ಲೇಖಕ: admin

ಮಡಿಕೇರಿ ಫೆ.6 NEWS DESK : ವಿರಾಜಪೇಟೆಯ ನಾಟ್ಯಮಯೂರಿ ನೃತ್ಯ ಶಾಲೆ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಸಮೂಹ ನೃತ್ಯ ಮತ್ತು ಏಕ ವ್ಯಕ್ತಿ ನೃತ್ಯದಲ್ಲಿ ಮೂರ್ನಾಡಿನ ಮಾರುತಿ ಶಾಲೆಯ ವಿದ್ಯಾರ್ಥಿನಿ ಹೆಚ್.ವಿ.ವರ್ಷಿತ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರಳಾದಳು. ಅತಿಥಿ ಗಣ್ಯರು ಹೆಚ್.ವಿ.ವರ್ಷಿತಾಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು. ಮಾರುತಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಹಾಕತ್ತೂರು ನಿವಾಸಿ ಹೆಚ್.ಟಿ.ವೆಂಕಟೇಶ್ ಹಾಗೂ ವನಿತಾ ದಂಪತಿ ಪುತ್ರಿ.

Read More

ಮಡಿಕೇರಿ ಫೆ.6 NEWS DESK : ಮಡಿಕೇರಿಯ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಸಮಯದ ಕರೆ – ಸಕಾರಾತ್ಮಕ ಚಿಂತನೆಯ ಬಗ್ಗೆ ವಿಚಾರ ಸಂಕಿರಣ ನಡೆಯಿತು. ಮುಂಬೈನ ಪ್ರಖ್ಯಾತ ಸ್ಫೂರ್ತಿ ದಾಯಕ ಪ್ರವಚನಕಾರ ಬ್ರಹ್ಮಾಕುಮಾರ್ ಗಿರೀಶ್ ವಿಚಾರ ಸಂಕಿರಣ ನಡೆಸಿಕೊಟ್ಟರು. ಜಿಲ್ಲಾ ನ್ಯಾಯಾಧೀಶರು ಬಿ.ಕೆ.ಗಿರೀಶ್ ಅವರನ್ನು ಸನ್ಮಾನಿಸಿ, ವರ್ತಮಾನದ ಒತ್ತಡದ ಬದುಕಿಗೆ ಇಂತಹ ಕಾರ್ಯಕ್ರಮಗಳು ಅತೀ ಅವಶ್ಯಕವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹೆಚ್.ಸಿ.ಶ್ಯಾಂ ಪ್ರಸಾದ್  ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಬ್ರಹ್ಮಾಕುಮಾರೀಸ್ ನ ಬಿ.ಕೆ.ಧನಲಕ್ಷ್ಮಿ ಅಕ್ಕನವರು ಹಾಗೂ ಬಿ.ಕೆ. ಪ್ರಾಣೇಶಣ್ಣ ಉಪಸ್ಥಿತರಿದ್ದರು. ನ್ಯಾಯಾಧೀಶರುಗಳು, ವಕೀಲರ ಸಂಘದ ಅಧ್ಯಕ್ಷ  ನಿರಂಜನ್,  ವಕೀಲರುಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗದವರು ಹಾಜರಿದ್ದರು. ಕಾರ್ಯಕ್ರಮ ಬಹಳ ಲಾಭದಾಯಕವಾಗಿದೆಯೆಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

Read More

ಮಡಿಕೇರಿ ಫೆ.6 NEWS DESK : ‘ಮಾದಿಗ ಮುನ್ನಡೆ’ ಮಾದಿಗರ ಆತ್ಮ ಗೌರವ ಸಮಾವೇಶದಲ್ಲಿ ಒಳ ಮೀಸಲಾತಿಗೆ ಪ್ರಮುಖರು ಆಗ್ರಹಿಸಿದರು. ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಮಾದಿಗರ ಆತ್ಮ ಗೌರವ ಸಮಾವೇಶದಲ್ಲಿ ಮಾದಿಗರಿಗೆ ಒಳ ಮೀಸಲಾತಿ ಸಿಗಬೇಕು. ಆ ಮೂಲಕ ಅವರು ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದು ಪ್ರಮುಖರು ಒತ್ತಾಯಿಸಿದರು. ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಮಾತನಾಡಿ, ಕಳೆದ 26 ವರ್ಷಗಳಿಂದ ರಾಜ್ಯದಲ್ಲಿ ಒಳ ಮೀಸಲಾತಿಗಾಗಿ ಹೋರಾಟ ನಡೆದಿದೆ. ಅದಕ್ಕಾಗಿ 9 ಜನರ ಬಲಿದಾನವಾಗಿದೆ, ಮೀಸಲಾತಿ ಸಿಕ್ಕಿದಾಗ ಈ ಬಲಿದಾನಗಳಿಗೆ ಶಾಂತಿ ಸಿಗಲಿದೆ. ಕೊಡಗು ಜಿಲ್ಲೆಯಲ್ಲಿ ಎಂಟು ಸಾವಿರಕ್ಕೂ ಅಧಿಕ ಮಾದಿಗ ಜನಾಂಗದ ಬಂಧುಗಳಿದ್ದಾರೆ ಎಂದು ಹೇಳಿದರು. ತುಮಕೂರಿನ ಡಾ. ಲಕ್ಷ್ಮಿಕಾಂತ್ ಮಾತನಾಡಿ, ಮಾದಿಗ ಜನಾಂಗ ಬಂಧುಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಬಲರಾಗಬೇಕು. ಸ್ವಾತಂತ್ರ್ಯ ಬಂದು ಕಳೆದ 75 ವರ್ಷ ಕಳೆದರೂ ಇನ್ನೂ ಕೂಡ ಸಮಾಜ ಬಂದುಗಳು ಎಚ್ಚೆತ್ತುಕೊಂಡಿಲ್ಲ ಎಂದು…

Read More

ಮಡಿಕೇರಿ ಫೆ.6 : NEWS DESK :   ರಾಜ್ಯದ ಎಲ್ಲಾ ಗ್ರಾಮೀಣ ಪತ್ರಕರ್ತರಿಗೆ ಬಸ್‌ ಪಾಸ್‌ ಸೌಲಭ್ಯ ನೀಡುವುದಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಗ್ರಾಮೀಣ ಪತ್ರಕರ್ತರ ಬಸ್‌ ಪಾಸ್‌ ಬೇಡಿಕೆಗೆ ದಶಕಗಳ ಇತಿಹಾಸವೂ ಇದೆ. ಆದರೆ ಸರ್ಕಾರವು ಬಸ್‌ ಪಾಸ್‌ ನೀಡುವುದೇ ಆದಲ್ಲಿ ಗ್ರಾಮೀಣ ಅರ್ಹ ಪತ್ರಕರ್ತರನ್ನು ಗುರುತಿಸುವುದಕ್ಕೇ ಜಿಲ್ಲಾ ಮಟ್ಟದಲ್ಲಿ ಮಾನ್ಯತಾ ಸಮಿತಿಯನ್ನು ಮೊದಲು ರಚಿಸಬೇಕಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ಮೊದಲಿನಿಂದ ಇರುವ ಕಾರ್ಯನಿರತ ಪತ್ರಕರ್ತರ ಸಂಘದ ಜತೆಗೇ ಇನ್ನೊಂದೆರಡು ಸಂಘಟನೆಗಳೂ ರಾಜ್ಯದಲ್ಲಿ ಸಕ್ರಿಯವಾಗಿ ಇವೆ. ಇತರ ಸಂಘಟನೆಗಳನ್ನು ಅನಧಿಕೃತ ಎಂದು ಹೇಳಲೂ ಸಾಧ್ಯವಿಲ್ಲ. ಇನ್ನು ಪಾಸ್‌ ಸಿಗುವ ವಿಚಾರ ಖಚಿತ ಆದ ಕೂಡಲೇ ಈಗಾಗಲೇ ಕೊನೆಯುಸಿರು ಎಳೆದಿರುವ ನವೀಕರಣ ಸಮಯದಲ್ಲಿ ಮಾತ್ರ ವರ್ಷಕ್ಕೊಮ್ಮೆ ಪ್ರಕಟಗೊಳ್ಳುವ ನೂರಾರು ಪತ್ರಿಕೆಗಳು ಮರು ಜೀವ ಪಡೆದುಕೊಳ್ಳುತ್ತವೆ. . ಇದರ ಜತೆಗೇ ಈಗಾಗಲೇ ಪತ್ರಕರ್ತರ ವೇಷ ಹಾಕಿಕೊಂಡಿರುವ ನೂರಾರು NRR (Non Reporting Reporters) ಗಳ ಜತೆಗೇ ನೂರಾರು NRR ಗಳೂ ಸೃಷ್ಟಿ…

Read More

ಕೊಡ್ಲಿಪೇಟೆ ಫೆ.6 NEWS DESK :  ಕೊಡ್ಲಿಪೇಟೆಯ ವಿವಿಧೆಡೆ ಸಂವಿಧಾನ ಜಾಗೃತಿ ಜಾಥಾ ನಡೆಯಿತು.   ಪಟ್ಟಣದ ವಿವಿಧೆಡೆ ಶಬ್ದ ಚಿತ್ರ ಮೆರವಣಿಗೆ ನಡೆಯಿತು. ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಜಾಗೃತಿ ಜಾಥವನ್ನು ಬರಮಾಡಿಕೊಂಡರು. ಕೊಡ್ಲಿಪೇಟೆ ಮತ್ತು ಬ್ಯಾಡ ಗೊಟ್ಟ ಪಂಚಾಯಿತಿ ಮತ್ತು ಬೆಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗು ಸಿಬ್ಬಂದಿ ವರ್ಗ, ಗ್ರಾಮಮಟ್ಟದ ಇಲಾಖೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರಗಳು ಶಾಲೆಗಳು ವಿದ್ಯಾರ್ಥಿಗಳು ಸಾರ್ವಜನಿಕರು  ಹಾಜರಿದ್ದರು.

Read More

ಮಡಿಕೇರಿ ಫೆ.5 NEWS DESK : ಜಮ್ಮಾಬಾಣೆ ಸಮಸ್ಯೆ ಇತ್ಯರ್ಥಕ್ಕೆ ಆಂದೋಲನದ ಮಾದರಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಜಮ್ಮಾಬಾಣೆ ಸಮಸ್ಯೆ ಬಗೆಹರಿಯದೇ ನಾಲ್ಕಾರು ವರ್ಷಗಳಿಂದ ಹಾಗೇ ಉಳಿದಿದೆ. ಈ ಬಗ್ಗೆ ಜಿಲ್ಲೆಯ ಶಾಸಕದ್ವಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಮತ್ತು ಜಿಲ್ಲಾಧಿಕಾರಿ ಅವರು ತಮ್ಮ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಜಮ್ಮಾಬಾಣೆ ಸಮಸ್ಯೆ ಬಗೆಹರಿಕೆಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಯಾವ ಊರಿನಲ್ಲಿ ಜಮ್ಮಾಬಾಣೆ ಸಮಸ್ಯೆ ಇದೆಯೋ ಅಂತಹ ಊರುಗಳಲ್ಲಿ ತಹಶೀಲ್ದಾರ್ ಸೇರಿದಂತೆ ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಗ್ರಾಮಸಭೆ ನಡೆಸುವ ಮೂಲಕ ತಕರಾರಿಲ್ಲದ ಕಡೆ ಸರ್ವೆ ನಡೆಸಿ ಯಾರು ಜಾಗ ಸಾಗುವಳಿ ಮಾಡುತ್ತಿದ್ದಾರೋ ಅಂತಹವರ ಹೆಸರಿಗೆ ಪ್ರತ್ಯೇಕವಾದ ಹಿಸ್ಸಾ ಪಹಣಿ ಮಾಡಿಕೊಡಬೇಕು. ತಕರಾರು ಇದ್ದ ಕಡೆಗಳಲ್ಲಿ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಲಾಗಿದೆ. ಈ ಕಾರ್ಯ ಆಂದೋಲನ ಮಾದರಿಯಲ್ಲಿ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು…

Read More

ಮಡಿಕೇರಿ ಫೆ.5 NEWS DESK : ಜಮ್ಮಾಬಾಣೆ ಸಮಸ್ಯೆ ಇತ್ಯರ್ಥಕ್ಕೆ ಆಂದೋಲನದ ಮಾದರಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಜಮ್ಮಾಬಾಣೆ ಸಮಸ್ಯೆ ಬಗೆಹರಿಯದೇ ನಾಲ್ಕಾರು ವರ್ಷಗಳಿಂದ ಹಾಗೇ ಉಳಿದಿದೆ. ಈ ಬಗ್ಗೆ ಜಿಲ್ಲೆಯ ಶಾಸಕದ್ವಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಮತ್ತು ಜಿಲ್ಲಾಧಿಕಾರಿ ಅವರು ತಮ್ಮ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಜಮ್ಮಾಬಾಣೆ ಸಮಸ್ಯೆ ಬಗೆಹರಿಕೆಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಯಾವ ಊರಿನಲ್ಲಿ ಜಮ್ಮಾಬಾಣೆ ಸಮಸ್ಯೆ ಇದೆಯೋ ಅಂತಹ ಊರುಗಳಲ್ಲಿ ತಹಶೀಲ್ದಾರ್ ಸೇರಿದಂತೆ ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಗ್ರಾಮಸಭೆ ನಡೆಸುವ ಮೂಲಕ ತಕರಾರಿಲ್ಲದ ಕಡೆ ಸರ್ವೆ ನಡೆಸಿ ಯಾರು ಜಾಗ ಸಾಗುವಳಿ ಮಾಡುತ್ತಿದ್ದಾರೋ ಅಂತಹವರ ಹೆಸರಿಗೆ ಪ್ರತ್ಯೇಕವಾದ ಹಿಸ್ಸಾ ಪಹಣಿ ಮಾಡಿಕೊಡಬೇಕು. ತಕರಾರು ಇದ್ದ ಕಡೆಗಳಲ್ಲಿ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಲಾಗಿದೆ. ಈ ಕಾರ್ಯ ಆಂದೋಲನ ಮಾದರಿಯಲ್ಲಿ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು…

Read More

ಮಡಿಕೇರಿ, ಫೆ. 5 NEWS DESK : ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮಾ), ಕೊಡಗು ಸಂಘದ ವತಿಯಿಂದ ಆಯುರ್ವೇದ ವೈದ್ಯರಿಗೆ ನಿರಂತರ ಶಿಕ್ಷಣ ಕಾಯ೯ಕ್ರಮ  ನಡೆಯಿತು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ಕುಮಾರ್ “ಆಯುರ್ವೇದದಲ್ಲಿ ಮಧುಮೇಹದ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ”ಯ ಬಗ್ಗೆ ಮಾಹಿತಿ ನೀಡಿದರು. ಹೊಸ ಯುಕ್ತಿ ಹಳೇ ತತ್ವಗಳನ್ನು ಒಳಗೂಡಿಸಿಕೊಂಡು ಹೇಗೆ ನಮ್ಮ ಸುತ್ತಲೂ ಲಭ್ಯವಿರುವ ಗಿಡಮೂಲಿಕೆಗಳನ್ನು ಸೂಕ್ತವಾಗಿ ಬಳಸುವುದರಿಂದ, ಸೂಕ್ತ ಯೋಗಾಭ್ಯಾಸದಿಂದ ಮಧುಮೇಹವನ್ನು  ಯಾವ ರೀತಿಯಲ್ಲಿ ನಿಯಂತ್ರಿಸಬಹುದು ಎಂದು ಅವರು  ತಿಳಿಸಿದರು. ನೀಮಾ ಕೊಡಗು ಅಧ್ಯಕ್ಷ  ಡಾ.ರಾಜಾರಾಮ್  ಅಧ್ಯಕ್ಶ್ಯತೆಯಲ್ಲಿ  ನಡೆದ ಕಾಯಾ೯ಗಾರದ ಪ್ರಯೋಜನವನ್ನು   ಕೊಡಗಿನ 30ಕ್ಕೂ ಹೆಚ್ಚು  ಆಯುಷ್ ವೈದ್ಯರು    ಪಡೆದುಕೊಂಡರು. ಡಾ. ಸೌಮ್ಯ ಸ್ವಾಗತಿಸಿ, ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿಕೊಟ್ಟರು. ನೀಮಾ ಕೊಡಗು ಮಹಿಳಾ ಘಟಕದ ಅಧ್ಯಕ್ಷೆ ಡಾ. ಶೈಲಜಾ ರಾಜೇಂದ್ರ, ಹಿರಿಯ ವೈದ್ಯರಾದ  ಡಾ. ಉದಯಶಂಕರ್, ಡಾ. ಉದಯಕುಮಾರ್, ಡಾ. ಶೈಲಜಾ ಮುರಳೀಧರ, ಡಾ. ರಾಜೇಂದ್ರ, ಡಾ. ಷೆನೋಯ್, ಡಾ. ವಿವೇಕ್…

Read More

ಮಡಿಕೇರಿ ಫೆ.5 : ಮಡಿಕೇರಿ 66/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಜಿ.ಟಿ.ರಸ್ತೆ ಫೀಡರ್‍ನ ವಿದ್ಯುತ್ ಮಾರ್ಗದಲ್ಲಿ ಜಿಒಎಸ್ ಅಳವಡಿಸುವ ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ಫೆ.6 ರಂದು ಬೆಳಗ್ಗೆ 9:30 ರಿಂದ ಸಂಜೆ 5.30 ಗಂಟೆವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಮೈಸೂರು ರಸ್ತೆ, ಅರಣ್ಯ ಭವನ, ಚೈನ್‍ಗೇಟ್, ಪುಟಾಣಿನಗರ, ದೇಚೂರು, ಮಂಗಳದೇವಿನಗರ ಮೂರ್ನಾಡು ರಸ್ತೆ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.

Read More

ಮಡಿಕೇರಿ ಫೆ.5 NEWS DESK : ಜಿಲ್ಲೆಯಲ್ಲಿ ಹಲವು ದಶಕಗಳಿಂದ ಜಮ್ಮಾಬಾಣೆ ಭೂಮಿ ಸರ್ವೆ ಮಾಡಲು ಬಾಕಿ ಇದ್ದು, ಆ ನಿಟ್ಟಿನಲ್ಲಿ ಸಾಗುವಳಿ ಮಾಡುವವರಿಗೆ ಆರ್‍ಟಿಸಿ(ಪಹಣಿ) ಮಾಡಿಕೊಡಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಅಧಿಕಾರಿಗಳು ಸರ್ವೆ ಕಾರ್ಯ ಕೈಗೊಳ್ಳಲು ಮುಂದಾಗುವಂತೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸುದೀರ್ಘವಾಗಿ ಸೋಮವಾರ ಪ್ರಗತಿ ಪರಿಶೀಲನೆ ನಡೆಸಿದರು. `ಜಮ್ಮಾ ಭೂಮಿ ಹಿಡುವಳಿದಾರರಿಗೆ ಆರ್‍ಟಿಸಿ ಇಲ್ಲದಿರುವುದರಿಂದ ಸಾಲ ಸೌಲಭ್ಯ ಹಾಗೂ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೃಷಿ ಮಾಡುವ ಕುಟುಂಬದವರಿಗೆ ಆರ್‍ಟಿಸಿ ಮಾಡಿಕೊಡಬೇಕಿದ್ದು, ಆ ನಿಟ್ಟಿನಲ್ಲಿ ಸರ್ವೇ ಕಾರ್ಯವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.’ `ಕೊಡಗು ಜಿಲ್ಲೆಯಲ್ಲಿ 25 ಸಾವಿರ ಜನರು ಜಮ್ಮಬಾಣೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು, ಪಟ್ಟೆದಾರ ಕುಟುಂಬದ ಒಬ್ಬರ ಹೆಸರಿಗೆ ಮಾತ್ರ ಭೂಮಿ ಇದ್ದು, ಆ ಕುಟುಂಬದ ಇತರರಿಗೂ ಆರ್‍ಟಿಸಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ಸರ್ವೇ…

Read More