ಲೇಖಕ: admin

ನಾಪೋಕ್ಲು ಮಾ.4 NEWS DESK : ನಾಪೋಕ್ಲು – ಮೂರ್ನಾಡು ಮುಖ್ಯರಸ್ತೆಯ ಸಮೀಪದಲ್ಲೇ ಇರುವ ಹೊದ್ದೂರು ಗ್ರಾಮದ ಶ್ರೀ ಭಗವತಿ ದೇವಾಲಯ ನೂತನವಾಗಿ ನಿರ್ಮಾಣಗೊಂಡು ಅತ್ಯಾಕರ್ಷಕವಾಗಿ ಕಂಗೊಳಿಸುತ್ತಿದ್ದು, ಪುನರ್ ಪ್ರತಿಷ್ಠಾಪನೆ ಬ್ರಹ್ಮ ಕಳಶೋತ್ಸವದ ಅಂಗವಾಗಿ ಅಂತಿಮ ಹಂತದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಸುಮಾರು 1.5 ಕೋಟಿ ರೂ.ವೆಚ್ಚದಲ್ಲಿ ದೇವಾಲಯ ಪುನರ್ ನಿರ್ಮಾಣಗೊಂಡಿದ್ದು, ಇತಿಹಾಸದ ಪ್ರಕಾರ ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ತಪಸ್ಸು ಮಾಡಿದ ದೈವಿಕ ತಾಣ ಇದು ಎಂದು ನಂಬಲಾಗಿದೆ. ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ನೆಲೆ ನಿಂತ ತಾಣ ಇದಾಗಿದೆ. ದೇವಾಲಯವನ್ನು ಕಾರ್ಕಳದಿಂದ ತರಲಾದ ಕಲ್ಲಿನಿಂದಲೇ ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಬಳಸಿ ಆಕರ್ಷಕ ಕುಸುರಿ ಕೆಲಸದೊಂದಿಗೆ ಸಂಪೂರ್ಣವಾಗಿ ನಿರ್ಮಿಸಲಾಗಿರುವುದು ವಿಶೇಷ. ದೇವ ಮಹಿಮೆ ಜನರ ಮೇಲೆ ಬಂದ ಊರು ಕೊಡವ ಭಾಷೆಯ ಪೊದ್ದು ನಂತರ ಹೊದ್ದೂರು ಎಂದಾಯಿತು ಎಂದು ಹೇಳಲಾಗುತ್ತಿದೆ. ಮರಕಡ ಶ್ರೀ ಗುರ ಪರಾಶಕ್ತಿ ಮಠದ ಪರಮಪೂಜ್ಯ ನರೇಂದ್ರನಾಥ ಯೋಗೇಶ್ವರ ಮಹಾಸ್ವಾಮಿಯವರ ಪೂರ್ಣ ಅನುಗ್ರಹದೊಂದಿಗೆ ನಿತಿನ್ ನರೇಂದ್ರನಾಥ ಯೋಗೇಶ್ವರ…

Read More

ನಾಪೋಕ್ಲು ಮಾ.4 NEWS DESK : ಅಯ್ಯಂಗೇರಿ ಗ್ರಾಮದ ಚಿನ್ನತಪ್ಪ ಉತ್ಸವಕ್ಕೆ ಚಾಲನೆ ದೊರೆಯಿತು. ಪ್ರತಿವರ್ಷದಂತೆ ಈ ಬಾರಿಯೂ ಮೂರು ದಿನಗಳ ಕಾಲ ಉತ್ಸವ ಗ್ರಾಮದ ಜನರ ಸಮ್ಮುಖದಲ್ಲಿ ನಡೆಯಲಿದೆ. ಕೃಷ್ಣನ ಕೊಳಲನ್ನು ಭಕ್ತಿಪೂರ್ವಕವಾಗಿ ಹೊರತೆಗೆದು ನುಡಿಸಲಾಯಿತು. ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಕೊಳಲು ನಾದ ಆಲಿಸಿದರು. ಇಂದು ಪಟ್ಟಣಿ ಹಬ್ಬ ನಡೆಯಲಿದ್ದು, ದೇವಾಲಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಣ್ಣೆ, ಹರಕೆ ಸಲ್ಲಿಸುತ್ತಾರೆ. ನಾಳಿಯಂಡ ಮಾಣಿಯಿಂದ ಎತ್ತುಪೋರಾಟ ಹೊರಟು ಮಂದ್ ನಲ್ಲಿ ಎತ್ತುಪೋರಾಟ, ಶ್ವೇತವಸ್ತ್ರಧರಿಸಿದ ಮಹಿಳೆಯರ ಚೆಂಬುಚೆರ್ಕ್ , ತೆಂಗಿನಕಾಯಿಗೆ ಗುಂಡುಹೊಡೆಯುವುದು ಅನ್ನಸಂತರ್ಪಣೆ ಹಾಗೂ ಹರಕೆ ಸಲ್ಲಿಸುವುದು ಚಿನ್ನತಪ್ಪ ಹಬ್ಬದ ವಿಶೇಷವಾಗಿವೆ. ವರದಿ : ದುಗ್ಗಳ ಸದಾನಂದ. 

Read More

ನಾಪೋಕ್ಲು ಮಾ.4 NEWS DESK : ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಅದ್ಯಕ್ಷೆ ವನಜಾಕ್ಷಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿದರು. 0-5 ವರ್ಷದ ಪ್ರತಿಯೊಬ್ಬ ಮಗು ಪೋಲಿಯೋ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಸಿದರು. ಆರೋಗ್ಯ ಇಲಾಖೆ ಮಧುಸೂಧನ್, ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು. ನಾಪೋಕ್ಲು ಪಂಚಾಯಿತಿ ಹಳೆ ತಾಲೂಕು ಅಂಗನವಾಡಿ ಕೇಂದ್ರ ದಲ್ಲಿ 0-5 ವರ್ಷದ ಮಕ್ಕಳಿಗೆ ಪಂಚಾಯಿತಿ ಸದಸ್ಯರ ಅರುಣ್ ಬೇಬ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ನಂತರ ಪೋಲಿಯೋ ಲಸಿಕೆ ಬಗ್ಗೆ ಮಾಹಿತಿ, ಮಹತ್ವ ಬಗ್ಗೆ ತಿಳಿಸಿದರು . ಅಂಗನವಾಡಿ , ಆಶಾ ಕಾರ್ಯಕರ್ತೆಯರು , ಸ್ತ್ರೀ ಶಕ್ತಿ ಸದಸ್ಯರು , ಪೋಷಕರು ಮಕ್ಕಳೊಂದಿಗೆ ಹಾಜರಿದ್ದರು. ನಾಪೋಕ್ಲು ವ್ಯಾಪ್ತಿಯ ಕಲ್ಲುಮೊಟ್ಟೆ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯ ಪ್ರತೀಪ ಆಗಮಿಸಿ ಪೋಲಿಯೋ ಲಸಿಕೆ ಬಗ್ಗೆ ತಿಳಿಸಿದರು. ಸ್ತ್ರೀ ಶಕ್ತಿ ಅಧ್ಯಕ್ಷೆ ಜಯಮ್ಮ ಮಕ್ಕಳಿಗೆ ಪೋಲಿಯೋ…

Read More

ಪಿರಿಯಾಪಟ್ಟಣ ಮಾ.4 NEWS DESK : ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಬೆಟ್ಟದಪುರ ಶಕ್ತಿ ಕೇಂದ್ರದ ವತಿಯಿಂದ ಬೆಟ್ಟದಪುರದಲ್ಲಿ ಭಾರತ ಅಕ್ಕಿ ವಿತರಿಸಲಾಯಿತು. ಸಂಸದ ಪ್ರತಾಪ್ ಸಿಂಹ ಅವರ 10 ವರ್ಷಗಳ ಅಭಿವೃದ್ಧಿ ಕಾರ್ಯಗಳ ಕೈಪಿಡಿಯನ್ನು ವಿತರಿಸಲಾಯಿತು. ಈ ಸಂದರ್ಭ ತಾಲ್ಲೂಕು ಅಧ್ಯಕ್ಷ ರಾಜೇಂದ್ರ,  ಮಾಜಿ ಅಧ್ಯಕ್ಷ ರಾಜೇಗೌಡ, ,ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಮೈಲಾರಿ, ಪ್ರಧಾನ ಕಾರ್ಯದರ್ಶಿ ಅರುಣ್ ರಾಜ್ ಅರಸ್,  ಲೋಕಪಾಲಯ್ಯ, ನಿತ್ಯಾನಂದ, ಶಿವಶಂಕರ, ಸತೀಶ್, ಮಲ್ಲೇಶ್, ಮಹದೇವ, ಅಶೋಕ್ , ಕಿರಂಗೂರು ಮೋಹನ್, ಮನು ರಾಜು ಉಪಸ್ಥಿತರಿದ್ದರು.

Read More

ಮಡಿಕೇರಿ ಮಾ.4 NEWS DESK : ಚೆಟ್ಟಳ್ಳಿ ಸಮೀಪದ ಕಂಡಕರೆ ಮುಸ್ಲಿಮ್ ಜಮಾಹತ್ ಕಮಿಟಿಯ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೆ.ಹೆಚ್.ಅಬ್ದುಲ್ ಗಫೂರ್, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ.ಮೊಹಮ್ಮದ್ ರಫಿ ಹಾಗೂ ಕೋಶಾಧಿಕಾರಿಯಾಗಿ ಕೆ.ಬಿ.ರಜಾಕ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಕಂಡಕರೆ ಹಯಾತುಲ್ ಇಸ್ಲಾಮ್ ಮದರಸದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಹಳೆಯ ಸಮಿತಿಯನ್ನು ಮುಂದುವರಿಸಿ ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಲಿ ಹಾಜಿ, ಸಹ ಕಾರ್ಯದರ್ಶಿಯಾಗಿ ಪಿ‌.ಎಂ.ಅಲಿ, ಸ್ವಲಾತ್ ಕಮಿಟಿ ಸದಸ್ಯರಾಗಿ ಕೆ.ಎ.ಹುಸೈನ್, ಕಾರ್ಯದರ್ಶಿಯಾಗಿ ಟಿ.ಎಂ. ನಿಜಾಮ್ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಕೆ.ಎಂ.ಯೂಸುಫ್, ಎ.ಹಂಸ, ಮನ್ಸೂರ್, ಹಾರಿಸ್, ಇಸ್ಮಾಯಿಲ್, ಮಹಮ್ಮದ್, ಸುಹೈಲ್, ಸರ್ಫುದ್ದೀನ್, ಫಾರೂಖ್, ಜಂಶೀದ್ ಹಾಗೂ ಕೆ.ಯು.ಹುಸೈನ್ ಆಯ್ಕೆಯಾಗಿದ್ದಾರೆ.

Read More

ಮಂಗಳೂರು ಮಾ.4 NEWS DESK : ಮೂವರು ಪಿಯುಸಿ ವಿದ್ಯಾರ್ಥಿನಿಯರ ಮೇಲೆ ಯುವಕನೊಬ್ಬ ಆ್ಯಸಿಡ್ ದಾಳಿ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಸರಕಾರಿ ಕಾಲೇಜು ಆವರಣದಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ತಯಾರಿಯಲ್ಲಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಯುವಕ ಏಕಾಏಕಿ ಆ್ಯಸಿಡ್ ಹಾಕಿದ್ದಾನೆ. ಘಟನೆಯಿಂದ ಮೂವರೂ ವಿದ್ಯಾರ್ಥಿನಿಯರು ತೀವ್ರವಾಗಿ ಗಾಯಗೊಂಡಿದ್ದು, ಕಡಬ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಓರ್ವ ವಿದ್ಯಾರ್ಥಿನಿಯನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದು, ಜೊತೆಯಲ್ಲಿದ್ದ ಗೆಳೆತಿಯರಿಗೂ ಗಂಭೀರ ಗಾಯಗಳಾಗಿದೆ. ಕೇರಳ ಮೂಲದ ಆರೋಪಿ ಅಬೀನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ತನಿಖೆ ಮುಂದುವರೆದಿದ್ದು, ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

Read More

ಸುಂಟಿಕೊಪ್ಪ ಮಾ.4 NEWS DESK :  ಜಿಲ್ಲಾ ಮಟ್ಟದ ಸರಕಾರಿ ನೌಕರರ ಪುರುಷರ ಸಿಂಗಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸುಂಟಿಕೊಪ್ಪ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ 45 ವರ್ಷ ಮೇಲ್ಪಟ್ಟ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟವು ಮಡಿಕೇರಿ ಮ್ಯಾನ್ಸ್ ಕಾಪೌಂಡ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಾಗಿದ್ದು, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪೈನಲ್ ಪಂದ್ಯಾವಳಿಯು ವಿ.ಜಿ.ಲೋಕೇಶ್ ಹಾಗೂ ಶಶಿ ಮಾಸ್ಟರ್ ನಡುವೆ ನಡೆದ ಪಂದ್ಯಾವಳಿಯಲ್ಲಿ ವಿ.ಜಿ.ಲೋಕೇಶ್ ವಿಜೇತರಾಗುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 45 ವರ್ಷ ಮೇಲ್ಪಟ್ಟ ಡಬಲ್ಸ್ ವಿಭಾಗದಲ್ಲಿ ಪಿಡಿಓ ಲೋಕೇಶ್ ಹಾಗೂ ಪಿಡಿಓ ಶ್ರೀನಿವಾಸ್ ಜೋಡಿಯು ಗಿರೀಶ್ ಉಪನ್ಯಾಸಕರು ಹಾಗೂ ಶಶಿ ಶಿಕ್ಷಕರ ವಿರುದ್ಧ ನಡೆದ ಪಂದ್ಯಾವಳಿಯಲ್ಲಿ ಪಿಡಿಓ ಲೋಕೇಶ್ ಹಾಗೂ ಪಿಡಿಓ ಶ್ರೀನಿವಾಸ್ ತಂಡವು ಜಯಗಳಿಸುವುದರೊಂದಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಪುರುಷರ ಮುಕ್ತ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪಿಡಿಓ ಲೋಕೇಶ್ ಮತ್ತು ಉಪನ್ಯಾಸಕ ಸುಧಾಕರ್ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

Read More

ಸುಂಟಿಕೊಪ್ಪ ಮಾ.4 NEWS DESK : ರಾಷ್ಟ್ರೀಯ ಪಲ್ಸ್‍ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬಸ್ ನಿಲ್ದಾಣದ ಕೇಂದ್ರಗಳಲ್ಲಿ ಮಕ್ಕಳಿಗೆ ಪಲ್ಸ್‍ಪೋಲಿಯೋ ಹನಿಯನ್ನು ನೀಡಲಾಯಿತು. ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಮಗುವಿಗೆ ನೀಡುವ ಮೂಲಕ ಚಾಲನೆ ನೀಡಿದರು. ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಹಾಗೂ ವೈದ್ಯಾಧಿಕಾರಿ ಶಮ್ನ, ಆರೋಗ್ಯ ಶೂಶ್ರಷಕಿಯರು, ಆರೋಗ್ಯ ಸಹಾಯಕಿಯರು, ದಾದಿಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾ.ಪಂ.ಸದಸ್ಯರುಗಳಾದ ಪಿ.ಎಫ್.ಸಬಾಸ್ಟೀನ್, ರಫೀಕ್‍ಖಾನ್, ಶಾಂತಿ ಹಾಗೂ ಮತ್ತಿತರರು ಇದ್ದರು.

Read More

ಸುಂಟಿಕೊಪ್ಪ ಮಾ.4 NEWS DESK : ಪನ್ಯ ಗ್ರಾಮದ ಉದ್ಧಿಬಾಣೆ ಮಠದಲ್ಲಿ ಶ್ರದ್ಧಾಭಕ್ತಿಯಿಂದ ಧರ್ಮ ದೈವಗಳ ನೇಮೋತ್ಸವ ನಡೆಯಿತು. ಎರಡುದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ಜರುಗಿತು. ಗಣ ಹೋಮ ಮತ್ತು ಸತ್ಯ ನಾರಾಯಣ ಪೂಜೆಯು ನಡೆದು ನೇಮ ಮತ್ತು ದೇವತಾ ಕಾರ್ಯಕ್ಕೆ ವಿಘ್ನ ಬಾರದಂತೆ ಪ್ರಾರ್ಥನೆ ಸಲ್ಲಿಸಲಾಯಿತು‌. ರಾತ್ರಿ ಬಂಡಾರ ತೆಗೆಯುವ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರಕಿತು. ನಂತರ ಕಲ್ಲುರ್ಟಿ ದೈವದ ನೇಮೋತ್ಸವ ಜರುಗಿತು. ಮುಂಜಾನೆಯಿಂದ ಪಂಜುರ್ಲಿ ಮತ್ತು ಗುಳಿಗ ದೈವದ ನೇಮವು ನಡೆಯಿತು. ನಂತರ ಕಾರಣಿಕ ದೈವ ಎನಿಸಿದ ಕೊರಗಜ್ಹ ದೈವದ ನೇಮವು ನಡೆಯಿತು. ದೇವಾಲಯ ಸೇರಿದಂತೆ ಭಕ್ತರ ಹರಕೆಯ ಒಟ್ಟು 4 ಕೊರಗಜ್ಹ ದೈವದ ನೇಮವು ನಡೆಯಿತು. ಮಕ್ಕಳ ಜೋತೆ ಕುಣಿದು ಹಾಸ್ಯ ಮಾಡುತ್ತಾ ಎಲ್ಲರನ್ನು ಸಂತೃಪ್ತಿ ಪಡಿಸಿತು. ನೆರೆದಿದ್ದ ಭಕ್ತರಿಗೆ ಎರಡು ದಿನ ಅನ್ನ ಸಂತರ್ಪಣೆ  ನೆರವೇರಿತು. ಸುಂಟಿಕೊಪ್ಪ, ಕುಶಾಲನಗರ, ಮಡಿಕೇರಿ, ಪನ್ಯ, ಗರಗಂದೂರು, ಮಾದಾಪುರ, ಸುಳ್ಯ, ಪುತ್ತೂರು, ಮಂಗಳೂರು, ಮೈಸೂರು ಸೇರಿದಂತೆ ಹಲವು…

Read More

ಮಡಿಕೇರಿ ಮಾ.3 NEWS DESK : ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ ಜಾನ್ಸನ್ ಪಿಂಟೋ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸುಂಟಿಕೊಪ್ಪದ ಚರ್ಚ್ ನಲ್ಲಿ ನಡೆದ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಸಭೆಯಲ್ಲಿ ಪಾಲ್ಗೊಂಡಿದ್ದ ಸಮುದಾಯದ ಕೆ.ನಿಡುಗಣೆ ಗ್ರಾ.ಪಂ ಸದಸ್ಯರು ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಮುಖಂಡರು ಜಾನ್ಸನ್ ಪಿಂಟೋ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದರು.

Read More