ಮಡಿಕೇರಿ ಫೆ.21 NEWS DESK : ಪೇರಡ್ಕ ಗೂನಡ್ಕ ಪ್ರದೇಶವು ಹಿಂದಿನಿಂದಲೂ ಸೌಹಾರ್ದತೆಯ ಪ್ರದೇಶವಾಗಿದೆ. ಇಲ್ಲಿ ಹಲವಾರು ಸರ್ವಧರ್ಮಿಯರು ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ನಾವೆಲ್ಲರು ಜಾತ್ಯಾತೀತ ಮನೋಭಾವದಿಂದ ಸಹಬಾಳ್ವೆಯ ಜೀವನ ಸಡೆಸಬೇಕು. ರಾಜಕೀಯ ಜೀವನದಲ್ಲಿ ಟೀಕೆಗಳು ಸಹಜ ಅದಕ್ಕೆಲ್ಲ ಎದೆ ಗುಂದುವನು ನಾನಲ್ಲ ಸೌಹಾರ್ಧತೆಯನ್ನು ನನ್ನ ಪೂರ್ವಿಕರಿಂದ ತಂದೆ- ತಾಯಿಯಿಂದ ಕಲಿತಿರುತ್ತೇನೆ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು. ಪೇರಡ್ಕ ತೆಕ್ಕಿಲ್ ಮೊಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ವಲಿಯುಲ್ಲಾಹಿ ದರ್ಗಾ ಶರೀಪಿನ ಉರೂಸ್ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿದರು. ಈ ಊರಿನ ಅಭಿವೃದ್ಧಿ ಇತಿಹಾಸ ನನಗೆ ತಿಳಿದಿದೆ. ನನ್ನನ್ನು ನಿಮ್ಮೆಲ್ಲರ ದುವಾ ಆಶೀರ್ವಾದದಿಂದ ಅಲ್ಲಾಹು ಈ ಪುಣ್ಯ ಸ್ಥಳಕ್ಕೆ ತಲುಪಿಸಿದ್ದಾರೆ. ಇಲ್ಲಿಯ ಮತ್ತು ಊರಿನ ಅಭಿವೃದ್ಧಿ ಬಗ್ಗೆ ಮಿತ್ರ ಟಿ.ಎಂ.ಶಾಹಿದ್ ತೆಕ್ಕಿಲ್ ಮತ್ತು ಜಿ.ಕೆ.ಹಮೀದ್ ಗೂನಡ್ಕ ಅವರು ಸದಾ ತಿಳಿಸುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು. ಊರಿನ ಅಭಿವೃದ್ಧಿ ಬಗ್ಗೆ ಪರಿಸರದ ಸೌದರ್ಯದ ಬಗ್ಗೆ ಸಂತಸ…
ಲೇಖಕ: admin
ಮಡಿಕೇರಿ ಫೆ.21 NEWS DESK : ಕೊಡಗಿನ ಕೊಡವ ಸಿನಿಮಾ ರಂಗಕ್ಕೆ 52 ವರ್ಷ ತುಂಬಿದೆ. ಪ್ರಕೃತಿಯ ಸೊಬಗಿಗೆ ಮನಸೋತು ಎಷ್ಟೋ ಸಿನಿಮಾಗಳು ಕೊಡಗಿನಲ್ಲಿ ಚಿತ್ರೀಕರಣಗೊಂಡಿವೆ, ಇನ್ನೂ ಚಿತ್ರೀಕರಣಗೊಳ್ಳುತ್ತಲೇ ಇವೆ. ಕೊಡಗಿನಲ್ಲೂ ಸಿನಿ ಪ್ರಿಯರು, ಉತ್ತಮ ಕಲಾವಿದರುಗಳು ಇದ್ದಾರೆ, ಕನ್ನಡ, ಹಿಂದಿ ತಮಿಳು, ತೆಲುಗು, ಮಲಯಾಳಂ ಹೀಗೆ ಹಲವು ಭಾಷೆಗಳ ಸಿನಿಮಾಗಳನ್ನು ಟೆಂಟ್ ಪರದೆಯ ಮೇಲೆ ನೋಡುತ್ತಿದ್ದ ಕಾಲಘಟ್ಟದಲ್ಲಿ 1972 ರಲ್ಲಿ ಕೊಡಗಿನಲ್ಲೂ ಮೊಟ್ಟಮೊದಲ ಬಾರಿಗೆ ಚಿತ್ರೀಕರಣಗೊಂಡು ಬೆಳಕಿಗೆ ಬಂದ ಕೊಡವ ಸಿನಿಮಾ “ನಾಡ ಮಣ್ಣ್ ನಾಡ ಕೂಳ್”. ಕೊಡಗಿನ ಜನರು ಕೂಡ ಸಿನಿಮಾ ನಿರ್ಮಿಸಬಹುದು ಎಂದು ತೋರಿಸಿಕೊಟ್ಟ ಸುಸಂದರ್ಭ ಅದು. ಕೊಡವ ಭಾಷಾ ಚಿತ್ರವೊಂದಕ್ಕೆ ಅಭೂತಪೂರ್ವ ಪ್ರೋತ್ಸಾಹ ನೀಡಿದ ಕಾಲವೂ ಅದಾಗಿತ್ತು. ನಂತರದ ದಿನಗಳಲ್ಲಿ ಮತ್ತಷ್ಟು ಕೊಡವ ಸಿನಿಮಾಗಳು ಬರಲಾರಂಭಿಸಿದವು. ಅಧಿಕೃವಾಗಿ ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದ ಸಿನಿಮಾಗಳಾದ ಮಹಾವೀರ ಅಚ್ಚುನಾಯಕ, ಮಂದಾರಪೂ, ಪೊಣ್ಣ್‌ರ ಮನಸ್ಸ್, ನಾಬಯಂದಪೂ, ನಾ ಪುಟ್ಟ್‍ನ ಮಣ್ಣ್, ಜಡಿಮಳೆ, ಬಾಳ್‌ಪೊಲಂದತ್, ಪೊನ್ನಮ್ಮ, ತಳಂಗ್‍ನೀರ್, ಬಾಕೆಮನೆ,…
ಮಡಿಕೇರಿ ಫೆ.21 NEWS DESK : ಭಾರತೀಯ ಜನತಾ ಪಾರ್ಟಿಯ ಎಸ್‌ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಪಿ.ಕೆ.ಚಂದ್ರು ಹಾಗೂ ಸೋಮವಾರಪೇಟೆ ತಾಲ್ಲೂಕು ಮಂಡಲ ಅಧ್ಯಕ್ಷರನ್ನಾಗಿ ಜಿ.ಜಗನ್ನಾಥ್ ಅವರನ್ನು ನೇಮಕ ಮಾಡಿರುವುದಾಗಿ ಮೋರ್ಚಾದ ನೂತನ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಮೊಗೇರ ತಿಳಿಸಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಅನುಮೋದನೆ ಮೇರೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಜಿಲ್ಲೆಯಲ್ಲಿ ಎಸ್‌ಸಿ ಮೋರ್ಚಾವನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ನೂತನ ಜಿಲ್ಲಾ ಪದಾಧಿಕಾರಿಗಳು ಹಾಗೂ ಮಂಡಲ ಅಧ್ಯಕ್ಷರನ್ನು ನೇಮಕ ಮಾಡಿ ಎಸ್‌ಸಿ ಮೋರ್ಚಾವನ್ನು ಸಂಘಟಿಸಲಾಗುವುದು. ಸಧ್ಯದಲ್ಲೇ ಎಸ್.ಸಿ.ಮೋರ್ಚದ ಸಭೆ ನಡೆಸಲಾಗುವುದೆಂದು ರವಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಮಡಿಕೇರಿ ಫೆ. 21 NEWS DESK : ಪತ್ರಕತ೯ ಅನಿಲ್ ಹೆಚ್.ಟಿ ಬರೆದಿರುವ ಅಯೋಧ್ಯೆ – ಪ್ರೀತಿಯ ಮಂದಿರ, ರಾಷ್ಟ್ರಮಂದಿರ ಹೆಸರಿನ ಹೊಸ ಪುಸ್ತಕ ಫೆಬ್ರವರಿ 23 ರಂದು ಶುಕ್ರವಾರ ಲೋಕಾಪ೯ಣೆಯಾಗಲಿದೆ. ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಫೆ.23 ರಂದು ಶುಕ್ರವಾರ ಸಂಜೆ 6 ಗಂಟೆಗೆ ಅಯೋಧ್ಯೆ ಪುಸ್ತಕವನ್ನು ಇನ್ನಷ್ಟು ಬೇಕೆನ್ನ ಹೖದಯಕ್ಕೆ ರಾಮ ಹಾಡು ಬರೆದ ಖ್ಯಾತ ಕವಿ ಡಾ. ಗಜಾನನ ಶಮ೯ಲೋಕಾಪ೯ಣೆಗೊಳಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಪಾಲ್ಗೊಳ್ಳಲಿದ್ದಾರೆ. ಅಯೋಧ್ಯೆ ಹಿನ್ನಲೆ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿಮಾ೯ಣ, ಅಯೋಧ್ಯೆಯ ಪ್ರವಾಸಿ ತಾಣಗಳು, ಮಂದಿರ ನಿಮಾ೯ಣದ ಹಿಂದಿನ ಹೋರಾಟಗಳ ಮಾಹಿತಿಗಳೂ ಸೇರಿದಂತೆ ಅನೇಕ ಲೇಖನಗಳನ್ನು 130 ಪುಟದ, ವಣ೯ಮಯ ಪುಸ್ತಕದಲ್ಲಿ ದಾಖಲಿಸಲಾಗಿದೆ. ಅಯೋಧ್ಯೆ ಸಂಬಂಧಿತ ಹಲವು ವಣ೯ ಛಾಯಾಚಿತ್ರಗಳೂ ಪುಸ್ತಕದಲ್ಲಿದೆ ಎಂದು ಪ್ರಕಾಶನ ಸಂಸ್ಥೆಯಾದ ವಾತಾ೯ ಕಮ್ಯೂನಿಕೇಶನ್ಸ್ ಪ್ರಕಟಣೆ ತಿಳಿಸಿದೆ.
ನಾಪೋಕ್ಲು ಫೆ.21 NEWS DESK : ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಪುರುಷರ ಅಂತರ ಸಾಯಿ ಹಾಕಿ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ಆಟಗಾರರನ್ನು ಒಳಗೊಂಡ ಬೆಂಗಳೂರು ಸಾಯಿ ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ರಾಷ್ಟ್ರದ ಒಂಬತ್ತು ಸಾಯಿ ತಂಡಗಳು ಪಾಲ್ಗೊಂಡಿದ್ದ ಕ್ರೀಡಾಕೂಟದಲ್ಲಿ ಬೆಂಗಳೂರು ತಂಡವು ಕುರುಕ್ಷೇತ್ರ ತಂಡವನ್ನು 3 -2 ಗೋಲುಗಳಿಂದ ಮಣಿಸಿತು. ಜಿಲ್ಲೆಯ ಚೋಯಮಾದಂಡ ಬಿದ್ದಪ್ಪ, ತೀತಿಮಾಡ ಯಶಸ್, ಕಂಭೀರ0ಡ ಮಾನವ್ ,ಮಂಡೇಟಿರ ದನುಷ್,ಕುಲ್ಲೇಟಿರ ವಚನ್ ಕಾಳಪ್ಪ, ಬಿದ್ದಾತಂಡ ಅಖಿಲ್ ಅಯ್ಯಪ್ಪ, ಚೋಕಿರ ಕುಶಾಲ್ ಬೋಪಯ್ಯ ಕ್ರೀಡಾಪಟುಗಳಾಗಿ ಪಾಲ್ಗೊಂಡಿದ್ದರು. ಪದ್ಮಶ್ರೀ ಪುರಸ್ಕೃತ ಡಾ. ಎಂ.ಪಿ .ಗಣೇಶ್ ಅತಿಥಿಯಾಗಿ ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ.
ನಾಪೋಕ್ಲು ಫೆ.21 NEWS DESK : ಹೊದ್ದೂರು ಗ್ರಾಮದ ಶ್ರೀ ಶಾಸ್ತಾ ಈಶ್ವರ ದೇವಾಲಯದ ಮೂರನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿಷ್ಣುಮೂರ್ತಿ ಕೋಲವು ಶ್ರದ್ಧಾಭಕ್ತಿಯಿಂದ ಜರುಗಿತು. ವಾರ್ಷಿಕೋತ್ಸವದ ಅಂಗವಾಗಿ ಗಣಪತಿ ಹೋಮ, ಅಭಿಷೇಕ ಪೂಜೆ, ದೇವರ ನೃತ್ಯ ಬಲಿ, ಬೇಟೆ ಅಯ್ಯಪ್ಪ ಸನ್ನಿಧಿ ಅಭಿಷೇಕ ಪೂಜೆ, ವಿಷ್ಣುಮೂರ್ತಿ ದೈವ ನೆಲೆ ಅಭಿಷೇಕ ಪೂಜೆ ಜರುಗಿದವು. ಮಧ್ಯಾಹ್ನ ದೇವರ ನೃತ್ಯ ಬಲಿ ಪೂಜೆ ಹಾಗೂ ವಾರ್ಷಿಕ ಮಹಾಪೂಜೆ ನೆರವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಎರಡು ದಿನಗಳ ಕಾಲ ಉತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ , ಪದಾಧಿಕಾರಿಗಳು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಫೆ.21 NEWS DESK : ಪೊನ್ನಂಪೇಟೆ ಸಮೀಪದ ಹುದೂರು ಶ್ರೀ ಅಯ್ಯಪ್ಪ, ಭಧ್ರಕಾಳಿ ಮತ್ತು ಭಗವತಿ ದೇವಾಲಯದ ಆವರಣದಲ್ಲಿ ಫೆ.23 ರಂದು ಮಹಾ ಚಂಡಿಕಾ ಹೋಮ ನಡೆಯಲಿದೆ ಎಂದು ದೇವಾಲಯದ ತಕ್ಕಮುಖ್ಯಸ್ಥರು ಹಾಗೂ ಅಧ್ಯಕ್ಷರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಫೆ.23 ರಂದು ಬೆಳ್ಳಗ್ಗೆ 7 ಗಂಟೆಯಿಂದ ಉಡುಪಿಯ ಪ್ರಸಿದ್ಧ ತಂತ್ರಿಗಳಾದ ಶ್ರೀ ವಿಖ್ಯಾತ್ ಭಟ್ ಅವರ ನೇತೃತ್ವದಲ್ಲಿ ವಿಶೇಷ ಮಹಾ ಚಂಡಿಕಾ ಹೋಮ ನಡೆಯಲ್ಲಿದ್ದು, ಬೆಳಿಗ್ಗೆ 7.30 ಗಂಟೆಗೆ ಗಣಹೋಮ, 8.30 ಗಂಟೆಯಿಂದ ಚಂಡಿಕಾ ಹೋಮ ನಡೆಯಲಿದೆ. ಮಧ್ಯಾಹ್ನ 12-30 ಗಂಟೆಗೆ ಪೂರ್ಣಾಹುತಿ, ಮಧ್ಯಾಹ್ನ 1 ಗಂಟೆಗೆ ತೀರ್ಥ ಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಶ್ರೀಮಂಗಲ ಫೆ.21 NEWS DESK : ಕೊಡಗು ಜಿಲ್ಲೆಯಲ್ಲಿ ಬೆಳೆಗಾರರು ಮತ್ತು ಕಾರ್ಮಿಕರ ನಡುವೆ ಉತ್ತಮ ಬಾಂಧವ್ಯವಿದ್ದು, ಈ ಸಾಮರಸ್ಯಗಳನ್ನು ಕೆಡಿಸಲು ಕೆಲವು ಮಧ್ಯ ವರ್ತಿಗಳಿಂದ ಕಾರ್ಮಿಕರನ್ನು ಪ್ರಚೋದಿಸಿ ಬೆಳೆಗಾರರನ್ನು ಬೆದರಿಸಿ ಬೆಳೆಗಾರರ ಮೇಲೆ ಪ್ರಕರಣ ದಾಖಲಿಸುತ್ತಿವೆ ಎಂದು ಕೊಡಗು ಬೆಳೆಗಾರ ಒಕ್ಕೂಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಶ್ರೀಮಂಗಲ ಗ್ರಾ.ಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಒಕ್ಕೂಟದ ಪ್ರಮುಖರು ಕೊಡಗು ಜಿಲ್ಲೆಯ ತೋಟಗಳಲ್ಲಿ ಹೊರ ರಾಜ್ಯದ, ಹೊರ ಜಿಲ್ಲೆಯ ಹಾಗೂ ಸ್ಥಳೀಯ ಕಾರ್ಮಿಕರು ಕೆಲಸದ ನಿಮಿತ್ತ ಜಿಲ್ಲೆಯಲ್ಲಿದ್ದು, ತೋಟದ ಕೆಲಸ ಮಾಡುತ್ತಿದ್ದಾರೆ. ಕೈಗಾರಿಕೆ, ಹೋಟೆಲ್ ಉದ್ಯಮ, ಕಟ್ಟಡ ಕೆಲಸ, ಪ್ರವಾಸೋದ್ಯಮ ಆಟೋಮೊಬೈಲ್, ರಸ್ತೆ ಕಾಮಗಾರಿಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವಂತೆ ಕಾಫಿ ಪ್ಲಾಂಟೇಶನ್ ನಲ್ಲಿಯೂ ಕೆಲಸ ಮಾಡುತ್ತಿದ್ದಾರೆ, ಕಾಫಿ ಬೆಳೆಗಾರರನ್ನು ಟಾರ್ಗೆಟ್ ಮಾಡಿ ಕಾರ್ಮಿಕರನ್ನು ಪ್ರಚೋದಿಸಿ ಬೆಳೆಗಾರರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಜೀತ ವಿಮುಕ್ತ ಮತ್ತು ಜಾತಿ ನಿಂದನೆ ಕಾಯಿದೆ ಹಿಂದಿನಿಂದಲೂ ವ್ಯಾಪಕವಾಗಿ ದುರುಪಯೋಗವಾಗುತ್ತಿದ್ದು, ಈ ಕಾನೂನುಗಳನ್ನು ದುರ್ಬಳಕೆ ಪಡಿಸಿಕೊಳ್ಳದಂತೆ ಪೊಲೀಸ್ ಇಲಾಖೆ ವಿಶೇಷ…
ಮಡಿಕೇರಿ ಫೆ.21 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದಿನಾಚರಣೆ ಮತ್ತು ಜಿಲ್ಲಾ ಪುರಸ್ಕಾರ ಪ್ರಶಸ್ತಿ ಪತ್ರ ವಿತರಣಾ ಸಮಾರಂಭವು ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಫೆ.22 ರಂದು ಬೆಳಗ್ಗೆ 11 ಗಂಟೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪೊನ್ನಮ್ಮ ಕುಶಾಲಪ್ಪ ಸ್ಕೌಟ್-ಗೈಡ್ ಭವನದಲ್ಲಿ ನಡೆಯಲಿದೆ. ಅದೇ ದಿನ ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಮಕ್ಕಳ ಜಾಗೃತಿ ಜಾಥ ಹೊರಡಲಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ ತಿಳಿಸಿದ್ದಾರೆ.
ಸಿದ್ದಾಪುರ ಫೆ.21 NEWS DESK : ಕೊಡಗಿನ ಬಡವರ ಬೆಳಕು ಸಂಸ್ಥೆಯ ಸ್ಥಾಪಕರಾಗಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಕುಶಾಲನಗರದ ಎಂ.ಎಚ್. ಮೊಹಮ್ಮದ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಕುಶಾಲನಗರದಲ್ಲಿ ನಡೆದ ಅಭಿನಂದನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ, ಎಂ.ಹೆಚ್.ಮೊಹಮ್ಮದ್, 2019ರಲ್ಲಿ ಆರಂಭಗೊಂಡ ಸಂಸ್ಥೆ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ನೊಂದವರಿಗೆ ಸಹಾಯ ಹಸ್ತ ನೀಡಲಾಗಿದೆ. ಬಡ ಜನತೆಗೆ ಮನೆ ಕಟ್ಟಿಸಿ ಕೊಡುವುದು ಮತ್ತು ಆರ್ಥಿಕ ನೆರವು ನೀಡುವುದು, ಶಿಕ್ಷಣ ಹಾಗೂ ವೈದ್ಯಕೀಯ ಚಿಕಿತ್ಸೆಗೆ ನೆರವು ಸೇರಿದಂತೆ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸದಸ್ಯರುಗಳ ಸಹಕಾರದೊಂದಿಗೆ ಮುನ್ನಡೆಯುತ್ತಿದೆ. ವಿರಾಜಪೇಟೆ ತಾಲೂಕಿನ ಗುಂಡಿಗೆರೆಯಲ್ಲಿ ಬಡ ಕುಟುಂಬಕ್ಕೆ 12 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಲಾಗಿದೆ ಎಂದರು. ಮಾಲ್ದಾರೆಯಲ್ಲಿ ರೂ.5 ಲಕ್ಷದಲ್ಲಿ ಮನೆ ನಿರ್ಮಿಸಿ ನೀಡಲಾಗಿದೆ ಮತ್ತು ಕೊಂಡಗೇರಿ ಗ್ರಾಮದಲ್ಲಿ ಮನೆಯೊಂದು ನಿರ್ಮಾಣ ಹಂತದಲ್ಲಿದೆ ಎಂದು ಅವರು ಮಾಹಿತಿ ನೀಡಿದರು. ಧರ್ಮ ಭೇದವಿಲ್ಲದೆ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ಕೆ…






