ಮಡಿಕೇರಿ ಜ.20 : Newsdesk : ಸಂವಿಧಾನ ದಿನಾಚರಣೆ ಪ್ರಯುಕ್ತ ಜ.26 ರಿಂದ 22 ದಿನಗಳ ಕಾಲ ಜಿಲ್ಲೆಯ 103 ಗ್ರಾಮ ಪಂಚಾಯಿತಿಗಳಲ್ಲಿ ಸಂವಿಧಾನ ಜಾಗೃತಿ ಜಾಥ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಶಾಲಾ-ಕಾಲೇಜುಗಳು ಸೇರಿದಂತೆ ಜಿಲ್ಲೆಯ ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಕೋರಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥ ಅಭಿಯಾನ ಸಂಬಂಧ ವಿವಿಧ ಸಮಾಜದ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಂವಿಧಾನ ದಿನಾಚರಣೆ ಪ್ರಯುಕ್ತ ಜ.26 ರಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಸಂವಿಧಾನ ಜಾಗೃತಿ ಜಾಥಗೆ ಚಾಲನೆ ನೀಡಲಿದ್ದಾರೆ. ಬಳಿಕ ಜ.27 ರಿಂದ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಅಭಿಯಾನ ನಡೆಯಲಿದ್ದು, ಗ್ರಾ.ಪಂ.ವ್ಯಾಪ್ತಿಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.ಮೂಲಭೂತ ಹಕ್ಕುಗಳ…
ಲೇಖಕ: admin
ಮಡಿಕೇರಿ ಜ.19 NEWS DESK : ಹಾಕತ್ತೂರು ತೊಂಭತ್ತು ಮನೆ ನಿವಾಸಿ, ಕೊಡಗು ಪತ್ರಕರ್ತರ ಸಂಘದ ಖಜಾಂಚಿ ಟಿ.ಕೆ.ಸಂತೋಷ್ ಅವರ ತಾಯಿ ಟಿ.ಆರ್.ಲಕ್ಷ್ಮಿ (72) ಅವರು ತಾ.19ರಂದು ಅನಾರೋಗ್ಯದಿಂದ ನಿಧನರಾದರು. ಮೃತರು ಓರ್ವ ಪುತ್ರನನ್ನು ಅಗಲಿದ್ದು, ಅಂತ್ಯಕ್ರಿಯೆ ತಾ.20 ರಂದು ಸ್ವಗ್ರಾಮದಲ್ಲಿ ನಡೆಯಲಿದೆ.
ಮಡಿಕೇರಿ ಜ.19 : ನಗರದ ಕೊಡಗು ವಿದ್ಯಾಲಯದ 9 ನೇ ತರಗತಿ ವಿದ್ಯಾರ್ಥಿ ಸಿ.ಎಸ್.ರಘುವಂಶಿ ದೆಹಲಿಯಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಶಿಬಿರದಲ್ಲಿ ಪಾಲ್ಗೊಂಡಿದ್ದಾನೆ.ಎನ್‍ಸಿಸಿ ಕೆಡೆಟ್ ಸಾಜೆರ್ಂಟ್ ರಘುವಂಶಿ ಸಿ.ಎಸ್ ಕರ್ನಾಟಕ ಗೋವಾ ಡೈರೆಕ್ಟ್ ರೇಟ್ ನ ಜೂನಿಯರ್ ವಿಭಾಗದ ಬೆಸ್ಟ್ ಕೆಡೆಟ್ ಆಗಿದ್ದಾನೆ. ಈತ ಗಣರಾಜ್ಯೋತ್ಸವ ಶಿಬಿರಕ್ಕೆ ಆಯ್ಕೆಯಾಗಿರುವ ಕೊಡಗು ಜಿಲ್ಲೆಯ ಏಕೈಕ ವಿದ್ಯಾರ್ಥಿಯಾಗಿದ್ದಾನೆ.ರಘುವಂಶಿಯ ಸಂದರ್ಶನ ಡಿ.ಡಿ ಚಾನಲ್ ಮತ್ತು ಸಂಸದ್ ಟಿ.ವಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. 19ನೇ ಕರ್ನಾಟಕ ಬೆಟಾಲಿಯನ್ ನ ಎನ್‍ಸಿಸಿ ಕೆಡೆಟ್ ಆಗಿರುವ ರಘುವಂಶಿ, ಮಡಿಕೇರಿಯ ಸಿವಿಲ್ ಇಂಜಿನಿಯರ್ ಸಿ.ಆರ್.ಶಿವಕುಮಾರ್ ಹಾಗೂ ಸಂಧ್ಯಾ ಪಿ. ದಂಪತಿಯ ಪುತ್ರನಾಗಿದ್ದಾನೆ.
ಮಡಿಕೇರಿ ಜ.19 : ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜ.25 ರಂದು ವಿರಾಜಪೇಟೆಯಲ್ಲಿ “ಕರ್ನಾಟಕ ದಲಿತ ರತ್ನ ಪ್ರಶಸ್ತಿ” ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆ ನಗರದ ಸೆಂಟ್ ಆನ್ಸ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 10.30 ಗಂಟೆಗೆ ವಿರಾಜಪೇಟೆ ಕ್ಷೇತ್ರದ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದರು.ಹುಟ್ಟು ಹೋರಾಟಗಾರರಾಗಿ ಬಡವರ ನೋವಿಗೆ ಸ್ಪಂದಿಸುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಜನಪರ ಮತ್ತು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಪ್ರಶಸ್ತಿ ನೀಡಲಾಗುತ್ತಿದೆ ಎಂದು ದಿವಾಕರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಹೆಚ್.ಬಿ.ಸಂತೋಷ್ ಹಾಗೂ ಮಡಿಕೇರಿ ನಗರ ಸಂಚಾಲಕ ಲೋಕನಾಥ್ ಉಪಸ್ಥಿತರಿದ್ದರು.
ಮಡಿಕೇರಿ ಜ.19 : ಕನಿಷ್ಟ ವೇತನ ಮತ್ತು ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜ.23 ರಿಂದ 25ರವರೆಗೆ ಪ್ರತಿಭಟನೆ ನಡೆಸಲು ಕೊಡಗು ಜಿಲ್ಲಾ ಅಂಗನವಾಡಿ ನೌಕರರ ಸಂಘ ನಿರ್ಧರಿಸಿದೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊನ್ನಂಪೇಟೆ ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವಿ.ಎಸ್.ಸುಮಿತ್ರ, ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ವ್ಯಾಪ್ತಿಯ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಲಿದ್ದಾರೆ ಎಂದರು.ಜ.23 ರಂದು ಜಿಲ್ಲಾ ವ್ಯಾಪ್ತಿಯಲ್ಲಿರುವ ಸುಮಾರು 860 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರು ಕಾರ್ಯಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಉಳಿದ ಎರಡು ದಿನಗಳ ಪ್ರತಿಭಟನೆ ಸಂದರ್ಭ ಅಂಗನವಾಡಿಗಳು ಎಂದಿನಂತೆ ಕಾರ್ಯನಿರ್ವಹಿಸಲು ಪರ್ಯಾಯ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಪ್ರಸ್ತುತ ಮಾಸಿಕ 11,500 ರೂ. ಗೌರವ ಧನವನ್ನಷ್ಟೆ ಪಡೆಯುತ್ತಿದ್ದಾರೆ. 2017ರ ಬಳಿಕ ಗೌರವ ಧನ ಹೆಚ್ಚಳವಾಗಿಲ್ಲ. ಬೆಲೆ ಏರಿಕೆಯ ಈ ದಿನಗಳಲ್ಲಿ ಕನಿಷ್ಟ 31 ಸಾವಿರ ವೇತನವನ್ನು ನೀಡಬೇಕೆಂದು ಒತ್ತಾಯಿಸಿದರಲ್ಲದೆ, ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗುವವರಿಗೆ ಕನಿಷ್ಟ 10 ಸಾವಿರ…
ಮಡಿಕೇರಿ ಜ.19 : ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಅರೆಭಾಷಿಕ ಗೌಡ ಜನಾಂಗ ಬಾಂಧವರ ವಧು-ವರರ ಸಮಾವೇಶ ಫೆ.11 ರಂದು ನಡೆಯಲಿದೆ.ಅಂದು ಬೆಳಗ್ಗೆ 9.30 ಗಂಟೆಗೆ ಮಡಿಕೇರಿಯ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಸಮಾವೇಶ ನಡೆಯಲಿದ್ದು, ಆಸಕ್ತರು ತಮ್ಮ ಭಾವಚಿತ್ರ ಮತ್ತು ಇತರ ಎಲ್ಲಾ ಮಾಹಿತಿಗಳೊಂದಿಗೆ ಖುದ್ದಾಗಿ ಭಾಗವಹಿಸಬೇಕು. ಬರುವಾಗ ಅಪೇಕ್ಷಿತ ವಧು, ವರರನ್ನು ಕರೆದುಕೊಂಡು ಬರಬೇಕೆಂದು ಸಂಘದ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.ಹೆಚ್ಚಿನ ಮಾಹಿತಿಗೆ ಮೊ.ಸಂ 9379213818, 9739495381, 9449476171, 9449086589 ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಮಡಿಕೇರಿ ಜ.19 : ನಗರದ ಪ್ರಸಿದ್ಧ ಪ್ರವಾಸಿತಾಣ ರಾಜಾಸೀಟ್‍ನ ಮುಖ್ಯ ರಸ್ತೆಯ ಬದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಬೀದಿಬದಿ ವ್ಯಾಪಾರಿಗಳನ್ನು ನಗರಸಭೆ ತೆರವುಗೊಳಿಸಿದೆ. ಬೀದಿ ಬದಿ ವ್ಯಾಪಾರದಿಂದ ವಾಹನ ಮತ್ತು ಜನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ನಗರಸಭೆ ಸ್ಪಷ್ಟಪಡಿಸಿದೆ. ಆದರೆ ನಗರಸಭೆಯ ಕ್ರಮವನ್ನು ಖಂಡಿಸಿ ಬೀದಿ ಬದಿ ವ್ಯಾಪಾರಿಗಳು ನಗರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ರಾಜಾಸೀಟು ಆವರಣದಲ್ಲಿ ಪುಟಾಣಿ ರೈಲು ಇದ್ದ ಸ್ಥಳದಲ್ಲ್ಲಿ ಈ ಹಿಂದೆ ಬೀದಿ ಬದಿ ವ್ಯಾಪಾರಸ್ಥರು ಗೂಡಂಗಡಿಗಳನ್ನಿರಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಪ್ರವಾಸಿತಾಣದ ಬುಡದಲ್ಲೆ ನಡೆಯುತ್ತಿದ್ದ ಬೀದಿ ಬದಿ ವ್ಯಾಪಾರದಿಂದ ಸಮಸ್ಯೆಗಳು ಉದ್ಭವವಾದ ಹಿನ್ನೆಲೆ ಅಲ್ಲಿಂದ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿತ್ತು.ಇಲ್ಲಿಂದ ಸ್ಥಳಾಂತರಗೊಂಡ ಬೀದಿಬದಿ ವ್ಯಾಪಾರಿಗಳು ರಾಜಾಸೀಟು ಮುಖ್ಯರಸ್ತೆಯ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇಗುಲದ ಬಳಿ ಗೂಡಂಗಡಿಗಳನ್ನು ನಿರ್ಮಿಸಿಕೊಂಡು ವ್ಯಾಪಾರ ಆರಂಭಿಸಿದರು. ವಾಹನ ದಟ್ಟಣೆ ಮತ್ತು ಜನನಿಬಿಡ ಪ್ರದೇಶದಲ್ಲಿ ಬೀದಿ ವ್ಯಾಪಾರ ನಡೆಸುತ್ತಿರುವುದು ಮತ್ತೆ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿರುವುದನ್ನು ಗಮನಿಸಿದ ನಗರಸಭೆ, ಅಲ್ಲಿಂದ ಅವರನ್ನು ತೆರಳಲು ಸೂಚಿಸಿ, ಪರ್ಯಾಯ ಸ್ಥಳವನ್ನು ಗುರುತಿಸಿತ್ತು. ಇದಕ್ಕೆ…
ಮಡಿಕೇರಿ ಜ.19 : ಜ್ಞಾನ ಸಂಪಾದನೆ ಮತ್ತು ಸಂಸ್ಕೃತಿಯ ಉಳಿವಿಗೆ ಪುಸ್ತಕ ಓದುವ ಹಾಗೂ ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕರೆ ನೀಡಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 81ನೇ ಪುಸ್ತಕ ಹಾಗೂ ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಬರೆದಿರುವ 6ನೇ ಪುಸ್ತಕ “ಪೂ ಬಳ್ಳಿ” ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ವಿಶಿಷ್ಟವಾಗಿರುವ ಕೊಡವ ಭಾಷೆಯ ಮೇಲಿನ ಅಭಿಮಾನದಿಂದ ಅನೇಕರು ಕೊಡವ ಪುಸ್ತಕವನ್ನು ಹೊರತರುತ್ತಿದ್ದಾರೆ. ಆ ಮೂಲಕ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪ್ರತ್ನಿಸುತ್ತಿದ್ದಾರೆ ಎಂದರು.ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾದರೆ, ಆಚಾರ, ವಿಚಾರ ತಿಳಿದುಕೊಳ್ಳಬೇಕಾದರೆ ಪುಸ್ತಕ ಓದಬೇಕು ಮತ್ತು ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದ ವೀಣಾ ಅಚ್ಚಯ್ಯ, ನಮ್ಮ ಪೂರ್ವಜರು ನೀಡಿರುವ ಸಂದೇಶವನ್ನು ಲೇಖಕಿ ತಮ್ಮ “ಪೂ ಬಳ್ಳಿ” ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಇದು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡುವಂತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಹಿರಿಯ ಸಾಹಿತಿ ಉಳ್ಳಿಯಡ ಡಾಟಿ ಪೂವಯ್ಯ ಮಾತನಾಡಿ, ಸಾಹಿತ್ಯಕ್ಕೆ…
ಮಡಿಕೇರಿ ಜ.19 : ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಜಿಲ್ಲೆಯ ಮುಸ್ಲಿಂ ಸಮಾಜದ ಬಡ ಹಾಗೂ ಅನಾಥ ಹೆಣ್ಣು ಮಕ್ಕಳ ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಹರಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ನಮೂನೆಗಳು ಮಡಿಕೇರಿ : ಫೈವ್ ಸ್ಟಾರ್ ವಾಚ್ ಅಂಗಡಿ ಖಾಸಗಿ ಬಸ್ ನಿಲ್ದಾಣ 9844534 743 ವಿರಾಜಪೇಟೆ : ನೌಫಲ್ ಗ್ರೀನ್ ಲ್ಯಾಂಡ್ ಬನಾನ 9535323920 ಸೋಮವಾರಪೇಟೆ: ಬಶೀರ್ ಲೆಗ್ ಸ್ಟೈಲ್ ಬಸ್ ನಿಲ್ದಾಣ 94485 85556 ಗೋಣಿಕೊಪ್ಪಲು : ಬಶೀರ್ ಹಾಜಿ ಟೈಮ್ ವಿಷನ್ ವಾಚ್ ಅಂಗಡಿ 8289887668 ಮೂರ್ನಾಡು : ಅಬ್ದುಲ್ ಮಜೀದ್ 9448005624 ಸುಂಟಿಕೊಪ್ಪ: ಆರ್. ಹಸನ್ ಕುಂಞಿ ಹಾಜಿ 98868 63045 ನಾಪೋಕ್ಲು: ಟಿ. ಎ.ಹನೀಫ ಸ್ಟಾರ್ ಸರ್ವಿಸ್ ಸ್ಟೇಷನ್ 9980159825 ಕೊಟ್ಟಮುಡಿ : ಪಿ.ಎಂ. ಹುಸೇನ್ (ಉಂದಾರು) 9900750112 ಕೊಡ್ಲಿಪೇಟೆ : ಸುಲೈಮಾನ್ ಜಮಾಅತ್ ಅಧ್ಯಕ್ಷರು 9448721203 ಕುಶಾಲನಗರ: ಎಂ .ಇ .ಮೊಯ್ದಿನ್,ಅಲ್ಅಮೀನ್ ಕಾರ್ಯದರ್ಶಿ944 850 4282 ಹೆಚ್ಚಿನ ಮಾಹಿತಿಗೆ …
ಮಡಿಕೇರಿ ಜ.18 : ಮುಂಬರುವ ಲೋಕಸಭೆ ಚುನಾವಣೆ-2024 ರ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಜ.21 ರಂದು ಬೆಳಗ್ಗೆ 9 ಗಂಟೆಯಿಂದ ಕಲಾವಿದರಿಗಾಗಿ ‘ವ್ಯಂಗ್ಯಚಿತ್ರ ಪ್ರದರ್ಶನ ಮತ್ತು ಕಾರ್ಯಾಗಾರ’ವನ್ನು ವಿಧಾನಸೌಧ ಪೂರ್ವದಿಕ್ಕಿನ ಬಸವಣ್ಣನ ಪ್ರತಿಮೆ ಎದುರುಗಡೆಯಲ್ಲಿ ಏರ್ಪಡಿಸಲಾಗಿದೆ. ವೃತ್ತಿಪರ ಮತ್ತು ಹವ್ಯಾಸಿ ವ್ಯಂಗ್ಯಚಿತ್ರಕಾರರು, ಹವ್ಯಾಸಿ ಕಲಾವಿದರು, ಕಲಾ ವಿದ್ಯಾರ್ಥಿಗಳು ಈ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ. ಚುನಾವಣೆ, ಮತದಾನದ ಮಹತ್ವ ಸಾರುವ, ಮತದಾನ ಪ್ರಕ್ರಿಯೆಯಲ್ಲಿ ನಾಗರಿಕರು ಭಾಗವಹಿಸುವುದನ್ನು ಪೆÇ್ರೀತ್ಸಾಹಿಸುವಂತಹ ವ್ಯಂಗ್ಯಚಿತ್ರಗಳನ್ನು ರಚಿಸಬೇಕು. ಆಯ್ಕೆಯಾದ 100 ವ್ಯಂಗ್ಯಚಿತ್ರಗಳನ್ನು ಜ.21 ರಂದು ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಅತ್ಯುತ್ತಮ 25 ಚಿತ್ರಗಳನ್ನು ಮತದಾನ ಜಾಗೃತಿ, ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತದೆ ಹಾಗೂ ಆ ವ್ಯಂಗ್ಯಚಿತ್ರಗಳಿಗೆ ಗೌರವಧನವನ್ನು ಸಹ ನೀಡಲಾಗುತ್ತದೆ. ಷರತ್ತು ಹಾಗೂ ನಿಬಂಧನೆಗಳು :-ಚಿತ್ರಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳ ಪ್ರಚಾರ ಮತ್ತು ವ್ಯಂಗ್ಯ ಇರಬಾರದು. ಚಿತ್ರಗಳು ಹೊಸದಾಗಿದ್ದು, ಈ ಹಿಂದೆ ಯಾವುದೇ ಪ್ರಚಾರದಲ್ಲಿ ಬಳಸಿಕೊಂಡಿರಬಾರದು. ಚಿತ್ರಗಳು ಸ್ವಂತ ರಚನೆಯಲ್ಲಿರಬೇಕು. (ಗ್ರಾಫಿಕ್ಸ್, ಕುಂಚ,…






