ಲೇಖಕ: admin

ಮಡಿಕೇರಿ ಅ.2 :  ಹಿರಿಯರು ಕಾನೂನಿನ ಹಾಗೂ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಿ ಎಂದು ಉಪ ವಿಭಾಗಾಧಿಕಾರಿ ಯತೀಶ್ ಕುಮಾರ್ ಉಳ್ಳಾಲ್  ತಿಳಿಸಿದರು. ನಗರದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿಅವರು ಮಾತನಾಡಿ “ಬದಲಾಗುತ್ತಿರುವ ಜಗತ್ತಿನಲ್ಲಿ ಹಿರಿಯ ನಾಗರಿಕರ ಸ್ಥಿತಿಸ್ಥಾಪಕತ್ವ” ಎಂಬ ಘೋಷ ವಾಕ್ಯ ದಡಿಯಲ್ಲಿ ಬದಲಾಗುತ್ತಿರುವ ಈ ಆಧುನಿಕ ಸನ್ನಿವೇಶದಲ್ಲಿ ತಂತ್ರಜ್ಞಾನವು ಒಂದಾಗಿದೆ ಹಿರಿಯ ನಾಗರಿಕರು ಇದನ್ನು ಬಳಸಿ ಉಪಯುಕ್ತ ಮಾಹಿತಿ ಪಡೆದುಕೊಳ್ಳಬೇಕೆಂದು ತಿಳಿಸಿದರು. ಸಂಪಾದನೆಯಲ್ಲಿ ಮಕ್ಕಳ ಜತೆಗೆ ತಮಗೂ ಸ್ವಲ್ಪ ಉಳಿಸಿಕೊಳ್ಳಬೇಕು ಎಂದರು. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ  ನಟರಾಜ  ಮಾತನಾಡಿ ಹಿರಿಯ ನಾಗರಿಕರು ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು. ಮಾನಸಿಕ ಹಾಗೂ ದೈಹಿಕ ಆರೋಗ್ಯ ಬಹಳ ಉತ್ತಮವಾಗಿಟ್ಟುಕೊಳ್ಳಬೇಕು ದಿನನಿತ್ಯ ಯೋಗ, ಒಳ್ಳೆಯ ಆಹಾರ ಸೇವನೆ, ವಿಶ್ರಾಂತಿ ಪಡೆಯುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗುವುದು ಮುಖ್ಯ ಎಂದರು. ಜಿಲ್ಲಾ ಹಿರಿಯ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್   ಮಾತನಾಡಿ, ನ್ಯಾಯಾಲಯದ…

Read More

ಮಡಿಕೇರಿ ಅ.2 :  ಸಾಹಿತಿ ನಾ ಡಿಸೋಜ ಅವರ ಸಾಹಿತ್ಯ ಜೈಮಿನ ಭಾರತದ ಅಶ್ವಮೇಧ ಯಜ್ಞದ ಕುದುರೆಯಂತೆ. ಕುದುರೆ ಚಲಿಸಿದಂತೆ ಕಥೆಗಳು ನಿಲ್ಲುತ್ತದೆ. ಕುದುರೆ ನಿಂತರೆ ಕಥೆಗಳು ಚಲಿಸಲಾರಂಭಿಸುತ್ತದೆ‌. ಅದೇ ರೀತಿಯಲ್ಲಿ ನಾ. ಡಿಸೋಜ ಅವರ ಕಾದಂಬರಿಗಳಲ್ಲಿ ಅಣೆಕಟ್ಟು, ಒಡ್ಡುಗಳ ಕಾರಣದಿಂದ ನೀರು ನಿಂತರೆ ಒಂದೊಂದು ಕಥೆಗಳು ಹುಟ್ಟಿಕೊಳ್ಳುತ್ತವೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಉಪನ್ಯಾಸಕ  ಡಾ. ಕೆ. ಹೆಚ್.ಮುಸ್ತಾಫ  ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ. ನಾ.ಡಿಸೋಜ ಮಕ್ಕಳ ಸಾಹಿತ್ಯ ಪುರಸ್ಕಾರ ದತ್ತಿ ಉಪನ್ಯಾಸ ಮತ್ತು ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡ ಸಂದರ್ಭದಲ್ಲಿ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ. ನಾ ಡಿಸೋಜ ಅವರ ಸಾಹಿತ್ಯದ ಕುರಿತು ದತ್ತಿ ಉಪನ್ಯಾಸ ನೀಡಿದ ಅವರು ನಾ. ಡಿಸೋಜ ಅವರ ಸಾಹಿತ್ಯದಲ್ಲಿ ಕಾಣುವ ದಟ್ಟ ಜೀವನಾನುಭವ, ಪ್ರಕೃತಿಯ ನಿರೂಪಣೆಗೆ…

Read More

ಮಡಿಕೇರಿ ಅ.2 : ಗಾಂಧಿ ಜಯಂತಿಯ ಹಿನ್ನೆಲೆ ಮಡಿಕೇರಿ ನಗರದ ಸಾಯಿ ಕ್ರೀಡಾ ಶಾಲೆಯ ವಿದ್ಯಾರ್ಥಿಗಳು ಖಾಸಗಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದರು. ಮಹಾತ್ಮಗಾಂಧಿ ಅವರ ಆಶಯದಂತೆ ಸ್ವಚ್ಛ ಭಾರತ ಪರಿಕಲ್ಪನೆಯಡಿ ಸ್ವಚ್ಛ ಪರಿಸರಕ್ಕೆ ಆದ್ಯತೆ ನೀಡಿ ಶ್ರಮದಾನ ನಡೆಸುತ್ತಿರುವುದಾಗಿ ವಿದ್ಯಾರ್ಥಿಗಳು ಹೇಳಿದರು. ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಪ್ರಮುಖರಾದ ಶ್ವೇತಾ, ಸಾಯಿ ಹಾಸ್ಟೆಲ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

Read More

ಮಡಿಕೇರಿ ಅ.2 :  ನಮ್ಮ‌ಸುತ್ತ ಮುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು‌ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರೀಕನ ಕರ್ತವ್ಯ ಎಂದು‌ ಕೊಡಗು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ‌  ತಿಳಿಸಿದರು. ಕೊಡಗು ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ (ಗ್ರಾ) ವತಿಯಿಂದ  ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ ನಗರದ ಅಬ್ಬಿ ಫಾಲ್ಸ್ ಸಮೀಪ ನಡೆ‍ದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ಬದುಕಿನಲ್ಲಿ‌ ಸ್ವಚ್ಛತೆ ಬಹು ಮುಖ್ಯವಾಗಿದೆ. ನಮ್ಮ ಮನೆ ಮಾತ್ರವಲ್ಲದೇ ಸುತ್ತ-ಮುತ್ತಲಿನ ಪರಿಸರದಲ್ಲಿಯೂ ನಾವು ಸ್ವಚ್ಛತೆಯನ್ನು‌ ಕಾಪಾಡಬೇಕು. ಇದರಿಂದ ಉತ್ತಮ ಆರೋಗ್ಯದ ಜೊತೆಗೆ ನಮ್ಮ ಪರಿಸರವೂ ಸಹ ಸುಂದರವಾಗಿರುತ್ತದೆ ಎಂದರು. ಪ್ರಧಾನಮಂತ್ರಿ ಅವರ ಆಶಯದಂತೆ ದೇಶಾದ್ಯಂತ  ಒಂದು‌ ಗಂಟೆಗಳ ಕಾಲ ಶ್ರಮದಾನ ಮಾಡಲಾಗಿದೆ. ಇದರ ಅಂಗವಾಗಿ ಅಬ್ಬಿ ಜಲಪಾತದ ಬಳಿ ಜಿಲ್ಲಾ ಮಟ್ಟದಲ್ಲಿ “ಬೃಹತ್ ಸ್ವಚ್ಛತಾ ಆಂದೋಲನ” ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಜಿಲ್ಲೆಯ 103 ಗ್ರಾಮಪಂಚಾಯಿತಿಗಳಲ್ಲಿಯೂ ಏಕ ಕಾಲದಲ್ಲಿ ಶ್ರಮದಾನ ಕಾರ್ಯಕ್ರಮ ಜರುಗಿದೆ ಎಂದು ತಿಳಿಸಿದರು. ಇದೇ…

Read More

ಮಡಿಕೇರಿ ಅ.2 :  ಗೋಣಿಕೊಪ್ಪಲು ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಅ.15 ರಿಂದ 24ರ ವರೆಗೆ ನಗರದ ದಸರಾ ಮೈದಾನದ ಜನೋತ್ಸವ ವೇದಿಕೆಯಲ್ಲಿ ಆಯೋಜಿತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರು ಹಾಗೂ ಕಲಾತಂಡಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕಲಾವಿದರು ಕಲಾತಂಡಗಳು ಅರ್ಜಿಯನ್ನು ಅ.4 ರ ಒಳಗೆ  ಕಾವೇರಿ ದಸರಾ ಉತ್ಸವ-23 ಗ್ರಾಮ ಪಂಚಾಯಿತಿ ಗೋಣಿಕೊಪ್ಪಲು ಕೊಡಗು ಅಥವಾ gnkpldasara23@gmail.com  ಸಲ್ಲಿಸುವಂತೆ ದಸರಾ ಸಮಿತಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :- ರಮೇಶ್. ಎನ್ – 7760803783,  ದಿಲ್ಲನ್ ಚಂಗಪ್ಪ- 9611640552

Read More

ಮಡಿಕೇರಿ ಅ.2 : ರೋಟರಿ ಮಡಿಕೇರಿ ವತಿಯಿಂದ ಮೂವರು ಶಿಕ್ಷಕರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂತ ಜೋಸೆಫರ ಶಾಲಾ ಶಿಕ್ಷಕಿ ಗರ್ಟೂಡ್ ಟಿ.ಜಿ, ಕೊಡಗು ವಿದ್ಯಾಲಯದ ಪೊನ್ನಮ್ಮ ಪಿ.ಎಸ್ ಹಾಗೂ ಚೆಂಬು ಸರಕಾರಿ ಶಾಲೆಯ ಕಾಮಾಕ್ಷಿ ಪಿ.ಎಸ್ ಅವರು ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದರು. ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರದ ಕುರಿತು ಪ್ರಶಸ್ತಿ ವಿಜೇತರು ಅಭಿಪ್ರಾಯ ಹಂಚಿಕೊಡರು. ರೋಟರಿ ಅಧ್ಯಕ್ಷೆ ಗೀತಾ ಗಿರೀಶ್, ಕಾರ್ಯದರ್ಶಿ ಶರತ್ ಎಂ.ಕೆ, ರೋಟರಿ ಮಿಸ್ಟಿ ಹಿಲ್ಸ್ ನ ಅಧ್ಯಕ್ಷ ಪ್ರಮೋದ್ ರೈ, ಕಾರ್ಯದರ್ಶಿ ರತ್ನಾಕರ ರೈ, ಮಡಿಕೇರಿ ರೋಟರಿ ವುಡ್ಸ್ ನ ಕಾರ್ಯದರ್ಶಿ ಹರೀಶ್ ಕಿಗ್ಗಾಲ್, ಸಾಹಿತ್ಯ ಪರಿಷತ್ತಿನ ರಂಜಿತ್, ಇನ್ನರ್ ವೀಲ್ ಸದಸ್ಯೆಯರು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Read More

ಮಡಿಕೇರಿ ಅ.1 : ಸಂಪೂರ್ಣ ಪಾನ ನಿಷೇಧ ಮಹಾತ್ಮ ಗಾಂಧಿಯವರ ಅತಿ ದೊಡ್ಡ ಕನಸಾಗಿತ್ತು. ಅವರ ತತ್ವ ಪಾಲಿಸುತ್ತೇವೆ ಎಂದು ಸುಳ್ಳು ಹೇಳುತ್ತಾ ಬಂದಿರುವ ಕಾಂಗ್ರೆಸ್ ಪಕ್ಷದ ಕರ್ನಾಟಕ ಸರ್ಕಾರ ಈಗಾಗಲೇ ಇರುವ ಮದ್ಯದಂಗಡಿಗಳು ಸಾಲದು ಎಂದು ಗ್ರಾಮ ಪoಚಾಯತ್ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿದೆ. ಇಂತಹ ಮದ್ಯಪಾನ ಪ್ರೋತ್ಸಾಹಿಸುವ ಸರ್ಕಾರಕ್ಕೆ ಗಾಂಧಿ ಜಯಂತಿ ಆಚರಿಸುವ, ಅಂದು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಯಾವ ನೈತಿಕತೆಯೂ ಇಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತನ್ನ ಆದಾಯ ಹೆಚ್ಚಿಸಿಕೊಳ್ಳುವ ಏಕೈಕ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ಮುಂದಾಗಿದೆ. ಮದ್ಯಪಾನದಿಂದ ಸಮಾಜದಲ್ಲಿ ಎಷ್ಟೆಲ್ಲ ಸಾಮಾಜಿಕ ಸಮಸ್ಯೆಗಳು, ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಅದ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಮದ್ಯದಂಗಡಿಗಳ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಏರಿಸಲು ಹೊರಟಿರುವ ಯೋಜನೆಯನ್ನು ಎಸ್.ಡಿ.ಪಿ.ಐ ಕಟುವಾಗಿ…

Read More

ಮಡಿಕೇರಿ ಅ.1 ಮಡಿಕೇರಿಯ ರೋಟರಿ ವುಡ್ಸ್ ವತಿಯಿಂದ ನೀಡಲಾಗುವ ನೇಷನ್ ಬಿಲ್ಡರ್ ಪ್ರಶಸ್ತಿಗೆ ಭಾಗಮಂಡಲದ ಶ್ರೀಕಾವೇರಿ ಪದವಿ ಪೂರ್ವ ಕಾಲೇಜ್ ನ ಪ್ರಾಂಶುಪಾಲ ಕುಂದಲ್ಪಾಡಿ ದಿವಾಕರ ಅವರು ಭಾಜನರಾಗಿದ್ದಾರೆ. ಕಳೆದ 30ವರ್ಷಗಳಿಂದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ 2021ರಿಂದ ಪ್ರಾಂಶುಪಾಲರಾಗಿ ಭಡ್ತಿ ಹೊಂದಿ ಸೇವೆ ಸಲ್ಲಿಸುತಿರುವ ದಿವಾಕರ ಅವರು ಅರ್ಥಶಾಸ್ತç ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಎನ್‌ಸಿಇಆರ್‌ಟಿ ಪಠ್ಯ ಪುಸ್ತಕದ ಅನುವಾದ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪದವಿ ಪೂರ್ವ ಶಿಕ್ಷಣದಲ್ಲಿ ಇವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ನೇಷನ್ ಬಿಲ್ಡರ್ ಪ್ರಶಸ್ತಿಯನ್ನು ನೀಡಲಾಗಿದೆ. ಮಡಿಕೇರಿಯ ಹೊಸ ಬಡಾವಣೆಯಲ್ಲಿ ನೆಲೆಸಿರುವ ದಿವಾಕರ ಅವರು ಪೆರಾಜೆ ಗ್ರಾಮದ ಕುಂದಲ್ಪಾಡಿ ದಿವಂಗತ ಜತ್ತಪ್ಪ ಹಾಗೂ ಬೊಮ್ಮಕ್ಕ ದಂಪತಿ ಪುತ್ರರಾಗಿದ್ದಾರೆ.

Read More

ಮಡಿಕೇರಿ ಅ.1 : ಮೊಗೇರ ಗ್ರಾಮ ವಿಕಾಸ ಯೋಜನೆಯ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಲಾಟರಿ ಲಕ್ಕಿಡಿಪ್ ನಲ್ಲಿ ವಿಜೇತರಾದವರಿಗೆ ನಗದು ಬಹುಮಾನ ವಿತರಿಸಲಾಯಿತು. ಸುಳ್ಯದ ಕರುಣಾಕರ ಪ್ರಥಮ ಬಹುಮಾನ (ಸಂಖ್ಯೆ 2378) ರೂ.10 ಸಾವಿರ, ಪತ್ರಕರ್ತ ಸೋಮವಾರಪೇಟೆಯ ಭಾಸ್ಕರ ದ್ವಿತೀಯ ಬಹುಮಾನ (ಸಂಖ್ಯೆ 2712) ರೂ.7 ಸಾವಿರ ಹಾಗೂ ಬೆಟ್ಟಗೇರಿಯ ತೀರ್ಥಪ್ರಸಾದ್ ತೃತೀಯ ಬಹುಮಾನ (ಸಂಖ್ಯೆ 1904) ರೂ.3 ಸಾವಿರ ಪಡೆದುಕೊಂಡರು. ಗ್ರಾಮ ವಿಕಾಸ ಯೋಜನೆಯ ಅಧ್ಯಕ್ಷ ಗೌತಮ್ ಶಿವಪ್ಪ, ರಾಜ್ಯ ಉಪಾಧ್ಯಕ್ಷ ಬಿ.ಶಿವಪ್ಪ ಮತ್ತಿತರ ಪ್ರಮುಖರು ಬಹುಮಾನ ವಿತರಿಸಿದರು.

Read More

ಮಡಿಕೇರಿ ಅ.1 : ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಕುರಿಯ ಮೇಲೆ ಮಧ್ಯರಾತ್ರಿಯ ವೇಳೆ ಚಿರತೆಯೊಂದು ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಗರಗಂದೂರು ಗ್ರಾಮದಲ್ಲಿ ನಡೆದಿದೆ. ಮೊರಾರ್ಜಿ ದೇಸಾಯಿ ಪಿಯು ವಸತಿ ಕಾಲೇಜಿನ ಬಳಿ ಇರುವ ಉಮ್ಮರ್ ಖಾನ್ ಎಂಬುವವರಿಗೆ ಸೇರಿದ ಕುರಿಯನ್ನು ಚಿರತೆ ಕೊಂದು ಹಾಕಿದೆ. ಚಿರತೆಯ ದಾಳಿಗೆ ಬೆದರಿದ ದನ ಕರುಗಳು ಚೀರಿಕೊಳ್ಳಲು ಆರಂಭಿಸಿದಾಗ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿ ಜಗದೀಶ್, ಪಶು ವೈದ್ಯಾಧಿಕಾರಿ ಬಾದಾಮಿ, ಹರದೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮ, ಉಪಾಧ್ಯಕ್ಷ ಸಲೀಂ, ಸದಸ್ಯ ರಮೇಶ, ಕಾಂಗ್ರೆಸ್ ಓಬಿಸಿ ಅಧ್ಯಕ್ಷ ಸುಂದರ ಭೇಟಿ ನೀಡಿ ಪರಿಶೀಲಿಸಿದರು. ಈ ಭಾಗದ ವಿದ್ಯಾರ್ಥಿಗಳು ಹಾಗೂ ನಿವಾಸಿಗಳಲ್ಲಿ ಅತಂಕ ಸೃಷ್ಟಿಯಾಗಿದ್ದು, ಚಿರತೆಯನ್ನು ಕಾಡಿಗಟ್ಟುವಂತೆ ಒತ್ತಾಯಿಸಿದ್ದಾರೆ.

Read More