ವಿರಾಜಪೇಟೆ ಫೆ.10 :NEWS DESK : ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸುಮಾರು ಐವತ್ತು ಸಾವಿರ ರೂ.ಗಳ ವಾಟರ್ ಪ್ಯೂರಿಪಯರ್‍ನ್ನು ದಾನವಾಗಿ ನೀಡಿದ ಡಾ. ಸುಧಾಕರ್ ಶೆಟ್ಟಿ ಅವರನ್ನು ಕಾಲೇಜು ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಡಿಕೇರಿ ಡೇರಿಯನ್ ಅಸೋಸಿಯೇೀಷನ್‍ನ ಅಧ್ಯಕ್ಷ ಕೆ.ಪಿ.ಉತ್ತಪ್ಪ ಅವರು, ಸಮಾಜ ಸೇವೆಯ ಮುಖಾಂತರ ದೇವರನ್ನು ಕಾಣಬಹುದು ಅಂತಹ ಸೇವೆಯನ್ನು ಎಲ್ಲರೂ ಮಾಡುವಂತಾಗಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಕೆ.ಕೆ.ಶೈನಾ, ಇತಿಹಾಸ ಉಪನ್ಯಾಸಕರಾದ ಶಿವದಾಸ್, ಪಾರ್ವತಿ, ಸುನೀತಾ ಸೇರಿದಂತೆ ಎಲ್ಲಾ ಉಪನ್ಯಾಸಕರು, ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.
ಲೇಖಕ: admin
ಮಡಿಕೇರಿ ಫೆ.10 NEWS DESK : ಮಡಿಕೇರಿ ನಗರಸಭೆ ಕಚೇರಿ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ‘ದಿ ಅರ್ಬನ್ ಇಂಟರ್ನಶಿಪ್ ಲರ್ನಿಂಗ್ ಪ್ರೋಗ್ರಾಮ್(ಟಿಯುಎಲ್‍ಐಪಿ) ಕಾರ್ಯಕ್ರಮದಡಿ ಮಡಿಕೇರಿ ನಗರಸಭೆ ವತಿಯಿಂದ ಡೇ-ನಲ್ಮ್ ಅಭಿಯಾನ ಮತ್ತು ಪಿಎಂ ಸ್ವನಿಧಿ ಯೋಜನೆಯಡಿ 8 ರಿಂದ 12 ವಾರಗಳ ಅವಧಿಯ ಇಂಟರ್ನಶಿಪ್ ತರಬೇತಿಗೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮೊ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಗರ ಕಲಿಕ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ 2023-24 ನೇ ಸಾಲಿಗೆ ಅನುಷ್ಠಾನಗೊಳಿಸಲಾಗುತ್ತಿದ್ದು, ಡೇ-ನಲ್ಮ್ ಅಭಿಯಾನದ ಉಪಘಟಕಗಳು ಮತ್ತು ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಕುರಿತು ಅಧ್ಯಯನ ಮಾಡಿ ಜ್ಞಾನ ಮತ್ತು ಕೌಶಲ್ಯ ವೃದ್ದಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡುವುದು ತರಬೇತಿ ಉದ್ದೇಶವಾಗಿದೆ. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು ಹಾಗೂ ಸರ್ಕಾರದ ನಿಯಮಾನುಸಾರ ಸ್ಟೈಫಂಡ್ ಪಾವತಿಸಲಾಗುವುದು. ಆಸಕ್ತರು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ 7 ದಿನಗಳ ಒಳಗೆ ಅರ್ಜಿಯನ್ನು ನಗರಸಭೆ ಮಡಿಕೇರಿ ಡೇ-ನಲ್ಮ್ ಶಾಖೆಗೆ ಸಲ್ಲಿಸಬೇಕು. ಈ ಕುರಿತು…
ವಿರಾಜಪೇಟೆ ಫೆ.10: ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯ 4 ನೇ ತರಗತಿಯ ವಿದ್ಯಾರ್ಥಿನಿ ಎ.ಆರ್.ಆಕಾಂಕ್ಷ ಗೆ ಸುವರ್ಣ ಶ್ರೀ ಕನ್ನಡ ಪ್ರಶಸ್ತಿ ಲಭಿಸಿದೆ. ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ನೃತ್ಯೋತ್ಸವ ಹಾಗೂ ಸುವರ್ಣ ಸಂಭ್ರಮ ಕನ್ನಡಿಗ ಮತ್ತು ಸುವರ್ಣ ಶ್ರೀ ಕನ್ನಡ ಪ್ರಶಸ್ತಿ ಸಮಾರಂಭದಲ್ಲಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಇವರು ರತೀಶ್ ಆಚಾರ್ಯ ಮತ್ತು ಪ್ರತಿಮಾ ಆಚಾರ್ಯ ದಂಪತಿಯ ಪುತ್ರಿ. ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆ.
ಮಡಿಕೇರಿ ಫೆ.10 NEWSDESK : ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ರಾಜ್ಯ ಮಟ್ಟದ ಬೃಹತ್ ಉದ್ಯೋಗಮೇಳವನ್ನು ಫೆ. 26 ಮತ್ತು 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿನ ಎಲ್ಲಾ ವಿದ್ಯಾರ್ಹತೆಯ ಉದ್ಯೋಗಾಂಕ್ಷಿಗಳು ಹಾಗೂ ಖಾಸಗಿ ಕಂಪನಿ/ ಉದ್ಯೋಗದಾತರು “ಯುವ ಸಮೃದ್ಧಿ ಸಮ್ಮೇಳನ”ದ ಬೃಹತ್ ಉದ್ಯೋಗಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಉದ್ಯೋಗಾಕಾಂಕ್ಷಿಗಳು/ ಉದ್ಯೋಗದಾತರು https://Skillconnect.kaushalkar.com/ ಗೆ ಭೇಟಿ ನೀಡಿ ತಮ್ಮ ಸ್ವ-ವಿವರವನ್ನು ನೋಂದಣಿ ಮಾಡುವ ಮೂಲಕ ಉದ್ಯೋಗ ಮೇಳಕ್ಕೆ ನೋಂದಾಯಿಸಿಕೊಳ್ಳುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ಅಧಿಕಾರಿ/ ಸಿಬ್ಬಂಧಿಯವರನ್ನು ಕಚೇರಿ ವೇಳೆಯಲ್ಲಿ 08272-225851/ 9113935220/ 8147573281 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಉಮಾ ತಿಳಿಸಿದ್ದಾರೆ.
ಮಡಿಕೇರಿ ಫೆ.10 NEWS DESK : ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಬಾಲಕಾರ್ಮಿಕ ಪದ್ಧತಿ ದುಷ್ಪರಿಣಾಮ ಹಾಗೂ ಶಿಕ್ಷಣದ ಮಹತ್ವ ಕುರಿತು ಕಾರ್ಮಿಕ ಇಲಾಖೆ ವತಿಯಿಂದ ಬೀದಿನಾಟಕ ಏರ್ಪಡಿಸಲು ಉದ್ದೇಶಿಸಲಾಗಿದ್ದು, ಆ ದಿಸೆಯಲ್ಲಿ ಬೀದಿನಾಟಕ ಕಲಾತಂಡಗಳಿಂದ ದರಪಟ್ಟಿ ಆಹ್ವಾನಿಸಲಾಗಿದೆ. ದರಪಟ್ಟಿ ಸಲ್ಲಿಸಲು ಫೆಬ್ರವರಿ, 14 ಕಡೆ ದಿನವಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ್ ತಿಳಿಸಿದ್ದಾರೆ.
ಮಡಿಕೇರಿ ಫೆ.9 NEWS DESK : ಗೃಹ ಸಚಿವ ಡಾ.ಪರಮೇಶ್ವರ್, ಡಿಜಿ ಹಾಗೂ ಐಜಿಪಿ ಯವರ ಸಮ್ಮುಖದಲ್ಲಿ ಬೆಂಗಳೂರಿನ ದಾಬಸ್‌ಪೇಟೆಯಲ್ಲಿ ನಡೆದ ಮಾದಕ ದ್ರವ್ಯ ವಿನಾಶ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಡ್ರಗ್ ಡಿಸ್ಪೋಸಲ್ ಕಮಿಟಿಯಿಂದ ಒಟ್ಟು 46 ಪ್ರಕರಣಗಳಲ್ಲಿ ರೂ. 16 ಲಕ್ಷ ಮೌಲ್ಯದ 43 ಕೆ.ಜಿ ಗಾಂಜಾ, ಮಾದಕ ದ್ರವ್ಯವನ್ನು ನಾಶಪಡಿಸಲಾಯಿತು. ದಕ್ಷಿಣ ವಲಯದ ಡಿಐಜಿಪಿ ಅಮಿತ್ ಸಿಂಗ್, ಹಿರಿಯ ಪೊಲೀಸ್ ಅಧಿಕಾರಿಗಳು, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಎಸ್ ಪಿ ಸುಂದರರಾಜ್ ಹಾಜರಿದ್ದರು.
ಮಡಿಕೇರಿ ಫೆ.9 NEWS DESK : ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಯ ನೇಮಕಾತಿಯಲ್ಲಿ ಬಿ.ಎಸ್ಸಿ ಅರಣ್ಯ ಶಾಸ್ತç ಪದವಿಯನ್ನೆ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡುವಂತೆ ಕರ್ನಾಟಕ ಅರಣ್ಯಾ ಪದವೀಧರರು ಮತ್ತು ವಿದ್ಯಾರ್ಥಿಗಳ ಸಂಘ ಒತ್ತಾಯಿಸಿದೆ. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಮುಂಭಾಗ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಟಿ.ಎಮ್.ವಿಜಯ ಭಾಸ್ಕರ್ ಅವರು ಸಲ್ಲಿಸಿರುವ 6ನೇಯ ಆಡಳಿತ ಸುಧಾರಣೆ ವರದಿಯ ಅಧ್ಯಾಯ 4ರ ಅಧಿಸೂಚನೆ ಸಂಖ್ಯೆ 81ನ್ನು ಕೈಬಿಡುವಂತೆ ಒತ್ತಾಯಿಸಿದರು. ವೃತ್ತಿಪರ (ಅರಣ್ಯಶಾಸ್ತ್ರ) ಪದವೀಧರರ ಸಾಮರ್ಥ್ಯ ಮತ್ತು ಅಗತ್ಯವನ್ನು ಅರಿತುಕೊಂಡ ಕರ್ನಾಟಕ ಸರ್ಕಾರವು 2003ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿ ಹುದ್ದೆಗೆ ಶೇಕಡ 50 ರಷ್ಟು ಮೀಸಲಾತಿ ಒದಗಿಸಿತು ಮತ್ತು ಅದನ್ನು 2012 ರಲ್ಲಿ ವಲಯ ಅರಣ್ಯಾಧಿಕಾರಿ ಹುದ್ದೆಗೆ ಶೇಕಡ 75 ರಷ್ಟು ಹೆಚ್ಚಿಸಲಾಯಿತು. ಕರ್ನಾಟಕ ಅರಣ್ಯ ಇಲಾಖೆಯ ಸೇವೆಗಳ (ನೇಮಕಾತಿ) ತಿದ್ದುಪಡಿ ನಿಯಮಗಳ ಅಡಿಯಲ್ಲಿ, 2018 ರಲ್ಲಿ ಪ್ರಸ್ತಾಪಿಸಲಾದ ಹೊಸ ಕರಡು ನಿಯಮಗಳು, ಬಿ.ಎಸ್ಸಿ…
ಸಿದ್ದಾಪುರ ಫೆ.9 NEWS DESK : ಸಾಧಿಸುವ ಛಲ ಇದ್ದರೆ ಪ್ರತಿಭಾನ್ವಿತರಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದ್ದು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಾಡಿ ನಿವಾಸಿಗಳ ಸಂಯುಕ್ತ ಆಶ್ರಯದಲ್ಲಿ ದಿಡ್ಡಳ್ಳಿ ಸಿ ಬಿ ಹಳ್ಳಿ ಸರ್ಕಾರಿ ಗಿರಿಜನ ಆಶ್ರಮ ಶಾಲೆಯ 60ನೇ ಶಾಲಾ ವಾರ್ಷಿಕೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ತಮ್ಮ ಬಾಲ್ಯದ ಜೀವನವನ್ನು ನೆನಪಿಸಿಕೊಂಡು ಗ್ರಾಮೀಣ ಭಾಗದ ಶಾಲೆಯಲ್ಲಿ ಸೂಕ್ತ ಸೌಲಭ್ಯ ವ್ಯವಸ್ಥೆ ಇಲ್ಲದೆ ಶಾಲೆಯ ಬೇವಿನ ಮರದ ಕೆಳಗೆ ಪಾಠ ಕಲಿಯುತ್ತಿದ್ದೆವು. ತಂದೆ ಐದನೇ ತರಗತಿ ಓದಿದ್ದರೆ ತಾಯಿ ಶಿಕ್ಷಣದಿಂದ ದೂರ ಉಳಿದಿದ್ದರೂ ಅಂತೂ ಅವರು ನನ್ನ ಶಿಕ್ಷಣಕ್ಕೆ ಸಹಕಾರ ನೀಡುತ್ತಿದ್ದರು.ಬಡತನದಲ್ಲಿದ್ದರೂ ಶಿಕ್ಷಣದ ಮೂಲಕ ಮುಂದೆ ಬರಬೇಕೆಂದು ಆತ್ಮವಿಶ್ವಾಸ ನನ್ನಲ್ಲಿತ್ತು ಹಾಗಾಗಿ ಉನ್ನತ ಶಿಕ್ಷಣ ಪಡೆದು ಜಿಲ್ಲಾ ಎಸ್ ಪಿ ಆಗಿ ನಿಮ್ಮ ಮುಂದೆ ಇದ್ದೇನೆ. ನಿಮ್ಮ ಮಕ್ಕಳು…
ಸುಂಟಿಕೊಪ್ಪ,ಫೆ.9 : ಸುಂಟಿಕೊಪ್ಪದ ಆಟೋ ಚಾಲಕರ ಸಂಘದ ಸದಸ್ಯ, ಕಂಬಿಬಾಣೆ ನಿವಾಸಿ ಕೌಶಿಕ್ (34) ಹೃದಯಘಾತದಿಂದ ನಿಧನರಾದರು. ಮೃತರು ಅವಿವಾಹಿತನಾಗಿದ್ದು, ಪೋಷಕರನ್ನು ಆಗಲಿದ್ದಾರೆ.
ಸಿದ್ದಾಪುರ ಫೆ.9 : ಆದಿವಾಸಿಗಳ ಅಭಿವೃದ್ಧಿ ಹಾಗೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡುವುದರ ಮೂಲಕ ಸರ್ಕಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕರೆ ನೀಡಿದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಾಡಿ ನಿವಾಸಿಗಳ ಸಂಯುಕ್ತ ಆಶ್ರಯದಲ್ಲಿ ಗಿರಿಜನ ಆಶ್ರಮ ಶಾಲೆಯ 60ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಕಾಡಂಚಿನಲ್ಲಿ ವಾಸವಾಗಿರುವ ಆದಿವಾಸಿಗಳ ಗ್ರಾಮಗಳನ್ನ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಅಭಿವೃದ್ಧಿಯೊಂದಿಗೆ ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಅಭಿವೃದ್ಧಿ ಕಾರ್ಯಗಳು ಅಂತಂತವಾಗಿ ನಡೆಯಲಿದೆ. ಮನೆ ಇಲ್ಲದೆ ಸಂಕಷ್ಟದಲ್ಲಿರುವ ಆದಿವಾಸಿ ಕುಟುಂಬಗಳನ್ನ ಗುರುತಿಸಿ ಸುಮಾರು 483 ಮನೆಗಳನ್ನ ತಲಾ ನಾಲ್ಕುವರೆ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದರು. ಹಲವು ವರ್ಷಗಳಿಂದಲೂ ವಿದ್ಯುತ್ ಬೆಳಕನ್ನೇ ಕಾಣದೆ ಕತ್ತಲ ಜೀವನ ನಡೆಸುತ್ತಿರುವ ಎಲ್ಲಾ ಹಾಡಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ದುಬಾರೆ…






