾಸಣೆ ನಡೆಸಿ, ದಾಖಲೆ ಇಲ್ಲದ ರೂ. 95,500 ನಗದನ್ನು ಚುನಾವಣೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ಹಣವನ್ನು ಉಪ ಖಜಾನೆ ಅಧಿಕಾರಿಗಳಿಗೆ ಒಪ್ಪಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ತಪಾಸಣೆ ಕೇಂದ್ರದಲ್ಲಿ ಸ್ಥಿರ ಕಣ್ಗಾವಲು ತಂಡದ ಶಿಕ್ಷಣ ಇಲಾಖೆಯ ವೆಂಕಟೇಶ್, ಕೃಷಿ ಇಲಾಖೆಯ ಆಶ್ವಿನ್ ಕುಮಾರ್ ಮತ್ತು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
ನಾಪೋಕ್ಲು ಏ.13 NEWS DESK : ಕಕ್ಕಬೆ ಗ್ರಾ.ಪಂ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿ ಶ್ರೀ ಪನ್ನಂಗಾಲ ತಮ್ಮೆ ಸಣ್ಣ ಕೊಡೆ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಬೆಳಿಗ್ಗೆ ಅಂಜಪರವಂಡ ಮನೆಯಿಂದ ಭಂಡಾರ ತರಲಾಯಿತು. ನಂತರ ತಡಂಬು ತೊಳೆಯುವುದು, ನಾಡು ಹತ್ತಿಸುವುದು ಮತ್ತು ಹರಕೆ ಒಪ್ಪಿಸಿ ರಾತ್ರಿ ಕರಿ ಚಾಮುಂಡಿ ಭಾರಣಿ ಜರುಗಿತು. ಶ್ರೀ ಪನ್ನಂಗಾಲ ಸನ್ನಿಧಿಯಲ್ಲಿ ಎರಡು ವರ್ಷಕ್ಕೆ ಒಂದು ಬಾರಿ ದೊಡ್ಡ ಕೊಡೆ ಉತ್ಸವ ಜರುಗುತ್ತದೆ. ಇದೀಗ ಸಣ್ಣ ಹಬ್ಬ ನಡೆಯುತ್ತಿದೆ. ಇಂದು (ಶನಿವಾರ ) ಕುರುಂದಕಳಿ ನಡೆಯಲಿದೆ. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಏ.13 NEWS DESK : ಬೈಕ್ ನಲ್ಲಿ ತೆರಳುತ್ತಿದ್ದ ಸಹೋದರರ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಸಿದ್ದಾಪುರ ಸಮೀಪದ ಅತ್ತಿಮಂಗಲದಲ್ಲಿ ನಡೆದಿದೆ. ನೆಲ್ಯಹುದಿಕೇರಿಯ ಎಂ.ಜಿ.ಕಾಲನಿ ನಿವಾಸಿ ರಂಶಾದ್ ಹಾಗೂ ರಾಶೀದ್ ಅವರುಗಳು ಅರೆಕಾಡಿಗೆ ತೆರಳುತ್ತಿದ್ದ ಸಂದರ್ಭ ಅತ್ತಿಮಂಗಲ ತಲುಪುತ್ತಿದ್ದಂತೆ ಕಾಫಿ ತೋಟದಿಂದ ರಸ್ತೆಗೆ ಬಂದ ಕಾಡಾನೆ ಬೈಕಿನ ಮೇಲೆ ದಾಳಿ ಮಾಡಿದೆ. ದಾಳಿಯ ಪರಿಣಾಮ ರಂಶಾದ್ ಹೊಟ್ಟೆ ಹಾಗೂ ಕಾಲಿಗೆ ಗಾಯವಾಗಿದ್ದು, ಸಹೋದರ ರಾಶಿದ್ ಓಡಿ ಪ್ರಾಣಪಾಯದಿಂದ ಪಾರಾಗಿದ್ದಾನೆ. ಸ್ಥಳೀಯರು ಗಾಯಾಳವನ್ನು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅರಣ್ಯ ಇಲಾಖೆ ವಿರುದ್ಧ ಆಕ್ರೋಶ : ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಡಿಆರ್‍ಎಫ್‍ಒ ಸುಬ್ರಾಯ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಈ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಳೆದ ಹಲವು ದಿನಗಳಿಂದ ದಾಂಧಲೆ ನಡೆಸುತ್ತಿದೆ. ವಾಹನ ಸವಾರರ ಮೇಲೆ ಹಲವು ಬಾರಿ ದಾಳಿಗೆ ಯತ್ನಿಸಿದೆ. ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿದರು.
ಮಡಿಕೇರಿ ಏ.12 NEWS DESK : ಕರಿಕೆ ಗ್ರಾಮದಲ್ಲಿ ಅಕ್ರಮವಾಗಿ ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಮತ್ತು ತಪ್ಪಿತಸ್ಥರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರಿಕೆ ವ್ಯಾಪ್ತಿಯ ಕುಂಡತ್ತಿಕಾನ, ಬಾಳೆಬಳಪ್ಪು ಕುಡಿಯಂಗಲ್ಲು ಸುತ್ತಮುತ್ತಲ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಹಲವು ಗ್ರಾಮಸ್ಥರು ಸಹಿ ಮಾಡಿರುವ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ನೀಡಿದ ಪ್ರಮುಖರು ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. ಜನವಸತಿ ಪ್ರದೇಶದ ಕೆಲವು ಮನೆ ಮತ್ತು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ದುಪ್ಪಟ್ಟು ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ದಂಧೆ ನಿರಂತರವಾಗಿ ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರೆ ದಂಧೆಕೋರರು ಅಧಿಕಾರಿಗಳು ಸ್ಥಳಕ್ಕೆ ಬರುವ ಮಾಹಿತಿ ಪಡೆದುಕೊಂಡು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಸಾಕ್ಷಿ ಸಹಿತ ಎಲ್ಲೂ ಸಿಕ್ಕಿ ಹಾಕಿಕೊಳ್ಳುತ್ತಿಲ್ಲವೆಂದು ಆರೋಪಿಸಿದರು. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರೇ ಇದ್ದು, ದುಡಿದ ಹಣವನ್ನು ದುಪ್ಪಟ್ಟು ದರದ ಅಕ್ರಮ ಮದ್ಯಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರು…
ಮಡಿಕೇರಿ ಏ.12 NEWS DESK : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನು(22) ಎಂಬ ಯುವಕ ಹುಲಿ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃಷಿಕ ವೃಷಬೇಂದ್ರಪ್ಪ ಅವರ ಬಾಳೆ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಆದರೆ ಹುಲಿ ಕಾರ್ಯಾಚರಣೆ ತಂಡ ಬರುತ್ತಿದ್ದಂತೆ ಹುಲಿ ಮತ್ತೊಂದು ತೋಟದ ಮೂಲಕ ಕಾಲ್ಕಿತ್ತಿದೆ ಎಂದು ತಿಳಿದು ಬಂದಿದೆ. ಗ್ರಾಮಸ್ಥರು ಆತಂಕಗೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲೇ ಇದ್ದಾರೆ.
ಬೆಂಗಳೂರು ಏ.12 NEWS DESK : ಖ್ಯಾತಿ ಜ್ಯೋತಿಷಿ ಎಸ್.ಕೆ.ಜೈನ್ (67) ಅವರು ಇಂದು ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಶ್ವಾಸಕೋಶದ ಸೋಂಕಿನಿಂದ ನೀರು ಶೇಖರಣೆಗೊಂಡು ದೇಹಕ್ಕೆಲ್ಲಾ ಹರಡಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿರುವುದಾಗಿ ತಿಳಿದು ಬಂದಿದೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ಸುರೇಂದ್ರ ಕುಮಾರ್ ಜೈನ್ (ಎಸ್.ಕೆ.ಜೈನ್) ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಬೆಂಗಳೂರಿನಲ್ಲಿ ಬೆಳೆದರು. ಸುಮಾರು 40 ವರ್ಷಗಳ ಸುದೀರ್ಘ ಕಾಲ ಜ್ಯೋತಿಷಿ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಉದಯ ಟಿವಿಯಲ್ಲಿ ದಾಖಲೆಯ 20 ವರ್ಷಗಳ ಕಾಲ ಇವರು ನಡೆಸಿಕೊಡುತ್ತಿದ್ದ ಜ್ಯೋತಿಷ್ಯ ಕಾರ್ಯಕ್ರಮ ಪ್ರಸಾರಗೊಂಡಿತ್ತು. ಎಸ್.ಕೆ.ಜೈನ್ ಅವರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.






