ಮಡಿಕೇರಿ ಫೆ.22 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿಶ್ವ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ನಗರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಕ್ಕಳಿಂದ ಜಾಥಾ ನಡೆಯಿತು. ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಜಾಥಾವು ನಗರದ ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ತಲಪಿತು. ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ ವಾದ್ಯದೊಂದಿಗೆ ಸುಮಾರು 2 ಕಿ.ಮೀ ದೂರದ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಪ್ರದಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಜಿಮ್ಮಿ ಸಿಕ್ವೆರಾ, ಪುಷ್ಪವೇಣಿ, ಖಜಾಂಚಿ, ಹರಿಣಿ ವಿಜಯ್ ಸಹ ಕಾರ್ಯದರ್ಶಿ ಮೈಥಿಲಿರಾವ್, (ಎ.1) ದಮಯಂತಿ, ಬೊಳ್ಳಜಿರ ಅಯ್ಯಪ್ಪ, ಇತರರು ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥಾಪಕರಾದ ಲಾರ್ಡ್ ಬೇಡನ್ ಪೊವೆಲ್, ಒಲೆವ್ ಸೇಂಟ್ ಕ್ಲೇರ್…
ಲೇಖಕ: admin
ಮಡಿಕೇರಿ ಫೆ.22 NEWS DESK : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಗ್ರಾಮವೊಂದರ ಅಪ್ರಾಪ್ತೆಯೊಬ್ಬಳು ಅತ್ಯಾಚಾರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾದ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕೆಂದು ವಿಮನ್ ಇಂಡಿಯಾ ಮೂಮೆಂಟ್ ಒತ್ತಾಯಿಸಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ ಸಂಘಟನೆಯ ಪ್ರಮುಖರು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವ್ಯಾಪಿ ಹೋರಾಟ ತೀವ್ರಗೊಳ್ಳುತ್ತಿದ್ದು, ಇದೊಂದು ವಿಶೇಷ ಪ್ರಕರಣವೆಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಪರಿಗಣಿಸಬೇಕೆಂದು ಆಗ್ರಹಿಸಿದರು. ಪ್ರಕರಣವನ್ನು ತಿರುಚುವ ಪ್ರಯತ್ನಗಳು ನಡೆದಿರುವುದು ಖಂಡನೀಯ, ಪೊಲೀಸ್ ಇಲಾಖೆ ಕಾನೂನು ಚೌಕಟ್ಟಿನಡಿ ಅಗತ್ಯ ಕ್ರಮ ಕೈಗೊಂಡು ಶಾಮೀಲಾಗಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷೆ ಸಲೀಕತ್, ಕಾರ್ಯದರ್ಶಿ ರಿಶಾನ, ಮಡಿಕೇರಿ ನಗರಸಭಾ ಸದಸ್ಯೆ ಮೇರಿ ವೇಗಸ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.
ಮಡಿಕೇರಿ ಫೆ.22 NEWS DESK : ಭಾರತೀಯ ಜನತಾ ಪಾರ್ಟಿಯ ಮಡಿಕೇರಿ ಗ್ರಾಮಾಂತರ ಮಂಡಲಕ್ಕೆ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಅನುಮೋದನೆ ಮೇರೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಗ್ರಾಮಾಂತರ ಮಂಡಲದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪ್ರಧಾನ ಕಾರ್ಯದರ್ಶಿಗಳಾದ ನೆಲ್ಲಚಂಡ ಕಿರಣ್ ಕಾರ್ಯಪ್ಪ ಹಾಗೂ ಡೀನ್ ಬೋಪಣ್ಣ ತಿಳಿಸಿದ್ದಾರೆ. ಮಂಡಲದ ಖಜಾಂಚಿಯಾಗಿ ಭೀಮಯ್ಯ ಮೇಕೇರಿ, ಉಪಾಧ್ಯಕ್ಷರುಗಳಾಗಿ ಕುಡಿಯರ ಲಲಿತಾ, ಮನು ಮಹೇಶ್, ಶಶಿ ಮೂರ್ನಾಡು, ವಿಮಲ ಮಕ್ಕಂದೂರು, ಅಂಬಿ ಕಾರ್ಯಪ್ಪ, ಉಡುದೋಳಿ ಗಿರಿ, ಕಾರ್ಯದರ್ಶಿಗಳಾಗಿ ನರಿಯಂದಡ ಶಾಂತಿ, ಪೂರ್ಣಿಮಾ ಮರಗೋಡು, ಕೆ.ಪಿ.ಕಾರ್ತಿಕ್, ಕೆದಂಬಾಡಿ ಜಗದೀಶ್, ಕೊಕ್ಕಲೇರ ಅಯ್ಯಪ್ಪ, ಹೊಸಮನೆ ಹರೀಶ್, ವಕ್ತಾರರಾಗಿ ಧನಂಜಯ ಅಗೋಳಿಕಜೆ ಹಾಗೂ ಸಹ ವಕ್ತಾರರಾಗಿ ಎನ್.ಸಿ.ಅನಂತ ನೇಮಕಗೊಂಡಿದ್ದಾರೆ. ಸದಸ್ಯರುಗಳಾಗಿ ಪಿ.ಎನ್.ನಾರಾಯಣ, ಕುದ್ಪಜೆ ಸುಜೇತಾ, ಚಂದ್ರಕಲಾ ಬಾಲಚಂದ್ರ, ತೀರ್ಥರಾಮ ಚೆಂಬು, ನಿಡಿಂಜೆ ಶ್ರೀನಿವಾಸ್, ನಿರ್ಮಲ ಭರತ್, ಕೊರಗಪ್ಪ ಸಂಪಾಜೆ, ಯೋಗೀಶ್ ಮದೆನಾಡು, ಕಿರಣ್ ಚೇರಂಬಾಣೆ, ಪವನ್ ಚೇರಂಬಾಣೆ, ಶ್ರೀಧರ್ ದಬ್ಬಡ್ಕ, ಅನಿತಾ ದಿನೇಶ್, ಆಮೆ ಬಾಲಕೃಷ್ಣ,…
ಕಡಂಗ ಫೆ.22 NEWS DESK : ಕಡ0ಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತುಂಬಾಕುವಿನಿಂದಾಗುವ ದುಷ್ಪರಿಣಾಮದ ಕುರಿತು ಚಿತ್ರಕಲಾ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾ ತುಂಬಾಕು ನಿಯಂತ್ರಣ ಘಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನ ಅಂಕಿತ ಮಂಡಲ್, ದ್ವಿತೀಯ ಸ್ಥಾನವನ್ನು ರಿಫಾ ಶೇರಿನ್, ಶಿಹಾನ ತೃತೀಯ ಸ್ಥಾನವನ್ನು ಪಡೆದುಕೊಂಡರು. ಈ ಸಂದರ್ಭ ಶಾಲೆಯ ಶಿಕ್ಷಕ ವೃಂದ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸದಸ್ಯರುಗಳು ಹಾಜರಿದ್ದರು. ಸ್ಪರ್ಧೆಯಲ್ಲಿ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವರದಿ : ನೌಫಲ್
ಮಡಿಕೇರಿ ಫೆ.22 NEWS DESK : ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ರಾಜಕಾರಣಿಗಳನ್ನು ರಾಜಕೀಯ ನಾಯಕರೆಂದು ಒಪ್ಪಿಕೊಳ್ಳದಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಧ್ಯಕ್ಷ ರವಿ ಕೃಷ್ಣಾರೆಡ್ಡಿ ತಿಳಿಸಿದರು. “ಕರ್ನಾಟಕಕ್ಕಾಗಿ ನಾವು” ಪಕ್ಷದ ಬೈಕ್ ಜಾಥ ಮಡಿಕೇರಿಗೆ ಆಗಮಿಸಿದ ಸಂದರ್ಭ ನಗರದ ಗಾಂಧಿ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜನಪರ ಕಾಳಜಿಯ, ಸ್ವಚ್ಚ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನಾಡಪ್ರೇಮಿ ಸೈನಿಕರನ್ನು ಮತ್ತು ಕೆಆರ್‍ಎಸ್ ಪಕ್ಷವನ್ನು ಬೆಂಬಲಿಸಿ” ಎಂದು ಮನವಿ ಮಾಡಿದರು. “ನಾಡಪ್ರೇಮಿಗಳೇ, ಏಳಿ, ಎದ್ದೇಳಿ! ಭ್ರಷ್ಟ ವ್ಯವಸ್ಥೆಯನ್ನು ತೊಲಗಿಸಿ, ಭವ್ಯ ಸಮಾಜವನ್ನು ನಿರ್ಮಿಸಿ. ಹೆಮ್ಮೆ ಮತ್ತು ಘನತೆಯಿಂದ ಜೀವಿಸಿ, ಸ್ವಾಭಿಮಾನದಿಂದ ಬದುಕಿ, ಬಾಳಿ” ಎಂದು ಕರೆ ನೀಡಿದರು. ಕೆಆರ್‍ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಹೆಚ್. ಲಿಂಗೇಗೌಡ ಮಾತನಾಡಿ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ, ಪ್ರಾದೇಶಿಕ…
ಸೋಮವಾರಪೇಟೆ ಫೆ.22 NEWS DESK : ಎಸ್‌ವೈಎಸ್ ಮತ್ತು ಎಸ್‌ಎಸ್‌ಎಫ್ ಸೋಮವಾರಪೇಟೆ ಸರ್ಕಲ್ ವತಿಯಿಂದ ಕೊಡಗು ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ನಡೆಯಿತು. ಶಿಬಿರಕ್ಕೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕರುಂಬಯ್ಯ ಚಾಲನೆ ನೀಡಿದರು. ನಂತರ ಮಾತನಾಡಿ, ಜಿಲ್ಲೆಯಲ್ಲಿ ರಕ್ತದ ಬೇಡಿಕೆ ಹೆಚ್ಚಿದೆ, ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ತುರ್ತು ಸಂದರ್ಭದಲ್ಲಿ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಎರಡು ಮೂರು ದಿನಗಳಿಗೊಮ್ಮೆಯಾದರೂ, ರಕ್ತದಾನ ಶಿಬಿರಗಳು ನಡೆದಲ್ಲಿ ಸಮಸ್ಯೆಯಿಂದ ಪಾರಾಗಬಹುದು ಎಂದು ತಿಳಿಸಿದರು. ಜಿಲ್ಲೆಯವರೊಂದಿಗೆ ಹೊರ ಜಿಲ್ಲೆಯಿಂದಲೂ ಸಾಕಷ್ಟು ರೋಗಿಗಳು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುತ್ತಿರುವುದರಿಂದ ತಿಂಗಳಿಗೆ 500ಕ್ಕೂ ಹೆಚ್ಚಿನ ಯೂನಿಟ್ ರಕ್ತ ಬೇಕಾಗಿದೆ. ಎಲ್ಲ ಗುಂಪಿನ ರಕ್ತವನ್ನು ಸಂಗ್ರಹ ಮಾಡಬೇಕಿರುವುದರಿಂದ ಕೊರತೆ ಹೆಚ್ಚಾಗಿದೆ ಎಂದು ಹೇಳಿದರು. ಸಂಘ ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ನಿರಂತರವಾಗಿ ಮಾಡಬೇಕು. ರಕ್ತದಾನದಿಂದ ಬೇಕಾದಷ್ಟು ಉಪಯೋಗಗಳಿವೆ. ಮೂರು ತಿಂಗಳಿಗೊಮ್ಮೆ ಅರೋಗ್ಯವಂತರು ರಕ್ತದಾನ ಮಾಡಿದರೆ, ಅನೇಕ ರೋಗಗಳಿಂದ ಮುಕ್ತರಾಗಬಹುದು. ಕಾಯಿಲೆಗಳಿದ್ದರೆ ರಕ್ತ ಪರೀಕ್ಷೆ ಸಂದರ್ಭ ಗೊತ್ತಾಗುತ್ತದೆ. ಆಸ್ಪತ್ರೆಯಿಂದ ಗೌಪ್ಯವಾಗಿ ಮಾಹಿತಿ…
ಸೋಮವಾರಪೇಟೆ ಫೆ.22 NEWS DESK : ಪುಷ್ಪಗಿರಿ ಜೆಸಿಐ ಸೋಮವಾರಪೇಟೆ ವತಿಯಿಂದ ತೋಳೂರು ಶೆಟ್ಟಳ್ಳಿಯ ಡಾ. ಬಿ. ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ‘ಪರೀಕ್ಷೆ ಒಂದು ಹಬ್ಬ, ಪರೀಕ್ಷೆಯನ್ನು ಎದುರಿಸುವುದು ಹೇಗೆ’ ಎಂಬ ವಿಷಯದ ಕುರಿತಾದ ತರಬೇತಿ ಕಾರ್ಯಾಗಾರವನ್ನು ಬುಧವಾರ ಏರ್ಪಡಿಸಿಲಾಗಿತ್ತು. ಜೇಸಿಐ ವಲಯ 14 ರ ತರಬೇತುದಾರ ಪ್ರಶಾಂತ್ ಕುಂಬಾರ್ ಶೆಟ್ಟಿ ಹೆಮ್ಮಕ್ಕಿ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷಾ ಜ್ವರವನ್ನು ಹತ್ತಿಸಿಕೊಳ್ಳಬಾರದು. ಪರೀಕ್ಷಾ ಭಯದಿಂದ ಹೊರಬರಬೇಕು. ಕೇವಲ ಪುನಾರಾವರ್ತಿತ ಓದಿನಿಂದ ಎಲ್ಲವೂ ಸಿಗುವುದಿಲ್ಲ. ಓದಿನ ಮಧ್ಯೆ ವಿಶ್ರಾಂತಿ ಕೂಡ ಅಗತ್ಯ ಎಂದು ಹೇಳಿದರು. ಕಂಪ್ಯೂಟರ್, ಟಿ.ವಿ. ಸ್ಮಾರ್ಟ್ಫೋನ್, ಪರೀಕ್ಷೆ ಮುಗಿಯುವ ವರೆಗೆ ವಿದಾಯ ಹೇಳಬೇಕು. ಏಕಾಗ್ರತೆ ಹೆಚ್ಚಿಸಿಕೊಳ್ಳಬೇಕು. ಮೆದುಳಿಗೆ ಅಯಾಸವಾಗದಂತೆ ನೋಡಿಕೊಳ್ಳಿ, ಪರೀಕ್ಷೆಯೇನೂ ಜೀವನದ ಅಂತಿಮವಲ್ಲ. ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಗೊಂದಲ ಬೇಡ, ಓದಿ ಅರ್ಥೈಸಿಕೊಂಡು ಉತ್ತರ ಕಂಡುಕೊಳ್ಳಿ, ಪರೀಕ್ಷೆಯನ್ನು ಸಂಭ್ರಮದಿAದ ಬರೆಯಬೇಕು ಎಂದು ಹೇಳಿದರು. ಜೇಸಿಐ ಅಧ್ಯಕ್ಷ ಎಸ್.ಆರ್.ವಸಂತ್, ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ,…
ಸೋಮವಾರಪೇಟೆ ಫೆ.22 NEWS DESK : ಬೆಳೆಗಾರರು ಗುಣಮಟ್ಟದ ಕಾಫಿ ಉತ್ಪಾದನೆಗೆ ಒತ್ತು ನೀಡಬೇಕು ಎಂದು ಕಾಫಿ ಮಂಡಳಿ ಉಪನಿರ್ದೇಶಕರಾದ ಡಾ.ಚಂದ್ರಶೇಖರ್ ಅಭಿಪ್ರಾಯಿಸಿದರು. ಕಾಫಿ ಮಂಡಳಿ ವತಿಯಿಂದ ನಾಕೂರು-ಶಿರಂಗಾಲ ಮೂಲೆಮನೆ ಎಸ್ಟೇಟ್ ನಲ್ಲಿ ನಡೆದ ಕಾಫಿ ತೋಟದಲ್ಲಿ ಮಣ್ಣಿನ ಪೋಷಕಾಂಶ ನಿರ್ವಹಣೆ ಹಾಗು ಕಾಫಿ ತಳಿ ಅಭಿವೃದ್ಧಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕೊಳ್ಳುವವರು ಗುಣಮಟ್ಟದ ಕಾಫಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರ ರುಚಿಗೆ ಅನುಗುಣವಾಗಿ ಕಾಫಿಯನ್ನು ಕೊಟ್ಟಾಗ ಮಾತ್ರ ಬೇಡಿಕೆ ಹೆಚ್ಚಾಗಿ ಉತ್ತಮ ಬೆಲೆಯನ್ನು ನಿರೀಕ್ಷೆ ಮಾಡಬಹುದು ಎಂದು ಹೇಳಿದರು. ವರ್ಲ್ಡ್ ಕಾಫಿ ಕಾನ್ಫೆರೆನ್ಸ್ ನಡೆದ ಮೇಲೆ ಭಾರತದ ಕಾಫಿ ಗುಣಮಟ್ಟದಿಂದ ಕೂಡಿದೆ ಎಂಬ ಅಭಿಪ್ರಾಯ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾಗಿದೆ. ಈ ಕಾರಣದಿಂದ ಪ್ರತಿಯೊಬ್ಬ ಬೆಳೆಗಾರನೂ ಕಾಫಿ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ಪ್ರಯತ್ನ ಮುಂದುವರಿಸಬೇಕು ಎಂದು ಕಿವಿ ಮಾತು ಹೇಳಿದರು. ಕಾಫಿ ಭೂಮಿ ಕಡಿಮೆಯಾಗುತ್ತಿದೆ. ಇದ್ದ ಭೂಮಿಯಲ್ಲೇ ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಗುಣಮಟ್ಟದ ಕಾಫಿ ಬೆಳೆಯುವ ಪ್ರಯತ್ನ ಮಾಡಬೇಕು. ಕಾಫಿ ಮಂಡಳಿ ಬೆಳೆಗಾರರಿಗೆ…
ಸೋಮವಾರಪೇಟೆ ಫೆ.22 NEWS DESK : ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಗ್ರಾಮದಲ್ಲಿ ಕಾಡಾನೆಗಳು ದಾಳಿ ಮಾಡಿದ್ದು, ಫಸಲು ನಷ್ಟವಾಗಿದೆ. ತೋಟಗಳಿಗೂ ಹಾನಿಯಾಗಿದ್ದು, ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾಫಿ, ಮೆಣಸು, ಭತ್ತ, ಹಲಸು, ಜೋಳ, ಫಸಲಿಗೆ ಬಂದಿದ್ದ ಗೆಣಸು, ಪಪ್ಪಾಯ, ಬಾಳೆ ಗಿಡಗಳು ಸಂಪೂರ್ಣ ನಾಶವಾಗಿದೆ. ಕಾಡಾನೆ ದಾಳಿ ಕುರಿತು ಹಲವು ವರ್ಷಗಳಿಂದ ಇಲಾಖೆಗೆ ಮನವಿ ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೃಷಿಕರು ಆರೋಪಿಸಿದ್ದಾರೆ. ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ಬೆಳೆ ನಷ್ಟಕ್ಕೊಳಗಾಗಿರುವ ಕೃಷಿಕರಾದ ಯು.ಪಿ.ರಾಜು, ನಂದಕುಮಾರ್, ಜಯಂತ್ ಮತ್ತಿತರರು ಒತ್ತಾಯಿಸಿದ್ದಾರೆ.
ಬೆಂಗಳೂರು ಫೆ 22 NEWS DESK : 55 ಲಕ್ಷ ಸರ್ಕಾರಿ ಶಾಲೆ ಮಕ್ಕಳ ಮಾನಸಿಕ ದೈಹಿಕ ಆರೋಗ್ಯಕ್ಕಾಗಿ ರಾಗಿ ಮಾಲ್ಟ್ ವಿತರಣೆ ಮಾಡಲು ಶುರು ಮಾಡಿದ್ದೇವೆ. ಉತ್ತಮ ಪೌಷ್ಠಿಕಾಂಶ ಉತ್ತಮ ಶಿಕ್ಷಣಕ್ಕೆ ರಹದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 2013 ರಲ್ಲಿ ನಮ್ಮ ಸರ್ಕಾರ ಬಂದಾಗ ನಮ್ಮಲ್ಲಿ ಹಾಲು ಉತ್ಪಾದನೆ ಹೆಚ್ಚಾಯಿತು. ಈ ಹೆಚ್ಚುವರಿ ಹಾಲಿನ ಮಾರಾಟ ಮತ್ತು ಹಾಲಿನ ಉಪ ಉತ್ಪನ್ನಗಳನ್ಮೂ ಹೆಚ್ಚುವರಿಯಾಗಿ ಉತ್ಪಾದನೆ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ಆ ಕೂಡಲೇ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು ಕೊಡುವ ಕ್ಷೀರಭಾಗ್ಯ ಯೋಜನೆಯನ್ನು ಆರಂಭಿಸಿದೆ. ಏಒಈ ಮೂಲಕ ಮಕ್ಕಳಿಗೆ ಹಾಲು ಹೋಗುತ್ತದೆ. ಈ ಹಾಲಿನ ಹಣವನ್ನು ಸರ್ಕಾರ ಏಒಈ ಗೆ ನೀಡುತ್ತದೆ. ಆ ಮೂಲಕ ಏಒಈ ಗೆ ಹಾಲು ಸರಬರಾಜು ಮಾಡುವ ರೈತರಿಗೆ ನೆರವಾಗುವ ತೀರ್ಮಾನ ಮಾಡಿದೆವು.…






