ಲೇಖಕ: admin

ಮಡಿಕೇರಿ ಮಾ.20 NEWS DESK  : ಅವ್ಯಹತವಾಗಿ ನಡೆಯುತ್ತಿರುವ ವಾಣಿಜ್ಯ ಭೂಪರಿವರ್ತನೆಯಿಂದ ಕೊಡಗು ಜಿಲ್ಲೆಯ ಹಸಿರು ಹೊದಿಕೆ ಕಳಚಿಕೊಳ್ಳುತ್ತಿದೆ. ಆ ಮೂಲಕ ಜಲಮೂಲಗಳಿಗೆ ದಕ್ಕೆಯಾಗುತ್ತಿದೆ ಹಾಗೂ ಕಾವೇರಿ ನದಿಗೆ ನೀರಿನ ಒಳಹರಿವು ಕಡಿಮೆಯಾಗುತ್ತಿದೆ ಎಂದು ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನದ ಸಂಯೋಜಕ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಆತಂಕ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರು ನಗರ ಗಂಭೀರವಾದ ನೀರಿನ ಸಮಸ್ಯೆಯಿಂದ ಬಳಲುತ್ತಿದೆ, ಅಲ್ಲಿನ ನಾಗರೀಕರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಅನಿಯಂತ್ರಿತ ನಗರೀಕರಣ ಮತ್ತು ಕೊಡಗಿನಲ್ಲಾಗುತ್ತಿರುವ ವಾಣಿಜ್ಯ ಭೂಪರಿವರ್ತನೆಗಳು ಕಾರಣವಾಗಿದೆ. ಜಿಲ್ಲೆಯ ಜನ ಜಾಗೃತರಾಗದಿದ್ದಲ್ಲಿ ಸಮಸ್ಯೆಗೆ ಪರಿಹಾರ ದೊರೆಯುವುದು ಕಷ್ಟ ಎಂದು ಅಭಿಪ್ರಾಯಪಟ್ಟರು. ಕೊಡಗಿನಲ್ಲಿ ಹಣದ ಆಸೆಗಾಗಿ ವಾಣಿಜ್ಯ ಭೂಪರಿವರ್ತನೆಯಲ್ಲಿ ತೊಡಗಿರುವುದು ದುರದೃಷ್ಟಕರ. ಭೂವ್ಯವಹಾರದ ಮೂಲಕ ಭಾರೀ ಲಾಭ ಗಳಿಸಿರುವ ಶ್ರೀಮಂತರು ತಮ್ಮ ಹಣವನ್ನು ದ್ವಿಗುಣಗೊಳಿಸುವ ಸಲುವಾಗಿ ರಿಯಲ್ ಎಸ್ಟೇಟ್‍ಗೆ ಮರುಹೂಡಿಕೆ ಮಾಡುತ್ತಿದ್ದಾರೆ. ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶ ಭೂವ್ಯವಹಾರಕ್ಕಾಗಿ ನಾಶವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಜ್ಯ ಮಾತ್ರವಲ್ಲದೆ ಹೊರ…

Read More

ಮಡಿಕೇರಿ ಮಾ.20 NEWS DESK : ಕೊಡಗು ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ಸಮಿತಿಯ ಅಧ್ಯಕ್ಷರಾಗಿ ಸೂರಜ್ ಹೊಸೂರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಂದೀಪ್, ನಿಶ್ಚಲ್ ದಂಬೆಕೋಡಿ, ಪ್ರಧಾನ ಕಾರ್ಯದರ್ಶಿಗಳಾಗಿ ತೆರೆಸ ವಿಕ್ಟರ್, ರೌಫ್ ಪಾಷಾ, ಮಿನಾಜ್ ಪ್ರವೀಣ್ ಅವರನ್ನು ನೇಮಕಗೊಳಿಸಿ ಕರ್ನಾಟ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

Read More

ಮಡಿಕೇರಿ ಮಾ.20 NEWS DESK : ನದಿ ಮತ್ತು ನದಿ ಮೂಲದ ನೀರು ಬಳಸದಂತೆ ಜಿಲ್ಲಾಧಿಕಾರಿಗಳು ನೀಡಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಕೊಡಗು ಜಿಲ್ಲಾ ಬಹುಜನ ಸಮಾಜ ಪಾರ್ಟಿ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್, ಕೊಡಗಿನ ಆರ್ಥಿಕತೆಯು ಕಾಫಿ ಕೃಷಿಯನ್ನೇ ಅವಲಂಬಿಸಿದ್ದು, ಕಾಫಿ ಬೆಳೆಗಾರರು ಇಡೀ ವರ್ಷದಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಮಾತ್ರ ನೀರನ್ನು ತೋಟಕ್ಕೆ ಬಳಸುತ್ತಾರೆ. ಆದರೆ ಜಿಲ್ಲಾಡಳಿತ ಇದಕ್ಕೆ ವ್ಯತಿರಿಕ್ತವಾಗಿ ಆದೇಶ ನೀಡಿದ್ದು, ಇದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಾಫಿ ಬೆಳೆಗೆ ಮಾರ್ಚ್ ತಿಂಗಳ ಅವಧಿಯಲ್ಲಿ ನೀರು ಒದಗಿಸದಿದ್ದರೆ ಮುಂದಿನ ವರ್ಷದ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಆರ್ಥಿಕತೆಯೇ ಬುಡಮೇಲಾಗಲಿದೆ. ಇದರಿಂದ ಬೆಳೆಗಾರರು ಮಾತ್ರವಲ್ಲ, ಕಾರ್ಮಿಕ ವರ್ಗವೂ ಸಮಸ್ಯೆಗೆ ಸಿಲುಕಲಿದೆ ಎಂದು ತಿಳಿಸಿದರು. ಮಾರ್ಚ್ ತಿಂಗಳಿನಲ್ಲಿ ಮಳೆಯಾಗದಿದ್ದರೆ ರೈತರು ನೀರಾವರಿ ಮೂಲಕ ಕಾಫಿ ಗಿಡ ಮತ್ತು ಕಾಫಿ ಇಳುವರಿಯನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ. ಬೆಳೆಗಾರರು ಹಾಗೂ ಕೃಷಿ ಕಾರ್ಮಿಕರ ಸಂಕಷ್ಟ…

Read More

ಸೋಮವಾರಪೇಟೆ ಮಾ.20 NEWS DESK  : ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಪವರ್ ಸ್ಟಾರ್ ಪುನೀತ್ ಅವರ ಜನ್ಮ ದಿನಾಚರಣೆ ಅಂಗವಾಗಿ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಬಳಗದ ಅಧ್ಯಕ್ಷ ಹೆಚ್.ಮಂಜುನಾಥ್, ವಿರಕ್ತ ಮಠದ ಮಠಾಧೀಶರಾದ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮಿ, ಬಳಗದ ಜಗನ್ನಾಥ್, ನಿತನ್ ಮಿಟ್ಟು, ಸಂದೀಪ್, ಶರತ್, ಸುಬ್ರಮಣ್ಯ, ರಮೇಶ್, ಎಸ್.ಜೆ.ಎಂ.ಶಾಲೆಯ ಮುಖ್ಯೋಪಾಧ್ಯಾಯ ಮಾರಪ್ಪ ಇದ್ದರು.

Read More

ಮಡಿಕೇರಿ ಮಾ.20 NEWS DESK : ಯಾವುದೇ ಕ್ಷೇತ್ರದ ಸಾಧನೆಗೆ ವಿದ್ಯೆ ಮತ್ತು ಹಣವಿದ್ದರೆ ಸಾಲದು, ಸಾಧಿಸುವ ಮನಸ್ಸಿರಬೇಕು. ಸಾಹಿತ್ಯ ಕೃಷಿ ಎನ್ನುವುದು ಒಂದು ತಪಸ್ಸು ಇದ್ದಂತೆ ಎಂದು 2024ರ ಕುಂಡ್ಯೋಳಂಡ ಹಾಕಿ ನಮ್ಮೆಯ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಅಭಿಪ್ರಾಯಪಟ್ಟಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 87ನೇ ಪುಸ್ತಕ ಹಾಗೂ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ರಚಿಸಿರುವ 7ನೇ ಕೊಡವ ಪುಸ್ತಕ “ಕೂಪದಿ”ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಾಹಿತ್ಯ ಎನ್ನುವುದು ಓದುಗನ ಮನಸ್ಸಿನಾಳಕ್ಕೆ ಪ್ರಭಾವ ಬೀರಬಲ್ಲ ಕ್ಷೇತ್ರವಾಗಿದ್ದು, ಸಾಹಿತ್ಯ ರಚನೆ ಕಷ್ಟದ ಕೆಲಸವಾಗಿದೆ. ಸಾಹಿತಿಯ ಮನಸ್ಸಿನಿಂದ ಬರಹದ ರೂಪದಲ್ಲಿ ಹೊರ ಬರುವ ಅನುಭವ ಓದುಗನ ಮನಸ್ಸು ಸೇರುತ್ತದೆ. ಬರವಣಿಗೆಯನ್ನು ತಪಸ್ಸಿನಂತೆ ಕಾಣಬೇಕು ಮತ್ತು ಹಿಡಿತ ಸಾಧಿಸಬೇಕು. ಕಣ್ಣು, ಕಿವಿ ಮತ್ತು ಹೃದಯಕ್ಕೆ ಕೆಲಸ ಕೊಡಬೇಕು. ಸಾಹಿತಿಗಳು ಯಾವುದೇ ಸಭೆ, ಸಮಾರಂಭ ಮತ್ತಿತರ ಪ್ರದೇಶಗಳಿಗೆ ತೆರಳಿದರೂ ಬರವಣಿಗೆಯ ಮೂಲಕ ತಮ್ಮ ಅನುಭವವನ್ನು ಓದುಗರಿಗೆ ಹಂಚಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಅನುಭವಕ್ಕೆ…

Read More

ಸೋಮವಾರಪೇಟೆ ಮಾ.20 NEWS DESK : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಅತ್ಯಗತ್ಯ, ಧೈರ್ಯದಿಂದ ಒತ್ತಡ ಮುಕ್ತವಾಗಿ ಪರೀಕ್ಷೆ ಬರೆದರೆ, ಕಲಿಕೆಗೆ ಅನುಗುಣವಾಗಿ ಅಂಕಗಳನ್ನು ಗಳಿಸಬಹುದು ಎಂದು ಕಿರಿಕೊಡ್ಲಿ ಮಠಾಧೀಶರರಾದ ಸದಾಶಿವ ಸ್ವಾಮೀಜಿ ಹೇಳಿದರು. ಪಟ್ಟಣದ ಎಸ್.ಜೆ.ಎಂ.ಪ್ರೌಡಶಾಲೆ ಆವರಣದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪರೀಕ್ಷೆಗೆ ತಯಾರಿ ಹೇಗಿರಬೇಕು ಎಂಬ ವಿಷಯದಲ್ಲಿ ಸದಾಶಿವಸ್ವಾಮೀಜಿ ಉಪನ್ಯಾಸ ನೀಡಿದರು. ಇಂದು ಸ್ಪರ್ಧಾತ್ಮಕ ಯುಗ, ನಿರಂತರ ಓದು ನಮ್ಮಲ್ಲಿ ಜ್ಞಾನ ತುಂಬಿಸುತ್ತದೆ. ಇಂದು ಕಲಿತ ವಿಷಯ ಕೊನೆತನಕ ನಮ್ಮ ಜೊತೆಯಲ್ಲೇ ಇರುತ್ತದೆ. ಓದು ಕೇವಲ ಪರೀಕ್ಷೆ ಎದುರಿಸುವುದಕ್ಕೆ ಮಾತ್ರವಲ್ಲ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ನೆರವಾಗುತ್ತದೆ. ಶಿಕ್ಷಕರು ಹೇಳಿದ ವಿಷಯಗಳನ್ನು ತಲೆಯಲ್ಲಿಟ್ಟುಕೊಳ್ಳಬೇಕು ಎಂದರು. ಪರೀಕ್ಷೆಯ ಬಗ್ಗೆ ಭಯಬೇಡ ಹತ್ತು ತಿಂಗಳಲ್ಲಿ ನೀವು ಕಲಿತಿದ್ದನ್ನು ನೀವು ಬರೆಯುತ್ತೀರಿ ಅಷ್ಟೇ, ಆದ್ದರಿಂದ ಮೊದಲು ಪ್ರಶ್ನೆ ಪತ್ರಿಕೆಯನ್ನು ಗಮನವಿಟ್ಟು ಓದಿರಿ ಸುಲಭದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಮಾತನಾಡಿ,…

Read More

ಸೋಮವಾರಪೇಟೆ ಮಾ.20 NEWS DESK : ಮಹದೇಶ್ವರ ಬ್ಲಾಕ್ ರಸ್ತೆಯಲ್ಲಿರುವ ಅಬಕಾರಿ ಇಲಾಖೆಯ ಮುಂಭಾಗ ರಸ್ತೆ ಬದಿ ನಿಲ್ಲಿಸಿರುವ ವಾಹನ ಹಾಗೂ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ರಸ್ತೆ ಬದಿಯಲ್ಲಿ ಹಾಕಿರುವ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ನಗರ ಘಟಕ ಆಗ್ರಹಿಸಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಮತ್ತು ಅಬಕಾರಿ ಇಲಾಖಾ ಕಚೇರಿಗೆ ಮನವಿ ಸಲ್ಲಿಸಿರುವ ಕಾರ್ಯಕರ್ತರು, ತಕ್ಷಣವೇ ತೆರವುಗೊಳಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಕರವೇ ನಗರ ಘಟಕದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಮಡಿಕೇರಿ ರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಕಟ್ಟಡಗಳನ್ನು ಒಡೆದ ಕಲ್ಲು, ಮಣ್ಣು ಗಾರೆ, ಇಟ್ಟಿಗೆ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಸುರಿಯಲಾಗಿದೆ. ಅಂತೆಯೇ ಅಬಕಾರಿ ಇಲಾಖೆಯಿಂದ ವಶಪಡಿಸಿಕೊಂಡ ವಾಹನವನ್ನು ಕಚೇರಿ ಮುಂಭಾಗದ ರಸ್ತೆ ಬದಿಯಲ್ಲಿ ನಿಲುಗಡೆಗೊಳಿಸಿದ್ದು, ಇದರಿಂದಾಗಿ ವಾಹನ ಮತ್ತು ಸಾರ್ವಜನಿಕರ ಸಂಚಾರಕ್ಕೆ ತೊಡಕಾಗಿದೆ ಎಂದರು. ತಕ್ಷಣ ಈ ಬಗ್ಗೆ ಗಮನ ಹರಿಸಿ ತ್ಯಾಜ್ಯ-ವಾಹನಗಳನ್ನು ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಕರವೇ ವತಿಯಿಂದ…

Read More

ಮಡಿಕೇರಿ ಮಾ.20 NEWS DESK : ಸ್ನಾನಕ್ಕೆಂದು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಗುಡ್ಡೆಹೊಸೂರು ಬಳಿ ಕಾವೇರಿ ನದಿಯಲ್ಲಿ ನಡೆದಿದೆ. ಮೃತನನ್ನು ಏಳನೇ ಹೊಸಕೋಟೆಯ ತೊಂಡೂರು ನಿವಾಸಿ ಸುರೇಶ್ ಆಚಾರ್ಯ ಎಂಬುವವರ ದ್ವಿತೀಯ ಪುತ್ರ ಪ್ರದೀಪ್ (19) ಎಂದು ಗುರುತಿಸಲಾಗಿದೆ. ಬುಧವಾರ ತನ್ನ ಸ್ನೇಹಿತರೊಂದಿಗೆ ಗುಡ್ಡೆಹೊಸೂರು ಸಮೀಪದ ಬಾಳುಗೋಡು ಎಂಬಲ್ಲಿಗೆ ತೆರಳಿದ ಪ್ರದೀಪ್ ಕಾವೇರಿ ನದಿಗೆ ಇಳಿದಿದ್ದ. ಈ ಸಂದರ್ಭ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ. ಮೀನಿಗೆ ಹಾಕಿದ್ದ ಗಾಳದ ವಯರ್ ಪ್ರದೀಪ್ ನ ಕುತ್ತಿಗೆಗೆ ಸಿಲುಕಿತ್ತು ಎಂದು ಹೇಳಲಾಗಿದೆ. ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮೃತದೇಹವನ್ನು ಹೊರತೆಗೆದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

ನಾಪೋಕ್ಲು ಮಾ.20 NEWS DESK : ಸಮೀಪದ ಹಳೆ ತಾಲೂಕಿನ ಭಗವತಿ ದೇವಾಲಯದ ವಾರ್ಷಿಕ ಉತ್ಸವು ಶ್ರದ್ಧಾಭಕ್ತಿಯಿಂದ ನಡೆಯಿತು. ಮಾ.17 ರಿಂದ ಉತ್ಸವ ಆರಂಭಗೊಂಡಿದ್ದು, ದೇವರ ನೃತ್ಯಬಲಿ, ಸಾಂಪ್ರದಾಯಿಕ ಎತ್ತು ಹೋರಾಟ, ಬೊಳಕಾಟ್ ಪ್ರದರ್ಶನ ಬಳಿಕ ವಿವಿಧ ಪೂಜಾ ವಿಧಾನಗಳು ಜರುಗಿತು. ನಂತರ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಡೆಯಿತು. ದೇವಾಲಯದ ಮುಖ್ಯ ಅರ್ಚಕ ಹರೀಶ್ ಭಟ್ ಹಾಗೂ ತಂತ್ರಿಗಳಾಗಿ ಗಿರೀಶ್ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಟ್ಟರು. ಪಟ್ಟಣಿ ಹಬ್ಬದಲಿ ಪಾಲ್ಗೊಂಡಿದ್ದ ಭಕ್ತರಿಗೆ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಸಂಜೆ ದೇವರ ನೃತ್ಯಬಲಿ ಜರುಗಿತು. ಉತ್ಸವದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಲ್ಲೆಟಿರ ಗುರುವಪ್ಪ, ಕಾರ್ಯದರ್ಶಿ ಕಂಗಂಡ ಜಾಲಿ ಪೂವಪ್ಪ, ಉಪಾಧ್ಯಕ್ಷ ಬೊಪ್ಪಂಡ ಕುಶಾಲಪ್ಪ , ಹಿರಿಯರಾದ ಬೊಪ್ಪೆರ ಕಾವೇರಪ್ಪ , ದೇವತಕ್ಕರಾದ ನಾಟೋಳoಡ ಕುಟುಂಬಸ್ಥರು ಹಾಗೂ ದೇವಾಲಯದ ಇತರ ತಕ್ಕ ಮುಖ್ಯಸ್ಥರು, ಊರ ಹಾಗೂ ಪರ ಊರಿನ ಭಕ್ತಾದಿಗಳು ಪಾಲ್ಗೊಂಡಿದ್ದರು. ಮಾ.21ರಂದು ವಿವಿಧ ಕೋಲಗಳೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ. ವರದಿ :…

Read More

ವಿರಾಜಪೇಟೆ ಮಾ.20 NEWS DESK  : ವಿವಿಧತೆಯಲ್ಲಿ ಏಕತೆ ಕಂಡ ದೇಶ ಭಾರತ. ಭೌವ್ಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳಸಬೇಕು ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ವಿರಾಜಪೇಟೆ ಮೀನುಪೇಟೆಯ ಚೈತನ್ಯ ಮಠಪುರದ ಶ್ರೀ ಮುತ್ತಪ್ಪ ದೇವಾಲಯ 80ನೇ ವಾರ್ಷಿಕ ತೆರೆ ಮಹೋತ್ಸವ ಮತ್ತು ನೂತನವಾಗಿ ನಿರ್ಮಿಸಲಾದ ದೇವಾಲಯದ ಮಹಾದ್ವಾರ  ಉದ್ಘಾಟಸಿ ಮಾತನಾಡಿದ ಅವರು, ದೇಗುಲಗಳು ಭಕ್ತಿಯ ಶ್ರದ್ಧಾಕೇಂದ್ರಗಳು,  ಪೂರ್ವಜರಿಂದ ಪೂಜಿಸಲ್ಪಟ್ಟ ಆಲಯಗಳನ್ನು ಉಳಿಸಬೇಕು. ಈ ನಿಟ್ಟಿನಲ್ಲಿ ಹಬ್ಬದ ಆಚರಣೆಗಳು, ವಾರ್ಷಿಕ ಉತ್ಸವಗಳು ಜೀವಂತವಾಗಿರಿಸುವು ಸನಾತನ ಹಿಂದೂ ಧರ್ಮದ ಪ್ರತಿಯೋಬ್ಬರ ಕರ್ತವ್ಯವಾಗಬೇಕು ಎಂದರು. ಧಾರ್ಮಿಕ ಕೇಂದ್ರ ಭಕ್ತಿಯ ಆಲಯಗಳಲ್ಲಿ ನಡೆಯುವ ಭಕ್ತಿ ಪ್ರದಾನ ಆಚರಣೆಗಳಿಂದ ದೇಶವು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ದೇವಾಲಯಗಳು ಸನಾತನ ಹಿಂದೂ ಧರ್ಮದ ಪ್ರತೀಕವಾಗಿದೆ. ಭಕ್ತಿ ಪ್ರದಾನವಾಗಿ ಆಚರಿಸುವ ಆಚರಣೆಗಳು, ಸಂಸ್ಕೃತಿ, ಪದ್ದತಿಗಳು, ಅನ್ಯ ಧರ್ಮಕ್ಕೂ ಪರಿಚಯಿಸಬೇಕು. ಈ ಹಿನ್ನೆಲೆಯಲ್ಲಿ ಸರ್ವರೂ ಧರ್ಮ ಪರಿಪಾಲನೆಗೆ ಮುಂದಾಗಬೇಕು ಎನ್ನುವ ಕಲ್ಪನೆ ನಮದಾಗಬೇಕು. ರಾಜ್ಯ ಮತ್ತು ದೇಶದ ಇತರ…

Read More