ಲೇಖಕ: admin

200 ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಐತಿಹಾಸಿಕ ಮಡಿಕೇರಿ ದಸರಾ ಉತ್ಸವ ಶಕ್ತಿ ದೇವತೆಗಳ ಕರಗಗಳನ್ನು ಮೂಲಕ ಆರಂಭಗೊಳ್ಳುವುದು ಒಂದು ವಿಶೇಷ. ಅರಸರಕಾಲದಲ್ಲಿ ಮಡಿಕೇರಿ ನಾಡಿಗೆ ಮಾರಕ ಸಾಂಕ್ರಮಿಕ ಕಾಯಿಲೆಗಳು ಕಾಣಿಸಿಕೊಂಡು ಸಾವು-ನೋವು ಸಂಭವಿಸುವುದರೊಂದಿಗೆ, ಜನರು ಗುಳೆ ಹೋಗುವ ಪರಿಸ್ಥಿತಿ ತಲೆದೋರಿತ್ತು. ಇದರಿಂದ ಚಿಂತೆಗೀಡಾದ ಅರಸು ನಾಡಿನ 4 ಶಕ್ತಿ ದೇವತೆಗಳ ಮೊರೆ ಹೋಗಿ, ನಾಡಿನ ಜನರನ್ನು ಕಾಪಾಡುವಂತೆ ಬೇಡಿಕೊಂಡಿದ್ದರು ಎಂಬ ಹಿನ್ನೆಲೆಯನ್ನು ನಾನು ಜಿಲ್ಲೆಯ ಕೆಲ ಹಿರಿಯರ ಮೂಲಕ ತಿಳಿದುಕೊಂಡಿದ್ದೇನೆ. ಈ ಹಿನ್ನೆಲೆಯಲ್ಲ್ಲಿ ಅರಸರು 4 ಶಕ್ತಿ ದೇವತೆಗಳ ಕರಗಗಳನ್ನು ಮಡಿಕೇರಿ ದೊಡ್ಡಪೇಟೆಗೆ ಕರೆ ತಂದು ಪ್ರದಕ್ಷಿಣೆ ನಡೆಸಿದ್ದರು. ಕಾಕತಾಳೀಯ ಎಂಬಂತೆ ಸಾಂಕ್ರಾಮಿಕ ರೋಗಗಳು ಮರೆಯಾಗಿ ಮಡಿಕೇರಿ ನಾಡು ಯಥಾಸ್ಥಿತಿಗೆ ಮರಳಿತ್ತು. ಅಂದು ಅರಸರಿಂದ ಪ್ರಾರಂಭವಾದ ಕರಗಗಳ ಪ್ರದಕ್ಷಿಣೆ ಇಂದು ದೇವಾಲಯ ಸಮಿತಿಗಳ ಮೂಲಕ ಉತ್ಸವದ ರೂಪದಲ್ಲಿ ಆಚರಿಸಿಕೊಂಡು ಬರಲಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ನಾನು ಅಂದುಕೊಂಡ ವೈಭವದ ದಸರಾ ನಡೆಯಲಿಲ್ಲ ಮತ್ತು ನಡೆಯುತ್ತಿಲ್ಲ ಎಂಬ ನೋವು…

Read More

ಮಡಿಕೇರಿ ನ.4 : ಕೇರಳದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸಿದ ಆರೋಪದಡಿ ಕೊಡಗು ಜಿಲ್ಲೆಯ ಇಬ್ಬರು ಸೇರಿದಂತೆ ಒಟ್ಟು 6 ಮಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5.5ಕೆ.ಜಿ ತೂಕದ ಅಂದಾಜು 1.5 ಕೋಟಿ ರೂ. ಬೆಲೆ ಬಾಳುವ 1 ಆನೆ ದಂತವನ್ನು ವಶಕ್ಕೆ ಪಡೆಯಲಾಗಿದೆ. ಕೇರಳದ ಮಾನಂದವಾಡಿಯ ಲಾಡ್ಜ್ ಒಂದರಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಮಾನಂದವಾಡಿ ಅರಣ್ಯ ಇಲಾಖೆ ಗುಪ್ತಚರ ವಿಭಾಗ ಮತ್ತು ಅಲ್ಲಿನ ಪೊಲೀಸರಿಗೆ ಮಾಹಿತಿ ಲಭಿಸಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಗುಪ್ತಚರ ವಿಭಾಗ ಮತ್ತು ಪೊಲೀಸ್ ಫ್ಲೆಯಿಂಗ್ ಸ್ಕ್ವಾಡ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ ಗೋಣಿಕೊಪ್ಪಲು ನಿವಾಸಿ ರಾಜು(52), ಪೊನ್ನಂಪೇಟೆಯ ಪಿಲಿಪ್ ಮ್ಯಾಥ್ಯು(68) ಕರ್ನಾಟಕದ ಶೆಟ್ಟಿಗಿರಿಯ ಗೆಪ್(60), ವಯನಾಡಿನ ವಕೇರಿಯ ಸುಧೀಶ್(36), ಜಸ್ಟಿನ್ ಜೋಸೆಫ್(24) ಹಾಗೂ ಯೆಲ್ಡೋ(30) ಬಂಧಿತ ಆರೋಪಿಗಳಾಗಿದ್ದಾರೆ. ಕರ್ನಾಟಕ ರಾಜ್ಯದಿಂದ ದಂತ ತೆಗೆದುಕೊಂಡು ಹೋಗಿ ಕೇರಳದಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಕೇರಳ…

Read More

ಮಡಿಕೇರಿ ನ.4 : ಜಿಂಕೆಗಳನ್ನು ಬೇಟೆಯಾಡಿ ಮಾಂಸವನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ವಿರಾಜಪೇಟೆ ಪೊಲೀಸ್ ಅರಣ್ಯ ಸಂಚಾರಿ ದಳ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿದೆ. ಬೇಟೋಳಿ ಗ್ರಾಮದ ನಿವಾಸಿ ವಿರಾಜಪೇಟೆಯ ಬೇಕರಿಯೊಂದರ ಮಾಲೀಕ ಎಂ.ಎಂ.ಅಜೀಜ್(45) ಹಾಗೂ ನೆಹರು ನಗರ ನಿವಾಸಿ ಆಟೋ ಚಾಲಕ ಹುಸೈನ್ ಸಿ.ಎ ಅಲಿಯಾಸ್ ಜಂಶೀರ್(32) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಎರಡು ಜಿಂಕೆ ತಲೆ, 44 ಕೆ.ಜಿ ಮಾಂಸ, 1 ಬಂದೂಕು, ಮಾಂಸ ಸಾಗಾಟಕ್ಕೆ ಬಳಸಿದ 1 ಕಾರನ್ನು ವಶಕ್ಕೆ ಪಡೆಯಲಾಗಿದೆ. ನ.3ರಂದು ವಿರಾಜಪೇಟೆ ಪೆರುಂಬಾಡಿ ಕಡೆಯಿಂದ ಬಿಟ್ಟಂಗಾಲ ಕಡೆಗೆ ಇನೋವಾ ಕಾರಿನಲ್ಲಿ ವನ್ಯಜೀವಿ ಮಾಂಸ ಸಾಗಿಸುತ್ತಿರುವ ಕುರಿತು ಪೊಲೀಸ್ ಅರಣ್ಯ ಸಂಚಾರಿ ದಳದ ಉಪ ನಿರೀಕ್ಷಕ ಎಂ.ಸಿ ಮುತ್ತಣ್ಣ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ಹೆಗ್ಗಳ ಬಳಿ ಕಾರು ತಡೆದು ಪರಿಶೀಲಿಸಿದ ಸಂದರ್ಭ ಎರಡು ಜಿಂಕೆಯ ಒಟ್ಟು 44 ಕೆ.ಜಿ ಮಾಂಸ, ಪ್ಲಾಸ್ಟಿಕ್ ಚೀಲದಲ್ಲಿ ಇದ್ದ 2 ಜಿಂಕೆಯ ತಲೆಗಳು,…

Read More

ಮಡಿಕೇರಿ ನ.4 : ಪ್ರಸಕ್ತ(2023-24) ಸಾಲಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಪರಿಶಿಷ್ಟ ಪಂಗಡ ಜನರ ಆರ್ಥಿಕ ಅಭಿವೃದ್ಧಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ(ಬ್ಯಾಂಕುಗಳ ಸಹಯೋಗದೊಂದಿಗೆ), ಮೈಕ್ರೋ ಕ್ರೆಡಿಟ್ ಯೋಜನೆ(ನೋಂದಾಯಿತ ಸ್ವ-ಸಹಾಯ ಮಹಿಳಾ ಸಂಘಗಳು), ಗಂಗಾ ಕಲ್ಯಾಣ, ಭೂ ಒಡೆತನ ಯೋಜನೆಯಡಿ ನಿಗಮದಿಂದ ಸಾಲ ಸೌಲಭ್ಯ ಒದಗಿಸಲು ಅರ್ಹ ಪರಿಶಿಷ್ಟ ಪಂಗಡದ ಫಲಾಪೇಕ್ಷಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್, 29 ಕೊನೆಯ ದಿನವಾಗಿದೆ. ಯೊಜನೆಗಳ ಹೆಚ್ಚಿನ ಮಾಹಿತಿಗೆ ನಿಮಗದ ವೆಬ್‍ಸೈಟ್ https://kmvstdcl.karnataka.gov.in ಮೂಲಕ ಪಡೆದುಕೊಳ್ಳಬಹುದು. ಫಲಾಪೇಕ್ಷಿಗಳು ಆನ್‍ಲೈನ್ ಮೂಲಕ ಅರ್ಜಿ ಮತ್ತು ದಾಖಲಾತಿಗಳನ್ನು ಸೇವಾ ಸಿಂಧು/ ಗ್ರಾಮಒನ್ ತಂತ್ರಾಂಶದ ವೆಬ್‍ಸೈಟ್ ವಿಳಾಸ https://sevasindhuservices.karnataka.gov.in ಮೂಲಕ ಅಪ್‍ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲೆ-571201 ದೂ.ಸಂ.08272-228857 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ…

Read More

ಮಡಿಕೇರಿ ನ.4 : ನಗರಸಭೆ ವತಿಯಿಂದ ಪೌರಕಾರ್ಮಿಕರ ದಿನಾಚರಣೆಯು ನ.7 ರಂದು ಬೆಳಗ್ಗೆ 11 ಗಂಟೆಗೆ ನಗರಸಭೆಯ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದ್ದು,  ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ನಗರಸಭೆ ಪೌರಾಯುಕ್ತ  ವಿಜಯ್  ತಿಳಿಸಿದ್ದಾರೆ.

Read More

ಮಡಿಕೇರಿ ನ.4 : ಪ್ರಸಕ್ತ (2022-23) ಸಾಲಿಗೆ ಐಐಟಿ, ಐಐಐಟಿ, ಐಐಎಂ, ಐಐಎಸ್‍ಸಿ, ಎನ್‍ಐಟಿ, ಐಐಎಸ್‍ಇಆರ್, ಎಐಐಎಂಎಸ್, ಎನ್‍ಎಲ್‍ಯು, ಐಎನ್‍ಐ ಮತ್ತು ಐಯುಎಸ್‍ಎಲ್‍ಎ ಮುಂತಾದ ಪ್ರತಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್ ಅವಧಿಯಲ್ಲಿ ಒಂದು ಬಾರಿ ತಲಾ ಎರಡು ಲಕ್ಷಗಳ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು https://dom.karnataka.gov.in  ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೌಲಾನ ಆಜಾದ್ ಭವನ ಎಫ್‍ಎಂಸಿ ಕಾಲೇಜು ಹತ್ತಿರ ಮಡಿಕೇರಿ ಇವರನ್ನು ಹಾಗೂ ದೂರವಾಣಿ ಸಂಖ್ಯೆ08272225528 ಹಾಗೂ 08272220214 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ  ತಿಳಿಸಿದ್ದಾರೆ.

Read More

ಮಡಿಕೇರಿ ನ.4 : ಪ್ರಸಕ್ತ(2023-24) ಸಾಲಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿ ವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪೋಷಕರ ವಾರ್ಷಿಕ ಆದಾಯ ರೂ.6 ಲಕ್ಷಗಳ ಒಳಗಿದ್ದಲ್ಲಿ 2 ವರ್ಷಗಳ ಕೋರ್ಸ್‍ಗೆ ಗರಿಷ್ಠ ರೂ.20 ಲಕ್ಷ ಹಾಗೂ ರೂ.6 ಲಕ್ಷದಿಂದ ರೂ.15 ಲಕ್ಷಗಳ ಒಳಗಿದ್ದಲ್ಲಿ ಎರಡು ವರ್ಷಗಳ ಕೋರ್ಸ್‍ಗೆ ರೂ.10 ಲಕ್ಷ ಗರಿಷ್ಠ ಮಿತಿಯಲ್ಲಿ ವಿದ್ಯಾರ್ಥಿ ವೇತನ ಪಾವತಿಸಲಾಗುವುದು. ಇಲಾಖಾ ವೆಬ್‍ಸೈಟ್ https://dom.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ. ಅರ್ಜಿ ಸಲ್ಲಿಸಲು ನವೆಂಬರ್, 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ, ಎಫ್‍ಎಂಸಿ ಕಾಲೇಜು ಹತ್ತಿರ, ಮಡಿಕೇರಿ ಕಚೇರಿಯನ್ನು ಹಾಗೂ ದೂ.ಸಂ.08272-225528 ಹಾಗೂ ಮಾಹಿತಿ ಕೇಂದ್ರ, ಮಡಿಕೇರಿ 08272-220214 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಎಂ.ದಿವಾಕರ ತಿಳಿಸಿದ್ದಾರೆ.

Read More

ಮಡಿಕೇರಿ ನ.4 : ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್ ದಕ್ಷಿಣ ಪ್ರಾಂತ, ಮಡಿಕೇರಿ ವಿಭಾಗ ಹಾಗೂ ಮಡಿಕೇರಿ ಸೇವಾ ಭಾರತೀ ಸಂಯುಕ್ತ ಆಶ್ರಯದಲ್ಲಿ ನ.5 ರಂದು “ಕಾವೇರಿ ಸ್ವಾಸ್ಥ್ಯ ಸೇವಾಯಾತ್ರಾ” ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ವಾಲ್ನೂರು ಬಾಳೆಗುಂಡಿ ಗಿರಿಜನ ಕಾಲೋನಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ 1 ಗಂಟೆಯವರೆಗೆ ನಡೆಯಲಿರುವ ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ತಪಾಸಣೆ, ಬಿಎಂಐ, ಪೌಷ್ಟಿಕಾಂಶದ ಮೌಲ್ಯ ಮಾಪನ, ಉಚಿತ ಔಷಧಿಗಳು, ಆರೋಗ್ಯ ಶಿಕ್ಷಣ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಶಿಬಿರ ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಡಾ.ಹೆಚ್.ಜಿ.ಶ್ರೀಕಾಂತ್-99809 32300, ಡಾ.ಎಸ್.ಮಂಜುನಾಥ್-95916 79559 ಸಂಪರ್ಕಿಸಬಹುದಾಗಿದೆ.

Read More

ವಿರಾಜಪೇಟೆ ನ.4 : ರಾಜ್ಯ ಸರಕಾರ ಕನ್ನಡ ಭಾಷೆ ಏಳಿಗೆಗಾಗಿ ದುಡಿಯುವ ಕೆಲಸ ನಿರಂತರವಾಗಿ ಮಾಡುತ್ತಿದೆ. ಕನ್ನಡ ಭಾಷೆಯ ರಕ್ಷಣೆಯಾದರೆ ಮಾತ್ರ ಕರ್ನಾಟಕ ರಾಜ್ಯವನ್ನು ಉಳಿಸಲು ಸಾಧ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ವಿರಾಜಪೇಟೆ ಕರ್ನಾಟಕ ಸಂಘದ ವತಿಯಿಂದ ವಿರಾಜಪೇಟೆ ಪುರಭವನದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ಸ್ವರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಕನ್ನಡ ಬೆಳವಣಿಗೆಯಲ್ಲಿ ಕೊಡಗಿನ ಜನರ ಮಹತ್ವದ ಕೊಡುಗೆ ಇದೆ. ಸಾಹಿತ್ಯ, ಸಂಸ್ಕೃತಿ, ಭಾಷೆಯಲ್ಲಿ ಕನ್ನಡಕ್ಕೆ ಅವರು ಆದ್ಯತೆ ನೀಡಿದ್ದಾರೆ. ಕನ್ನಡ ನಾಡಿನ ಐತಿಹ್ಯವನ್ನು ಉನ್ನತವಾಗಿ ಬೆಳೆಸಬೇಕು ಹಾಗೂ ಈ ಐತಿಹ್ಯವನ್ನು ಎಲ್ಲಾರಿಗೆ ಸಾರುವ ಕೆಲಸ ಆಗಬೇಕು. ಕನ್ನಡ ವಿಜಯನಗರ ರಾಜರ ಕಾಲದಿಂದಲೂ ವಿಜೃಂಭಿಸುತ್ತ ಬಂದಿದೆ. ಇದನ್ನು ಇಂದಿನ ಯುವ ಜನಾಂಗದಿಂದ ಮುಂದಿನ ಪೀಳಿಗೆಯವರಗೆ ಉಳಿಸಿ ಬೆಳೆಸುವ ಕೆಲಸ ಆಗಬೇಕು. ಸಿದ್ದರಾಮಯ್ಯ ಸರಕಾರ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡಿದ್ದು ಇದಕ್ಕೆ ಈ ಬಾರಿಯ ಕನ್ನಡ…

Read More

ವಿರಾಜಪೇಟೆ ನ.4 :   ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿರಾಜಪೇಟೆ ಕಾವೇರಿ ಪದವಿ ಕಾಲೇಜು ಕನ್ನಡ ಉಪನ್ಯಾಸಕ  ಬಿ.ಬಿ.ಸುನೀಲ್  ಮಾತನಾಡಿ, ಕನ್ನಡ ಭಾಷೆಯು ಇತರ ಭಾಷೆಗಳಿಗಿಂತ ವಿಭಿನ್ನವಾಗಿದ್ದು, ವೈಶಿಷ್ಟ್ಯಪೂರ್ಣವಾಗಿದೆ. ಅನೇಕ ಶ್ರೇಷ್ಠ ಗ್ರಂಥಗಳು ಪ್ರಕಟಗೊಂಡಿದ್ದು, ಭಾರತೀಯ ಭಾಷೆಗಳಲ್ಲಿ ಎಂಟು ಜ್ಞಾನಪೀಠ ತನ್ನದಾಗಿಸಿಕೊಂಡಿದೆ. ವಿವಿಧ ಕಾಲಘಟ್ಟದಲ್ಲಿ ಕವಿಪುಂಗವರು ನೀಡಿದ ಕೊಡುಗೆಯಿಂದಾಗಿ ಕನ್ನಡದ ಸ್ಥಾನಮಾನ ಜಾಗತಿಕ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಕನ್ನಡದ ಸಾಹಿತ್ಯ ಪ್ರಕಾರಗಳು, ನಮಗೆ ಈವರೆಗೆ ಲಭ್ಯವಾಗಿರುವ ಶಾಸನಗಳು, ಸಂಶೋಧನಾ ಕಾರ್ಯದಿಂದ ದೊರೆತ ಮಾಹಿತಿಗಳು ಭಾಷೆಯ ಹಿರಿಮೆಯನ್ನು ಸಾರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ   ಪ್ರಾಂಶುಪಾಲ  ಡಾ. ಐ.ಎಂ.ದಿಲನ್,  ‘ಕರ್ನಾಟಕ’ ಎಂಬ ಹೆಸರಿನ ಮರುನಾಮಕರಣಗೊಂಡ ಸುವರ್ಣ ವರ್ಷದ ಈ ಸಂದರ್ಭಕ್ಕೆ ಸಾಕ್ಷಿಯಾದ ನಾವೇ ಧನ್ಯರು ಎಂದರು. ಭಾಷಾ ವಿಷಯದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಕನ್ನಡ ಉಪನ್ಯಾಸಕ ಬಿ.ಇ.ಪ್ರದೀಪ್,  ಗಣಕ ವಿಜ್ಞಾನ ಉಪನ್ಯಾಸಕಿ  ಮಹೇಶ್ವರಿ ಇದ್ದರು.…

Read More