ಸುಂಟಿಕೊಪ್ಪ NEWS DESK ಜ.28 : ಸುಂಟಿಕೊಪ್ಪ ಪಟ್ಟಣದಲ್ಲಿ ಶನಿವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು, ರೂ.1 ಲಕ್ಷಕ್ಕೂ ಅಧಿಕ ನಗದನ್ನು ಚೋರರು ಕದ್ದೊಯ್ದಿದ್ದಾರೆ. ಈ ಘಟನೆಯಿಂದ ವರ್ತಕರು ಹಾಗೂ ನಿವಾಸಿಗಳು ಆತಂಕಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪಟ್ಟಣದ ಹೃದಯ ಭಾಗದಲ್ಲಿರುವ ಟೀನೇಜ್ ಸೆಲೆಕ್ಷನ್ಸ್ ಬಟ್ಟೆ ಅಂಗಡಿಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ರೂ.1 ಲಕ್ಷ ನಗದು, ಕೆಲವು ಬಟ್ಟೆಗಳು ಮತ್ತು ಕನ್ನಡಕಗಳನ್ನು ಕಳ್ಳತನ ಮಾಡಿದ್ದಾರೆ. ಇದಕ್ಕೂ ಮೊದಲು ಸುರೇಶ್ ಕುಶಾಲಪ್ಪ ಅವರಿಗೆ ಸೇರಿದ ಹೊಗೆ ನಿಯಂತ್ರಣ ಕೇಂದ್ರದಲ್ಲಿ ನಿಲ್ಲಿಸಿದ್ದ ಬೈಕನ್ನು ಚೋರರು ಕದ್ದೊಯ್ದಿದ್ದಾರೆ. ನಂತರ ಬಸ್ ನಿಲ್ದಾಣದಲ್ಲಿರುವ ಪೆಟ್ರೋಲ್ ಬಂಕ್‌ಗೆ ನುಗ್ಗಿ ಹಣ ಸಿಗದ ಇದ್ದಾಗ ಎರಡು ಪ್ಯಾಕೇಟ್ ವಾಹನದ ಆಯಿಲ್ ನ್ನು ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿರುವ ಸಿಸಿ ಕ್ಯಾಮರಾದಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದ್ದು, ಇಬ್ಬರು ಮುಸುಕುಧಾರಿಗಳು ಇರುವುದು ಕಂಡು ಬಂದಿದೆ. ಪಕ್ಕದಲ್ಲಿದ್ದ ಹಾಲಿನ ಡೈರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ರೂ.2 ಸಾವಿರವನ್ನು ಕದ್ದೊಯ್ದಿದ್ದಾರೆ. ರಾಮ ಮೆಡಿಕಲ್ಸ್ ನ…
ಲೇಖಕ: admin
ಮಡಿಕೇರಿ ಜ.28 NEWS DESK : ಕೊಡಗಿನಲ್ಲಿ ಕೋಟ್ಯಾಂತರ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳಾಗಿದ್ದು, ಈ ಅವಧಿಯಲ್ಲಿ ಕನಿಷ್ಠ 7 ರೂ.ಗಳನ್ನು ಕೂಡ ಜಿಲ್ಲೆಗೆ ನೀಡಿಲ್ಲವೆಂದು ಮೈಸೂರು- ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಂಕುಸ್ಥಾಪನೆಗೊಂಡ ಯೋಜನೆಗಳಿಗೆ ಹಣವನ್ನು ಬಿಡುಗಡೆ ಮಾಡದ ಮುಖ್ಯಮಂತ್ರಿಗಳು, ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಜಿಲ್ಲೆಗೆ ಬಂದ ಮುಖ್ಯಮಂತ್ರಿಗಳು ಹಲವಾರು ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಸೋಜಿಗವೆಂದರೆ ಶಂಕುಸ್ಥಾಪನೆಗೊಂಡ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಮತ್ತು ಗುತ್ತಿಗೆದಾರರ ನೇಮಕವಾಗಿಲ್ಲ. ಇದು ಕೇವಲ ಚುನಾವಣಾ ಹಿನ್ನೆಲೆಯಲ್ಲಿ ಮಾಡಿದ ಶಂಕುಸ್ಥಾಪನೆಯಾಗಿದೆ. ಜಿಲ್ಲೆಯಲ್ಲಿ ನಡೆದ ಶಂಕುಸ್ಥಾಪನೆಗಳಲ್ಲಿ ಕಾಂಗ್ರೆಸ್ ಸರ್ಕಾರ ಅಗತ್ಯ ಅನುದಾನ ನೀಡಿ, ಆದೇಶ ಹೊರಡಿಸಿರುವ ಒಂದೇ ಒಂದು ಕಾಮಗಾರಿಯನ್ನು ಅವರು ದಾಖಲೆ ಸಹಿತ ನೀಡಲಿ ಎಂದು ಸವಾಲು ಹಾಕಿದರು. ಕೊಡಗಿನಲ್ಲಿ ಈ ಹಿಂದೆಯೇ ಕೇಂದ್ರ ಸರ್ಕಾರದ ‘ಅಮೃತ್’…
*ವಧು ಬೇಕಾಗಿದೆ*
ಮಡಿಕೇರಿ ಜ.28 NEWS DESK : ಭಾರತೀಯ ಸೇನೆಯ ಪ್ರಥಮ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರಂತೆ ಯುವಜನರು ಭಾರತೀಯ ಸೇನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಜಿಲ್ಲೆ ಹಾಗೂ ರಾಜ್ಯಕ್ಕೆ ಒಳ್ಳೆಯ ಹೆಸರು ತರುವಂತಾಗಬೇಕು ಎಂದು ಏರ್ ಮಾರ್ಷಲ್ ನಿವೃತ್ತ ಕೆ.ಸಿ.ಕಾರ್ಯಪ್ಪ ಅವರು ಕರೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 125 ನೇ ಜನ್ಮ ದಿನಾಚರಣೆ ಪ್ರಯುಕ್ತ ಭಾನುವಾರ ನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು. ಶಿಸ್ತು, ಶ್ರದ್ಧೆ ಮತ್ತು ಸಮಯಪ್ರಜ್ಞೆಗೆ ಹೆಸರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ರಾಷ್ಟçದ ರಕ್ಷಣಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಆ ದಿಸೆಯಲ್ಲಿ ಪ್ರತಿಯೊಬ್ಬರಲ್ಲಿಯೂ ರಾಷ್ಟ್ರ ಮೊದಲು ಎಂಬುದು ಮೊಳಗಬೇಕು ಎಂದು ತಿಳಿಸಿದರು. ಯುವ ಜನರು ದೇಶವನ್ನು ಪ್ರೀತಿಸಬೇಕು. ರಾಷ್ಟç ಮೊದಲು, ನಂತರ ಉಳಿದವು ಎಂಬುದು ಪ್ರತಿಯೊಬ್ಬರಲ್ಲಿಯೂ ಇರಬೇಕು. ಈ…
ಮಡಿಕೇರಿ ಜ.28 : ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಷನ್ ನ ಸೋಮವಾರಪೇಟೆ ತಾಲ್ಲೂಕು ಸಮಿತಿ ಗಣರಾಜ್ಯೋತ್ಸವ ಪ್ರಯುಕ್ತ ಸೋಮವಾರಪೇಟೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋಗೆ ಜೂನಿಯರ್ಸ್ ವಿಭಾಗದಲ್ಲಿ ಪ್ರಥಮ ಹಾಗೂ ಸೀನಿಯರ್ಸ್ ವಿಭಾಗದಲ್ಲಿ ತೃತೀಯ ಬಹುಮಾನ ದೊರೆತ್ತಿದೆ. ಜೂನಿಯರ್ಸ್ ವಿಭಾಗದಲ್ಲಿ ಮೊನಾಲಿ, ಸಿಂಚನ, ಸಾನ್ವಿಕ, ದಿಶಾ, ಲಹರಿ, ವಿಶಾಕ್, ಆಧ್ಯಾಶ್ರೀ, ಲವಿಶ್, ದಿಯಾ, ಲೀಶ, ಗ್ರಂಥ, ಧೃತಿ ಹಾಗೂ ಸೀನಿಯರ್ಸ್ ವಿಭಾಗದಲ್ಲಿ ಯಾನ ಶೆಟ್ಟಿ, ಆರಾಧ್ಯ, ಆಧ್ಯ ದೇಚಮ್ಮ, ಶಿವ ಕುಮಾರ್, ಕೀರ್ತನ್, ವೆನಿಷಾ, ಪ್ರಜ್ಞಾ, ತೇಜಸ್, ಜಾನ್ವಿ ಬೋಜಮ್ಮ, ತಶ್ಮಿತ, ವರ್ಣಿಕ, ಜನನಿ, ಆರ್ಯನ್, ರೋಷನ್, ಐಶ್ವರ್ಯ, ಅಭಿನವ್ ಭಾಗವಹಿಸಿದ್ದರು. ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋದ ನೃತ್ಯ ಸಂಯೋಜಕ ಅಭಿಷೇಕ್ ಮಡಿಕೇರಿ ಅವರ ನಿರ್ದೇಶನದಲ್ಲಿ ನೃತ್ಯ ಮೂಡಿ ಬಂತು.
ಮಡಿಕೇರಿ ಜ.27 NEWS DESK : ದೇಶದ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾದ ಅಂತರರಾಷ್ಟ್ರೀಯ ಕ್ರೀಡಾಪಟುಗಳಾದ ಮಚ್ಚಂಡ ರೋಹನ್ ಬೋಪಣ್ಣ ಹಾಗೂ ಕುಟ್ಟಂಡ ಜೋಶ್ನ ಚಿಣ್ಣಪ್ಪ ಅವರಿಗೆ ಹಾರ್ದಿಕ ಅಭಿನಂದನೆಗಳು.. (ಹಂಚೆಟ್ಟೀರ ಮನು ಮುದ್ದಪ್ಪ, ಅಧ್ಯಕ್ಷರು, ವ್ಯಾಲಿ ಡ್ಯೂ ಅಸೋಸಿಯೇಷನ್, ಮುಕ್ಕೋಡ್ಲು)
ಮಡಿಕೇರಿ ಜ.27 NEWS DESK : ನಮ್ಮ ಕೊಡಗು ಜಿಲ್ಲೆ ಕ್ರೀಡೆಗಳ ತವರೂರು. ಇಲ್ಲಿನ ಕ್ರೀಡಾ ಕಲಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ್ದಾರೆ. ಇಂಥ ಸಾಧಕರ ಸಾಲಿನಲ್ಲಿರುವ ನಮ್ಮ ಹೆಮ್ಮೆಯ ಟೆನಿಸ್ ಪಟು ರೋಹನ್ ಬೋಪಣ್ಣ ಹಾಗೂ ಕೊಡಗು ಮೂಲದ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿಣ್ಣಪ್ಪ ಅವರಿಗೆ ಪದ್ಮಶ್ರೀ ಪುರಸ್ಕಾರ ಭಾಜನವಾಗಿದೆ. ಇದು ಅವರ ಸಾಧನೆಗೆ ಸಿಕ್ಕ ಸಮ್ಮಾನವಾಗಿದೆ. 43ನೇ ವಯಸ್ಸಿನಲ್ಲಿ ಡಬಲ್ಸ್ ವಿಭಾಗದಲ್ಲಿ ನಂಬರ್ ಸ್ಥಾನಕೇರಿದ ರೋಹನ್ ಬೋಪಣ್ಣ ಅವರಿಗೆ ಇದು ಡಬಲ್ ಸಂಭ್ರಮ. ನಮ್ಮ ಕೊಡಗಿನ ಕೀರ್ತಿ ಪತಾಕೆಯನ್ನು ಜಗದಗಲ ಪಸರಿಸಿದ ಈ ಕ್ರೀಡಾ ಕಲಿಗಳಿಗೆ ಅಭಿನಂದನೆಗಳು. ಜಿಲ್ಲೆಯಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಉತ್ತೇಜಸಲು ನಮ್ಮ ಸರ್ಕಾರ ಸದಾ ಸಿದ್ದವಿದೆ. N. S ಬೋಸರಾಜು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು. ಕರ್ನಾಟಕ ಸರ್ಕಾರ.
ಮಡಿಕೇರಿ ಜ.27 NEWS DESK: ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧವಾದ, ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಕೊಡಗು ಜಿಲ್ಲೆಯ 6 ಕೊಡವ ಪದ್ಮ ಪುರಸ್ಕೃತರು ಕೊಡಗಿಗೆ ಹಾಗೂ ಕೊಡವರಿಗೆ ಹೆಮ್ಮೆಯ ವಿಷಯ. ಇವರ ಹೆಸರುಗಳು ಕೊಡಗಿನ ಚರಿತ್ರೆಯಲ್ಲಿ ಬಂಗಾರದ ಅಕ್ಷರದಲ್ಲಿ ಬರೆಯಲ್ಪಡುತ್ತದೆ. ಈ ವರ್ಷ ವಿಶ್ವದ ನಂಬರ್.1 ಟೆನ್ನಿಸ್ ಆಟಗಾರ ಮಚಂಡ ರೋಹನ್ ಬೋಪಣ್ಣ ಹಾಗೂ ಸ್ಕ್ವಾಶ್ ಆಟಗಾರ್ತಿ ಕುಟ್ಟಂಡ ಜೋಶ್ನ ಚಿಣ್ಣಪ್ಪ ಅವರಿಗೆ ಪದ್ಮಶ್ರೀ ಲಭ್ಯವಾಗಿದೆ. ಇದು ಕ್ರೀಡಾ ಲೋಕಕ್ಕೂ ಹಾಗೂ ಕೊಡಗಿಗೂ ಗೌರವ ತರುವಂತಹ ವಿಷಯ. ಈಗಾಗಲೇ ಹಾಕಿ ದಿಗ್ಗಜ ಡಾ.ಮೊಳ್ಳೇರ.ಪಿ.ಗಣೇಶ್ ಹಾಗೂ ಉಮ್ಮತ್ತಾಟ್ ನಲ್ಲಿ ಐಮುಡಿಯಂಡ ರಾಣಿ ಮಾಚಯ್ಯ ಅವರಿಗೆ ಪದ್ಮಶ್ರೀ ಲಭ್ಯವಾಗಿದೆ. ಸೈನ್ಯದಲ್ಲಿ ಜನರಲ್ ಕೊಡಂದೇರ.ಎಸ್.ತಿಮ್ಮಯ್ಯ ಅವರಿಗೆ ಪದ್ಮಭೂಷಣ, ಶಿಕ್ಷಣ ಹಾಗೂ ಸಮಾಜಸೇವೆ ಕ್ಷೇತ್ರದಲ್ಲಿ ಕೋದಂಡ ರೋಹಿಣಿ ಅವರಿಗೆ ಪದ್ಮಶ್ರೀ ನೀಡಲಾಗಿದೆ. ಇದನ್ನು ಇಲ್ಲಿ ಸ್ಮರಿಸಬಹುದು. ಭಾರತದ ಅತೀ ಉನ್ನತ ನಾಗರೀಕ ಪ್ರಶಸ್ತಿ ಕೊಡಗಿನವರಿಗೆ ಲಭಿಸಿದ್ದು, ಕೊಡಗಿನ ಎಲ್ಲರಿಗೂ ಸಂತಸ ತಂದಿದೆ. ಹೀಗೆ ಈ ಪ್ರಶಸ್ತಿಗಳು ಕೊಡಗಿನವರಿಗೆ…
ಮಡಿಕೇರಿ ಜ.27 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯ ಕೋಟೆ ಆವರಣ, ಪಾಡಿನಾಡಿನ ಯವಕಪಾಡಿಯ ನಾಲ್ ನಾಡ್ ಅರಮನೆ ಮತ್ತು ದೇವಟ್‌ಪರಂಬ್ ನರಮೇಧದ ಸ್ಮಾರಕ ಸ್ಥಳದಲ್ಲಿ “ಅಂತರರಾಷ್ಟ್ರೀಯ ಹತ್ಯಾಕಾಂಡದ ದಿನ” ವನ್ನು ಆಚರಿಸಿತು. ಸಂಚಿನಿಂದ ಹತ್ಯೆಗೀಡಾದ ಹಿರಿಯರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಿಎನ್‌ಸಿ ಪ್ರಮುಖರು ಗೌರವ ಅರ್ಪಿಸಿದರು. ಈ ಸಂದರ್ಭ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೆಳದಿ/ಪಾಲೇರಿ ಅರಸರಿಂದ ಮಡಿಕೇರಿ ಕೋಟೆಯಲ್ಲಿ ನಡೆದ ರಾಜಕೀಯ ಹತ್ಯೆಗಳು, ನಾಲ್ನಾಡ್ ಅರಮನೆಯಲ್ಲಿ ಕೆಳದಿ/ಪಾಲೇರಿ’ ಆಡಳಿತಗಾರರಿಂದ ಕೊಡವ ಬುಡಕಟ್ಟು ಜನಾಂಗದ ಮಂದಿಗೆ ಅಮಾನವೀಯ ಮರಣದಂಡನೆ ಮತ್ತು ದೇವಟ್ ಪರಂಬು ನರಮೇಧ ಈ ಮೂರು ದುರಂತ ಕೃತ್ಯಗಳನ್ನು ಅಂತರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸಬೇಕು. ಕೊಡವರು ಹತ್ಯೆಗೀಡಾದ ಮೂರೂ ಪ್ರದೇಶದಲ್ಲಿ ಸ್ಮಾರಕ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಅರಮನೆಗಳು ಮತ್ತು ದೇವಟ್‌ಪರಂಬ್‌ನಲ್ಲಿ ನಡೆದ ಮೂರು ದುರಂತ ನರಮೇಧಗಳನ್ನು ಕೊಡವ ಬುಡಕಟ್ಟು ಜನಾಂಗ ಮರೆಯಲು ಸಾಧ್ಯವಿಲ್ಲ. ಕೊಡವ ಜನಾಂಗೀಯ ಇತಿಹಾಸದಲ್ಲಿ ಈ ಆಘಾತಕಾರಿ ಅಧ್ಯಾಯವನ್ನು ನೆನಪಿಸಿಕೊಳ್ಳಲಾಗುತ್ತದೆ…
ಕುಶಾಲನಗರ ಜ.27 : ಕೂಡಿಗೆ ಕೊಡಗು ಸೈನಿಕ ಶಾಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪತ್ರಿಕಾ ಮಾಧ್ಯಮದ ಸಹಕಾರ ಸ್ಮರಣೀಯವಾಗಿದೆ ಎಂದು ಶಾಲೆಯ ಆಡಳಿತ ಅಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್ ಹೇಳಿದರು. ಸೈನಿಕ ಶಾಲೆಯ ಪ್ರಾಂಶುಪಾಲರು ಕುಶಾಲನಗರ ತಾಲೂಕು ಪತ್ರಕರ್ತರಿಗೆ ಸೈನಿಕ ಶಾಲೆಯಲ್ಲಿ ಏರ್ಪಡಿಸಿದ್ದ ಚಹಾ ಕೂಟದಲ್ಲಿ ಅವರು ಮಾತನಾಡಿ, ಕೊಡಗು ಜಿಲ್ಲೆಯ ಹೆಮ್ಮೆಯ ಸೈನಿಕ ಶಾಲೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ಒದಗಿಸಿದರು. ಮುಂದಿನ ದಿನಗಳಲ್ಲಿ ಇದೇ ರೀತಿಯ ಸಹಕಾರ ಬಯಸಿದರು. ಪತ್ರಿಕಾ ಮಾಧ್ಯಮ ಮಿತ್ರರಿಗೆ ತಮ್ಮ ಶಾಲೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಚಹಾ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಕುಶಾಲನಗರ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್ ಚಂದ್ರಮೋಹನ್, ಕಳೆದ 17 ವರ್ಷಗಳಿಂದ ಕೊಡಗು ಸೈನಿಕ ಶಾಲೆಯ ಆಗುಹೋಗುಗಳ ಬಗ್ಗೆ ಪತ್ರಿಕೆ ಮಾಧ್ಯಮಗಳ ಮೂಲಕ ಸಮಗ್ರ ಮಾಹಿತಿಯನ್ನು ಸಮಾಜಕ್ಕೆ ನೀಡುವ ಕೆಲಸ ನಿರಂತರವಾಗಿ ನಡೆದಿದೆ. ಕೊಡಗು ಸೈನಿಕ ಶಾಲೆ ಜಿಲ್ಲೆಯ ಹೆಮ್ಮೆಯ ಸಂಸ್ಥೆಯಾಗಿದ್ದು ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ…






