ಮಡಿಕೇರಿ ಫೆ.6 NEWS DESK : ಸಹಕಾರ ಸಂಘದ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಯೂ ಜಾಬ್‍ಚಾರ್ಟ್ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಆದರೂ ಸರ್ಕಾರದಿಂದ ಯಾವುದಾದರೂ ಯೋಜನೆಗಳ ಕುರಿತು ಆದೇಶವಿದ್ದಲ್ಲಿ ನಮಗೆ ಸೇವೆ ಮಾಡಲು ನಮಗೆ ಒದಗಿ ಬಂದಿರುವ ಅವಕಾಶವೆಂದು ತಿಳಿದು ಕಾರ್ಯೊನ್ಮುಖರಾದಲ್ಲಿ ಆ ಕೆಲಸವು ಸಂತೃಪ್ತಿಯಿಂದ ಮುಗಿಯುತ್ತದೆ ಹಾಗೂ ನಮ್ಮ ಖಾತೆಯಲ್ಲಿ ಪುಣ್ಯ ಸಂಪಾದನೆಯೂ ಹೆಚ್ಚಾಗುತ್ತದೆ ಎಂದು ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಂ.ಎಸ್. ಕೃಷ್ಣಪ್ರಸಾದ್ ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಮಡಿಕೇರಿ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆದ ಸಹಕಾರ ಸಂಘಗಳ ಕಾರ್ಯನಿರ್ವಾಹಕರಿಗೆ ಯಶಸ್ವಿನಿ ಆರೋಗ್ಯ ವರದಿಯ ಪರಿಸ್ಕೃತ ನಮೂನೆ ಕುರಿತು ವಿಶೇಷ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು. ‘ಯಶಸ್ವಿನಿ’ ಎಂಬುದು ಸಹಕಾರಿಗಳಿಗೆ ಮಾತ್ರ ಇರುವ ಅಪೂರ್ವ ಅವಕಾಶವಾಗಿದ್ದು, ಸಹಕಾರ ಚಳುವಳಿಗೆ ಪೂರಕವಾಗಿ ಆರೋಗ್ಯ ರಕ್ಷಣೆ ಮೂಲಕ ಸ್ವಾಸ್ಥ್ಯ…
ಲೇಖಕ: admin
ಮಡಿಕೇರಿ ಫೆ.6 : ‘ಐ ಬಿಲಾಂಗ್ಸ್ ಟು ನೋ ಪಾರ್ಟಿ’ ಎನ್ನುತ್ತಲೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಾನು ಆಕಾಂಕ್ಷಿಯೇ ಆಗಿದ್ದೇನೆ. ಆದರೆ, ಈ ಬಗ್ಗೆ ತಾನೇನು ಕಾಂಗ್ರೆಸ್ ಪಕ್ಷವನ್ನು ಕೇಳಿಲ್ಲವೆಂದು ಎಂಎಲ್‍ಸಿ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮೂಲ ಆಶಯ ಶ್ರೀಸಾಮಾನ್ಯರಿಗೆ ಒಳಿತನ್ನು ಮಾಡುವುದಷ್ಟೆ ಎಂದು ಸ್ಪಷ್ಟಪಡಿಸಿದರು.
ಮಡಿಕೇರಿ ಫೆ.6 NEWS DESK : ಇಡೀ ರಾಷ್ಟ್ರದಲ್ಲೆ ಕರ್ನಾಟಕ ಅತೀ ಹೆಚ್ಚಿನ ತೆರಿಗೆ ಪಾವತಿಸುವ ರಾಜ್ಯವಾಗಿದ್ದರು, ಅದಕ್ಕೆ ಪ್ರತಿಯಾಗಿ ಕೇಂದ್ರದಿಂದ ನಿರೀಕ್ಷಿತ ನೆರವು ಒದಗಿ ಬರುತ್ತಿಲ್ಲ. ಪ್ರಸ್ತುತ ದಕ್ಷಿಣ ಭಾರತದ ‘ಹಣ’ ಉತ್ತರಕ್ಕೆ ಹರಿದು ಹೋಗುತ್ತಿದೆಯೆಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಇಂದು ಕೇಂದ್ರಕ್ಕೆ ನೀಡುತ್ತಿರುವ ತೆರಿಗೆಗೆ ಪ್ರತಿಯಾಗಿ ಅಗತ್ಯ ನೆರವನ್ನು ಬಯಸುತ್ತಿದ್ದರು, ಕೇಂದ್ರ ಸರ್ಕಾರ ಜನಸಂಖ್ಯೆಯ ಮಾನದಂಡವನ್ನು ಮುಂದೆ ಮಾಡಿ ನಮಗೆ ದೊರಕಬೇಕಾದ ನೆರವನ್ನು ನೀಡದೆ, ಉತ್ತರದ ರಾಜ್ಯಗಳಿಗೆ ನೀಡುತ್ತಿದೆ. ಈ ರೀತಿ ನೀಡುತ್ತಿರುವ ಹಣ ನಮ್ಮ ನಿಮ್ಮೆಲ್ಲರ ಶ್ರಮದ ಹಣವಾಗಿದೆ. ಆದರೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕೆ.ಎಂ.ಗಣೇಶ್, ಬಿ.ಪಿ.ದೇವಪ್ಪ ಗೌಡ, ಶೌಕತ್ ಅಲಿ ಹಾಗೂ ಡೆನ್ನಿ ಬರೋಸ್ ಉಪಸ್ಥಿತರಿದ್ದರು.
ಕುಶಾಲನಗರ, ಫೆ.6 NEWS DESK : ಶಿಕ್ಷಕರು ಮಕ್ಕಳಿಗೆ ಗಣಿತ ಕಲಿಕೆಯನ್ನು ಕಬ್ಬಿಣದ ಕಡಲೆ ಎಂಬ ಮನೋಭಾವನೆಯನ್ನು ದೂರಮಾಡಿ ಗಣಿತ ವಿಷಯವು ಸಂತಸದ ಕಲಿಕೆಯಾಗುವಂತೆ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಮೂಲಕ ಪ್ರಾಯೋಗಿಕವಾಗಿ ಗಣಿತ ಕಲಿಕೆಯ ಅಭ್ಯಾಸದ ಅಗತ್ಯವಿದೆ ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ ಹೇಳಿದರು. ಜಿಲ್ಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವತಿಯಿಂದ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ರಾಮನುಜನ್ ಗಣಿತ ಕ್ಲಬ್ ಸಹಯೋಗದೊಂದಿಗೆ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಸೋಮವಾರಪೇಟೆ ತಾಲ್ಲೂಕು ಪ್ರೌಢಶಾಲಾ ಗಣಿತ ಶಿಕ್ಷಕರಿಗೆ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಯ ಫಲಿತಾಂಶವನ್ನು ಉತ್ತಮಪಡಿಸುವ ಕುರಿತು ಏರ್ಪಡಿಸಿದ್ದ ಒಂದು ದಿನದ ಗಣಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಣಿತ ಅಭ್ಯಾಸವು ಮಕ್ಕಳಿಗೆ ಸಂತಸದ ಕಲಿಕೆಯಾದರೆ ಸುಲಭದ ಕಲಿಕೆಯಾಗುತ್ತದೆ ಎಂದರು. ಇಂತಹ ಕಾರ್ಯಕ್ರಮಗಳು ಗಣಿತ ಕ್ಲಿಷ್ಟವಾದ ವಿಷಯವಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ಸುಲಭ ವಿಧಾನಗಳ ಮೂಲಕ ಗಣಿತ ಕಲಿತರೆ ಇದು ಇನ್ನಷ್ಟು ಸರಳವಾಗುತ್ತದೆ. ಶಿಕ್ಷಕರು…
ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನವು ಬೆಳಗಾವಿ ಜಿಲ್ಲೆಯಲ್ಲಿ ತನ್ನ ಜಿಲ್ಲಾ ಕೇಂದ್ರದಿಂದ 70 ಕಿಮೀ ಮತ್ತು ಧಾರವಾಡದಿಂದ 38 ಕಿಮೀ ದೂರದಲ್ಲಿರುವ ಅತ್ಯಂತ ಪ್ರಸಿದ್ಧ ಮತ್ತು ಶಕ್ತಿಶಾಲಿ ದೇವಿಯ ದೇವಾಲಯವಾಗಿದೆ. ಈ ದೇವಾಲಯವು ಯಲ್ಲಮ್ಮ ಎಂದು ಕರೆಯಲ್ಪಡುವ ರೇಣುಕಾ ದೇವಿಗೆ ಸಮರ್ಪಿತವಾಗಿದ್ದು, ಇದು ಅದ್ಭುತ ಮತ್ತು ಪುರಾತನ ದೇವಾಲಯವಾಗಿ ಹೆಚ್ಚು ಜನಪ್ರಿಯಗೊಂಡಿದೆ. ಈ ದೇವಾಲಯವು ಸವದತ್ತಿ ಪಟ್ಟಣದಿಂದ ಸುಮಾರು 5 ಕಿಮೀ ದೂರದಲ್ಲಿರುವ ಯಲ್ಲಮ್ಮ ಗುಡ್ಡದಲ್ಲಿದೆ. ಯಲ್ಲಮ್ಮ ದೇವಿ ದೇವಸ್ಥಾನವು ಸೌದತ್ತಿ ಬಳಿಯಿರುವ ಯಲ್ಲಮ್ಮ ಗುಡ್ಡದಲ್ಲಿ ನೆಲೆನಿಂತಿರುವ ದೇವಿ ದೇವಾಲಯವಾಗಿದೆ. ಸವದತ್ತಿಯು ಪ್ರಾಚೀನ ಪಟ್ಟಣವಾಗಿದ್ದು, ಇದು ರಟ್ಟ ರಾಜವಂಶದ ಮೊದಲ ರಾಜಧಾನಿಯಾಗಿತ್ತು ಎನ್ನುವ ಉಲ್ಲೇಖವೂ ಇದರ ಕುರಿತಿದೆ. ಇದು ಜಮದಗ್ನಿಯ ಹೆಂಡತಿ ಮತ್ತು ಪರಶುರಾಮನ ತಾಯಿಯಾದ ರೇಣುಕಾಗೆ ಸಂಬಂಧಿಸಿರುವ ದೇವಾಲಯವಾಗಿದ್ದು, ಅವರ ಕಥೆಯನ್ನು ಪುರಾಣಗಳಲ್ಲಿ ಹೇಳಲಾಗಿದೆ. ಇಲ್ಲಿ ಆಕೆಯನ್ನು ರೇಣುಕಾ ದೇವಿ ಅಥವಾ ಯಲ್ಲಮ್ಮ ದೇವಿ ಎನ್ನುವ ಹೆಸರಿನಿಂದ ಪೂಜಿಸಲಾಗುತ್ತದೆ. ರೇಣುಕಾ ದೇವಿ ದೇವಸ್ಥಾನವು ಸವದತ್ತಿಯ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ…
ಚೆಯ್ಯಂಡಾಣೆ ಫೆ.6 NEWS DESK : ಜಗತ್ತಿನ ಬದಲಾವಣೆಗೆ ಅನುಗುಣವಾಗಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕ ಮತ್ತು ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಕಕ್ಕಬ್ಬೆ ಕುಂಜಿಲ ಗ್ರಾಮದ ಕೆ.ಪಿ ಬಾಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗಿನ ಆಧುನಿಕ ಯುಗದಲ್ಲಿ ಡಿಜಿಟಲೀಕರಣ ಅತ್ಯವಶ್ಯಕ. ನಗರ ಪ್ರದೇಶಗಳಲ್ಲಿ ಡಿಜಿಟಲೀಕರಣಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಡಿಜಿಟಲ್ ಜಗತ್ತಿನಲ್ಲಿ ಸಾಧಕ ಬಾಧಕಗಳು ಕೂಡ ಇದೆ. ಅದರಲ್ಲಿ ಸಾಧಕಗಳನ್ನು ಆಯ್ಕೆಮಾಡಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಾಗಿದೆ ಎಂದರು. ಸಾಮಾಜಿಕ ಜಾಲತಾಣಗಳಿಂದ ಹರಡುವ ತಪ್ಪು ಮಾಹಿತಿಯನ್ನು ದೂರ ಇಟ್ಟು, ಒಳ್ಳೆಯದನ್ನು ಆಯ್ಕೆ ಮಾಡಿ ಉಪಯೋಗ ಪಡೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಅವರ ಮುಂದಿನ ಭವಿಷ್ಯ ಉಜ್ವಲವಾಗಲು ಎಲ್ಲಾ ರೀತಿಯ ಅವಕಾಶಗಳನ್ನು ಕಲ್ಪಿಸಿ ಕೊಡಬೇಕಾಗಿದೆ.ಅದರಂತೆ ಇಲ್ಲಿನ ಶಾಲೆಯ ಮಕ್ಕಳಿಗೆ ಡಿಜಿಟಲೀಕರಣಕ್ಕೆ ಒತ್ತು ನೀಡಿರುವುದು…
ಸುಲಲಿತ ಜೀರ್ಣಕ್ರಿಯೆ ಹಾಗೂ ಆಹಾರದ ಪೋಷಕಾಂಶಗಳ ಹೀರುವಿಕೆ ಆಹಾರ ಅಗಿಯುವಿಕೆಯಿಂದಲೇ ಪ್ರಾರಂಭ. ಹಾಗಾಗಿ ಚೆನ್ನಾಗಿ ಅಗಿಯುವಿಕೆ ಆಹಾರ ಜೀರ್ಣಕ್ರಿಯೆಯಲ್ಲಿ ಮೊದಲ ಅಂಶ ಹಾಗೂ ನಮ್ಮ ಆರೋಗ್ಯ ನಿರ್ಧರಿಸುವ ಅಂಶವೂ ಆಗಿದೆ. ಚೆನ್ನಾಗಿ ಅಗಿಯುವುದರಿಂದ ಆಗುವ ಪ್ರಯೋಜನಗಳೇನು? ಹೆಚ್ಚು ಪೋಷಕಾಂಶ ಹೀರುವಿಕೆ ಹಾಗೂ ಶಕ್ತಿಯ ಪ್ರಮಾಣ ಉಳಿತಾಯ- ಅಗಿಯುವಿಕೆ ಆಹಾರದ ದೊಡ್ಡ ತುಣುಕುಗಳನ್ನು ಸಣ್ಣ ಸಣ್ಣ ಕಣಗಳಾಗಿ ವಿಭಜಿಸುತ್ತದೆ. ಇದರಿಂದ ಜೀರ್ಣಕ್ರಿಯೆಯ ಕಿಣ್ವಗಳು ಮತ್ತು ಜಠರಾಮ್ಲದ ಕಾರ್ಯನಿರ್ವಹಣೆ ಸುಲಭವಾಗಿ ಆಗಿ ಜೀರ್ಣಕ್ರಿಯೆ ಚುರುಕಾಗುತ್ತದೆ ಮತ್ತು ಕಡಿಮೆ ಶಕ್ತಿ ವ್ಯಯವಾಗುತ್ತದೆ. ನಮ್ಮ ಶರೀರದಲ್ಲಿ ಅತ್ಯಂತ ಹೆಚ್ಚಿನ ಶಕ್ತಿ ವ್ಯಯವಾಗುವ ಕ್ರಿಯೆಯಾದ ಜೀರ್ಣಕ್ರಿಯೆಗೆ ನಾವು ಅಗಿದು ಅಗಿದು ತಿಂದು ಸಹಾಯ ಮಾಡಿದಾಗ ಶಕ್ತಿಯ ವ್ಯಯವನ್ನು ಉಳಿಸಬಹುದಲ್ಲವೇ? ಇದಲ್ಲದೆ ಅಗಿ ಯುವಿಕೆಯು ಸಾಲಾಗಿ, ಸಲೀಸಾಗಿ ಗ್ರಂಥಿಗಳಿಂದ ಆಮ್ಲ ಹಾಗೂ ಕಿಣ್ವಗಳ ಉತ್ಪಾದನೆಯನ್ನು ಪ್ರಚೋದಿಸುತ್ತವೆ. ಶರೀರದ ಸಮತೂಕ ಕಾಯ್ದುಕೊಳ್ಳುವಿಕೆ- ಸಾಮಾನ್ಯವಾಗಿ ಆಹಾರ ಸೇವನೆಯ ಹೊತ್ತಿನಲ್ಲಿ ನಮ್ಮ ಮೆದುಳಿಗೆ ಹೊಟ್ಟೆ ತುಂಬಿದೆ ಎನ್ನುವ ಸಂದೇಶ ರವಾನೆಯಾಗಲು ಕನಿಷ್ಟ 20 ನಿಮಿಷಗಳಾದರೂ…
ಮಡಿಕೇರಿ ಫೆ.6 NEWS DESK : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದಿಂದ ಕೈಗೆಟುಕುವ ದರದಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿಯನ್ನು ನೀಡುತ್ತಿದೆ. 1 ಕೆಜಿ ಅಕ್ಕಿಯ ಬೆಲೆ ರೂ.29 ಆಗಿದ್ದು, ತಲಾ 5 ಕೆಜಿ ಮತ್ತು 10 ಕೆಜಿ ಬ್ಯಾಗ್ ನಲ್ಲಿ ಸಿಗಲಿದೆ. ಇಂದಿನಿಂದ ಭಾರತ್ ಬ್ರ್ಯಾಂಡ್ ಅಕ್ಕಿ ಮಾರಾಟಕ್ಕೆ ಚಾಲನೆ ಸಿಗಲಿದ್ದು, ನಾಫೆಡ್‌ನ ಸಂಚಾರಿ ವಾಹನಗಳಲ್ಲಿ ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರಲಿದೆ.
ಮಡಿಕೇರಿ ಫೆ.6 NEWS DESK : ಇತ್ತೀಚೆಗೆ ಮೈಸೂರಿನ ಬೋಗಾದಿಯಲ್ಲಿ ಅವೈಜ್ಞಾನಿಕ ರಸ್ತೆ ಹಂಪ್ ನಿಂದ ಪ್ರಾಣ ಕಳೆದುಕೊಂಡ ಕಂಡಂಗಾಲ ಗ್ರಾಮದ ಬಲ್ಲಾಡಿಚಂಡ ಬಿ.ಶಿವನ್ ಮನೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬೆಂಗಳೂರು ಫೆ.6 : ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪøಶ್ಯತೆ ನಿವಾರಣೆಗೆ ನಡೆಸಿದ ಪ್ರಯೋಗಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ನಿಮಿತ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುಮಾನ ವಿತರಿಸಿದರು. ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತ 9 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳು, ಸ್ಮರಣಿಕೆ ಹಾಗೂ ಗಾಂಧೀಜಿ ಅವರ ಜೀವ ಸಂದೇಶಗಳ ಕುರಿತು ಪುಸ್ತಕಗಳನ್ನು ವಿತರಿಸಿ ಶುಭಕೋರಿದರು. ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆಯ ವಿಧ್ಯಾರ್ಥಿ ಅನಿರುದ್ದ ಮನೋಜ್ ಮತ್ತು ಮಡಿಕೇರಿಯ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನ ಕೆ.ಎಸ್.ಹೃತ್ಪೂರ್ವಕ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಮುಖ್ಯಮಂತ್ರಿ ಅವರಿಂದ ಬಹುಮಾನ ಪಡೆದಿರುವುದು ವಿಶೇಷ. ಜಿಲ್ಲಾ ಮಟ್ಟದಲ್ಲಿ ಪ್ರಥಮ…






