ಮಡಿಕೇರಿ ಮಾ.21 NEWS DESK : ಮಾನವೀಯತೆ ಮತ್ತು ಗ್ರಹದ ಉಳಿವಿಗಾಗಿ ಕಾಡುಗಳು ಮತ್ತು ಮರಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 21 ರಂದು ವಿಶ್ವ ಅರಣ್ಯ ದಿನ ದಿನ ಎಂದೂ ಕರೆಯುವ ಅಂತರಾಷ್ಟ್ರೀಯ ಅರಣ್ಯ ದಿನವನ್ನು ಆಚರಿಸಲಾಗುತ್ತಿದೆ. ಸಂಯುಕ್ತ ರಾಷ್ಟಗಳ ಸಾಮಾನ್ಯ ಸಭೆಯಲ್ಲಿ 2012 ರಲ್ಲಿ ಕೈಗೊಂಡ ತೀರ್ಮಾನದಂತೆ ಅಂತರಾಷ್ಟ್ರೀಯ ಅರಣ್ಯ ದಿನವನ್ನು ಸ್ಥಾಪಿಸಲಾಯಿತು. ಈ ದಿನವು ಅರಣ್ಯಗಳ ಮಹತ್ವ, ಪ್ರಾಮುಖ್ಯತೆ ಮತ್ತು ಜಾಗೃತಿ ಮೂಡಿಸಲು ಹಾಗೂ ಅರಣ್ಯಗಳ ಸುಸ್ಥಿರ ನಿರ್ವಹಣೆ, ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ಅರಣ್ಯ ಸಂಪನ್ಮೂಲದ ಪಾತ್ರ ಮತ್ತು ಅದರ ವಿನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಭೂ ಜಗತ್ತಿನ ಎಲ್ಲಾ ಜೀವ ಸಂಕುಲಗಳಿಗೆ ಭೂಮಿ ಮಾತ್ರ ಆಸರೆಯಾಗಿದೆ. ವಿಶ್ವದಲ್ಲಿ ಬಹುತೇಕ ನದಿಗಳು ಹಾಗೂ ನೀರಿನ ಸೆಲೆಗಳ ಉಗಮ ಸ್ಥಾನ ಅರಣ್ಯಗಳೇ ಆಗಿವೆ. ಗಿಡಮರಗಳು ನಮ್ಮ…
ಲೇಖಕ: admin
ಮಡಿಕೇರಿ ಮಾ.21 NEWS DESK : ದುಬಾರೆಗೆ ತೆರಳುತ್ತಿದ್ದ ಪ್ರವಾಸಿಗರ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಕುಶಾಲನಗರ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಬಳಿ ನಡೆದಿದೆ. ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊAಡಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣವಿದೆ. ಮಡಿಕೇರಿಯಿಂದ ಚೆಟ್ಟಳ್ಳಿ ಮೂಲಕ ದುಬಾರೆಗೆ ಪ್ರವಾಸಿಗರು ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಕಾಡಾನೆ ದಾಳಿ ಮಾಡಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು, ಕಾಡಾನೆಯ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ನಾಪೋಕ್ಲು ಮಾ.21 NEWS DESK : ಮುತ್ತಪ್ಪ ದೇವಾಲಯದ ಸಮೀಪ ಸ್ಕೂಟಿ ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಚಲಾಯಿಸುತ್ತಿದ್ದ ಯುವಕ ಗಾಯಗೊಂಡಿರುವ ಘಟನೆ ನಡೆದಿದೆ. ಅಯ್ಯಂಗೇರಿ ನಿವಾಸಿ ಅಬ್ದುಲ್ ಕರೀಂ ಅವರ ಮಗ ಹಕ್ಕಿಮ್ (25) ಗಾಯಗೊಂಡ ಯುವಕ. ನಾಪೋಕ್ಲು ನಿಂದ ಹಳೆ ತಾಲೂಕಿನ ಕಡೆ ತೆರಳುತ್ತಿದ್ದ ಸ್ಕೂಟಿ ಎದುರು ಗಡೆಯಿಂದ ಬರುತ್ತಿದ್ದ ಪಿಕ್ ಆಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಸ್ಕೂಟಿ ಚಲಾಯಿಸುತ್ತಿದ್ದ ಯುವಕ ನ ಕಾಲು ಮುರಿತಗೊಂಡಿದ್ದು, ಹೆಟ್ಟೆಗೂ ಗಾಯಗಳಾಗಿವೆ. ಗಾಯಗೊಂಡ ಹಕೀಮ್ ನನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಮಾ.21 NEWS DESK : ಸುಂಟಿಕೊಪ್ಪ ಸಮೀಪದ ಭೂತನಕಾಡುವಿನ ನಿವಾಸಿ ಶಫ್ನಾಸ್ ಅವರು ಮಂಡಿಸಿದ “ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರದ ಪ್ರಬಂಧಕ್ಕೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ. ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರದ ವಿಷಯವನ್ನು ಡಾ.ಕೆ.ಎಸ್ ಅನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಅಧ್ಯಾಯವನ್ನು ನಡೆಸಿದ್ದರು. ಸುಂಟಿಕೊಪ್ಪ ಸಮೀಪದ ಭೂತಕಾಡುವಿನ ಟಾಟಾ ಕಾಫಿ ಲಿಮಿಟೆಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಐ.ಇಸ್ಮಾಯಿಲ್ ಮತ್ತು ಶಹರ್ಬಾನು ಕೆ.ವಿ ದಂಪತಿಯ ಪುತ್ರಿಯಾಗಿರುವ ಶಫ್ನಾಸ್ ಐ.(ಎಫ್.ಸಿ.ಐ) ಭಾರತೀಯ ಆಹಾರ ಕಾರ್ಪೊರೇಷನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಡಿಕೇರಿ ಮಾ.21 NEWS DESK : ವಾಟ್ಸಪ್ಪ್‍ನಲ್ಲಿ ಬಂದ ಒಂದು ಸಂದೇಶ À vote for BJP & re-elect your old Congress M.L.A. ಈ ಸಂದೇಶವನ್ನು ಓದುವಾಗ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‍ನ 55 ಕಾರ್ಪೋರೇಟರ್ ಗಳು ಬಿಜೆಪಿ ಸೇರ್ಪಡೆ ಕಾಂಗ್ರೆಸ್‍ಗೇ ಬಾರಿ ಮುಖಭಂಗ ಎಂದು ಸುದ್ದಿವಾಹಿನಿಯಲ್ಲಿ ಸುದ್ದಿಯೊಂದು ಪ್ರಸಾರವಾದದ್ದನ್ನು ಕೇಳಿದಾಗ ಮನಸಲ್ಲಿ ಮೂಡುವ ಪ್ರಶ್ನೆ. ನಾವು ಎಂತ ಕಾಲಗಟ್ಟದಲ್ಲಿ ಇದ್ದೇವೆ. ನಮ್ಮ ರಾಜಕೀಯ ಪಕ್ಷಗಳ ಅಧೋಗತಿ ತೋರಿಸುತ್ತದೆ. ಇಲ್ಲಿ ಮೂಡುವ ಪ್ರಶ್ನೆ ಏನೆಂದರೆ ಹಡಗೊಂದು ಮುಳುಗುತ್ತದೆ ಎಂದಾಗ ಎಲ್ಲರೂ ಪ್ರಾಣ ಉಳಿಸಿ ಕೊಳ್ಳುವ ಪ್ರಯತ್ನ ಸರ್ವೇ ಸಾಮಾನ್ಯ. ಇನೊಂದು ಚುನಾವಣೆ ಬಂದಾಗ ಈ ಹಡಗನ್ನು ಬಿಡುವುದಿಲ್ಲ ಎಂಬ ಗ್ಯಾರಂಟಿ ಏನು ಅಂತ ಇಲ್ಲಿ ಚುನಾವಣೆಯ ಸಮಯದಲ್ಲಿ ಪಕ್ಷಗಳು ಸರ್ವೇ ಸಾಧಾರಣವಾಗಿ ಒಂದು ಪಕ್ಷದಲ್ಲಿ ಟಿಕೆಟ್ ಸಿಗದಿದ್ದರೆ ಇನೊಂದು ಪಕ್ಷಕ್ಕೆ ಹಾರುವುದು ಅಥವಾ ಗೆಲ್ಲುವ ಅಭ್ಯರ್ಥಿಗಳನ್ನು ಸೆಳೆಯುವುದು ರಾಜಕೀಯದಲ್ಲಿ ಒಂದು ರೀತಿಯ ಪ್ರಕ್ರಿಯೇ ಇದು ಪ್ರಜಾಪ್ರಭುತ್ವದ ರಾಜಕೀಯದ ಚದುರಂಗದಾಟದಲ್ಲಿ ಎಲ್ಲಾ…
ಮಡಿಕೇರಿ ಮಾ.20 NEWS DESK : ಅಂತರ ರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನಾಚರಣೆ ಅಂಗವಾಗಿ ಮಾ.21 ರಂದು ಕೊಡವ ನ್ಯಾಷನಲ್ ಸಂಘಟನೆ ವತಿಯಿಂದ ಕೊಡವ ಲ್ಯಾಂಡ್ ಗಾಗಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 10.30 ಗಂಟೆಗೆ ಮೂರ್ನಾಡು ಬಲಂಬೇರಿಯ ರಸ್ತೆಯ ಚೇನಂಡ ಪೃಥ್ವಿ ಅವರ ಕಾಫಿ ಕ್ಯಾಸ್ಟಲ್ ಕೂರ್ಗ್ ನಲ್ಲಿ ವಿಚಾರ ಮಂಡನೆ ನಡೆಯಲಿದೆ ಎಂದು ಹೇಳಿದ್ದಾರೆ. 1956 ರಲ್ಲಿ ರಾಜ್ಯ ಪುನರ್-ಸಂಘಟನೆ ಕಾಯಿದೆ ಜಾರಿಗೆ ಬಂದಾಗಿನಿಂದ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಹುಸಂಖ್ಯಾತ ಸಮುದಾಯದವರು ಅತ್ಯಂತ ಸೂಕ್ಷ್ಮ ಆದಿಮ ಸಂಜಾತ ಬುಡಕಟ್ಟು ಕೊಡವ ಜನಾಂಗವನ್ನು ತಾರತಮ್ಯ ದೃಷ್ಟಿಯಿಂದ ನೋಡುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ. ಕಡೆಗಣನೆ, ಅಗೌರವ ಮತ್ತು ಹಕ್ಕುಗಳಿಗೆ ಒಡ್ಡುತ್ತಿರುವ ಅಡೆತಡೆಗಳ ವಿರುದ್ಧ ನಿರಂತರ ಹೋರಾಟವನ್ನು ನಡೆಸುತ್ತಲೇ ಬಂದಿರುವ ಸಿಎನ್‍ಸಿ ಸಂಘಟನೆ ಕೊಡವರ ಮೇಲಿನ ತಾರತಮ್ಯ ನಿವಾರಣೆಗಾಗಿ ಶತ ಪ್ರಯತ್ನ ಮಾಡುತ್ತಿದೆ. ಕೊಡವರ ಕಾನೂನು ಬದ್ಧ ಹಕ್ಕುಗಳನ್ನು ಪಡೆಯಲು ಗುರುವಾರ ನಡೆಯುವ ಕಾರ್ಯಕ್ರಮದಲ್ಲಿ…
ಮಡಿಕೇರಿ ಮಾ.20 NEWS DESK : ಪೌತಿ ಖಾತೆ ವರ್ಗಾವಣೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಂದ 50 ಸಾವಿರ ರೂ. ಹಣ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಮಡಿಕೇರಿ ಲೋಕಾಯುಕ್ತ ಪೊಲೀಸರು ಮಧ್ಯವರ್ತಿಯನ್ನು ಬಂಧಿಸಿದ್ದಾರೆ. ಉಪ ನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿಗಳ ಕಚೇರಿಯ ಸಮೀಪದಲ್ಲೇ ಜೆರಾಕ್ಸ್ ಮಳಿಗೆ ಹೊಂದಿರುವ ಹರಿದತ್ ಎಂಬಾತನೇ ಬಂಧಿತ ಮಧ್ಯವರ್ತಿಯಾಗಿದ್ದಾನೆ. ಭಾಗಮಂಡಲ ಕೋರಂಗಾಲ ಗ್ರಾಮ ನಿವಾಸಿ ಎನ್.ಕುಮಾರ್ ಎಂಬವರು ತಮ್ಮ ಪೌತಿ ಖಾತೆ ವರ್ಗಾವಣೆ ಮಾಡಿಕೊಡಲು ಉಪ ನೋಂದಣಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ 50 ಸಾವಿರ ರೂ. ಲಂಚದ ಬೇಡಿಕೆ ಇಡಲಾಗಿತ್ತು ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಕುಮಾರ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಇಂದು ಕುಮಾರ್ ಅವರಿಂದ ಹಣ ಪಡೆಯುತ್ತಿದ್ದ ಮಧ್ಯವರ್ತಿ ಹರಿದತ್ ಎಂಬಾತನನ್ನು ಆತನ ಜೆರಾಕ್ಸ್ ಮಳಿಗೆಯಲ್ಲಿಯೇ ಹಣದ ಸಹಿತ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಲೋಕಾಯುಕ್ತ ದಾಳಿಯ ವೇಳೆ ಸಬ್ ರಿಜಿಸ್ಟ್ರಾರ್ ಅಧಿಕಾರಿ ಸೌಮ್ಯಲತಾ ಎಂಬುವವರು ಕಚೇರಿಯಿಂದ…
ಮಡಿಕೇರಿ ಮಾ.20 NEWS DESK : ಕಕ್ಕಬ್ಬೆಯ ಪಾಡಿ ಶ್ರೀ ಇಗುತ್ತಪ್ಪ ದೇವಾಲಯದಲ್ಲಿ ಮಾ.23 ರಂದು ಕುಂಬ್ಯಾರು ಕಲ್ಲಡ್ಚ(ವಾರ್ಷಿಕ) ಹಬ್ಬ ನಡೆಯಲಿದೆ. 5.30 ಗಂಟೆಗೆ ಅಭಿಷೇಕ ಪೂಜೆ, 6 ಗಂಟೆಗೆ ಪ್ರಾತಃಕಾಲದ ಪೂಜೆ, 10 ಗಂಟೆಗೆ ಎತ್ತು ಪೋರಾಟ, 10.30 ಗಂಟೆಗೆ ತುಲಾಬಾರ ಸೇವೆ, 11 ಗಂಟೆಗೆ ಭಕ್ತಾದಿಗಳ ಸೇವಾಪೂಜೆಗಳು, 12.30 ಗಂಟೆಗೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಣೆ ಜರುಗಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನೆರವೇರಲಿದೆ. ನಂತರ 2 ಗಂಟೆಗೆ ದೇವರು ಹೊರಗೆ ಬಂದು ಮಲ್ಮಕ್ಕೆ ತೆರಳುವುದು, ಸಂಜೆ 6 ಗಂಟೆಗೆ ದೇವರು ಮಲ್ಮದಿಂದ ಬಂದು ದೇವರ ಬಲಿ ನೃತ್ಯ, ರಾತ್ರಿ 8 ಗಂಟೆಗೆ ಅನ್ನದಾನ ನಡೆಯಲಿದೆ.
ಮಡಿಕೇರಿ ಮಾ.20 NEWS DESK : ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಬೆಳ್ಳಿ ಮಹೋತ್ಸವವು ಮಾ.28 ರಿಂದ 31ರ ವರೆಗೆ ನಡೆಯಲಿದೆ. ಶಾಲಾ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮವು ಮಾ.28 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಮೇಜರ್ ಬಿದ್ದಂಡ ಎ.ನಂಜಪ್ಪ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವ ಸಮಾಜದ ಉಪಾಧ್ಯಕ್ಷರು ಮತ್ತು ಜಿಟಿಪಿಎಸ್ ಕಾರ್ಯಾಧ್ಯಕ್ಷ ನಂದಿನೆರವಂಡ ಚೀಯಣ್ಣ ವಹಿಸಲಿದ್ದಾರೆ. ಮಾ.30 ರಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥರಾದ ಹರೀಶ್ ಕೊಡಂದೇರ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಜಿಟಿಪಿಎಸ್ ಕರೆಸ್ಪೊಡೆಂಟ್ ಕನ್ನಂಡ ಕವಿತಾ ಬೊಳ್ಳಪ್ಪ ವಹಿಸಲಿದ್ದಾರೆ. ಮಾ.31 ರಂದು 2.30 ಗಂಟೆಗೆ ಕೊಡವ ಸಮಾಜ ಮತ್ತು ಜಿಟಿಪಿಎಸ್ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ…
ಸಿದ್ದಾಪುರ ಮಾ.20 NEWS DESK : ಕುಂಜಿಲ ಪೈನರಿ ಕೆ ಎಸ್ ಎ ಗಲ್ಫ್ ಕಮಿಟಿ ವತಿಯಿಂದ ಸ್ವಲಾತ್ ವಾರ್ಷಿಕ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮ ರಿಯಾದ್ ನ ಅಲ್ಮಾಸ್ ಆಡಿಟೋರಿಯಂ ನಲ್ಲಿ ನಡೆಯಿತು. ಕುಂಜಿಲ ಪೈನರಿ ಮುಸ್ಲಿಂ ಜಮಾಹತ್ ಅದೀನದ ರಿಯಾದ್ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರವಾಸಿಗಳ ಒಕ್ಕೂಟದ ಕೆ ಎಸ್ ಎ ಗಲ್ಫ್ ಕಮಿಟಿಯ ಉಪಾಧ್ಯಕ್ಷ ಕುಂಡಂಡ ಸರ್ಫುದ್ದೀನ್ ಅಧ್ಯಕ್ಷತೆಯಲ್ಲಿ ನಡೆದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಂಸ ಮುಸ್ಲಿಯರ್ ಜೋಕಂಡಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕುಂಜಿಲ ಪೈನರಿ ಜುಮ್ಮ ಮಸೀದಿಯಲ್ಲಿ ಮುದರ್ರಿಸ್ ಆಗಿ ಸೇವೆಸಲ್ಲಿಸುತ್ತಿರುವ ನಿಸಾರ್ ಅಹ್ಸನಿ ಉಸ್ತಾದ್ ಕಕ್ಕಡಿಪುರ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ ಸಿ ಎಫ್ ) ರಿಯಾದ್ ಜೋನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿಲ್ಲೂರ್, ಸಾಂತ್ವನ ಸಮಿತಿ ಕಾರ್ಯದರ್ಶಿ ಅಶ್ರಫ್ ನೀರು ಕಟ್ಟೆ, ಪ್ರಮುಖರಾದ ಹಂಸ ಮುಸ್ಲಿಯಾರ್…






