ನಾಪೋಕ್ಲು ಮಾ.11 NEWS DESK : 2022-23ನೇ ಸಾಲಿನಲ್ಲಿ ಕೈಗೊಂಡ ಸಾಕ್ಷರತಾ ಕಾರ್ಯಕ್ರಮದಡಿಯಲ್ಲಿ ಪರೀಕ್ಷೆ ಬರೆದ ಸಾಕ್ಷರರು ಎಂದು ಗುರುತಿಸಲಾದ ಮಡಿಕೇರಿ ತಾಲ್ಲೂಕು ಮಟ್ಟದ ನವ ಸಾಕ್ಷರರಿಗೆ ಸಾಕ್ಷರತಾ ಪ್ರಮಾಣ ಪತ್ರ ವಿತರಿಸಲಾಯಿತು. ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ನವಸಾಕ್ಷರರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಕಾರ್ಯಕ್ರಮದ ನೋಡಲ್ ಅಧಿಕಾರಿ ಬಿಆರ್ ಪಿ ಮಂಜುಳಾ ಚಿತ್ರಾಪುರ, ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಕಲಾ, ಮೇಕೇರಿ ಕ್ಲಸ್ಟರ್ ನ ಸಿಆರ್ ಪಿ ಕಲ್ಪನಾ, ಆಶಾಕಾರ್ಯಕರ್ತೆಯರು, ಭೋಧಕರು ಹಾಜರಿದ್ದರು. ವರದಿ : ದುಗ್ಗಳ ಸದಾನಂದ.
ಲೇಖಕ: admin
ನಾಪೋಕ್ಲು ಮಾ.11 NEWS DESK : ಹೊದ್ದೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಭಗವತಿ ದೇವಾಲಯದಲ್ಲಿ ಬ್ರಹ್ಮ ಕಳಶೋತ್ಸವದ ಅಂಗವಾಗಿ ಶ್ರದ್ಧಾಭಕ್ತಿಯಿಂದ ನಾಗಪ್ರತಿಷ್ಠೆ ಜರುಗಿತು. ಸುಮಾರು 1.5 ಕೋಟಿ ರೂ ವೆಚ್ಚದಲ್ಲಿ ದೇವಾಲಯ ಪುನರ್ ನಿರ್ಮಾಣಗೊಂಡಿದ್ದು, ಮಾ7.ರಂದು ಕುತ್ತಿ ಪೂಜೆಯೊಂದಿಗೆ ಕಳಶೋತ್ಸವ ಆರಂಭಗೊಂಡಿತು.ಮಾ.8 ರಂದು ತಂತ್ರಿಯವರು ಆಗಮಿಸಿ, ವಾಸ್ತು ಕಳಶ ಪೂಜೆ, ವಾಸ್ತು ಬಲಿ ನೆರವೇರಿಸಿದರು. ಅಂಕುರ ಆರೋಹಣ, ವಿಗ್ರಹ ಪರಿಗ್ರಹ ದೀಪಾ ಆರಾಧನೆ ನಡೆಯಿತು. ಬ್ರಹ್ಮ ಶ್ರೀ ಕೆ.ಯು ಪದ್ಮನಾಭ ತಂತ್ರಿಗಳ ಹಾಗೂ ದೇವಸ್ಥಾನದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ , ಭಕ್ತರ ಸಮ್ಮುಖದಲ್ಲಿ ನಾಗಪ್ರತಿಷ್ಠೆ ಜರುಗಿತು. ಸಂಜೆ ದೀಪಾರಾಧನೆ, ಅಂಕುರ ಪೂಜೆ, ತ್ರಿಕಾಲ ಪೂಜೆ ನಡೆಯಿತು. ಇಂದು ಮುಂಜಾನೆ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚೌರಿರ ಕೆ.ಮೇದಪ್ಪ, ದೇವತಕ್ಕ ನೆರವಂಡ ಸಂಜಯ್ ಪೂಣಚ್ಚ, ಸಮಿತಿ ಸದಸ್ಯ ನಿವೃತ್ತ ಶಿಕ್ಷಕ ಚೌರಿರ ಉದಯ ಸೇರಿದ0ತೆ ಸಮಿತಿಯ ನಿರ್ದೇಶಕ ಸದಸ್ಯರು, ಊರಿನ ಭಕ್ತರು…
ಮಡಿಕೇರಿ ಮಾ.11 NEWS DESK : ಮತ್ತಿಗೋಡು ಆನೆ ಶಿಬಿರವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿ, ಶುಭ ಕೋರಿದರು.
ಮಡಿಕೇರಿ ಮಾ.11 NEWS DESK : ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ಹೈವೆಯಲ್ಲಿ 1200 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಫುಡ್ ಪಾರ್ಕ್, ಸ್ಕೈ ವಾಕ್ ಹಾಗೂ ಮೈಸೂರು – ನಂಜನಗೂಡು ನಡುವಿನ ಹೆದ್ದಾರಿಯ 6 ಪಥ ಮೇಲ್ದರ್ಜೆ ಕಾಮಗಾರಿಗೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಿ ಮೈಸೂರು- ಹುಣಸೂರು ರಸ್ತೆ, ತಿ. ನರಸೀಪುರ ರಸ್ತೆಯನ್ನು ಉದ್ಘಾಟಿಸಿದರು. ಮೈಸೂರಿನ ‘ರಾಯಲ್ ಇನ್’ ಹೋಟೆಲ್ ಬಳಿ ಕೆಆರ್ ಎಸ್ ರಸ್ತೆ ಮತ್ತು ರಸ್ತೆ ಹಳಿ ದಾಟಲು ಫ್ಲೈ ಓವರ್ ನಿರ್ಮಾಣಕ್ಕೆ LC-5 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರೂ 62.30 ಕೋಟಿ ಬಿಡುಗಡೆ. ಮೈಸೂರು ವಿವಿ ಕ್ರಾಫರ್ಡ್ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣಕ್ಕೆ ಐಅ-1 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರೂ.45.35 ಕೋಟಿ ಬಿಡುಗಡೆ. ಹುಣಸೂರು ಬೈಪಾಸ್ ಅನ್ನು 4 ಲೇನ್ ಮಾಡಲು ಹಾಗೂ ಲಕ್ಷ್ಮಣತೀರ್ಥ ನದಿಗೆ ಕಟ್ಟಲಾಗಿರುವ ಸೇತುವೆ ಶಿಥಿಲಗೊಂಡಿರುವುದರಿಂದ ಹೊಸ ಸೇತುವೆ ನಿರ್ಮಾಣ ಮಾಡಲು ರೂ 86…
ಸುಂಟಿಕೊಪ್ಪ ಮಾ.11 NEWS DESK : ಸುಂಟಿಕೊಪ್ಪದಲ್ಲಿ ಭಾರತ್ ರೈಸ್ ವಿತರಣಾ ಕಾರ್ಯಕ್ರಮ ನಡೆಯಿತು. ವಾಹನ ಚಾಲಕ ಮತ್ತು ಮಾಲೀಕರ ಸಂಘದ ಮುಂಭಾಗದಲ್ಲಿ ವಿತರಿಸಿ, ಮಾತನಾಡಿದ ಪಿ.ಆರ್.ಸುನಿಲ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಆಗಿರುವ ಭಾರತ್‍ರೈಸ್ ಅಕ್ಕಿ ವಿತರಣೆ ಎಲ್ಲರಿಗೂ ಲಭ್ಯವಾಗಲಿದೆ. ಕೆ.ಜಿ.ಯೊಂದಕ್ಕೆ 29 ರೂಪಾಯಿಯಂತೆ 10 ಕೆ.ಜಿ.ಚೀಲವನ್ನು ರೂ 290 ಲಭ್ಯವಾಗುತ್ತಿದೆ ಈ ಗುಣ ಮಟ್ಟದ ಅಕ್ಕಿಗೆ ಅಂಗಡಿಗಳಲ್ಲಿ ರೂ 70 ರಿಂದ 80 ರವರೆಗೆ ಕೆಜಿಯೊಂದಕ್ಕೆ ಮಾರಾಟಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಡವ ಬಲಿದ ಎಂದು ನೋಡದೆ ಎಲ್ಲಾರಿಗೂ ಲಭ್ಯವಾಗುವಂತೆ ಮಾರಾಟಗೊಳಿಸಲಾಗುವುದು ಎಂದು ಹೇಳಿದರು. ಸೋಮವಾರಪೇಟೆ ಮಂಡಲ ಬಿಜೆಪಿಯ ಮುಖಂಡ ಗೌತಮ್ ರೈ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಸದಸ್ಯರಾದ ಬಿ.ಎಂ.ಸುರೇಶ್, ಶಾಂತಿ, ಶಕ್ತಿಕೇಂದ್ರ ಪ್ರಮುಖ್ ವಾಸು, ಬಿ.ಕೆ.ಪ್ರಶಾಂತ್, ಸುಂಟಿಕೊಪ್ಪ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ವಿಘ್ನೇಶ್, ಬಿಜೆಪಿ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಮತ್ತಿತರರು ಇದ್ದರು.
ಸೋಮವಾರಪೇಟೆ ಮಾ.11 NEWS DESK : ಪ್ರತಿಯೊಬ್ಬರು ತಮ್ಮ ಸಂಪಾದನೆಯಲ್ಲಿ ಒಂದಷ್ಟು ಹಣವನ್ನು ಸಮಾಜಮುಖಿ ಕೆಲಸಗಳಿಗೆ ನೀಡಿದರೆ ಜೀವನದಲ್ಲಿ ಸಾರ್ಥಕತೆ ಸಿಗುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಅಭಿಪ್ರಾಯಿಸಿದರು. ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ ಲಿಮಿಟೆಡ್ ಪಣಂಬೂರು, ಜಸ್ಟೀಸ್ ಕೆ.ಎಸ್.ಹೆಗ್ಗಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಮತ್ತು ಗ್ರಾಮಾಭಿವೃದ್ಧಿ ಮಂಡಳಿ ಕುಮಾರಳ್ಳಿ-ಬಾಚಳ್ಳಿ ಇವರ ವತಿಯಿಂದ ಶಾಂತಳ್ಳಿ ಜಿ.ಎಂ.ಪಿ.ಶಾಲಾ ಆವರಣದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಉತ್ತಮ ಅರೋಗ್ಯ ಜೀವನದಲ್ಲಿ ಪ್ರಮುಖವಾದುದು. ಆರೋಗ್ಯದ ವಿಷಯದಲ್ಲಿ ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಬೇಕು. ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳು ರೈತಾಪಿ ವರ್ಗಕ್ಕೆ ಉಪಕಾರಿಯಾಗುತ್ತವೆ. ಎಸಿಎಫ್ ಸಂಸ್ಥೆ ತಮ್ಮ ಲಾಭಂಶದಲ್ಲಿ ಒಂದಷ್ಟು ಹಣವನ್ನು ಸಮಾಜಸೇವೆಗೆ ನೀಡುತ್ತಿರುವುದು ಅತ್ಯಂತ ಶ್ಲಾWನೀಯ. ಅದರಲ್ಲೂ ಆರೋಗ್ಯ ಮತ್ತು ಶಿಕ್ಷಣಕ್ಕೆ ನೀಡುತ್ತಿರುವ ಬಗ್ಗೆ ತಿಳಿದು ಹೆಮ್ಮೆ ಎನಿಸಿತು. ಎಂಸಿಎಫ್ ಲಿಮಿಟೆಡ್‍ನ ಸಿಇಓ ನಿತೀನ್ ಎಂ.ಕಂಠಕ್ ಮಾತನಾಡಿ, ನಮ್ಮ ಎಂಸಿಎಫ್ ವತಿಯಿಂದ ಕೆ.ಎಸ್. ಹೆಗ್ಗಡೆ ಚಾರಿಟೇಬಲ್…
ಸೋಮವಾರಪೇಟೆ ಮಾ.11 NEWS DESK : ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಗೌಡಳ್ಳಿ ಶ್ರೀ ಸವದುರ್ಗಾ ಪರಮೇಶ್ವರಿ ಕೃಪ ಪೋಷಿತ ಯಕ್ಷಗಾನ ಸಮಿತಿ ವತಿಯಿಂದ ವೀರಗಾಸೆ ಮತ್ತು ದಶ್ರೀರಾಮಚರಿತ್ರೆ ಕಥಾ ಭಾಗದ ಬಯಲಾಟ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ ವಹಿಸಿ ಮಾತನಾಡಿ, ಸ್ಥಾಪಕ ಪ್ರಧಾನ ಅರ್ಚಕರಾದ ದಿ.ಎ.ಟಿ.ವೆಂಕಟರಮಣಚಾರ್ಯ ಅವರು ಶ್ರೀನವದುರ್ಗಾ ಪರಮೇಶ್ವರಿ ದೇವಾಲಯವನ್ನು ಸರ್ವಧರ್ಮ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲು ಹೆಚ್ಚಿನ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದೆ. ವಾರ್ಷಿಕ ಜಾತ್ರೋತ್ಸವ, ಕ್ರೀಡಾಕೂಟ, ಅನ್ನದಾನ ನಡೆಯುತ್ತಿದೆ. ಪವಿತ್ರ ಕ್ಷೇತ್ರದ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ ಯಕ್ಷಗಾನ ಕಲೆಯನ್ನು ಕೊಡಗಿನಲ್ಲೂ ಪಸರಿಸುವ ಪ್ರಯತ್ನ ಮುಂದುವರಿದಿದೆ ಎಂದರು. ಗ್ರಾಮೀಣ ಭಾಗದಿಂದ ಒಂದೂವರೆ ಸಾವಿರದಷ್ಟು ಜನರು ಯಕ್ಷಗಾನ ನೋಡಲು ಬಂದಿದ್ದಾರೆ. ಜನರಿಗಿರುವ ಕಲೆಯ ಮೇಲಿನ ಗೌರವವನ್ನು ಇದು ಸೂಚಿಸುತ್ತದೆ ಎಂದು ಹೇಳಿದರು. ಭಾಗವತರಾದ ಎ.ಟಿ.ವೆಂಕರಮಣಾಚಾರ್ಯ ಅವರ ಸ್ಮರಣಾರ್ಥ ಆರೋಗ್ಯ ಸುರಕ್ಷಾ ಅಧಿಕಾರಿ ಕೆ.ಪಿ.ಪಾರ್ವತಿ,…
ಮಡಿಕೇರಿ ಮಾ.11 NEWS DESK : ಹಾತೂರು ಗ್ರಾ.ಪಂ ವ್ಯಾಪ್ತಿಯ ವಿವಿಧ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.
ಸುಂಟಿಕೊಪ್ಪ ಮಾ.11 NEWS DESK : ಸುಂಟಿಕೊಪ್ಪ ಆಟೋ ಚಾಲಕರ ಮತ್ತು ಮಾಲೀಕರ ಸಂಘದ 2024-25ನೇ ಸಾಲಿನ ಅಧ್ಯಕ್ಷರಾಗಿ ಸಿ.ಸಿ.ಸುನಿಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಂಟೋನಿ ಎಂ.ಎ.ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ರಾಜೇಶ್, ಕೆ.ಸಂತೋಷ, ಜಂಟಿ ಕಾರ್ಯದರ್ಶಿಯಾಗಿ ಲೋಕೇಶ್, ಸಾದಿಕ್ ಬಾಷ, ಖಜಾಂಜಿಯಾಗಿ ಜಗದೀಶ (ಜಗ್ಗ), ಗೌರವ ಅಧ್ಯಕ್ಷರಾಗಿ ವಿಶ್ವನಾಥ ಪೂಜಾರಿ, ಅಕ್ಬರ್‍ಬಾಷ, ಕೆ.ಎಂ.ಅಸೈನಾರ್, ಸಲಹೆಗಾರರಾಗಿ ಎ.ಎಂ.ಶರೀಫ್, ಪ್ರಶಾಂತ್ (ಕೋಕಾ), ಸಂತೋಷ್ (ದೀನು), ಪೈರೋಜ್, ಕೆ.ಯು.ಹರೀಶ್, ಸಿ.ಎ.ಸಚಿನ್, ಬಿ.ಕೆ.ರಂಜೀತ್, ಟಿ.ಸಿ.ರಾಜ, ಟಿ.ಪ್ರಶಾಂತ್, ಸಂಘಟನಾ ಕಾರ್ಯದರ್ಶಿಕೇಶವ, ಚೆನ್ನ, ರಮೇಶ, ವಿನೋದ್‍ಕುಮಾರ್, ಬಿ.ಆರ್.ಜೀವನ್, ಎಚ್.ಸಿ.ಮಂಜುನಾಥ, ಆರ್.ಮಣಿ, ಜಿ.ಎಸ್.ಚಂದ್ರ, ಸಮಿತಿ ಸದಸ್ಯರಾಗಿ ಹೇಮಂತ್, ಪ್ರವೀಣ್, ಮಹೇಂದ್ರ, ನವೀದ್, ಪ್ರದೀಶ್, ಚೇತನ, ಸುಬ್ಬಯ್ಯ, ಜೀವನ್, ಶಿವು, ವಿನೋದ್‍ಕುಮಾರ್, ಸುರೇಶ, ಶಂಶುದ್ದೀನ್, ನೌಶದ್, ಮಹೇಂದ್ರ, ಸೌಕತ್ ಮಹಮ್ಮದ್ ಇವರುಗಳನ್ನು ನೇಮಕಗೊಳಿಸಲಾಯಿತು.
ಮಡಿಕೇರಿ ಮಾ.10 NEWS DESK : ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವ ಅಂಗವಾಗಿ ಮಾದಕ ದ್ರವ್ಯ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯು ರಾಜ್ಯಾದ್ಯಂತ “ಕರ್ನಾಟಕ ಪೊಲೀಸ್ ರನ್” ಕಾರ್ಯಕ್ರಮ ಹಮ್ಮಿಕೊಂಡಿದ್ದು , ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ “ಮಾದಕ ವಸ್ತು ಸೇವನೆ, ಮಾರಾಟ ಮತ್ತು ಸಾಗಾಣಿಕೆ ತಡೆಗಟ್ಟುವ ಕುರಿತು ಜನ ಜಾಗೃತಿ” ಮೂಡಿಸುವ ಸಲುವಾಗಿ ಈ ದಿನ ಕುಶಾಲನಗರದ ಪ್ರಮುಖ ರಸ್ತೆಗಳಲ್ಲಿ Walkathon (Walking marathon) ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಪತ್ರಿಕೆ, ಮಾದ್ಯಮ, ವಿವಿಧ ಸಾರ್ವಜನಿಕ ಸಂಘ ಸಂಸ್ಥೆಗಳ ಪ್ರಮುಖರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.






