ಮಡಿಕೇರಿ ಮಾ.4 NEWS DESK : ಪ್ರತಿ ಮನುಷ್ಯರಿಗೂ ಶ್ರವಣ(ಕಿವಿ) ಪ್ರಮುಖ ಅಂಗವಾಗಿದ್ದು, ಸೂಕ್ಷ್ಮ ಪ್ರದೇಶವಾದ ಕಿವಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ತಿಳಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆ ಹಾಗೂ ಮೈಸೂರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮಡಿಕೇರಿ ಬಾಹ್ಯ ಸೇವಾ ಕೇಂದ್ರದ ಸಹಯೋಗದಲ್ಲಿ `ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ’ದಡಿಯಲ್ಲಿ ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಉಪನ್ಯಾಸ ಕೊಠಡಿಯಲ್ಲಿ ನಡೆದ `ವಿಶ್ವ ಶ್ರವಣ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಒಂದು ಸಾವಿರ ಜನರಲ್ಲಿ 291 ಮಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಶ್ರವಣದೋಷ ಇರುತ್ತದೆ. ಆದ್ದರಿಂದ ಸೂಕ್ಷ್ಮ ಭಾಗವಾದ ಶ್ರವಣ ಬಗ್ಗೆ ಎಚ್ಚರವಹಿಸಬೇಕು. 75 ಡಿಸಿಬಲ್‍ಗಿಂತ ಕಡಿಮೆ ಶಬ್ಧ ಬಳಸಬೇಕು ಎಂದು ಸಲಹೆ ಮಾಡಿದರು. ಸಣ್ಣ ಮಕ್ಕಳಿಗೂ ಸಹ ಶ್ರವಣದೋಷ ಇರುತ್ತದೆ. ಆದ್ದರಿಂದ ಈ ಬಗ್ಗೆ…
ಲೇಖಕ: admin
ಕುಶಾಲನಗರ, ಮಾ.4 NEWS DESK : ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಕುಶಾಲನಗರ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ:2024 ರ ಅಂಗವಾಗಿ ಶಾಲೆಯ ವಿಜ್ಞಾನ ಸಂಘ, ಇಕೋ ಕ್ಲಬ್, ಗಣಿತ ಸಂಘ, ಕಲಾ ಸಂಘ, ಎನ್.ಎಸ್.ಎಸ್.ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದೊಂದಿಗೆ ನಡೆದ ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನದ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ಹಬ್ಬ ಗಮನ ಸೆಳೆಯಿತು. ವಿದ್ಯಾರ್ಥಿಗಳು ಅನುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಿಂದ ತಯಾರಿಸಿದ ವಿಜ್ಞಾನ, ಗಣಿತ ಹಾಗೂ ಕಲೆಗೆ ಸಂಬಂಧಿಸಿದ ವಸ್ತುಗಳು ಮಕ್ಕಳ ಸೃಜನಶೀಲತೆಗೆ ಸೂಕ್ತ ವೇದಿಕೆ ಒದಗಿಸಿತು. ವಸ್ತು ಪ್ರದರ್ಶನ ಹಾಗೂ ವಿಜ್ಞಾನ ಹಬ್ಬಕ್ಕೆ ಚಾಲನೆ ನೀಡಿದ ರೋಟರಿ ಸಂಸ್ಥೆಯ ಅಧ್ಯಕ್ಷೆ ಸುನಿತಾ ಮಹೇಶ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ, ಗಣಿತ ಹಾಗೂ ಸಮಾಜ ವಿಷಯಗಳ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿಜ್ಞಾನ…
ಮಡಿಕೇರಿ ಮಾ.4 NEWS DESK : ಆಧುನಿಕ ಕಾಲದ ಭರಾಟೆಯಲ್ಲಿ ನಮ್ಮ ರಂಗಭೂಮಿಯ ಕಲೆಗಳ ವಿನಾಶಕ್ಕೆ ನಾವು ಕಾರಣರಾಗದೆ ಅದನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಸಂತ ಅನ್ನಮ್ಮ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕಿ ಪ್ರತಿಮಾ ಹರೀಶ್ ರೈ ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮಡಿಕೇರಿ ಪತ್ರಿಕಾ ಭವನದಲ್ಲಿ ಸಾಹಿತಿ ನಾ. ಡಿ’ಸೋಜ ಅವರ ದತ್ತಿ ಕಾರ್ಯಕ್ರಮದ ಅಂಗವಾಗಿ ಫ್ರೌಡ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಲಲಿತಕಲೆಗಳಲ್ಲಿ ರಂಗ ಭೂಮಿಯ ಕಲಾ ಪ್ರಕಾರಗಳು ಪೂರ್ವಿಕರಿಂದ ನೆಲೆಯೂರಿ ಬೆಳೆದಿದ್ದು, ಚಲನಚಿತ್ರಗಳ ಆರಂಭವಾಗುವುದಕ್ಕೆ ಮೊದಲೇ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಸಮಾಜಕ್ಕೆ ಮಾಹಿತಿ ನೀಡುತ್ತಿದ್ದ ಕಲಾವಿದರ ಪ್ರತಿಭೆ ಅದ್ಭುತವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಂಗಾಯಣ, ನೀನಾಸಂ ಇನ್ನಿತರ ಸಂಸ್ಥೆಗಳು ಸಾಮಾಜಿಕ ಪೌರಾಣಿಕ, ಹಾಸ್ಯ ಮತ್ತು ಸಮಾಜಮುಖಿ ನಾಟಕಗಳ ಪ್ರದರ್ಶನದಿಂದ ಸಮಾಜ ಪರಿವರ್ತನೆಗೊಂಡಂತೆ ಇಂದಿನ ಆಧುನಿಕ ಯುಗದಲ್ಲಿರುವ ನಮ್ಮ ವಿದ್ಯಾರ್ಥಿಗಳು ಸಾಹಿತ್ಯ ಪುಸ್ತಕಗಳಲ್ಲಿ ಅಡಕವಾಗಿರುವ…
ಮಡಿಕೇರಿ ಮಾ.4 NEWS DESK : ಮಾಯಮುಡಿ ಗ್ರಾ.ಪಂ ವ್ಯಾಪ್ತಿಯ ಮಾಯಮುಡಿ ಹಾಗೂ ಧನುಗಾಲ ಕೇಂದ್ರಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಿತು. ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಎ.ಎಸ್.ಟಾಟು ಮೊಣ್ಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಐದು ವರ್ಷದೊಳಗಿನ ಮಕ್ಕಳಿಗೆ ತಾಯಂದಿರು ಕಡ್ಡಾಯವಾಗಿ ಪಲ್ಸ್ ಪೋಲಿಯೋ ಹಾನಿ ಹಾಕಿಸುವ ಮೂಲಕ ದೇಶದಲ್ಲಿ ಪೋಲಿಯೋ ನಿಮೂರ್ಲನೆಗೆ ಪಣತೊಡಬೇಕು ಎಂದರು. ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಸುಮಿತ್ರ ಬಸವಣ್ಣ, ಅಭಿವೃದ್ಧಿ ಅಧಿಕಾರಿ ರವಿ ಮೆಟಲ್ ಕೋಡ್, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳಾದ ಚೀರಂಜೀವಿ, ಇಂದಿರಾ, ಕಾವ್ಯ ಸಂತು, ಅಂಗನವಾಡಿ ಕಾರ್ಯಕರ್ತರಾದ ಉಮಾದೇವಿ, ರಾಧ, ಪ್ರೇಮ, ಆಶಾ ಕಾರ್ಯಕರ್ತೆಯರಾದ ಸುನೀತಾ, ಕವಿತಾ, ಗಾಯತ್ರಿ ಹಾಗೂ ಮೀನಾಕ್ಷಿ ಹಾಜರಿದ್ದರು.
ಮಡಿಕೇರಿ ಮಾ.4 NEWS DESK : ಮಾಯಮುಡಿಯ ಕಮಟೆ ಮಹಾದೇವರ ದೇವಾಲಯದಲ್ಲಿ ಮಾ.8 ರಂದು ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ. ಅಂದು ರಾತ್ರಿ 7 ಗಂಟೆಗೆ ದೇವಾಲಯದಲ್ಲಿ ಮಹಾದೇವರಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದ್ದು, ಜಾಗರಣೆ ಪ್ರಯುಕ್ತ ಭಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸಣ್ಣುವಂಡ ಬಿ.ರಮೇಶ್ ಹಾಗೂ ಕಾರ್ಯದರ್ಶಿ ಸಣ್ಣುವಂಡ ವಿನಯ್ ಅಯ್ಯಪ್ಪ ಮನವಿ ಮಾಡಿದ್ದಾರೆ.
ಮಡಿಕೇರಿ ಮಾ.4 NEWS DESK : ಕ್ರೀಡಾಪಟು ದಿವಂಗತ ಧರ್ಮ ಅವರ ಜ್ಞಾಪಕರ್ಥವಾಗಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆದ ಲೀಗ್ ಮಾದರಿಯ ವಾಲಿಬಾಲ್ ಪಂದ್ಯದಲ್ಲಿ ಮನ್ವಿಕ್ ಫ್ರೆಂಡ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಟೀಮ್ 14 ಅಶೋಕಪುರ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. 3ನೇ ಸ್ಥಾನವನ್ನು ದ್ರೋಣ ಸ್ಪೋರ್ಟ್ಸ್ ಕ್ಲಬ್ ಪಡೆದು ಕೊಂಡರೆ, 4ನೇ ಸ್ಥಾನವನ್ನು ತುಶಾಂತ್ ಫ್ರೆಂಡ್ಸ್ ಪಡೆದುಕೊಂಡಿತು. ಒಟ್ಟು 9 ತಂಡಗಳು ಟ್ರೊಫಿಗಾಗಿ ಸೆನಸಾಡಿದ್ದವು, ಕ್ರೀಡಾಕೂಟದಲ್ಲಿ ವೈಯಕ್ತಿಕ ಬಹುಮಾನವಾಗಿ ಬೆಸ್ಟ್ ಆಲ್ ರೌಂಡರ್ ಮನ್ವಿತ್ ಫ್ರೆಂಡ್ಸ್ ತಂಡದ ಜಮೀರ್, ಬೆಸ್ಟ್ ಪಾಸಾರ್ ಆಗಿ ಟೀಮ್ 14 ತಂಡದ ಹಂಝ, ಬೆಸ್ಟ್ ಅಟ್ಯಾಕೆರ್, ಸುಬೈರ್, ಬೆಸ್ಟ್ ಡಿಫೆನ್ಸ್ ಶರೀಫ್ ಬಚ್ಚ, ಬೆಸ್ಟ್ ಬ್ಲಾಕರ್ ಸುಹಾಸ್, ಪಂದ್ಯದ ಉದಯೋನ್ಮುಖ ಆಟಗಾರ ಹಂಝ ಪಡೆದುಕೊಂಡರು. ತೀರ್ಪುಗಾರರಾಗಿ ಅಮೃತ್ ಹಾಗೂ ರಾಜೇಶ್ ಕಾರ್ಯ ನಿರ್ವಹಿಸಿದ್ದರು. ಆಯೋಜಕರಾಗಿ, ರವಿಕುಮಾರ್, ನಂದೀಶ್, ರಾಜೇಶ್, ಪಿಕ, ರಮೇಶ್, ಪಾಲ್ಗೊಂಡಿದ್ದರು. ವರದಿ : ಅಶೋಕ್
ಮಡಿಕೇರಿ ಮಾ.4 NEWS DESK : ನಾಪೋಕ್ಲುವಿನ ಚೆರಿಯಪಂಬುವಿನಲ್ಲಿ ನಿರಾಶ್ರಿತರು ನಿರ್ಮಿಸಿಕೊಂಡಿದ್ದ ಗುಡಿಸಲುಗಳನ್ನು ಕಂದಾಯ ಇಲಾಖೆ ತೆರವು ಮಾಡುವ ಮೂಲಕ ಬಡವರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಸಿಐಟಿಯು ನೇತೃತ್ವದಲ್ಲಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು. ನಗರದ ತಹಶೀಲ್ದಾರರ ಕಚೇರಿ ಎದುರು ಸಿಐಟಿಯು ಪ್ರಮುಖರು ಹಾಗೂ ನಿರಾಶ್ರಿತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣ ನಿರಾಶ್ರಿತರಿಗೆ ನಿವೇಶನ ನೀಡಬೇಕು ಮತ್ತು ಬಡವರ ಗುಡಿಸಲು ನಾಶ ಮಾಡಿ ನಷ್ಟ ಉಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ನಾಪೋಕ್ಲುವಿನ ಚೆರಿಯಪರಂಬುವಿನಲ್ಲಿ ಕಳೆದ ಕೆಲವು ವರ್ಷಗಳಿಂದ ಸುಮಾರು 15 ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು. ನಿವಾಸಿಗಳಿಗೆ ಯಾವುದೇ ಮುನ್ನೆಚ್ಚರಿಕೆ ಅಥವಾ ನೋಟಿಸ್ ನೀಡದೆ ನಾಪೋಕ್ಲುವಿನ ಕಂದಾಯ ಅಧಿಕಾರಿಗಳು ಏಕಾಏಕಿ ಗುಡಿಸಲನ್ನು ಕಿತ್ತು ಹಾಕಿದ್ದಾರೆ. ಇದರಿಂದ ಮನೆಯಲ್ಲಿದ್ದ ಸಾಮಾಗ್ರಿಗಳಿಗೂ ಹಾನಿಯಾಗಿದೆ ಎಂದು ಆರೋಪಿಸಿದರು. ಕೊಡಗಿನಲ್ಲೇ ಹುಟ್ಟಿ ಬೆಳೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ,…
ಮಡಿಕೇರಿ ಮಾ.4 NEWS DESK : ಭಯೋತ್ಪಾದಕ ಕೃತ್ಯಗಳನ್ನು ಖಂಡಿಸಿ ಮಾ.6 ರಂದು ಕೊಡಗು ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ವತಿಯಿಂದ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬೆಳಿಗ್ಗೆ 10.30 ಗಂಟೆಗೆ ಪ್ರತಿಭಟನೆ ನಡೆಯಲಿದೆ.
ಮಡಿಕೇರಿ ಮಾ.4 NEWS DESK : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ಮತ್ತು ಬಾಳೆಲೆ ಗ್ರಾಮ ಪಂಚಾಯಿತಿ ಸಯೋಗದಲ್ಲಿ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಐದು ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ನಡೆಯಿತು. ಬಾಳೆಲೆ ಗ್ರಾ.ಪಂ ಅಧ್ಯಕ್ಷರಾದ ಮುಕ್ಕಾಟಿರ ಜಾನಕಿ ಕಾವೇರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ ಭಾರತವು ಪೋಲಿಯೋ ಮುಕ್ತ ದೇಶವಾಗಿದ್ದು, ಮತ್ತೆ ಪೋಲಿಯೊ ರೋಗ ದೇಶದಲ್ಲಿ ಮರಕಳಿಸದಂತೆ ಪೋಷಕರು ಹಾಗೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದರು. ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ವಿಶ್ವನಾಥ್, ಮಗುವಿಗೆ ಪೋಲಿಯೋ ಹನಿ ಹಾಕಿ, ಮಾತನಾಡಿ ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ತಂದೆ ತಾಯಂದಿರು ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಿಕೊಂಡು ಮಗುವಿನ ಸಂಪೂರ್ಣ ರಕ್ಷಣೆಯನ್ನು ಖಚಿತ ಪಡಿಸಿಕೊಳ್ಳ ಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾ.ಪಂ ಸದಸ್ಯರಾದ ಫೊಡಮಾಡ ಸುಖೇಶ್ ಭೀಮಯ್ಯ, ಅಡ್ಡೇಂಗಡ…
ಮಡಿಕೇರಿ ಮಾ.4 NEWS DESK : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಆಡಳಿತ ವ್ಯವಸ್ಥೆಯಿಂದ ಯಾವುದೇ ಸ್ಪಂದನೆ ದೊರೆಯದ ಕಾರಣ ಕಾಲೇಜು ಮುಂಭಾಗ ಮೌನ ಧರಣಿಯನ್ನು ಮುಂದುರೆಸಿದ್ದಾರೆ. ತರಗತಿಯನ್ನು ಬಹಿಷ್ಕರಿಸಿ ಧರಣಿ ಕುಳಿತಿರುವ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಬಾಯಿಯ ಮೇಲಿನ ಮಾಸ್ಕ್ ಗೆ ಲಗತ್ತಿಸಿ ಗಮನ ಸೆಳೆಯುತ್ತಿದ್ದಾರೆ. ಕಾರ್ಯಪ್ಪ ಕಾಲೇಜ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ 43 ಉಪನ್ಯಾಸಕರಿಗೆ ಕಳೆದ 5 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ, ಜೀವನ ಸಾಗಿಸುವುದು ಕಷ್ಟಕರವಾಗಿದೆ ಎನ್ನುವುದು ಪ್ರತಿಭಟನಾಕಾರರ ಅಸಮಾಧಾನವಾಗಿದೆ. ಕೋವಿಡ್ ಸಂದರ್ಭದ ಮೂರು ತಿಂಗಳ ವೇತನ ಸೇರಿ ಒಟ್ಟು ಎಂಟು ತಿಂಗಳ ವೇತನವನ್ನು ತಕ್ಷಣ ನೀಡಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರುವಲ್ಲಿಯವರೆಗೆ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು. ಇಂದು ಸ್ಥಳಕ್ಕೆ ನ್ಯಾಕ್ ಸಮಿತಿಯ ಸದಸ್ಯರೂ, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರು ಹಾಗೂ ಫೀಲ್ಡ್ ಮಾರ್ಷಲ್…






