ಲೇಖಕ: admin

ವಿರಾಜಪೇಟೆ ಜ.20 : NEWS DESK : ಕೊಡಗು ಬಾಲವಲೀಕಾರ್ ಉತ್ತಮ ಜೀವನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಜಿ.ನಟರಾಜ್ ಬೋರ್ಕರ್ ಹಾಗೂ ಉಪಾಧ್ಯಕ್ಷರಾಗಿ ಬಿ.ಪಿ. ಸ್ವಾತಿ ಪ್ರಕಾಶ್ ಆಯ್ಕೆಯಾಗಿದ್ದಾರೆ. ವಿರಾಜಪೇಟೆಯಲ್ಲಿ ಇತ್ತೀಚಿಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 15 ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡಿದ್ದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಆಶಾ ನಡೆಸಿಕೊಟ್ಟರು. ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸಂಘದ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಸದಸ್ಯರಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇವೆಂದು ಹೇಳಿದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ಬಿ.ಆರ್. ಉದಯ ಶಂಕರ್ ಸೇರಿಂತೆ ಸದಸ್ಯರುಗಳು ಹಾಜರಿದ್ದರು.

Read More

ಮಡಿಕೇರಿ ಜ.20 : NEWS DESK : ಹನ್ನೆರಡನೇ ಶತಮಾನದಲ್ಲಿ ಕನ್ನಡ ನಾಡನ್ನು ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ಭಕ್ತಿ ಭಂಡಾರಿ ಬಸವೇಶ್ವರರನ್ನು ರಾಜ್ಯದ ಸಾಂಸ್ಕೃತಿಕ ನಾಯಕರಾಗಿ ಘೋಷಿಸಿದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಕ್ರಮ ಸ್ತುತ್ಯಾರ್ಹವಾದುದು ಎಂದು ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ ಹೇಳಿಕೆ ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿದ ಅವರು,  ಸಮಾಜದಲ್ಲಿ ಇಂದಿಗೂ ಸಾಮಾಜಿಕ ಪಿಡುಗಾಗಿಯೇ ಉಳಿದಿರುವ ಜಾತಿ, ವರ್ಣ, ವರ್ಗ, ಲಿಂಗ ಬೇಧದ ವಿರುದ್ದದ ಬಸವೇಶ್ವರರು ಹನ್ನೆರಡನೇ ಶತಮಾನದಲ್ಲಿಯೇ ಧ್ವನಿ ಮೊಳಗಿಸಿದ್ದರು ಎಂದ  ಅವರುಕೊಡಗು ಜಿಲ್ಲೆಯ ಮಹಾ ಜನತೆಯ ಪರವಾಗಿ ರಾಜ್ಯ ಸರ್ಕಾರದ ದಿಟ್ಟಕ್ರಮವನ್ನು ಪ್ರಶಂಸಿಸಿದ್ದಾರೆ.

Read More

ಮಡಿಕೇರಿ ಜ.20 : NEWS DESK :  ದೆಹಲಿಯಲ್ಲಿ ಜ.26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ ಕೊಡಗಿನ ಬಿ.ಎಸ್.ರಕ್ಷಿತಾ ಆಯ್ಕೆಯಾಗಿದ್ದಾಳೆ. ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಅಂತಿಮ ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿರುವ ಇವಳು, ಎನ್.ಸಿ.ಸಿ. ಘಟಕದಿಂದ ಪರೇಡ್ ಗೆ ಆಯ್ಕೆಯಾಗಿದ್ದಾಳೆ. ವಿರಾಜಪೇಟೆಯ ಬೇಟೋಳಿ ಗ್ರಾ.ಪಂ ಮಾಜಿ ಸದಸ್ಯ ಬಿ. ಎನ್. ರಮೇಶ್ ಅವರ ಮೊಮ್ಮಗಳು ಮತ್ತು ಬೆಂಗಳೂರಿನಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ ಅಧಿಕಾರಿ ಬಿ.ಆರ್. ಶುಭ ಶಂಕರ್ ಹಾಗೂ ಶಿಕ್ಷಕಿ ಬಿ.ಎನ್.ನಳಿನಾಕ್ಷಿ ಅವರ ಪುತ್ರಿಯಾಗಿರುವ ರಕ್ಷಿತಾ ಈ ಹಿಂದೆಯೂ ಎನ್. ಸಿ. ಸಿ. ಯ ಅನೇಕ ಶಿಬಿರಗಳು ಹಾಗೂ ತರಬೇತಿಗಳಲ್ಲಿ ಪಾಲ್ಗೊಂಡು ಉತ್ತಮ ಎನ್.ಸಿ.ಸಿ. ಕೆಡೆಟ್ ಎಂಬ ಮನ್ನಣೆಗೂ ಪಾತ್ರಳಾಗಿದ್ದಾಳೆ.

Read More

ಮಡಿಕೇರಿ ಜ.20 : NEWS DESK : ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಸರ್ಕಾರದ ಘೋಷಣೆ ಸ್ವಾಗತಾರ್ಹ ಕ್ರಮ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ತಿಳಿಸಿದ್ದಾರೆ. 12 ನೆ ಶತಮಾನದಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟು ಅಂದಿನ ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಜಾತೀಯತೆ, ಕಂದಾಚಾರದ ವಿರುದ್ಧ ಹೋರಾಡಿದ ಧೀಮಂತರು, ಅಂದೆ ಅನುಭವ ಮಂಟಪ ಸ್ಥಾಪಿಸಿ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದವರು ಎಂದ ಅವರು ಕರ್ನಾಟಕದ ಆಚಾರ, ವಿಚಾರ ಸಾಂಸ್ಕೃತಿಕ ಸೊಗಡನ್ನು ಜಗತ್ತಿಗೆ ಪರಿಚಯಿಸಿದವರು. ಇಂತಹ ಮಹಾನ್ ವ್ಯಕ್ತಿಯನ್ನು ಈ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದ ಮಂತ್ರಿಮಂಡಲ ಬಸವೇಶ್ವರರು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ನಿರ್ಧರಿಸಿ ಘೋಷಿರುವುದು ಸ್ವಾಗತಾರ್ಹ ಹಾಗೂ ಅಭಿನಂದನಾರ್ಹ ಕ್ರಮವಾಗಿದ್ದು, ಬಸವಾನುಯಾಯಿಗಳಲ್ಲಿ ಸಂತಸ ಮೂಡಿಸಿದೆ ಎಂದು ಎಸ್.ಮಹೇಶ್ ತಿಳಿಸಿದ್ದಾರೆ.

Read More

ಮಡಿಕೇರಿ ಜ.20 : NEWS DESK : ಸೋಮವಾರಪೇಟೆ ಪಟ್ಟಣದ ಮಡಿಕೇರಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಗಾಗಿ ಮಣ್ಣು ತೆಗೆಯುತಿರುವುದರಿಂದ ಬಸವೇಶ್ವರ ಪ್ರತಿಮೆ ಕುಸಿಯುವ ಭೀತಿಯ ಹಿನ್ನಲೆಯಲ್ಲಿ ಕಿರಿಕೋಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ಹಾಗೂ ವೀರಶೈವ ಸಮಾಜದ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಲೋಕೋಪಯೋಗಿ ಇಲಾಖೆಯ ಅಭಿಯಂತರರು ಹಾಗೂ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದರು. ಸೇತುವೆ ನಿರ್ಮಾಣ ಕಾರ್ಯ ಸ್ವಾಗತಾರ್ಹ, ಅಭಿವೃದ್ಧಿಕಾರ್ಯಗಳಿಗೆ ನಮ್ಮ ಸಹಕಾರವಿದೆ. ಆದರೆ ಬಸವೇಶ್ವರರ ಪ್ರತಿಮೆಗೆ ಯಾವುದೇ ಹಾನಿಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಸದಾಶಿವ ಸ್ವಾಮೀಜಿ ತಿಳಿಸಿದರು. ಈ ಸಂದರ್ಭ ಅಭಿಯಂತರ ಅರ್ಬಾಜ್ ಅಹಮ್ಮದ್ ಮಾತನಾಡಿ, ಹಲವು ದಿನಗಳಿಂದ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಪ್ರತಿಮೆಯ ಪಕ್ಕದಲ್ಲಿ ಜಾಗರೂಕತೆಯಿಂದ ಕೆಲಸ ಮಾಡಿತಿದ್ದೇವೆ ಆದರೆ ಮಣ್ಣು ಕುಸಿಯುತ್ತಿರುವುದರಿಂದ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಇದು ಅನಿವಾರ್ಯ. ಅಗತ್ಯ ಬಿದ್ದರೆ ಪ್ರತಿಮೆಯನ್ನು ತಾತ್ಕಾಲಿಕವಾಗಿ ತೆಗೆಯಬೇಕಾಗುತ್ತದೆ ಎಂದು ವಿವರಿಸಿದರು. ಪ್ರತಿಮೆಗೆ ಯಾವುದೇ ಹಾನಿಯಾಗದಂತೆ ಕಾರ್ಯ ನಿರ್ವಹಿಸುತ್ತವೆ ಹಾಗೂ ಪ್ರತಿಮೆ ಜಾರದಂತೆ ಬೆಲ್ಟ್ ಹಾಕಿ ಎಳೆದು ಕಟ್ಟಲಾಗಿದೆ…

Read More

ಮಡಿಕೇರಿ ಜ.20 :NEWS DESK : ಹಿಂದೂ ವಿವಾಹಕ್ಕೆ ಸಂಭಂದಿಸಿದಂತೆ ಹಿಂದೂ ಧರ್ಮದಲ್ಲಿ ಜನಿಸಿದ ವಧು-ವರರಿಗೆ ಉತ್ತಮ ಜೋಡಿ ಕಲ್ಪಿಸುವ ನಿಟ್ಟಿನಲ್ಲಿ ವಿಶ್ವ ಹಿಂದೂ ಮಾಂಗಲ್ಯ ಮಂಚ್ ಆರಂಭವಾಗಿದ್ದು, ಜ.12 ರಂದು ವಿರಾಜಪೇಟೆಯಲ್ಲಿ ಕೊಡಗು ಜಿಲ್ಲಾ ಘಟಕ ಉದ್ಘಾಟನೆಗೊಳ್ಳಲಿದೆ ಎಂದು ಮಂಚ್ ನ ರಾಜ್ಯಾಧ್ಯಕ್ಷ ವಿನೋದ್ ತರ್ಮಲ್ ತಿಳಿಸಿದ್ದಾರೆ. ವಿರಾಜಪೇಟೆಯ ಘಟಕದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೂ ಧರ್ಮದ ವಧು ಮತ್ತು ವರರಿಗೆ ಉತ್ತಮ ಬಾಳಸಂಗಾತಿ ದೊರಕಿಸಿಕೊಡಬೇಕು ಎನ್ನುವ ಪರಿಕಲ್ಪನೆಯಿಂದ ಸಂಸ್ಥೆಯನ್ನು ಆರಂಭಿಸಲಾಗಿದ್ದು, ರಾಜ್ಯದ ಇತರ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇದೀಗಾ ಕೊಡಗು ಜಿಲ್ಲೆಗೆ ಸಿಮಿತವಾದಂತೆ ಕೊಡಗು ಜಿಲ್ಲಾ ಘಟಕದ ಕಾರ್ಯ ಕಛೇರಿಯನ್ನು ವಿರಾಜಪೇಟೆ ನಗರದಲ್ಲಿ ಪ್ರಾರಂಭಿಸಲಾಗುವುದು ಎಂದರು. ವಿಶ್ವ ಹಿಂದೂ ಮಾಂಗಲ್ಯ ಮಂಚ್‍ನ ಪ್ರಮುಖರಾದ ಕೆ.ಎನ್.ಶಶಿ ಕುಮಾರ್ ಮಾತನಾಡಿ, ಹಿಂದೂ ಧರ್ಮವನ್ನು ಆಚರಿಸಿಕೊಂಡು ಬರುತ್ತಿರುವ ಜಾತಿ ಉಪ ಜಾತಿಗಳನ್ನು ಒಂದೇ ವೇದಕೆಯಲ್ಲಿ ತರುವುದಾಗಿದೆ. ವಧು ವರರಿಗೆ ಸೂಕ್ತ ಬಾಳ ಸಂಗಾತಿಯನ್ನು ದೊರಕಿಸಿಕೊಡುವುದು ಸಂಸ್ಥೆಯ ಪ್ರಮುಖ ವಿಷಯವಾಗಿದೆ. ವಧು-ವರರು ಸಂಸ್ಥೆಯ…

Read More

ಮಡಿಕೇರಿ ಜ.20 : NEWS DESK : ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಯುವ ಪ್ರಶಸ್ತಿಗೆ ನೆಲಕ್ಕಿ ಯುವತಿ ಮಂಡಳಿಯ ಸದಸ್ಯರಾದ ಜೀವಿತ ಚಿಂತನ್ ಆಯ್ಕೆಯಾಗಿದ್ದಾರೆ. ಜೀವಿತ ಚಿಂತನ್ ಯುವತಿ ಮಂಡಳಿ ವತಿಯಿಂದ ನಡೆಯುವ ವಿವಿಧ ಕಾರ್ಯಕ್ರಮಗಳಾದ ತಾಲ್ಲೂಕು ಯುವಜನ ಮೇಳ ಜಿಲ್ಲಾ ಯುವಜನ ಮೇಳ, ರಾಜ್ಯ ಯುವಜ ಮೇಳ ಹಾಗೂ ಜಿಲ್ಲಾ ಯುವಜನೋತ್ಸವ, ರಾಜ್ಯ ಯುವ ಜನೋತ್ಸವ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದು, ಶ್ರಮದಾನ ರಕ್ತದಾನ, ಶೈಕ್ಷಣಿಕ ಚಟುವಟಿಕೆ, ದಸರಾ ಕಾರ್ಯಕ್ರಮ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಇವರು ಉತ್ತಮ ಹಾಡುಗಾರರು, ನೃತ್ಯಗಾರರು, ಶಿಕ್ಷಕಿಯೂ ಹಾಗೂ ಲೇಖಕರು ಆಗಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಜ.20 ರಂದು ಸುಬ್ರಮಣ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Read More

ನಾಪೋಕ್ಲು ಜ.20 : NEWS DESK : ಮೂರ್ನಾಡು ಪಿಯುಸಿ ಕಾಲೇಜಿನಲ್ಲಿ ನಡೆದ ಡಾನ್ಸ್ ಸ್ಪರ್ಧೆಯಲ್ಲಿ ಸೇಕ್ರಡ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆ ವಿಧ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದರು. ಶಾಲೆಯ ವಿದ್ಯಾರ್ಥಿಗಳಾದ ಕೌಶಲ್ಯ, ಸಾರಿಕಾ, ಸಿ.ಯು.ನಿಶಾನ, ಎಂ.ಬಿ.ಅನ0ತ್, ಪಿ.ಎನ್.ಸಂಶೀರ, ಪಿ.ಎನ್. ನಾದಿಯ, ಕೆ.ಕೆ.ಜಿಯಾದ್, ಪಿ. ಹೆಚ್.ಯಾಶೀರ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ವಹಿಸಿದ್ದರು. ನಾಪೋಕ್ಲು ಶ್ರೀ ರಾಮ ಟ್ರಸ್ಟ್ ಸಂಸ್ಥೆಯ ಪ್ರಾಂಶುಪಾಲ ಕಲಿಯಾಟoಡ ಶಾರದ ಅಪ್ಪಣ್ಣ ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ  

Read More

ನಾಪೋಕ್ಲು ಜ.20 : NEWS DESK : ನರಿಯಂದಡ ಗ್ರಾ.ಪಂ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಹಾಳಾಗಿದ್ದ ಟ್ರಾನ್ಸ್ ಫಾರ್ಮರ್ ಅನ್ನು ಮೂರ್ನಾಡು ಚೆಸ್ಕಾಂ ಇಲಾಖೆ ದುರಸ್ತಿ ಪಡಿಸಿ, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚೇಲಾವರ ಗ್ರಾಮದ ಮನೆಯಪಂಡ ಧೀರಜ್ ತಿಮ್ಮಯ್ಯ ಅವರ ಕಾಫಿ ತೋಟದಲ್ಲಿ ಅಳವಡಿಸಲಾಗಿರುವ ಟ್ರಾನ್ಸ್ ಫಾರ್ಮರ್ ಕಳೆದ ಎರಡು ವರ್ಷಗಳಿಂದ ದುಸ್ಥಿತಿಯಲ್ಲಿದ್ದು .ಇದರಿಂದಾಗಿ ಗ್ರಾಮಕ್ಕೆ ವಿದ್ಯುತ್ ಸಮಸ್ಯೆ ಎದುರಾಗಿತ್ತು. ಪದೇ ಪದೇ ವಿದ್ಯುತ್ ಕಡಿತಗೊಳ್ಳುವುದು, ವಿದ್ಯುತ್ ಪೂರೈಕೆಯಾದರೂ ಲೋ ವೋಲ್ಟೇಜ್ ಕೊರತೆಯಿಂದ ಸಮಸ್ಯೆ ಅನುಭವಿಸುವಂತಾಗಿತ್ತು.. ನೂತನ ಟ್ರಾನ್ಸ್ ಫಾರ್ಮರ್ ಅಳವಡಿಸಿ ಗ್ರಾಮದ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿ ಕೊಡಬೇಕೆಂದು ಗ್ರಾಮಸ್ಥರು ಆಗ್ರಹಿದ್ದು, ಈ ಕುರಿತು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿ ಮೂರ್ನಾಡು ಚೆಸ್ಕಾಂ ಇಲಾಖೆಯ ಜ್ಯೂನಿಯರ್ ಇಂಜಿನಿಯರ್ ತೇಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಟ್ರಾನ್ಸ್ ಫಾರ್ಮರ್ ದುರಸ್ತಿ ಪಡಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವರದಿ : ದುಗ್ಗಳ ಸದಾನಂದ 

Read More

ಮಡಿಕೇರಿ ಜ.20 : Newsdesk : ಆರೋಗ್ಯ ರಕ್ಷಕ ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿಗಳ ಜನ ಆರೋಗ್ಯ ಯೋಜನಾ ಮುಖ್ಯಮಂತ್ರಿಯವರ ಆರೋಗ್ಯ ಕರ್ನಾಟಕ ಯೋಜನೆಯ ಪ್ರಯೋಜನ ಪಡೆಯಲು ಇಂದೇ ಆಯುಷ್ಮಾನ್ ಕಾರ್ಡ್ ಮಾಡಿಸಿ. ಆಯುಷ್ಮಾನ್ ಕಾರ್ಡ್‍ಗಳನ್ನು ನಿಮ್ಮ ಹತ್ತಿರದ ಗ್ರಾಮಒನ್ ನಿಂದ ರೇಷನ್ ಕಾರ್ಡ್ ಲಿಂಕ್ ಆಗಿರುವ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ನೀಡಿ ಉಚಿತವಾಗಿ ಪಡೆಯಿರಿ.ಆಯುಷ್ಮಾನ್ ಕಾರ್ಡ್ ಹೊಂದಿರುವ ಬಿ.ಪಿ.ಎಲ್. ಕಾರ್ಡ್‍ನ ಪ್ರತೀ ಕುಟುಂಬಗಳಿಗೆ ರೂ.5 ಲಕ್ಷ ವಾರ್ಷಿಕ ಮಿತಿಯೊಳಗೆ ಉಚಿತ ಚಿಕಿತ್ಸೆ, ಎ.ಪಿ.ಎಲ್ ಕಾರ್ಡ್‍ನ ಪ್ರತೀ ಕುಟುಂಬಗಳಿಗೆ ಪ್ಯಾಕೇಜ್ ದರದಲ್ಲಿ ಶೇ.30 ರಷ್ಟು ವಾರ್ಷಿಕವಾಗಿ ರೂ.1.5 ಲಕ್ಷದ ಮಿತಿಯೊಳಗೆ ಉಚಿತ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಸಂಸ್ಥೆಗೆ ಭರಿಸುತ್ತದೆ.ಈ ಕಾರ್ಡ್‍ನ ನೆರವಿನಿಂದ ದೇಶದಲ್ಲಿ ಎಲ್ಲೇ ಇದ್ದರೂ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಲು ಪೋರ್ಟಬಿಲಿಟಿ ಸೌಲಭ್ಯವಿದೆ. ತುರ್ತು ಸಂದರ್ಭದಲ್ಲಿ 171 ಚಿಕಿತ್ಸಾ ವಿಧಾನಗಳಿಗೆ ರೋಗಿಯು ನೇರವಾಗಿ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ರೆಫರಲ್ ಅವಶ್ಯಕತೆ ಇರುವುದಿಲ್ಲ. ಈ ಕಾರ್ಡ್‍ನ್ನು 14…

Read More