ಮಡಿಕೇರಿ ಮಾ.19 NEWS DESK : ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐ.ಕ್ಯೂ.ಎ.ಸಿ ಘಟಕ, ರಾಜ್ಯಶಾಸ್ತ್ರ ವಿಭಾಗ, ಮಾನವ ಹಕ್ಕುಗಳ ಸಮಿತಿ ಹಾಗೂ ಯುವಸ್ಪಂದನ, ಬೆಂಗಳೂರು ನಿಮಾನ್ಸ್ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ “ಜೀವನ ಕೌಶಲ್ಯ ತರಬೇತಿ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ ಉದ್ಘಾಟಿಸಿ, ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಬೆಂಗಳೂರು ನಿಮಾನ್ಸ್ ನ ಜೀವನ ಕೌಶಲ್ಯ ತರಬೇತಿ ಮತ್ತು ಆಪ್ತ ಸಮಾಲೋಚನಾ ಸೇವೆಗಳ ವಿಭಾಗದ ಸಂಯೋಜನಾಧಿಕಾರಿ ಆರ್.ಎನ್.ಶ್ರೀವಿದ್ಯಾ ಮಾತನಾಡಿ, ಇಂದಿನ ಯುವ ಜನಾಂಗವು ಜೀವನ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಸಾಮಾಜಿಕ ಬದುಕಿನಲ್ಲಿ ಹಲವು ಬದಲಾವಣೆಗಳನ್ನು ತರವುದರೊಂದಿಗೆ, ವ್ಯಕ್ತಿಗಳ ಭಾವನೆಗಳು ಮತ್ತು ಒತ್ತಡಗಳ ನಿರ್ವಹಣೆಯಿಂದ ಸುಂದರ ಬದುಕಿನ ನಿರ್ಮಾಣ ಸಾಧ್ಯ ಎಂದು ಹಲವಾರು ಚಟುವಟಿಕೆಗಳ ಉದಾಹರಣೆಯೊಂದಿಗೆ ತಿಳಿಸಿಕೊಟ್ಟರು. ನಿಮಾನ್ಸ್ ಆಪ್ತ ಸಮಾಲೋಚನಾ ಸೇವೆಗಳ ಸಹಾಯಕರಾದ ಸೌಜನ್ಯ ಮಾತನಾಡಿ, ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿರುವ ಯುವ ಸ್ಪಂದನ ವೇದಿಕೆಯ…
ಲೇಖಕ: admin
ಮಡಿಕೇರಿ ಮಾ.19 NEWS DESK : ಶುಕ್ರವಾರದಂದು ನಡೆಯುವ ಲೋಕಸಭಾ ಚುನಾವಣೆಯ ದಿನಾಂಕವನ್ನು ಬದಲಾಯಿಸಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ನ ಕೊಡಗು ಜಿಲ್ಲಾ ಸಮಿತಿ ಮನವಿ ಮಾಡಿದೆ. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ ಸಮಿತಿಯ ಪ್ರಮುಖರು, ಶುಕ್ರವಾರದ ಬದಲು ಬೇರೆ ದಿನಗಳಲ್ಲಿ ಚುನಾವಣೆ ನಡೆಸಬೇಕೆಂದು ಕೋರಿದರು. ಕೊಡಗಿನ ಮುಸ್ಲಿಂ ಸಮುದಾಯ ಲೋಕಸಭಾ ಚುನಾವಣೆಯ ಬಗ್ಗೆ ಮಹತ್ವದ ಕಾಳಜಿಯನ್ನು ಹೊಂದಿದೆ. ಆದರೆ ಶುಕ್ರವಾರದಂದು ಮುಸ್ಲಿಂ ಸಮುದಾಯಕ್ಕೆ ಅತ್ಯಂತ ಪವಿತ್ರವಾದ ದಿನವಾಗಿದೆ. ಚುನಾವಣೆ ನಡೆಯುವ ಏ.19 ಮತ್ತು 26 ರ ಶುಕ್ರವಾರದಂದು ಮುಸ್ಲಿಂ ಸಮುದಾಯದವರು ಜುಮುಆದಲ್ಲಿ (ಶುಕ್ರವಾರ ಸಭೆ) ತೊಡಗುತ್ತಾರೆ. ಇದರಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಬೂತ್ ಏಜೆಂಟರಿಗೆ ಸವಾಲು ಎದುರಾಗಲಿದೆ. ಆದ್ದರಿಂದ, ಲೋಕಸಭಾ ಚುನಾವಣೆಯ ದಿನಾಂಕವನ್ನು ಶುಕ್ರವಾರ ಹೊರತುಪಡಿಸಿ ಇತರ ಯಾವುದೇ ದಿನಕ್ಕೆ ಬದಲಾಯಿಸುವಂತೆ ಚುನಾವಣಾ ಆಯೋಗದ ಬಳಿ ಮನವಿ ಮಾಡುತ್ತಿರುವುದಾಗಿ ತಿಳಿಸಿದರು. ಮನವಿ ಪತ್ರ ಸಲ್ಲಿಸುವ ಸಂದರ್ಭ ಸಮಿತಿಯ ಅಧ್ಯಕ್ಷ…
ಮಡಿಕೇರಿ ಮಾ.19 NEWS DESK : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಅತ್ಯಗತ್ಯವಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಬೇಕೆಂದು ಕಿರಿಕೊಡ್ಲಿ ಮಠಾಧೀಶರರಾದ ಸದಾಶಿವ ಸ್ವಾಮೀಜಿ ಕರೆ ನೀಡಿದ್ದಾರೆ. ಸೋಮವಾರಪೇಟೆ ಪಟ್ಟಣದ ಎಸ್.ಜೆ.ಎಂ ಪ್ರೌಢಶಾಲೆ ಆವರಣದಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪರೀಕ್ಷಾ ಪರಿಕರ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ನಾವು ಎಷ್ಟು ಕಲಿತರು ಸಾಲದು, ಪಠ್ಯವನ್ನು ಗಮನವಿಟ್ಟು ಕೇಳಬೇಕು, ಏಕಾಗ್ರತೆಯಿಂದ ಓದಬೇಕು. ಪರೀಕ್ಷೆಯ ಬಗ್ಗೆ ಎಂದಿಗೂ ಭಯ ಪಡಬಾರದು, ಹತ್ತು ತಿಂಗಳಲ್ಲಿ ನೀವು ಕಲಿತದ್ದನ್ನು ನೀವೇ ಬರೆಯುತ್ತೀರಿ. ಮೊದಲು ಪ್ರಶ್ನೆ ಪತ್ರಿಕೆಯನ್ನು ಗಮನವಿಟ್ಟು ಓದಿರಿ, ಸುಲಭದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ಎಂದು ಸಲಹೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಅವರು ವಿದ್ಯಾರ್ಥಿಗಳು ಸಹನೆಯಿಂದ ಪರೀಕ್ಷೆ ಬರೆಯುವ ಮನೋಸ್ಥಿತಿ ಬೆಳೆಸಿಕೊಳ್ಳಬೇಕು, ಭಯ ಪಡುವ ಅಗತ್ಯವಿಲ್ಲ. ಪರೀಕ್ಷೆಯ ಸಮಯ ಮೊದಲ 15 ನಿಮಿಷ ಪ್ರಶ್ನೆಗಳನ್ನು ಓದಲು ಮೀಸಲಾಗಿರುತ್ತದೆ. ಆದ್ದರಿಂದ ಮೊದಲು…
ತಲೆಹೊಟ್ಟು ಅಪಾಯಕಾರಿ ಸಮಸ್ಯೆಯಲ್ಲ :: ತಲೆಹೊಟ್ಟು ಅಪಾಯಕಾರಿ ಸಮಸ್ಯೆಯಲ್ಲದಿದ್ದರೂ ಅದು ಅತಿಯಾದರೆ ಒಂದು ರೀತಿಯಲ್ಲಿ ಅಸಹ್ಯ ಎನ್ನಿಸುವುದು ಸುಳ್ಳಲ್ಲ. ತಲೆಹೊಟ್ಟಿಗೆ ಪ್ರಮುಖ ಕಾರಣ ನಾವು ಸೇವಿಸುವ ಆಹಾರವೇ ಎಂಬುದು ಈಗಾಗಲೇ ಸಾಬೀತಾಗಿದೆ. ಆಹಾರಕ್ರಮದಲ್ಲಿ ಬದಲಾವಣೆಯಾಗದೆ ತಲೆಹೊಟ್ಟಿಗೆ ಎಷ್ಟೇ ಚಿಕಿತ್ಸೆ ನೀಡಿದರೂ ಪ್ರಯೋಜನವಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಪದಾರ್ಥಗಳ ಸೇವನೆ :: ಜಂಕ್‌ಫುಡ್ ಮತ್ತು ಎಣ್ಣೆ ಪದಾರ್ಥಗಳನ್ನು ಜಾಸ್ತಿ ಸೇವಿಸುವುದರಿಂದಲೂ ಹೊಟ್ಟಿನ ಸಮಸ್ಯೆ ಹೆಚ್ಚುತ್ತದೆ. ಚಾಕೋಲೇಟ್, ಸಕ್ಕರೆ, ಮಾಂಸ, ಬ್ರೆಡ್, ಚೀಸ್, ವೈನ್ ಮುಂತಾದ ಪದಾರ್ಥಗಳಿಂದ ಆದಷ್ಟು ದೂರವಿರಿ. ನೀರನ್ನು ಹೆಚ್ಚಾಗಿ ಕುಡಿಯಿರಿ. ಒತ್ತಡ ಹೆಚ್ಚಾದರೂ ತಲೆಹೊಟ್ಟು ಹೆಚ್ಚುತ್ತದೆ ಎಂಬುದು ನೆನಪಿರಲಿ. ತಲೆಹೊಟ್ಟು ನಿವಾರಣೆಗೆ ಕೆಲ ಸುಲಭೋಪಾಯಗಳು ಇಲ್ಲಿವೆ :: ಮೊಸರು ಹೊಟ್ಟು ನಿವಾರಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಆದ್ದರಿಂದ 15 ದಿನಕ್ಕೊಮ್ಮೆ ತಲೆಗೆ ಮೊಸರನ್ನು ಹಚ್ಚಿ ಒಂದು ಗಂಟೆ ಬಿಟ್ಟು ತಲೆಸ್ನಾನ ಮಾಡಿ. ಇದರಿಂದ ಹೊಟ್ಟು ನಿವಾರಣೆಯಾಗುವುದಷ್ಟೇ ಅಲ್ಲ, ಕೂದಲೂ ಕಾಂತಿಯುತವಾಗುತ್ತದೆ. 2. 2 ಚಮಚ ವಿನೆಗರ್‌ಅನ್ನು 6 ಚಮಚ ನೀರಿಗೆ ಹಾಕಿ.…
ಮಡಿಕೇರಿ ಮಾ.19 NEWS DESK : ಮಡಿಕೇರಿ-ಹೆಬ್ಬಟ್ಟಗೇರಿಯ ಜಾಂಗೇರಿ ಪೈಸಾರಿಯಲ್ಲಿ ಮಾ.24 ರಂದು ಶ್ರೀ ಸ್ವಾಮಿ ಕೊರಗಜ್ಜನ ದೈವದ 7ನೇ ವರ್ಷದ ವಾರ್ಷಿಕ ಕೋಲ ಹಾಗೂ ಹರಕೆ ಕೋಲ ನಡೆಯಲಿದೆ. ಮಾ.22 ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, 24 ರಂದು ಬೆಳಿಗ್ಗೆ 8.30ಕ್ಕೆ ಭಂಡಾರ ತೆಗೆಯುವುದು, 10.30 ಗಂಟೆಗೆ ಶ್ರೀ ಸ್ವಾಮಿ ಕೊರಗಜ್ಜನ ದೈವ ಕೋಲ ನಡೆಯಲಿದ್ದು, ಮದ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೈವಸ್ಥಾನದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8277132434, 9449933246, 8762603642 ಸಂಪರ್ಕಿಸ ಬಹುದಾಗಿದೆ.
ವಿರಾಜಪೇಟೆ ಮಾ.18 NEWS DESK : ವಿರಾಜಪೇಟೆಯ ಬಿಟ್ಟಂಗಾಲ ಗ್ರಾ.ಪಂ ವ್ಯಾಪ್ತಿಯ ಪೆಗ್ಗರಿಕಾಡುವಿನಲ್ಲಿ ಮಹಾಶಿವರಾತ್ರಿಯ ಅಂಗವಾಗಿ ನವೋದಯ ಯುವಕ ಸಂಘದ ವತಿಯಿಂದ ಗ್ರಾಮೀಣ ಕ್ರೀಡಾಕೂಟ ನಡೆಯಿತು. ಬಿಟ್ಟಂಗಾಲ ಗ್ರಾ.ಪಂ ಅಧ್ಯಕ್ಷ ಮೂಕಚಂಡ ಪ್ರಸನ್ನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಯುವ ಪೀಳಿಗೆಗೆ ಉತ್ತಮ ಸಂಸ್ಕೃತಿಯನ್ನು ಬೆಳೆಸುವಲ್ಲಿ ಯುವಕರ ಪಾತ್ರ ಬಹಳ ಮುಖ್ಯ ಎಂದರು. ನವೋದಯ ಯುವಕ ಸಂಘದ ಅಧ್ಯಕ್ಷ ಬಿ.ಎಮ್.ದಿನೇಶ್ ಮಾತನಾಡಿ, ಶಿವರಾತ್ರಿ ಪ್ರಾಮುಖ್ಯತೆಯನ್ನು ತಿಳಿಸಿದರು. ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಪಿ.ಎನ್. ಶಾರದ ಮತ್ತು ನವೋದಯ ಯುವಕ ಸಂಘದ ಉಪಾಧ್ಯಕ್ಷ ಟಿ.ಪಿ ಸುಬ್ಬಯ್ಯ ಹಾಜರಿದ್ದರು. ಬಳಿಕ ವಿವಿಧ ಗ್ರಾಮೀಣ ಕ್ರೀಡಾಕೂಟಗಳು ನಡೆಯಿತು.
ಮಡಿಕೇರಿ ಮಾ.18 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಡಿಕೇರಿಯ ಕರ್ನಾಟಕ ಇನ್ಸ್‍ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ನ ಸಂಯುಕ್ತಾಶ್ರಯದಲ್ಲಿ ಮಾ.22 ರಂದು ಡಾ.ನಾ.ಡಿಸೋಜ ಮಕ್ಕಳ ಸಾಹಿತ್ಯ ಪುರಸ್ಕಾರ ದತ್ತಿ ಉಪನ್ಯಾಸ ಮತ್ತು ಕಥಾ ಸ್ಪರ್ಧೆ ಹಾಗೂ ನಾಟಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 10.30 ಗಂಟೆಗೆ ನಗರದ ಕರ್ನಾಟಕ ಇನ್ಸ್‍ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕರ್ನಾಟಕ ಇನ್ಸ್‍ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್‍ನ ಪ್ರಾಚಾರ್ಯರಾದ ಆರ್.ಎಸ್.ರೇಣುಕಾ ಉದ್ಘಾಟಿಸಲಿದ್ದು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯೂ ಪಾಲ್ಗೊಳ್ಳಲಿದ್ದು, ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಕಡ್ಲೆರ ತುಳಸಿ ಮೋಹನ್ ಉಪಸ್ಥಿತರಿರುವರು. 80ನೇ ಅಖಿಲ…
ಮಡಿಕೇರಿ ಮಾ.18 NEWS DESK : ಸೋಮವಾರಪೇಟೆ ತಾಲೂಕಿನ ವಾಲ್ನೂರು ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ರಾಮ ದೇವರ ವಾರ್ಷಿಕ ಉತ್ಸವವು ಮಾ.24 ರಿಂದ ಮಾ.26ರ ವರೆಗೆ ನಡೆಯಲಿದೆ. ದೇವಾಲಯದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ. ಮಾ.24 ರಂದು ರಾತ್ರಿ 8 ಗಂಟೆಗೆ ಕದಳಿ ಕಟ್ಟುವುದು, ಮಾ.25 ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಮಾದೇಶ್ವರ ಸ್ವಾಮಿ ಪರ್ವ, ಮಧ್ಯಾಹ್ನ 3 ಗಂಟೆಗೆ ತೆಂಗಿನ ಕಾಯಿಗೆ ಗುಂಡು ಹಾರಿಸುವುದು, ಸಂಜೆ 5 ಗಂಟೆಗೆ ಮಹಾಪೂಜೆ, ಮಂಗಳಾರತಿ, ಸಂಜೆ 6 ಗಂಟೆಗೆ ಉತ್ಸವಮೂರ್ತಿ ಬಸವಣ್ಣ ದೇವರ ಮೆರವಣಿಗೆ ನಡೆಯಲಿದೆ. ಮಾ.26 ರಂದು ಮಧ್ಯಾಹ್ನ 12 ಗಂಟೆಗೆ ಸಾಮೂಹಿಕ ಭೋಜನದ ಪ್ರಸಾದ, ಸಂಜೆ 4.30 ಗಂಟೆಗೆ ಕೊಂಡ ಹಾಯುವುದು, ಸಂಜೆ 5 ಗಂಟೆಗೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ತಕ್ಕರು, ಅಧ್ಯಕ್ಷರು ಹಾಗೂ ಸಮಿತಿ…
ವಿರಾಜಪೇಟೆ ಮಾ.18 NEWS DESK : ಬೆಂಗಳೂರಿನ ಮತ್ತಿಕೆರೆಯ ಲಲಿತ ಆಡಿಟೋರಿಯಂನಲ್ಲಿ ನಡೆದ ಕರುನಾಡ ನಿಧಿ ಪತ್ರಿಕೆ ಉದ್ಘಾಟನಾ ಸಮಾರಂಭದಲ್ಲಿ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವಿದ್ಯಾರ್ಥಿಗಳಾದ ಲಾವಣ್ಯ ಮತ್ತು ಶ್ರೇಯಾಸೋಮಣ್ಣ ಭಾಗವಹಿಸಿ ನೃತ್ಯ ಪ್ರದರ್ಶನ ನೀಡಿದ್ದರು. ಇದೇ ಸಂದರ್ಭ ಇಬ್ಬರು ನೃತ್ಯಪಟುಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭಕಾರ್ಯಕ್ರಮದಲ್ಲಿ ಡಾ.ಕೆಂಚನೂರು ಶಂಕರ್, ಕಂಠೀರವ ಸ್ಟುಡಿಯೋದ ಅಧ್ಯಕ್ಷರಾದ ಮಹಬೂ ಪಾಷ, ಶಣ್ಮುಗಂ, ಆಯೋಜಕರಾದ ಸಲ್ಮಾನ್ ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು.
ಮಡಿಕೇರಿ ಮಾ.18 NEWS DESK : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಆಯ್ಕೆ ಸಂದರ್ಭ ಈ ಬಾರಿ ಕೂಡ ಕೊಡಗಿನವರಿಗೆ ಅನ್ಯಾಯ ಮಾಡಲಾಗಿದೆ ಎಂದು ಚಿಂತಕ ಸೂದನ ಎಸ್.ಈರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅರೆಭಾಷೆಯ ಸಾಹಿತ್ಯ-ಸಂಸ್ಕೃತಿ ಆಚಾರ-ವಿಚಾರಗಳನ್ನು ಪೂರ್ವಕಾಲದಿಂದಲೂ ಉಳಿಸಿ-ಬೆಳೆಸಿಕೊಂಡು ಬಂದಿರುವ ಕೊಡಗಿನ ಅರೆಭಾಷಿಕರನ್ನು ಕಡೆಗಣಿಸುವ ಸರಕಾರದ ಪ್ರಯತ್ನ ಖಂಡನೀಯವೆಂದು ತಿಳಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ತಲೆತಲಾಂತರಗಳಿಂದ ಎಲ್ಲಾ ಭಾಷಿಕರೊಂದಿಗೆ ಸೌಹಾರ್ದತೆಯಿಂದ ನಡೆದುಕೊಳ್ಳುತ್ತಾ ಅರೆಭಾಷೆ ಮತ್ತು ಸಾಹಿತ್ಯವನ್ನು ಬೆಳೆಸುತ್ತಿರುವ ಅರೆಭಾಷಿಕರಿಗೆ ಅನ್ಯಾಯವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಅನೇಕ ವರ್ಷಗಳಿಂದ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಿರುವ ಅರೆಭಾಷಿಕ ನಾಯಕರುಗಳು ಸರಕಾರದ ಈ ಮಲತಾಯಿ ಧೋರಣೆಯನ್ನು ಸಹಿಸಿಕೊಂಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಸುಮಾರು 25 ವರ್ಷಗಳ ನಂತರ ಜಿಲ್ಲೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರುಗಳ ಆಯ್ಕೆಯಾಗಿದೆ. ಇದಕ್ಕೆ ಪ್ರತಿಯಾಗಿ ಮತ್ತು ಅರೆಭಾಷಿಕ ಕಾರ್ಯಕರ್ತರ ಶ್ರಮಕ್ಕೆ ಪ್ರತಿಫಲವಾಗಿ ಅಕಾಡೆಮಿಯ ಅಧ್ಯಕ್ಷ ಸ್ಥಾನವನ್ನು ಕೊಡಗು ಜಿಲ್ಲೆಗೆ ನೀಡಬೇಕಾಗಿತ್ತು. ಕಳೆದ ಅವಧಿಯಲ್ಲಿ ದಕ್ಷಿಣ ಕನ್ನಡದವರು ಅಧ್ಯಕ್ಷ…






