ಲೇಖಕ: admin

ಮಡಿಕೇರಿ ಫೆ.23 NEWS DESK : ಮಿಷನ್ ಶಕ್ತಿ ಯೋಜನೆಯಡಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಹಾಗೂ ಬೇಟಿ ಬಚಾವೋ, ಬೇಟಿ ಪಡಾವೋ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜು, ಮಿಷನ್ ಶಕ್ತಿಯು ಮಹಿಳೆಯ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣಕ್ಕಾಗಿ ಮಧ್ಯಸ್ಥಿಕೆ ಕ್ರಮಗಳನ್ನು ಬಲಪಡಿಸುವ ಗುರಿ ಹೊಂದಿದೆ ಎಂದು ತಿಳಿಸಿದರು. ಮಹಿಳಾ ಮುಂಚೂಣಿ ಅಭಿವೃದ್ಧಿಗಾಗಿ ಮಿಷನ್ ಶಕ್ತಿಯು ಮಹಿಳೆಯರ ಸುರಕ್ಷತೆ ಮತ್ತು ಮಹಿಳೆಯರ ಸಬಲೀಕರಣ ಎಂಬ ಎರಡು ಉಪ ಯೋಜನೆಗಳನ್ನು ಹೊಂದಿದೆ ಎಂದು ನಟರಾಜು ಮಾಹಿತಿ ನೀಡಿದರು. ಮಿಷನ್ ಶಕ್ತಿ ಸೇವೆಗಳಲ್ಲಿ ಪ್ರಮುಖವಾಗಿ ಹಿಂಸೆಯಿಂದ ಬಾಧಿತರಾದ ಮಹಿಳೆಯರಿಗೆ ಒನ್ ಸ್ಟಾಪ್ ಸೆಂಟ್ರಲ್‍ಗಳ ಮುಖಾಂತರ ತಾತ್ಕಾಲಿಕ ಆಶ್ರಯ ಕಾನೂನು ನೆರವು, ಮಾನಸಿಕ, ಸಾಮಾಜಿಕ, ಸಮಾಲೋಚನೆ, ವೈದ್ಯಕೀಯ ನೆರವು ಪೊಲೀಸ್ ಸೌಲಭ್ಯಗಳ ಮೂಲಕ ನಿರಂತರ ಸೌಲಭ್ಯ ಮತ್ತು ರಕ್ಷಣೆ ಒದಗಿಸಲಾಗುತ್ತದೆ ಎಂದು ಹೇಳಿದರು. ಮಹಿಳೆಯರ…

Read More

ಮಡಿಕೇರಿ ಫೆ.23 NEWS DESK :  ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯನ್ನು ನಡೆಸಲು ತಕ್ಷಣ ಆದೇಶ ನೀಡುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಸಹಕಾರ ಕಚೇರಿ ಎದುರು ಸರಕಾರ ಮತ್ತು ಸಹಕಾರ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಪ್ರಮುಖರು, ನಿಗಧಿತ ಸಮಯದಲ್ಲಿ ಚುನಾವಣೆ ನಡೆಸದೆ ಇರುವುದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದರು. ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಕೆ.ಜಿ.ಬೋಪಯ್ಯ, ರಾಜ್ಯದಲ್ಲಿ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ವೈದ್ಯನಾಥನ್ ಆಯೋಗದ ಶಿಫಾರಸ್ಸಿನ ಮೇರೆಗೆ ಅದಕ್ಕೆ ಪ್ರತ್ಯೇಕ ಚುನಾವಣಾ ಆಯೋಗವನ್ನು ಕೂಡ ಮಾಡಲಾಗಿದೆ. ಅದರಂತೆ ಹುದಿಕೇರಿ ಸಂಘಕ್ಕೂ ಚುನಾವಣಾ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಆಡಳಿತ ಮಂಡಳಿ ಅವಧಿ ಮುಗಿದ ನಂತರ ಕ್ಲರ್ಕ್‍ವೊಬ್ಬರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಳ್ಳಾಗಿದೆ ಎಂದು ಟೀಕಿಸಿದರು. ಜಿಲ್ಲೆಯಲ್ಲಿ ಇತರ ಸಹಕಾರ ಸಂಘಗಳ ಚುನಾವಣೆಯಲ್ಲಿ ಹೀನಾಯ…

Read More

ವಿರಾಜಪೇಟೆ ಫೆ.23 NEWS DESK : ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಅಸೋಸಿಯೇಷನ್ ಹಾಗೂ ಏಷ್ಯಾನ್ ಸ್ಪೋರ್ಟ್ಸ್ ಡಾನ್ಸ್ ಕೌನ್ಸಿಲ್ ವತಿಯಿಂದ ಜಮ್ಮು ಕಾಶ್ಮೀರದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪೋರ್ಟ್ಸ್ ಡಾನ್ಸ್ ಚಾಂಪಿಯನ್‍ಶಿಪ್‍ನಲ್ಲಿ ನಾಟ್ಯಾಂಜಲಿ ನೃತ್ಯ ಹಾಗೂ ಸಂಗೀತ ಸಂಸ್ಥೆಯ 19 ವಿದ್ಯಾರ್ಥಿಗಳು ಸೋಲೋ, ಡಬಲ್ಸ್ ಹಾಗೂ ಗ್ರೂಪ್ ಡಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಒಟ್ಟು 31 ಚಿನ್ನ, 5 ಬೆಳ್ಳಿ, 8 ಕಂಚು ಪದಕಗಳನ್ನು ಪಡೆದು  ಚಾಂಪಿಯನ್‍ಶಿಪ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮೇ ತಿಂಗಳಿನಲ್ಲಿ ಭೂತಾನ್‍ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಚಾಂಪಿಯನ್‍ಶಿಪ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.  ಸಂಸ್ಥೆಯ ಗುರುಗಳಾದ ಹೇಮಾವತಿ ಕಾಂತ್ ರಾಜ್ ಹಾಗೂ ಕಾವ್ಯಶ್ರೀ ಕಾಂತ್ ರಾಜ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

Read More

ಮಡಿಕೇರಿ ಫೆ.23 NEWS DESK :  ಕರ್ನಾಟಕ ರಾಜ್ಯ ಸುಭಿಕ್ಷವಾಗಬೇಕು ಎಂದರೆ ಕೊಡಗು ಸುಭಿಕ್ಷವಾಗಿರಬೇಕು ಎಂದು ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ್ ಅಭಿಪ್ರಾಯಪಟ್ಟರು. ಕುಶಾಲನಗರದ ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಾಲಯದ 10ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮತ್ತು ದೇವಿಗೆ ಸ್ವರ್ಣ ಮುಖ ಕವಚ ಸಮರ್ಪಣಾ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನಲ್ಲಿ ಹುಟ್ಟಿ ರಾಜ್ಯದ ಲಕ್ಷಾಂತರ ಜನರ ಬಾಯಾರಿಕೆ ನೀಗಿಸುವ, ಲಕ್ಷಾಂತರ ಎಕರೆಯಲ್ಲಿ ಬೆಳೆ ಬೆಳೆಯಲು ಕಾವೇರಿ ಮಾತೆಯ ಕೊಡುಗೆ ಅನನ್ಯವಾದದ್ದು. ಅಂತಹ ಶ್ರೇಷ್ಠ ಸ್ಥಳದಲ್ಲಿ ವಾಸವಿ ಮಾತೆಯ ವಿಗ್ರಹದ ಮುಖಕ್ಕೆ ಸ್ವರ್ಣದ ಮುಖವಾಡ ಅರ್ಪಿಸಿದ್ದು ನಮ್ಮೆಲ್ಲರ ಭಾಗ್ಯ. ವಿಶ್ವದಲ್ಲಿ ಭಾರತದ ಘನತೆ ಹೆಚ್ಚಾಗುತ್ತಿರುವ ಹಾಗೆಯೇ ದೇಶದ ಹಿಂದೂ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆಯೂ ವಿಶ್ವ ತಿಳಿಯಲು ಪ್ರೇರೇಪಣೆ ಆಗುತ್ತಿದೆ ಎಂದರು. ನಿರಾಡಂಭರ ಮೂರ್ತಿಗೆ ಆಡಂಭರದ ಪೂಜೆ ಎಂದು ನಾಸ್ತಿಕರು ಹೇಳುತ್ತಾರೆ. ನಾವು ದೇವಸ್ಥಾನಗಳನ್ನು ಅತ್ಯಂತ ಉನ್ನತ ಮಟ್ಟದಲ್ಲಿ ನೋಡುತ್ತೇವೆ. ನಾವು ಇವರುವುದಕ್ಕಿಂತ ಹೆಚ್ಚಿನ ಉನ್ನತ ಮಟ್ಟದಲ್ಲಿ ದೇವರನ್ನು ನೋಡಲು ಬಯಸುವವರು ನಾವುಗಳು.…

Read More

ಕಡಂಗ ಫೆ.23 NEWS DESK : ಮುಸ್ಲಿ0 ಸಮುದಾಯದ ಪ್ರಭಾವಿ ನಾಯಕ, ಸಮಸ್ತ ಪಂಡಿತ ಅಧ್ಯಕ್ಷ  ಈ.ಸುಲೈಮಾನ್ ಉಸ್ತಾದ್  ಫೆ.24 ರಂದು ಕೊಡಗು ಜಿಲ್ಲೆ ಕೊಡಗಿಗೆ ಭೇಟಿ ನೀಡಲಿದ್ದಾರೆ. ಸಂಜೆ 4 ಗಂಟೆಗೆ ವಿರಾಜಪೇಟೆಯ ಅನ್ವರುಲ್ ಹುದಾ ವಿದ್ಯಾ ಸಂಸ್ಥೆಗೆ ಮತ್ತು ಸಂಜೆ 7 ಗಂಟೆಗೆ ಕುಂಜಿಲ ಫೈನರಿ ಉರೂಸ್ ನಲ್ಲಿ ಪಾಲ್ಗೊಲಿದ್ದಾರೆ. ವರದಿ : ನೌಫಲ್

Read More

ಮಡಿಕೇರಿ ಫೆ.23 NEWS DESK :  ರಾಜ್ಯ ಸರ್ಕಾರ ದಲಿತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿ ಹಾಗೂ ಎಸ್‍ಸಿ ಮೋರ್ಚಾದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕಳೆದ 9 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ದಲಿತ ಸಮುದಾಯದ ವಿಚಾರದಲ್ಲಿ ಕೇವಲ ಮಾತಿನಲ್ಲಿ ಮಾತ್ರ ಕಾಳಜಿಯನ್ನು ತೋರಿದೆ, ಉಳಿದಂತೆ ಎಲ್ಲಾ ಹಂತದಲ್ಲೂ ವಂಚಿಸುತ್ತಾ ಬಂದಿದೆ. ಪರಿಶಿಷ್ಟರಿಗಾಗಿ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿದರು. ಸಮಾಜ ಕಲ್ಯಾಣ ಸಚಿವರು ಕಾಂಗ್ರೆಸ್ ಪಕ್ಷದ ಹಿತವನ್ನು ಕಾಪಾಡಿಕೊಳ್ಳಲು ಮಾತ್ರ ದಲಿತ ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ಇಲಾಖೆಗಳ ಅನುದಾನವನ್ನು ವಿದ್ಯಾರ್ಥಿಗಳಿಗೆ ಹಾಗೂ ಅರ್ಹ ಫಲಾನುಭವಿಗಳಿಗೆ ಬಳಸದೆ ಬಲಿಪಶು ಮಾಡಲಾಗುತ್ತಿದೆ ಎಂದು ದೂರಿದರು. ದಲಿತ…

Read More

ಸೋಮವಾರಪೇಟೆ ಫೆ.23 NEWS DESK : ವಿದ್ಯುತ್ ಬಿಲ್ ಬಾಕಿ ನೆಪದಲ್ಲಿ ಸೆಸ್ಕ್ ನವರು ಕಾಫಿ ಬೆಳೆಗಾರರ 10ಎಚ್.ಪಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತಪರ ಸಂಘಟನೆಗಳ ಸಹಕಾರದಿಂದ ಆಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರುಗಳು ಕಾಫಿ ಬೆಳೆಗಾರರ ರಕ್ಷಣೆಗೆ ಬರಬೇಕು, ಮುಖ್ಯಮಂತ್ರಿ ಹಾಗೂ ಇಂಧನ ಸಚಿವರೊಂದಿಗೆ ಚರ್ಚಿಸಿ ಬೆಳೆಗಾರರ ಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡಿಸಬೇಕು. ಯಾವುದೇ ಷರತ್ತಿಲ್ಲದೆ 10 ಎಚ್‌ಪಿ ಒಳಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕಲ್ಪಿಸುವ ಸರ್ಕಾರದ ಅದೇಶದ ಪ್ರತಿಯನ್ನು ಬಿಡುಗಡೆ ಮಾಡಬೇಕು ಎಂದು ಸೋಮವಾರಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಕೊಡಗು ಜಿಲ್ಲೆ ಬರಪೀಡಿತ ತಾಲ್ಲೂಕ್ಕೆಂದು ಘೋಷಣೆಯಾಗಿದೆ. ಪ್ರಸಕ್ತ ವರ್ಷ ಅಕಾಲಿಕ ಮಳೆಯಿಂದ ಕಾಫಿ ಕೊಯ್ಲಿನ ಸಂದರ್ಭ ಕಾಫಿ ಮಣ್ಣು ಪಾಲಾಗಿದೆ. ಅತೀಯಾದ ಬಿಸಿಲಿನಿಂದ ಕಾಫಿ ಗಿಡಗಳು ಒಣಗುತ್ತಿವೆ. ಮಾರ್ಚ್ ಕೊನೆ ವಾರದಲ್ಲಿ ಕಾಫಿ ಗಿಡಗಳಲ್ಲಿ ಹೂ ಅರಳಿಸಬೇಕಾಗಿದೆ. ಈ ಸಂದರ್ಭದಲ್ಲಿ ವಿದ್ಯುತ್…

Read More

ಮಡಿಕೇರಿ ಫೆ.23 NEWS DESK :  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ.ಜಾ ಮತ್ತು ಪ.ಪಂ ನೌಕರರ ಸಂಘದ ವತಿಯಿಂದ ಫೆ.24 ರಂದು ಮಡಿಕೇರಿಯಲ್ಲಿ ಸಂವಿಧಾನ ಜಾಗೃತಿ ಸಮಾವೇಶ ನಡೆಯಲಿದೆ. ನಗರದ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಕೆ.ಎಸ್‌.ಆರ್‌.ಟಿ.ಸಿ ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ಬಿ.ಜಯಶಂಕರ ಶೆಟ್ಟಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ನಂದಕುಮಾರ್ ವಹಿಸಲಿದ್ದಾರೆ. ಬೆಂಗಳೂರು ಎಂ.ಇ.ಎಸ್.ಕಾಲೇಜಿನ ಉಪನ್ಯಾಸಕ ಡಾ.ರವಿ ಅಪ್ಪಗೆರೆ ಆಶಯ ನುಡಿಗಳನ್ನಾಡಲಿದ್ದು, ಮುಖ್ಯ ಭಾಷಣಕಾರರಾಗಿ ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಾ.ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ.ಎಸ್‌.ಆರ್‌.ಟಿ.ಸಿ ಪುತ್ತೂರು ವಿಭಾಗ ಕಾರ್ಮಿಕ ಕಲ್ಯಾಣಧಿಕಾರಿ ಕೆ.ಕೆ.ಸೋಮಶೇಖರ್, ಮಡಿಕೇರಿ ಘಟಕ ವ್ಯವಸ್ಥಾಪಕ ಹೆಚ್.ಇ.ವೀರಭದ್ರಸ್ವಾಮಿ, ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ಟಿ.ಸುರೇಶ್ ಕಂಠಿ ಭಾಗವಹಿಸಲಿದ್ದಾರೆ.  

Read More

ಮಡಿಕೇರಿ ಫೆ.23 NEWS DESK : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಭಾಷಣ ಸ್ಪರ್ಧೆ ಮತ್ತು 2022-23ನೇ ಸಾಲಿನ ಎಸ್‍ಎಸ್‍ಎಲ್‍ಸಿ ಕನ್ನಡ ಭಾಷೆ ಪರೀಕ್ಷೆಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಟಿ.ಪಿ.ರಮೇಶ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಫೆ.25 ರಂದು ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಪತ್ರಿಕಾ ಭವನ ಟ್ರಸ್ಟ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎಸ್.ಐ.ಮುನಿರ್ ಅಹ್ಮದ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಲೋಕನಾಥ್ ಅಮೆಚೂರು ವಹಿಸಲಿದ್ದಾರೆ. ಅತಿಥಿಗಳಾಗಿ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್, ರೇವತಿ ರಮೇಶ್ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪ್ರಶಸ್ತಿ ಪ್ರದಾನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು,…

Read More

ಮಡಿಕೇರಿ ಫೆ.23 : ಪೊನ್ನಂಪೇಟೆ ತಾಲ್ಲೂಕಿನ ಬೊಟ್ಟಿಯತ್ ನಾಡ್ ಶ್ರೀ ಈಶ್ವರ ದೇವಾಲಯದ ವಾರ್ಷಿಕೋತ್ಸವವು ಫೆ.26 ರಿಂದ ಮಾ.5ರ ವರೆಗೆ ನಡೆಯಲಿದೆ ಎಂದು ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ. ಫೆ.26 ರಂದು ಸಂಜೆ 7 ಗಂಟೆಗೆ ಕೊಡಿಮರ ನಿಲ್ಲಿಸುವ ಮೂಲಕ ಆರಂಭವಾಗಲಿದ್ದು, ಮಾ.4 ರಂದು ನೆರ್ಪು ಹಾಗೂ ಮಾ.5 ರಂದು ದೇವರ ಅವಭೃತ ಸ್ನಾನ(ದೇವ ಕುಳಿಪೊ) ಕಾರ್ಯಕ್ರಮ ನಡೆಯಲಿದೆ. ಒಂಬತ್ತು ದಿನಗಳ ಕಾಲ ನಡೆಯುವ ವಾರ್ಷಿಕ ಉತ್ಸವದಲ್ಲಿ ಮಾ.2 ರಿಂದ ಪರಕೆ ಬೊಳಕ್ ಆರಂಭವಾಗಲಿದೆ. ಉತ್ಸವ ಮುಗಿಯುವವರೆಗೂ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತರು ಅನ್ನಸಂತರ್ಪಣೆಗೆ ಬೇಕಾದ ಸಾಮಗ್ರಿಗಳನ್ನು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9901262398, 8105401819, 9448620974  ಸಂಪರ್ಕಿಸಬಹುದಾಗಿದೆ ಎಂದು ತಕ್ಕಮುಖ್ಯಸ್ಥರು ತಿಳಿಸಿದ್ದಾರೆ. ಕುಂದಾ ಬೆಟ್ಟದ ತಪ್ಪಲಿನ ಮುಗಟಗೇರಿ ಗ್ರಾಮದಲ್ಲಿರುವ ಶ್ರೀ ಈಶ್ವರ ದೇವಸ್ಥಾನಕ್ಕೆ (ನಾಡ್ ದೇವಸ್ಥಾನ) ಅದರದೇಯಾದ ಇತಿಹಾಸವಿದ್ದು ಮುಗಟಗೇರಿ, ಕುಂದಾ, ಹುದೂರು, ಹಳ್ಳಿಗಟ್ಟು, ಈಚೂರು, ಆರ್ವತೋಕ್ಲು ಸೇರಿದಂತೆ ಈ ಸುತ್ತಾಮುತ್ತಲ ಗ್ರಾಮಗಳು ಸೇರುತ್ತದೆ ಎಂದು…

Read More