ಮಡಿಕೇರಿ ಜ.6 NEWS DESK : ರಾಜಸ್ಥಾನದ ವಿಶ್ವ ವಿದ್ಯಾಲಯದಲ್ಲಿ ಎಂ.ಎ ಪಬ್ಲಿಕ್ ಪಾಲಿಸಿ ಲಾ ಅಂಡ್ ಗವರ್ನಯನ್ಸ್ (M A Public Policy Law And Governance) ವ್ಯಾಸಂಗ ಮಾಡುತ್ತಿರುವ ಸೋಮವಾರಪೇಟೆಯ ಎಸ್.ಎ.ಇಶಾ ಪ್ರಥಮ ವರ್ಷದ ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ದ್ವಿತೀಯ ಸ್ಥಾನ ಪಡೆದು ಸಾಧನೆಗೈದಿದ್ದಾಳೆ. ಸೋಮವಾರಪೇಟೆಯ ಲೇಖಕಿ ರುಬೀನಾ ಎಂ.ಎ ಮತ್ತು ಆಸಿಫ್ ದಂಪತಿಗಳ ಪ್ರಥಮ ಪುತ್ರಿಯಾಗಿರುವ ಇಶಾ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸೋಮವಾರಪೇಟೆಯ ಓ ಎಲ್ ವಿ ಕಾನ್ವೆಂಟ್ ಮತ್ತು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯ ಪದವಿಪೂರ್ವ ಶಿಕ್ಷಣ, ಸೋಮವಾರಪೇಟೆ ಸಂತ ಜೋಸೆಫರ ವಿದ್ಯಾಸಂಸ್ಥೆಯಲ್ಲಿ ಪದವಿ ಜೊತೆಗೆ ಬೆಂಗಳೂರಿನ ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಮತ್ತು ಹಜ್ ಭವನದಲ್ಲಿ ಯುಪಿಎಸ್ ಸಿ ಕೋರ್ಸನ್ನು ಮುಗಿಸಿದ್ದಾಳೆ. ಗೋಣಿಮರೂರು ಸರಕಾರಿ ಪ್ರೌಢ ಶಾಲೆಯಲ್ಲಿ ಹಿಂದಿ ಅತಿಥಿ ಶಿಕ್ಷಕಿಯಾಗಿ ಕೆಲವು ತಿಂಗಳು ಕರ್ತವ್ಯ ನಿರ್ವಹಿಸಿರುತ್ತಾಳೆ.
ಲೇಖಕ: admin
ಮಡಿಕೇರಿ ಜ.6 NEWS DESK : ಕೊಡಗು ಗೌಡ ಯುವ ವೇದಿಕೆ ನೂತನ ಆಡಳಿತ ಮಂಡಳಿಯ ಸದಸ್ಯರು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರನ್ನು ಭೇಟಿಯಾದರು. ಅಧ್ಯಕ್ಷ ಬಾಲಾಡಿ ಮನೋಜ್ ನೇತೃತ್ವದಲ್ಲಿ ಕುಶಾಲನಗರದ ವಿಶ್ರಾಂತಿ ಗೃಹದಲ್ಲಿ ಶಾಸಕರನ್ನು ಭೇಟಿಯಾದ ಕೊಡಗು ಗೌಡ ಯುವ ವೇದಿಕೆಯ ಪ್ರಮುಖರು, ಏಪ್ರಿಲ್ ತಿಂಗಳಲ್ಲಿ ನಡೆಯುವ ಒಲಂಪಿಕ್ ಮಾದರಿಯ ಕ್ರೀಡಾಕೂಟದ ಕುರಿತು ಚರ್ಚಿಸಿದರು. ಈ ಬಾರಿ ಕೊಡಗು ಗೌಡ ಯುವ ವೇದಿಕೆಯ ನೇತೃತ್ವದಲ್ಲಿ ಏ.27 ರಿಂದ ಮೇ 17 ರ ವರೆಗೆ ಗೌಡ ಸಮುದಾಯಗಳ ನಡುವೆ ಕುಟುಂಬವಾರು ಟೆನ್ನಿಸ್ ಬಾಲ್ ಕ್ರಿಕೆಟ್ ಹಾಗೂ ಮೊದಲ ವರ್ಷದ ರಿಂಕ್ ಹಾಕಿ, ಶೂಟಿಂಗ್ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯತೆಯ ಪೈಪೋಟಿ ಮಿಸ್ಟರ್ ಗೌಡ ಮಿಸ್ ಗೌಡತಿ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಶಾಸಕರು ಸಹಕಾರ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಕ್ರೀಡೆಯ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ಸಹಕಾರ ನೀಡುವಂತೆ ತಿಳಿಸಿದ್ದು, ವೇದಿಕೆಯ ಮನವಿಗೆ ಸೂಕ್ತ…
ಮೈಸೂರು ಜ.6 NEWS DESK : ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ಭಾರತದಲ್ಲೇ ಪ್ರಥಮವಾಗಿ ನಿರ್ಮಿಸಲಾಗಿರುವ ರಾಜೀವ್ ಗಾಂಧಿ ಡ್ರಾಗನ್ ಪಾಂಡ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿ, ಶುಭ ಹಾರೈಸಿದರು. ಸಚಿವರಾದ ಹೆಚ್.ಸಿ.ಮಹದೇವಪ್ಪ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಸೇರಿ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.
ಮಡಿಕೇರಿ ಜ.6 NEWS DESK : ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ಫೆ.1 ರಂದು ಮಡಿಕೇರಿಯ ಲಯನ್ಸ್ ಹಾಲ್ ನಲ್ಲಿ ಮೂರರಿಂದ ಹನ್ನೆರಡು (3- 12) ವರ್ಷದವರೆಗಿನ ಮಕ್ಕಳಿಗೆ ಕಥೆ ಹೇಳುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧಿಗಳು ಸ್ವಚ್ಛ ಕನ್ನಡ ಭಾಷೆಯಲ್ಲಿಯೇ ಕಥೆ ಹೇಳಬೇಕು, ಮೂರು ನಿಮಿಷ ಕಾಲಾವಕಾಶ ನೀಡಲಾಗುವುದು, ಕಥೆಯ ಕೊನೆಗೆ ಕಥೆಯ ನೀತಿಯನ್ನು ಹೇಳಬೇಕು, ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ತರಬೇಕು, ಮೂರರಿಂದ ಏಳು ವರ್ಷ( 3 – 7 ) ಮತ್ತು ಏಳರಿಂದ ಹನ್ನೆರಡು ವರ್ಷ ( 7 – 12 ) ಎಂದು ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ನಡೆಸಲಾಗುವುದು. ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳ ಜೊತೆಗೆ ಭಾಗವಹಿಸುವ ಎಲ್ಲ ಮಕ್ಕಳಿಗೂ ಪ್ರಶಂಸನಾ ಪತ್ರವನ್ನು ನೀಡಲಾಗುವುದು ಎಂದು ಆಯೋಜರು ತಿಳಿಸಿದ್ದಾರೆ. ಭಾಗವಹಿಸುವ ಮಕ್ಕಳು ಆ ದಿನ ಬೆಳಗ್ಗೆ 9.30ಕ್ಕೆ ಹಾಜರಿರಬೇಕು. ಸ್ಪರ್ಧೆಗೆ ಹೆಸರು ನೋಂದಾಯಿಸಲು ಜ.22 ಕೊನೆ ದಿನ. ನೋಂದಣಿಗಾಗಿ 8762574584 – ಸೌಮ್ಯ ಸಂತೋಷ್, …
ಮಡಿಕೇರಿ NEWS DESK ಜ.6 : ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ನ ಕೋಶಾಧಿಕಾರಿ ಪಿ.ಮನೋಹರ್(64) ಅವರು ಇಂದು ಬೆಳಗ್ಗೆ ಪೊನ್ನಂಪೇಟೆಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವರ್ತಕರಾಗಿರುವ ಪಿ.ಮನೋಹರ್ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ನೆಲ್ಲಿತ್ತಾಯ ಮತ್ತಿತರ ಪ್ರಮುಖರು ಮನೋಹರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಮಡಿಕೇರಿ ಜ.6 NEWS DESK : ಕೊಡಗು ಜಿಲ್ಲಾ ವಿದ್ಯಾ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮ ಜ.11 ರಂದು ಮಡಿಕೇರಿ ಗೌಡ ಸಮಾಜದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಆಹ್ವಾನಿಸಲಾಯಿತು. ಶಾಸಕರ ಗೃಹದ ಕಚೇರಿಯಲ್ಲಿ ಸಂಘದ ಅಧ್ಯಕ್ಷರಾದ ಹೆಚ್.ಎಸ್ ಚೇತನ್ ಹಾಗೂ ನಿರ್ದೇಶಕರು ಸನ್ಮಾನಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ನಾಪೋಕ್ಲು ಜ.6 NEWS DESK : ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವ ಇನ್ನೊಬ್ಬರ ದುಃಖವನ್ನು ಶಮನಗೊಳಿಸುವ ಇನ್ನೊಬ್ಬರ ಜೀವನದಲ್ಲಿ ನಗುವನ್ನು ತರಿಸುವ ಜವಾಬ್ದಾರಿಯನ್ನು ನಾವು ನಿರ್ವಹಿಸಬೇಕಿದೆ ಎಂದು ರೊಟೇರಿಯನ್ ಮಾಜಿ ರಾಜ್ಯಪಾಲ (ಜಿಲ್ಲಾ ಗವರ್ನರ್) ಅಭಿನಂದನ್ ಬಿ.ಶೆಟ್ಟಿ ಹೇಳಿದರು. ಲಯನ್ಸ್ ಕ್ಲಬ್ ನಾಪೋಕ್ಲು ವತಿಯಿಂದ ಸ್ಥಳೀಯ ಕೊಡವ ಸಮಾಜದ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಲಯನ್ಸ್ ರೀಜನ್ ಮೀಟ್ “ಬೆಸುಗೆ” ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ಉದ್ದೇಶಗಳನ್ನು ಹೊತ್ತು ಸಂಘಟನೆಯಲ್ಲಿ ಸದಸ್ಯರು ತೊಡಗಿಸಿಕೊಳ್ಳುತ್ತಾರೆ. ಕೆಲವರು ಒಡನಾಟಕ್ಕಾಗಿ ಕೆಲವರು ಸಮಯ ನಿರ್ವಹಣೆಗಾಗಿ ಇನ್ನು ಕೆಲವರು ಸೇವೆಗಾಗಿ ಸಂಘ ಸಂಸ್ಥೆಗಳನ್ನು ಸೇರುತ್ತಾರೆ. ಸೇವೆ ಎಂಬುದು ಲಯನ್ಸ್ ಸಂಸ್ಥೆಯ ದ್ಯೇಯೋದ್ದೇಶ. ಜೀವನದಲ್ಲಿ ಉತ್ತಮ ಗುರಿಯೊಂದಿಗೆ ಸದ್ದುದ್ದೇಶದೊಂದಿಗೆ ಹಾಗೂ ಸ್ಪೂರ್ತಿಯೊಂದಿಗೆ ಸಾಮಾಜಿಕ ಸೇವೆಗಳನ್ನು ಕೈಗೊಳ್ಳಬೇಕಾಗಿದೆ ಎಂದರು. ಜಪಾನ್ ದೇಶ ಶತ್ರು ರಾಷ್ಟ್ರಗಳಿಂದ ದಾಳಿಗೊಳಗಾಗಿ ಸಂಕಷ್ಟವನ್ನು ಅನುಭವಿಸಿತು. ಅದೇ ಸೋಲನ್ನು ಸವಾಲಾಗಿ ಸ್ವೀಕರಿಸಿ ಇದೀಗ ಆರ್ಥಿಕವಾಗಿ ಸದೃಢ ದೇಶವಾಗಿದೆ. ಜಪಾನಿನ ನಾಗರಿಕರು ಸದೃಢ ದೇಶ ನಿರ್ಮಾಣದ ಪಣತೊಟ್ಟಿದ್ದಾರೆ. ಉತ್ತಮ…
ಮಡಿಕೇರಿ ಜ.6 NEWS DESK : ಜಗದ ಕವಿ, ಯುಗದ ಕವಿ, ದಾರ್ಶನಿಕ ಕವಿ ಶ್ರೀಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಾಣಿಕೆಯನ್ನು, ವೈಚಾರಿಕತೆಯನ್ನೂ ಬಿತ್ತಿದ ಮಹಾನ್‌ಚೇತನ. ಅಪ್ಪಟ ಅಧ್ಯಾತ್ಮ ಜೀವಿಯಾಗಿದ್ದ ಕುವೆಂಪು ಅವರು ರೂಪಿಸಿದ ‘ವಿಶ್ವಮಾನವ ಸಂದೇಶ‘ ಸಾರ್ವಕಾಲಿಕ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಅಶೋಕ ಸಂಗಪ್ಪ ಆಲೂರ ಅವರು ಅಭಿಪ್ರಾಯಿಸಿದರು. ಕೊಡಗು ವಿಶ್ವವಿದ್ಯಾಲಯದ ಜ್ಞಾನಕಾವೇರಿ ಆವರಣದ ಹಾರಂಗಿ ಸಭಾಂಗಣದಲ್ಲಿ ಕನ್ನಡಸಿರಿ ಸ್ನೇಹ ಬಳಗ, ಹಾಗೂ ನಾಡಪ್ರಭು ಪತ್ತಿನ ಸಹಕಾರ ಸಂಘ, ಕುಶಾಲನಗರ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ವಿಶ್ವಮಾನವ ಕುವೆಂಪುರವರ ಜನ್ಮೋತ್ಸವ ಮತ್ತು -ಸಮಗ್ರ ಸಾಹಿತ್ಯದ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಜನಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಉದ್ದೇಶದಿಂದ ಹುಟ್ಟಿಕೊಂಡ ವಿಶ್ವಮಾನವ ಸಂದೇಶದ…
ಮಡಿಕೇರಿ NEWS DESK ಜ.5 : ವಿದ್ಯಾರ್ಥಿನಿಯರೇ ಭಯ ಬೇಡ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಕೊಡಗು ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅಭಯ ನೀಡಿದ್ದಾರೆ. ವಿದ್ಯಾರ್ಥಿನಿಯರು, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ, ಕಾನೂನು ಅರಿವು, ಜಾಗೃತಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರದ ಮಹತ್ವದ ಯೋಜನೆಯಾದ ‘ಅಕ್ಕ ಪಡೆ’ಗೆ ಇಂದು ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಈ ಸಂದರ್ಭ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಹಾಜರಿದ್ದರು.
ಮಡಿಕೇರಿ NEWS DESK ಜ.5 : ಮಡಿಕೇರಿ ನಗರದ ನಿವಾಸಿ, ನಿವೃತ್ತ ಕ್ಯಾಪ್ಟನ್ ಕೊಂಗೇಟಿರ ದೇವಯ್ಯ ಅವರ ಪತ್ನಿ ನಿವೃತ್ತ ತಹಶೀಲ್ದಾರ್ ಅಕ್ಕಮ್ಮ (ಅಕ್ಕಿ 85) ನಿಧನ ಹೊಂದಿದ್ದಾರೆ. ಮೃತರು ಪುತ್ರ ಕೊಂಗೇಟಿರ ದರ್ಶನ್ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜ.6 ರಂದು ಮಡಿಕೇರಿಯಲ್ಲಿ ನಡೆಯಲಿದೆ.






