ನಾಪೋಕ್ಲು ಅ.17 : ನಾಪೋಕ್ಲುವಿನ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ಟಿ.ಸಿ.ರಾಜೀವನ್ ಆಯ್ಕೆಯಾಗಿದ್ದಾರೆ. ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿ ಹಾಗೂ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಎಂ.ಬಿ.ರಶೀದ್, ಕಾರ್ಯದರ್ಶಿಯಾಗಿ ಟಿ.ಪಿ.ಸುಕುಮಾರ್ ಆಯ್ಕೆಯಾದರು. ಸಹ ಕಾರ್ಯದರ್ಶಿಯಾಗಿ ದೀಪು ದೇವಯ್ಯ, ಖಜಾಂಚಿಯಾಗಿ ಎ.ಎಂ.ಚೇತನ್, ಗೌರವಾಧ್ಯಕ್ಷರಾಗಿ ಎಂ.ಇ.ರಜಾಕ್ ನೇಮಕಗೊಂಡರು. ನಿರ್ದೇಶಕರಗಳಾಗಿ ಸಮ್ಮದ್, ಜಾಫರ್, ಸಲೀಂ, ವಿಜಯ್ ಕುಮಾರ್, ಸೋಮಣ್ಣ ಬಾಳೆಯಡ, ಮಂಜುನಾಥ್ ,ಶರತ್, ಐ.ಎನ್.ಪ್ರಕಾಶ್, ಪಿ.ಎಲ್.ಜಗದೀಶ್, ಹೆಚ್.ಕೆ.ಸತೀಶ್ ಆಯ್ಕೆಯಾದರು. ವರದಿ : ದುಗ್ಗಳ ಸದಾನಂದ
ಲೇಖಕ: admin
ನಾಪೋಕ್ಲು ಅ.17 : ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯುತ್ತಿರುವ ಮೂರ್ನಾಡು ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರದ ಅಂಗವಾಗಿ ಸ್ವಚ್ಛತಾ ಶ್ರಮದಾನ ನಡೆಯಿತು. ಮೂರ್ನಾಡು ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡು ಗಿಡಗಂಟಿಗಳನ್ನು ಕಡಿದು ಪ್ಲಾಸ್ಟಿಕ್ ಕಸಗಳನ್ನು ಹೆಕ್ಕಿ ಸಂಗ್ರಹಿಸಿ ಸ್ವಚ್ಛಗೊಳಿಸಲಾಯಿತು. ಲಯನ್ಸ್ ಕ್ಲಬ್ ನ ಅಧ್ಯಕ್ಷ ಕನ್ನಂಬೀರ ಸುಧಿ ತಿಮ್ಮಯ್ಯ, ಕಾರ್ಯದರ್ಶಿ ಮಾದೇಯಂಡ ಕುಟ್ಟಪ್ಪ ಸದಸ್ಯರಾದ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಬೊಪ್ಪೇರ ಜಯ ಉತ್ತಪ್ಪ ಹಾಗೂ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಎಸ್.ಡಿ.ದಮಯಂತಿ ಉಪನ್ಯಾಸಕಿ ಯಾಮಿನಿ ಸಿಬ್ಬಂದಿ ಮಹೇಶ್, ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ
ಮಡಿಕೇರಿ ಅ.17 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾದ ‘ಯುವ ದಸರಾ-2023’, ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅ.21 ರಂದು ನಡೆಯಲಿದೆ ಎಂದು ಯುವ ದಸರಾ ಸಮಿತಿ ಸಂಚಾಲಕ ಆರ್.ಬಿ.ರವಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಕದ ಹಿಂದೆ ಮಡಿಕೇರಿ ದಸರಾ ಕಾರ್ಯಕ್ರಮಗಳ ಭಾಗವಾಗಿ ಯುವ ದಸರಾ ಸೇರ್ಪಡೆಗೊಂಡಿತು. ನಂತರದ ವರ್ಷಗಳಲ್ಲಿ ಯುವ ದಸರಾ ಯುವ ಸಮೂಹವನ್ನು ಬಹುವಾಗಿ ಆಕರ್ಷಿಸುತ್ತಿದ್ದು, ಅತ್ಯುತ್ತಮ ರೀತಿಯಲ್ಲಿ ಇದನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು. ಯುವ ದಸರಾ ಉತ್ಸವದ ದಿನವಾದ ಅ.21 ರಂದು ಬೆಳಗ್ಗೆ 7.30 ಕ್ಕೆ ಸೈಕಲ್ ಜಾಥವನ್ನು ಆಯೋಜಿಸಲಾಗಿದೆ. ಬಳಿಕ ಸೂಪರ್ ಬೈಕ್ ಮತ್ತು ಬೈಕ್ ಸ್ಟಂಟ್‍ನ್ನು ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ, ಯುವ ಸಮೂಹ ಮುಖ್ಯ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಬೈಕ್ ಸ್ಟಂಟ್‍ಗಳನ್ನು ಮಾಡಕೂಡದು. ಇದರಿಂದ ಉಂಟಾಗುವ ಅನಾಹುತ ಮತ್ತು ಅಪಾಯಗಳ ಬಗ್ಗೆ ಜನರಲ್ಲಿ ಈ ಸಂದರ್ಭ ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು. ::: ಚಂದನ್ ಶೆಟ್ಟಿ…
ವಿರಾಜಪೇಟೆ ಅ.17 : ಕುಕ್ಲೂರಿನಲ್ಲಿರುವ ತಾತಂಡ ಕುಟುಂಬದ ಪೊಮ್ಮಕ್ಕಡ ಒಕ್ಕೂಟದ 6ನೇ ಮಹಾಸಭೆ ತಾತಂಡ ಕುಟುಂಬದ ಐನ್ ಮನೆಯಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ತಾತಂಡ ಬೇಬಿ ಮಾದಯ್ಯ ವಹಿಸಿಕೊಂಡು ಕುಟುಂಭಸ್ಥರನ್ನು ಉದ್ದೇಶಿಸಿ ಮಾತನಾಡಿದರು. ತಾತಂಡ ಪ್ರಕಾಶ್ ಹಾಗೂ ನಾಮೇರ ದಿ.ಡಾ. ಕುಟ್ಟಪ್ಪ ಅವರ ಜ್ಞಾಪಕಾರ್ಥವಾಗಿ ನೀಡಲಾದ ದತ್ತಿನಿಧಿ ಬಹುಮಾನವನ್ನು ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದ ತಾತಂಡ ಪೊನ್ನಣ್ಣ ಪಡೆದುಕೊಂಡರು. ನಂತರ ಕುಟುಂಬದ ಸದಸ್ಯರುಗಳಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯದರ್ಶಿ ತಾತಂಡ ಯಶು ಕಬೀರ್ ಹಾಗೂ ಖಜಾಂಚಿ ತಾತಂಡ ಕವಿ ಕಾವೇರಪ್ಪ ಹಾಜರಿದ್ದರು. ತಾತಂಡ ಜ್ಯೋತಿ ಪ್ರಕಾಶ್ ನಿರೂಪಿಸಿದರು. ದಕ್ಷ ಪ್ರಾರ್ಥಿಸಿದರು. ಮೈನಾ ನವೀನ್ ಸ್ವಾಗತಿಸಿ, ತಾತಂಡ ಶೆರ್ಲಿ ಪ್ರತಾಪ್ ವಂದಿಸಿದರು.
ಮಡಿಕೇರಿ ಅ.17 : ನಗರದ ಗಾಂಧಿ ಮೈದಾನದ ಸಮೀಪ ಸುಮಾರು 1.60 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ‘ಗಾಂಧೀಜಿ ಸ್ಮಾರಕ ಉದ್ಯಾನವನ’ಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಶಂಕುಸ್ಥಾಪನೆ ನೆರವೇರಿಸಿದರು. ಸರ್ವೋದಯ ಸಮಿತಿಯ ಸಹಯೋಗದಲ್ಲಿ ಜಿಲ್ಲಾಡಳಿತ, ಜಿ.ಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸ್ಮಾರಕ ಉದ್ಯಾನವನಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಈ ಸಂದರ್ಭ ಮಾತನಾಡಿದ ಸಚಿವರು, ಇಡೀ ವಿಶ್ವಕ್ಕೆ ಮಾದರಿಯಾದ ಮಹಾತ್ಮಾ ಗಾಂಧೀಜಿಯವರ ಸ್ಮಾರಕ ಉದ್ಯಾನವನವನ್ನು ಒಳಗೊಂಡ ಭವನ ಕಾಲ ಮಿತಿಯಲ್ಲಿ ಪೂರ್ಣಗೊಳ್ಳಬೇಕು. ಆ ಮೂಲಕ ಗಾಂಧೀಜಿಯವರ ತತ್ತ್ವ ಸಿದ್ಧಾಂತಗಳು ಜನರಿಗೆ ನಿರಂತರವಾಗಿ ಪ್ರೇರಣೆಯನ್ನು ನಿಡುವಂತಾಗಬೇಕು. ಉದ್ದೇಶಿತ ಕಾರ್ಯಯೋಜನೆ ಜಿಲ್ಲಾಧಿಕಾರಿಗಳ ಜವಾಬ್ದಾರಿಯಲ್ಲಿ ನಡೆಯಲಿದೆ. ಜನಪ್ರತಿನಿಧಿಗಳೆಲ್ಲ ಒಟ್ಟಾಗಿ ಒಮ್ಮತದಿಂದ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ತಿಳಿಸಿದರು. ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ಮಾತನಾಡಿ, ದೆಹಲಿಯ ‘ರಾಜ್ ಘಾಟ್’ ಮಾದರಿಯಲ್ಲಿ ಮಹಾತ್ಮಾ ಗಾಂಧೀಜಿಯವರ ಸ್ಮಾರಕ ಉದ್ಯಾನವನ ನಿರ್ಮಾಣವಾಗಬೇಕಾಗಿದೆ. ಈ ಹಿಂದೆ ಗಾಂಧಿ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ ಸುಮಾರು 1.60…
ಮಡಿಕೇರಿ ಅ.17 : ಮರಗೋಡಿನ ಭಾರತಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 1994-95ನೇ ಸಾಲಿನ ಹತ್ತನೇ ತರಗತಿಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಹಳೆಯ ವಿದ್ಯಾರ್ಥಿಗಳು ಸುಮಾರು 28 ವರ್ಷಗಳ ನಂತರ ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ಒಂದೆಡೆ ಸೇರಿ ಸಂಭ್ರಮಿಸಿದರು. ಕೇಕ್ ಕತ್ತರಿಸುವ ಮೂಲಕ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿ ಜೀವನದ ಸಿಹಿ-ಕಹಿ ನೆನಪುಗಳನ್ನು ಮೆಲುಕು ಹಾಕಿದರು. ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಹಳೇ ವಿದ್ಯಾರ್ಥಿಗಳು ಹಾಗೂ ಅವರ ಮಕ್ಕಳಿಗೆ ಸಹಾಯಧನ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು. ಭಾರತಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಅಗತ್ಯವಿರುವ ವಸ್ತುಗಳನ್ನು ನೀಡಲು ಮತ್ತು ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಿದರು. ಸಭಾ ಕಾರ್ಯಕ್ರಮದ ನಂತರ ನಡೆದ ಕ್ರೀಡಾಕೂಟದಲ್ಲಿ ಹಳೆಯ ವಿದ್ಯಾರ್ಥಿಗಳು ಹೊಸ ಹುರುಪಿನೊಂದಿಗೆ ಪಾಲ್ಗೊಂಡರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು, ನೆರೆದಿದ್ದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಅಗಲಿದ ಸ್ನೇಹಿತರಿಗೆ ಮೌನ ಪ್ರಾರ್ಥನೆಯ ಮೂಲಕ…
ವಿರಾಜಪೇಟೆ ಅ.17 : ಮೈಸೂರಿನಲ್ಲಿ ನಡೆಯಲಿರುವ ದಸರಾ ಕವಿಗೋಷ್ಠಿಗೆ ಮಡಿಕೇರಿಯ ವಿ.ಜೆ.ಮೌನ ಆಯ್ಕೆಯಾಗಿದ್ದಾಳೆ. ಮಡಿಕೇರಿಯ ವಿ.ಹೆಚ್. ಜಯಕುಮಾರ್ ಹಾಗೂ ಉಪನ್ಯಾಸಕಿ ಕೆ.ಜಯಲಕ್ಷ್ಮಿ ಅವರ ಪುತ್ರಿಯಾಗಿರುವ ವಿ.ಜೆ.ಮೌನ ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಇ ವ್ಯಾಸಂಗ ಮಾಡುತ್ತಿದ್ದಾಳೆ.
ಮಡಿಕೇರಿ ಅ.17 : ಮಡಿಕೇರಿ ದಸರಾ ಜನೋತ್ಸವದಲ್ಲಿ ಕಾನೂನು ಉಲ್ಲಂಘನೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾತ್ರಿ 10 ಗಂಟೆಯ ನಂತರ ಡಿಜೆ ಅಬ್ಬರ ಇರಬಾರದೆಂದು ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಗಳಿಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ. ನಗರದ ತಮ್ಮ ಕಚೇರಿಯಲ್ಲಿ ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಎಸ್‌ಪಿ, ಡಿಜೆ ಬಳಕೆ ಕುರಿತು ನ್ಯಾಯಾಲಯ ವಿಧಿಸಿರುವ ನಿಬಂಧನೆಗಳನ್ನು ವಿವರಿಸಿದರು. ಕಾನೂನು ಪಾಲನೆಗೆ ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಜೆ ಬಳಸುವ ಸಂದರ್ಭ ನಿಯಮಗಳನ್ನು ಪಾಲಿಸುವುದು ಖಡ್ಡಾಯವಾಗಿದೆ. ರಾತ್ರಿ ಹತ್ತು ಗಂಟೆಯ ನಂತರ ಡಿಜೆ ಶಬ್ಧ ನಿಯಂತ್ರಣದಲ್ಲಿರಬೇಕು, ಕಾನೂನು ಉಲ್ಲಂಘನೆಗೆ ಅವಕಾಶವಿಲ್ಲವೆಂದು ತಿಳಿಸಿದರು. ದಸರಾ ಬಂದೋಬಸ್ತ್ ಗಾಗಿ ಕೆಎಸ್‌ಆರ್‌ಪಿ ಸೇರಿದಂತೆ ಜಿಲ್ಲೆ ಮತ್ತು ಹೊರ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗುವುದು. ಗೃಹ ರಕ್ಷಕ ದಳದ ಸಿಬ್ಬಂದಿಗಳು ಕೂಡ ಕಾರ್ಯನಿರ್ವಹಿಸಲಿದ್ದಾರೆ ಎಂದರು. ಕರ್ಕಷ ಶಬ್ಧದ ಪೀಪಿ ಗಳನ್ನು…
ಮಡಿಕೇರಿ ಅ.17 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ಶರನ್ನವರಾತ್ರಿಯ 3ನೇ ದಿನವಾದ ಇಂದು ದೇವಿಗೆ ಧನಲಕ್ಷ್ಮೀ ಅಲಂಕಾರ ಮಾಡಿ ಪೂಜಿಸಲಾಯಿತು. ಅ.18 ರಂದು ಬಾಗಿನ ದೀಪ ಅಲಂಕಾರ ನೆರವೇರಲಿದೆ.
ಮಡಿಕೇರಿ ಅ.17 : ಮಡಿಕೇರಿ ದಸರಾ ಸಾಂಸ್ಕೃತಿಕ ಕಾಯ೯ಕ್ರಮಗಳ ಎರಡನೇ ದಿನವಾದ ಇಂದು (ಅ.17) ವೈವಿಧ್ಯಮಯ ಕಾಯ೯ಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆಯಲಿದೆ. ಮಡಿಕೇರಿಯ ನಾಟ್ಯ ನಿಕೇತನ ಸಂಗೀತ ನೖತ್ಯಶಾಲಾ ತಂಡದಿಂದ ನೃತ್ಯ ವೈವಿಧ್ಯ, ಕುಶಾಲನಗರದ ಕುಂದನ ನಾಟ್ಯಾಲಯ ತಂಡದಿಂದ , ಶ್ರೀ ಮಂಜುನಾಥ ಮಹಿಮೆ ನೃತ್ಯ ರೂಪಕ, ವಿರಾಜಪೇಟೆಯ ಜಗನ್ಮೋಹನ ನಾಟ್ಯಾಲಯ ತಂಡದಿಂದ ಭಾರತೀಯ ಶಾಸ್ತ್ರೀಯ ನೃತ್ಯ, ಕುಶಾಲನಗರದ ಟೀಮ್ ಅ್ಯಟಿಟ್ಯೂಡ್ ತಂಡದಿಂದ ನೃತ್ಯ ವೈವಿಧ್ಯ , ಕುಶಾಲನಗರದ ಮಂಜುಭಾಗ೯ವಿ ಮತ್ತು ತಂಡದಿಂದ ನೃತ್ಯ ಹಾಗೂ ಮಡಿಕೇರಿಯ ಮುತ್ತಿನ ಹಾರ ತಂಡದಿಂದ ಸಂಗೀತ ರಸಮಂಜರಿ ಕಾಯ೯ಕ್ರಮ ಸೇರಿದಂತೆ ವೈವಿಧ್ಯಮಯ ಕಾಯ೯ಕ್ರಮಗಳು ಆಯೋಜಿತವಾಗಿದೆ. ಅಂತೆಯೇ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಮೈಸೂರಿನ ಖ್ಯಾತ ಮರಳು ಕಲಾವಿದೆ ಎನ್.ಎಂ.ಗೌರಿ ರೂಪಿಸಿರುವ ಕಾಂತಾರ ಶೈಲಿಯ ವನದೇವ ಮರಳುಕಲಾಕೖತಿಯನ್ನೂ ವೀಕ್ಷಿಸಬಹುದಾಗಿದೆ. ಫೋಟೋ ಪಾಯಿಂಟ್ ನಲ್ಲಿ ಮಡಿಕೇರಿ ದಸರಾದ ಸಂಭ್ರಮವನ್ನು ತೆಗೆದುಕೊಳ್ಳಬಹುದಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.






