ಮಡಿಕೇರಿ ನ.5 : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಕುಶಾಲನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 140 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರ ನಗರದಿಂದ ಕೂಡ್ಲೂರು ರಸ್ತೆಯಲ್ಲಿ ಗಾಂಜಾ ದಂಧೆ ನಡೆಯುತ್ತಿರುವ ಕುರಿತು ದೊರೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು. ಕುಶಾಲನಗರದ ನಿವಾಸಿಗಳಾದ ಗಣೇಶ (24) ಹಾಗೂ ದೀಪು (24) ಅವರುಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಸಿದ್ದಾರೆ. ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಜಗದೀಶ್.ಎಂ, ಕುಶಾಲನಗರ ಪಿಎಸ್‌ಐ ಮೋಹನ್ ರಾಜು.ಪಿ ಹಾಗೂ ಸಿಬ್ಬಂದಿಗಳ ತಂಡವನ್ನು ರಚಿಸಿ ತನಿಖೆ ಕೈಗೊಂಡು ದಾಳಿ ನಡೆಸಲಾಯಿತು. ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ದಕ್ಷ ಕಾರ್ಯಾಚರಣೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಲೇಖಕ: admin
ಮಡಿಕೇರಿ ನ.5 : ಪ್ರವಾಸಿಗರ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಯಂಗಳಕ್ಕೆ ಉರುಳಿ ಬಿದ್ದ ಘಟನೆ ಮಡಿಕೇರಿ-ಮೇಕೇರಿ ರಸ್ತೆಯ 1ನೇ ಮೈಲ್‌ನಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ತಮಿಳುನಾಡು ನೋಂದಣಿ ಹೊಂದಿದ ಕಾರಿನಲ್ಲಿ ಮೂವರು ಪ್ರವಾಸಿಗರು ಮೇಕೇರಿ ಬಳಿಯ 1ನೇ ಮೈಲ್‌ನಲ್ಲಿರುವ ಹೋಂ ಸ್ಟೇ ಒಂದಕ್ಕೆ ಆಗಮಿಸಿದ್ದರು. ಹೋಂಸ್ಟೇಗೆ ತೆರಳುವ ಏರು ರಸ್ತೆಯಲ್ಲಿ ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು, ರಸ್ತೆಯ ಪಕ್ಕದಲ್ಲೇ ಇರುವ ದಿ.ಸೈಯದ್ ಲತೀಫ್ ಎಂಬುವವರ ಮನೆಯ ಅಂಗಳಕ್ಕೆ ಉರುಳಿ ಬಿದ್ದಿದೆ. ಘಟನೆಯಿಂದ ಕಾರು ಜಖಂಗೊoಡಿದ್ದು, ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ನ.5 : ಸಂಪಾಜೆ ಸಮೀಪ ಅರಂತೋಡು ಭಾಗದಲ್ಲಿ ಅಡಿಕೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಅಡ್ತಲೆ ನಿವಾಸಿ ಮೋಹನ್ ಪಂಜದಬೈಲು ಅವರ ತೋಟದಿಂದ ಅಡಿಕೆ ಕಳ್ಳತನವಾಗಿದೆ. ಇಂಟರ್ ಮಂಗಳ ಅಡಿಕೆ ಬೆಳೆಯಲಾಗಿದ್ದು, ಕೈಗೆಟುಕುವಷ್ಟು ಎತ್ತರದಲ್ಲಿ ಅಡಿಕೆ ಗೊನೆಗಳಿವೆ. ಇವುಗಳನ್ನು ಮಾತ್ರವಲ್ಲದೆ ಇತರ ಮರಗಳಿಂದ ಕೂಡ ಹಣ್ಣಾದ ಅಡಿಕೆಗಳನ್ನು ಕಳ್ಳತನ ಮಾಡಲಾಗಿದೆ. ಮೋಹನ್ ಅವರು ಪೊಲೀಸರಿಗೆ ದೂರು ನೀಡಿದ್ದು, ಚೋರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇತರ ಬೆಳೆಗಾರರು ಕೂಡ ಒತ್ತಾಯಿಸಿದ್ದಾರೆ.
ಸುಂಟಿಕೊಪ್ಪ ನ.5 : ಹೆರೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕೃಷಿ ಫಸಲು ನಾಶ ಪಡಿಸುತ್ತಿರುವುದಲ್ಲದೆ ವಾಸದ ಮನೆಗಳತ್ತ ಆಗಮಿಸುತ್ತಿವೆ. ಆತಂಕಗೊಂಡಿರುವ ಗ್ರಾಮಸ್ಥರು ಕಾಡಾನೆಗಳನ್ನು ನಿಯಂತ್ರಿಸುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಮಳೆಯ ಅಭಾವದಿಂದ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಇದ್ದು, ಕೃಷಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ನಡುವೆಯೇ ಇರುವ ಅಲ್ಪಸ್ವಲ್ಪ ಬೆಳೆಯನ್ನು ಕೂಡ ಕಾಡಾನೆಗಳು ತಿಂದು ತೇಗುತ್ತಿವೆ. ಅಲ್ಲದೆ ಮನೆಯಂಗಳಕ್ಕೆ ಕಾಡಾನೆಗಳ ಹಿಂಡು ಲಗ್ಗೆ ಇಡುತ್ತಿದ್ದು ಭಯದ ವಾತಾವರಣ ಆವರಿಸಿದೆ. ತಕ್ಷಣ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಆನೆ ಕಂದಕಗಳನ್ನು ಮತ್ತು ಸೋಲಾರ್ ಬೇಲಿಯನ್ನು ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸುಂಟಿಕೊಪ್ಪ ನ.5 : ಮಾದಾಪುರದ ಎಸ್‌ಜೆಎಂ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ ಗಮನ ಸೆಳೆಯಿತು. ನಿತ್ಯ ಶಾಲಾ ಆವರಣದಲ್ಲಿ ಪಾಠ ಪ್ರವಚನದಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಇಂದು ಗ್ರಾಹಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿ ತೊಡಗಿಸಿಕೊಂಡು ಸಂಭ್ರಮಿಸಿದರು. ತೋಟಗಳಲ್ಲಿ ಬೆಳೆದ ತರಕಾರಿ, ಸೊಪ್ಪು ಕಾಯಿ ಪಲ್ಯಗಳು, ಆಹಾರ ತಿಂಡಿ ತಿನ್ನಿಸುಗಳು, ಕಾಫಿ, ಟೀ ಸೇರಿದಂತೆ ತಂಪು ಪಾನೀಯಗಳ ವ್ಯಾಪಾರ ಬಲು ಜೋರಾಗಿ ನಡೆಸಿದರು. ಶಾಲಾಡಳಿತ ಮಂಡಳಿಯ ಪ್ರಮುಖರು, ಮುಖ್ಯೋಪಾದ್ಯಾಯರು, ಶಿಕ್ಷಕ, ಶಿಕ್ಷಕಿಯರು, ಪೋಷಕರು ಇದ್ದರು.
ಮೂರ್ನಾಡು ನ.5 : ಸಮಾಜದಲ್ಲಿ ಬದಲಾವಣೆಗಳು ಕಾಣಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಮಡಿಕೇರಿ ವಿಧಾನಸಭಾ ಶಾಸಕ ಡಾ. ಮಂಥರ್ ಗೌಡ ಹೇಳಿದರು. ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ 68ನೇ ಕನ್ನಡ ರಾಜ್ಯೋತ್ಸವ ಮತ್ತು ನೂತನ ಪ್ರಾಥಮಿಕ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ವಿದ್ಯಾಭ್ಯಾಸದಿಂದ ಉನ್ನತ ಸ್ಥಾನಮಾನಗಳನ್ನು ಗಳಿಸಬಹುದು. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಬಡಿದು ಕಲಿಸುವ ವ್ಯವಸ್ಥೆಯಿಲ್ಲ ಹಾಗಾಗಿ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸ್ನೇಹಪರದಿಂದ ಇದ್ದು ಪಾಠ-ಪ್ರವಚನಗಳು ಆದ್ಯತೆ ನೀಡಬೇಕು. ವಿದ್ಯಾಸಂಸ್ಥೆಗಳು ವರ್ಷದಿಂದ ವರ್ಷಕ್ಕೆ ನವೀಕರಣಗೊಳ್ಳುವುದರೊಂದಿಗೆ, ಹೊಸ ಹೊಸ ಕೋರ್ಸ್ ಗಳು ಸೇರ್ಪಡೆಗೊಂಡಾಗ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಾಗುತ್ತದೆ . ಈ ವಿದ್ಯಾಸಂಸ್ಥೆಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿಯ ಸರಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಕೋರನ ಸರಸ್ವತಿ ಪ್ರಕಾಶ್ ಪರಭಾಷಾ ವ್ಯಾಮೋಹದಲ್ಲಿ ಕನ್ನಡ ಭಾಷೆ ತನ್ನಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಹರಸಹಾಸ ಪಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಾವೆಲ್ಲರೂ ಕನ್ನಡ ಭಾಷೆ,…
ಮಡಿಕೇರಿ ನ.5 : ಮಕ್ಕಳಿಗೆ ಕನ್ನಡ ಭಾಷೆಯ ಮಹತ್ವ ತಿಳಿಸುವಲ್ಲಿ ಮಹಿಳೆಯರು ಪ್ರಧಾನ ಪಾತ್ರ ವಹಿಸಿದ್ದು, ಮನೆಯಲ್ಲಿ ಕನ್ನಡ ಭಾಷೆಯ ಶಿಕ್ಷಕಿಯರಂತೆ ಮಕ್ಕಳಿಗೆ ಕನ್ನಡದ ಹಿರಿಮೆ ತಿಳಿಸುವ ಕೆಲಸವನ್ನು ಮಹಿಳೆಯರು ಮಾಡಬೇಕಾಗಿದೆ ಎಂದು ಹಿರಿಯ ಸಾಹಿತಿ, ವಕೀಲ ಬಾಲಸುಬ್ರಹ್ಮಣ್ಯ ಕಂಜಪ೯ಣೆ ಹೇಳಿದ್ದಾರೆ. ನಗರದ ಓಂಕಾರ ಸದನದಲ್ಲಿ ಸಮಥ೯ ಕನ್ನಡಿಗ ಸಂಸ್ಥೆ ವತಿಯಿಂದ ಆಯೋಜಿತ ನಮ್ಮ ವೇದಿಕೆ – ನಿಮ್ಮ ಪ್ರತಿಭೆ ಕನ್ನಡ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಬಾಲಸುಬ್ರಹ್ಮಣ್ಯ ಕಂಜಪ೯ಣೆ, ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಮನೆಯಲ್ಲಿಯಾದರೂ ತಾಯಂದಿರು ಕನ್ನಡದಲ್ಲಿ ಮಾತನಾಡುತ್ತಿರಬೇಕು. ಈ ಮೂಲಕ ಮಾತ್ರ ಭಾಷೆಯನ್ನು ಮಕ್ಕಳಿಗೆ ಕಲಿಸುವಂತಾಗಬೇಕು. ಮಹಿಳೆಯರು ಮನೆಯಲ್ಲಿ ಪ್ರಧಾನ ಪಾತ್ರ ವಹಿಸುವುದರಿಂದಾಗಿ ಸುಲಭವಾಗಿ ಮಕ್ಕಳಲ್ಲಿ ಕನ್ನಡದ ಮಹತ್ವ ಹಾಸುಹೊಕ್ಕಾಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾಯ೯ಕ್ರಮಗಳಲ್ಲಿ ಪಾಶ್ಚತ್ಯ ಗೀತೆಗಳನ್ನು ಹಾಡಿಸುವ ಬದಲಿಗೆ ಕನ್ನಡ ಗೀತಗಾಯನಕ್ಕೆ ಪ್ರಾಶಸ್ತ ನೀಡಿ ಎಂದು ಸಲಹೆ ನೀಡಿದ ಬಾಲಸುಬ್ರಹ್ಮಣ್ಯ ಕಂಜಪ೯ಣೆ, ಕನ್ನಡ ಭಾಷೆ, ಸಂಸ್ಕೖತಿ ಸಂಬಂಧಿತ ಸ್ಪಧೆ೯ಗಳಲ್ಲಿ ಪಾಲ್ಗೊಳ್ಳುವ ಮಕ್ಕಳಲ್ಲಿನ…
ಮಡಿಕೇರಿ ನ.5 : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ 9 ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಪಾದಯಾತ್ರೆಯ 5ನೇ ಹಂತ ನ.7 ರಿಂದ ಆರಂಭಗೊಳ್ಳಲಿದೆ. ಜಿಲ್ಲೆಯ ವಿವಿಧೆಡೆ ಪಾದಯಾತ್ರೆ ನಡೆಸಿ ಮಂದ್ ಗಳಲ್ಲಿ ಕೊಡವ ಜನಜಾಗೃತಿ ಸಭೆಗಳನ್ನು ನಡೆಸಲಾಗುವುದು. ನ.10 ರಂದು ಬೆಳಗ್ಗೆ ಪಾಡಿನಾಡ್- ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಧ್ಯಾಹ್ನ ಕುಂಜಿಲ ಕಕ್ಕಬ್ಬೆ “ಕೆಂಜರಾಣೆ ಪಾಡಿನಾಡ್‌ಮಂದ್”ನಲ್ಲಿ ಜಾಗೃತಿ ಸಭೆಯ ಮೂಲಕ ಯಾತ್ರೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಐದನೇ ಹಂತದಲ್ಲಿ ನ.7 ರಂದು ಬೆಳಗ್ಗೆ 10 ಗಂಟೆಗೆ ವಿರಾಜಪೇಟೆ ತಾಲ್ಲೂಕಿನ ಬೆಪ್ಪುನಾಡ್’ ನ ಅರಮೇರಿ ಮಂದ್, ಮಧ್ಯಾಹ್ನ 2.30 ಗಂಟೆಗೆ ಕಡಂಗ ಮುರೂರು ಮಂದ್, ನ.8ರಂದು ಬೆಳಗ್ಗೆ 10 ಗಂಟೆಗೆ ಕಡಿಯತ್‌ನಾಡ್ ನ ಕರಡದ “ಬೇಲಿಯಾಣೆ ಮಂದ್”, ಮಧ್ಯಾಹ್ನ 2.30 ಗಂಟೆಗೆ ಬಲಂಬೇರಿ ಮಂದ್, ನ.9 ರಂದು ಬೆಳಗ್ಗೆ 10 ಗಂಟೆಗೆ…
200 ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಐತಿಹಾಸಿಕ ಮಡಿಕೇರಿ ದಸರಾ ಉತ್ಸವ ಶಕ್ತಿ ದೇವತೆಗಳ ಕರಗಗಳನ್ನು ಮೂಲಕ ಆರಂಭಗೊಳ್ಳುವುದು ಒಂದು ವಿಶೇಷ. ಅರಸರಕಾಲದಲ್ಲಿ ಮಡಿಕೇರಿ ನಾಡಿಗೆ ಮಾರಕ ಸಾಂಕ್ರಮಿಕ ಕಾಯಿಲೆಗಳು ಕಾಣಿಸಿಕೊಂಡು ಸಾವು-ನೋವು ಸಂಭವಿಸುವುದರೊಂದಿಗೆ, ಜನರು ಗುಳೆ ಹೋಗುವ ಪರಿಸ್ಥಿತಿ ತಲೆದೋರಿತ್ತು. ಇದರಿಂದ ಚಿಂತೆಗೀಡಾದ ಅರಸು ನಾಡಿನ 4 ಶಕ್ತಿ ದೇವತೆಗಳ ಮೊರೆ ಹೋಗಿ, ನಾಡಿನ ಜನರನ್ನು ಕಾಪಾಡುವಂತೆ ಬೇಡಿಕೊಂಡಿದ್ದರು ಎಂಬ ಹಿನ್ನೆಲೆಯನ್ನು ನಾನು ಜಿಲ್ಲೆಯ ಕೆಲ ಹಿರಿಯರ ಮೂಲಕ ತಿಳಿದುಕೊಂಡಿದ್ದೇನೆ. ಈ ಹಿನ್ನೆಲೆಯಲ್ಲ್ಲಿ ಅರಸರು 4 ಶಕ್ತಿ ದೇವತೆಗಳ ಕರಗಗಳನ್ನು ಮಡಿಕೇರಿ ದೊಡ್ಡಪೇಟೆಗೆ ಕರೆ ತಂದು ಪ್ರದಕ್ಷಿಣೆ ನಡೆಸಿದ್ದರು. ಕಾಕತಾಳೀಯ ಎಂಬಂತೆ ಸಾಂಕ್ರಾಮಿಕ ರೋಗಗಳು ಮರೆಯಾಗಿ ಮಡಿಕೇರಿ ನಾಡು ಯಥಾಸ್ಥಿತಿಗೆ ಮರಳಿತ್ತು. ಅಂದು ಅರಸರಿಂದ ಪ್ರಾರಂಭವಾದ ಕರಗಗಳ ಪ್ರದಕ್ಷಿಣೆ ಇಂದು ದೇವಾಲಯ ಸಮಿತಿಗಳ ಮೂಲಕ ಉತ್ಸವದ ರೂಪದಲ್ಲಿ ಆಚರಿಸಿಕೊಂಡು ಬರಲಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ನಾನು ಅಂದುಕೊಂಡ ವೈಭವದ ದಸರಾ ನಡೆಯಲಿಲ್ಲ ಮತ್ತು ನಡೆಯುತ್ತಿಲ್ಲ ಎಂಬ ನೋವು…
ಮಡಿಕೇರಿ ನ.4 : ಕೇರಳದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸಿದ ಆರೋಪದಡಿ ಕೊಡಗು ಜಿಲ್ಲೆಯ ಇಬ್ಬರು ಸೇರಿದಂತೆ ಒಟ್ಟು 6 ಮಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5.5ಕೆ.ಜಿ ತೂಕದ ಅಂದಾಜು 1.5 ಕೋಟಿ ರೂ. ಬೆಲೆ ಬಾಳುವ 1 ಆನೆ ದಂತವನ್ನು ವಶಕ್ಕೆ ಪಡೆಯಲಾಗಿದೆ. ಕೇರಳದ ಮಾನಂದವಾಡಿಯ ಲಾಡ್ಜ್ ಒಂದರಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಮಾನಂದವಾಡಿ ಅರಣ್ಯ ಇಲಾಖೆ ಗುಪ್ತಚರ ವಿಭಾಗ ಮತ್ತು ಅಲ್ಲಿನ ಪೊಲೀಸರಿಗೆ ಮಾಹಿತಿ ಲಭಿಸಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಗುಪ್ತಚರ ವಿಭಾಗ ಮತ್ತು ಪೊಲೀಸ್ ಫ್ಲೆಯಿಂಗ್ ಸ್ಕ್ವಾಡ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ ಗೋಣಿಕೊಪ್ಪಲು ನಿವಾಸಿ ರಾಜು(52), ಪೊನ್ನಂಪೇಟೆಯ ಪಿಲಿಪ್ ಮ್ಯಾಥ್ಯು(68) ಕರ್ನಾಟಕದ ಶೆಟ್ಟಿಗಿರಿಯ ಗೆಪ್(60), ವಯನಾಡಿನ ವಕೇರಿಯ ಸುಧೀಶ್(36), ಜಸ್ಟಿನ್ ಜೋಸೆಫ್(24) ಹಾಗೂ ಯೆಲ್ಡೋ(30) ಬಂಧಿತ ಆರೋಪಿಗಳಾಗಿದ್ದಾರೆ. ಕರ್ನಾಟಕ ರಾಜ್ಯದಿಂದ ದಂತ ತೆಗೆದುಕೊಂಡು ಹೋಗಿ ಕೇರಳದಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಕೇರಳ…






