ಪುತ್ತೂರು ಅ.17 : ಕಾಲ ಇರುವುದು ಕಳೆಯುವುದಕ್ಕಲ್ಲ, ಅರ್ಥಪೂರ್ಣವಾಗಿ ವಿನಿಯೋಗಿಸುವುದಕ್ಕೆ, ಕಳೆದುಹೋದ ಹಣವನ್ನಾದರೂ ಮರಳಿ ಸಂಪಾದಿಸಬಹುದು, ಆದರೆ ಕಳೆದು ಹೋದ ಸಮಯವನ್ನು ಏನು ಮಾಡಿದರೂ ಹಿಂಪಡೆಯಲಾಗದು ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ. ಕಲ್ಲಾಜೆ ಹೇಳಿದರು. ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆದ IEEE ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಸಮಯವನ್ನು ಚಾತುರ್ಯದಿಂದ ನಿರ್ವಹಿಸುವವನು ಎತ್ತರಕ್ಕೆ ಏರುತ್ತಾನೆ, ಸಮಯವನ್ನು ಅಲಕ್ಷ್ಯದಿಂದ ವ್ಯಯಿಸುವವನು ಪರಿತಪಿಸುತ್ತಾನೆ ಎಂದರು. ಅವಕಾಶಗಳು ಸಾಕಷ್ಟು ಇವೆ, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಪಡೆದುಕೊಳ್ಳುವ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಸ್ವಯಂ ಉದ್ಯೋಗಕ್ಕೆ ಸಾಕಷ್ಟು ಅವಕಾಶವಿದೆ. ಆದರೆ ಅದಕ್ಕೆ ಬೇಕಾದ ಪೂರ್ವ ತರಬೇತಿಯನ್ನು ಪಡೆಯದೆ ಪ್ರಾರಂಭಿಸಿದರೆ ಯೋಜಿತ ಉನ್ನತಿ ದೊರೆಯದೆ ಹೋಗಬಹುದು ಎಂದರು. ಕಾಲೇಜಿನ IEEE ವಿದ್ಯಾರ್ಥಿ ವಿಭಾಗದ ಪೂರ್ವ ಮುಖ್ಯಸ್ಥ ಡಾ.ಮಹಾಂತೇಶ್ ಚೌಧರಿ ಮಾತನಾಡಿ ಇದೊಂದು ವಿಶ್ವದ ಅತಿದೊಡ್ಡ ತಾಂತ್ರಿಕ ವೃತ್ತಿಪರ…
ಲೇಖಕ: admin
ಮಡಿಕೇರಿ ಅ.17 : ಪ್ರಸಕ್ತ (2023-24) ಸಾಲಿಗೆ ಹಿಂದುಳಿದ ವರ್ಗಗಳ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ/ ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ 2023-24 ನೇ ಸಾಲಿಗೆ ಸೌಲಭ್ಯ ಒದಗಿಸಲು ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ, ಸ್ವಯಂ ಉದ್ಯೋಗ ಸಾಲ ಯೋಜನೆ(ವಾಣಿಜ್ಯ ಬ್ಯಾಂಕ್‍ಗಳ ಸಹಯೋಗದೊಂದಿಗೆ), ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಗಳಲ್ಲಿ ಸರ್ಕಾರದ ವಿವೇಚನಾ ಕೋಟಾ/ ನಿಗಮದ ಅಧ್ಯಕ್ಷರು/ ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಲ್ಲಿ ಸೌಲಭ್ಯ ಪಡೆಯಬಯಸುವ ಹಿಂದುಳಿದ ವರ್ಗಗಳ ವಿವಿಧ ನಿಗಮಗಳ ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in, ಗ್ರಾಮ ಒನ್ https://gramaone.karnataka.gov.in ಬೆಂಗಳೂರು ಒನ್ https://www.karnatakaone.gov.in ಹಾಗೂ ಕರ್ನಾಟಕ ಒನ್ https://klapp.karnatakaone.gov.in ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅ.31 ಕೊನೆಯ ದಿನವಾಗಿದೆ. ಹೆಚ್ಚಿನ…
ಮಡಿಕೇರಿ ಅ.17 : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಗೂ ಸರ್ವೋದಯ ಸಮಿತಿ ಸಹಕಾರದಲ್ಲಿ ಮಹಾತ್ಮ ಗಾಂಧೀಜಿ ಸ್ಮಾರಕ ನಿರ್ಮಾಣಕ್ಕೆ ನಗರದ ಗಾಂಧಿ ಮಂಟಪದಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಚಾಲನೆ ನೀಡಿದರು. ಈ ಸಂದರ್ಭ ಶಾಸಕ ಡಾ.ಮಂತರ್ ಗೌಡ, ಮಾಜಿ ಸಚಿವ ಎಂ.ಸಿ.ನಾಣಯ್ಯ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ನಗರಸಭೆ ಅಧ್ಯಕ್ಷರಾದ ಎನ್.ಪಿ.ಅನಿತಾ, ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ಪ್ರಮುಖರಾದ ಟಿ.ಪಿ.ರಮೇಶ್ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಸರ್ವೋದಯ ಸಮಿತಿ ಸರ್ವ ಸದಸ್ಯರು, ಇತರರು ಪಾಲ್ಗೊಂಡಿದ್ದರು.
ಮಡಿಕೇರಿ ಅ.17 : ಮಡಿಕೇರಿ ದಸರಾ ಸಾಂಸ್ಕೃತಿಕ ಕಾಯ೯ಕ್ರಮಗಳ ಮೂರನೇ ದಿನವಾದ ಅ.18 ರಂದು (ಬುಧವಾರ) ವೈವಿಧ್ಯಮಯ ಕಾಯ೯ಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆಯಲಿದೆ. ಚಿಕ್ಕಮಗಳೂರಿನ ಹೆಸರಾಂತ ಗಾಯಕ ಸಾಯಿ ಸತೀಶ್ ಅವರಿಂದ ಭಕ್ತಿಸುಧೆ, ಮೂನಾ೯ಡುವಿನ ಸ್ಟೇಪ್ ಅಪ್ ಶೇಡ್ಸ್ ತಂಡದಿಂದ ನೖತ್ಯ ವೈವಿಧ್ಯ , ಮೇಕೇರಿಯ ಶ್ರೀ ಗೌರಿಶಂಕರ ಕಲಾಟ್ರಸ್ಟ್ ನಿಂದ ಶ್ರೀ ರಾಮಚರಿತ ನೃತ್ಯ ರೂಪಕ, ಪುತ್ತೂರಿನ ಶ್ರೀದೇವಿ ನೃತ್ಯಾರಾಧನ ಕೇಂದ್ರದಿಂದ ನೃತ್ಯ ಪ್ರೇರಣ ಹಾಗೂ ಮಡಿಕೇರಿಯ ಸ್ವರಶಾರದಾ ತಂಡದಿಂದ ಗಾನ ವೈಭವ ಕಾಯ೯ಕ್ರಮ ಆಯೋಜಿತವಾಗಿದೆ.
ಮಡಿಕೇರಿ ಅ.17 : ದಸರಾ ಉತ್ಸವದಲ್ಲಿ ಸರ್ವರೂ ಪಾಲ್ಗೊಳ್ಳುವ ಮೂಲಕ ಉತ್ಸವ ಯಶಸ್ವಿಯಾಗಿ ನಡೆಯುವಂತಾಗಲಿ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಆಶಿಸಿದರು. ಮಡಿಕೇರಿ ದಸರಾ ಜನೋತ್ಸವ ಪ್ರಯುಕ್ತ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯ ಹಾಗೂ ಜಿಲ್ಲೆಯಲ್ಲಿ ಬರಪರಿಸ್ಥಿತಿ ಇದ್ದರೂ ಕೂಡ ಐತಿಹಾಸಿಕ ಹಿನ್ನೆಲೆಯಿರುವ ದಸರಾ ಉತ್ಸವ ಕಳೆಗುಂದ ಬಾರದು ಎಂಬ ಕಾರಣಕ್ಕಾಗಿ ಸರ್ಕಾರವು ಸಾಧ್ಯವಾದಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಒಂದು ವೇಳೆ ಬರಪರಿಸ್ಥಿತಿ ಇಲ್ಲದಿದ್ದಲ್ಲಿ ಮತ್ತಷ್ಟು ವೈಭವಯುತವಾಗಿ ಉತ್ಸವ ಆಚರಣೆ ಮಾಡಬಹುದಾಗಿತ್ತು ಎಂದು ಅವರು ಹೇಳಿದರು. ಶಾಸಕ ಡಾ.ಮಂಥರ್ ಗೌಡ ಮಾತನಾಡಿ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಸಾಂಸ್ಕೃತಿಕ ಸಿಗುವಂತಾಗಬೇಕು. ಸರಕಾರ ದಸರಾ ಉತ್ಸವಕ್ಕೆ ಬಿಡುಗಡೆ ಮಾಡಿರುವ ಅನುದಾನದಲ್ಲಿ ಮಂಟಪ ಸಮಿತಿಗಳಿಗೆ ಹೆಚ್ಚಿನ ಆದ್ಯತೆ ನೀಡುವತ್ತ ದಸರಾ ಸಮಿತಿ ಗಮನಹರಿಸಬೇಕೆಂದು ಹೇಳಿದರು. ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ,…
ಮಡಿಕೇರಿ ಅ.17 : ನಗರ ದಸರಾ ಸಮಿತಿ, ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ಬಹುಭಾಷಾ ಕವಿಗೋಷ್ಠಿಯು ಅ.18 ರಂದು ಬೆಳಗ್ಗೆ 10 ಗಂಟೆಗೆ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯಲಿದೆ. ಮಡಿಕೇರಿ ನಗರ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷರಾದ ಉಜ್ವಲ್ ರಂಜಿತ್, ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ಅಂಕಣಕಾರರು ಹಾಗೂ ಹಿರಿಯ ವಕೀಲರಾದ ಎಚ್.ಎಸ್.ಚಂದ್ರಮೌಳಿ, ಹಿರಿಯ ಕವಿ, ಸಾಹಿತಿ, ಸಂಶೋಧಕರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಕೋರನ ಸರಸ್ವತಿ ಪ್ರಕಾಶ್, ಕಾಂತಾರ ಚಲನಚಿತ್ರ ಖ್ಯಾತಿಯ ಸಾಹಿತಿ ಪ್ರಮೋದ್ ಮರವಂತೆ, ಉದ್ಯಮಿ ಹಾಗೂ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷರಾದ ಗಿರೀಶ್ ಮಲ್ಲಪ್ಪ ಮೋರಿಕಲ್ಲು, ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷರಾದ ಡಾ.ಮೇಚಿರ ಸುಭಾಶ್ ನಾಣಯ್ಯ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೇಶವ ಕಾಮತ್, ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷರಾದ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷರಾದ ಸವಿತಾ ರಾಕೇಶ್, ಪ್ರಧಾನ ಕಾರ್ಯದರ್ಶಿ…
ಮಡಿಕೇರಿ ಅ.17 : ಇತಿಹಾಸ ಪ್ರಸಿದ್ಧ ಬೊಟ್ಟ್’ಲಪ್ಪ (ಈಶ್ವರ) ದೇವರ ವಾರ್ಷಿಕ ಬೋಡ್ ನಮ್ಮೆ ಅ.17 ಹಾಗೂ 18 ರಂದು ಪೊನ್ನಂಪೇಟೆಯ ಬೊಟ್ಟಿಯತ್ ನಾಡ್ ಕುಂದ ಮುಗುಟಗೇರಿ ಗ್ರಾಮದಲ್ಲಿ ನಡೆಯಲಿದೆ. ವರ್ಷಂಪ್ರತಿ ಕಾವೇರಿ ತೀರ್ಥೋದ್ಭವದ ದಿನದಂದು ನಡೆಯುವ ಬೊಟ್ಟಿಯತ್ ನಾಡ್ ಕುಂದ ಮುಗುಟಗೇರಿ ಗ್ರಾಮದ ಈ ಬೇಡು ಹಬ್ಬದಲ್ಲಿ ತಲಕಾವೇರಿಯಿಂದ ಪವಿತ್ರ ತೀರ್ಥವನ್ನು ತಂದು ಕುಂದಬೆಟ್ಟದ ಮೇಲಿರುವ ಈಶ್ವರ ದೇವರಿಗೆ ಅರ್ಪಿಸುವ ಮೂಲಕ ಕೊಡಗಿನ ಮೊದಲ ಬೋಡ್ ನಮ್ಮೆಗೆ ಚಾಲನೆ ದೊರೆಯಲಿದೆ ಎಂದು ದೇವಾಲಯದ ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ. ಹಬ್ಬಕ್ಕೆ ವಾರದ ಮುಂಚೆ ಕುಂದ ಗ್ರಾಮದಲ್ಲಿರುವ ನಾಡ್ ದೇವಸ್ಥಾನ (ಈಶ್ವರ ದೇವಸ್ಥಾನ) ಹತ್ತಿರ ಇರುವ ಅಂಬಲದಲ್ಲಿ ಬೋಡ್ ನಮ್ಮೆ ದೋಳ್ ಇಡುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದ್ದು, ಪ್ರತಿನಿತ್ಯ ಸಂಜೆ ಹಬ್ಬದತನಕ ಸಾಂಪ್ರದಾಯಿಕ ದೋಳ್ ಬಾರಿಸುವ ಮೂಲಕ ಹಬ್ಬದ ವಿವಿಧ ಸಾಂಪ್ರದಾಯ ಪೂಜಾ ವಿಧಿವಿಧಾನಗಳು ಜರುಗಲಿದೆ. ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬಸ್ಥರ ತಕ್ಕಾಮೆಯಲ್ಲಿ ಹಬ್ಬ ನಡೆಯಲಿದ್ದು. ಅ- 17ರಂದು ರಾತ್ರಿ ಇಲ್ಲಿನ…
ಮಡಿಕೇರಿ ಅ.16 : ಕಾವೇರಿ ತುಲಾ ಸಂಕ್ರಮಣದ ಹಿನ್ನೆಲೆ ಕೊಡಗು ಏಕೀಕರಣ ರಂಗದ ವತಿಯಿಂದ ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ನಡೆಯುವ ಅನ್ನದಾನ ಕಾರ್ಯಕ್ರಮಕ್ಕೆ ಕೊಡಗು ರಕ್ಷಣಾ ವೇದಿಕೆಯ ಹಾರಂಗಿ ಹುದುಗೂರು ಘಟಕ ದಿನಸಿ ಸಾಮಾಗ್ರಿಗಳ ನೆರವು ನೀಡಿದೆ. ತಲಕಾವೇರಿಗೆ ತೆರಳಿದ ವೇದಿಕೆಯ ಪ್ರಮುಖರು ಹಾರಂಗಿ ಹುದುಗೂರು ಗ್ರಾಮಸ್ಥರಿಂದ ಸಂಗ್ರಹಿಸಿದ ಅಕ್ಕಿ, ತೆಂಗಿನಕಾಯಿ, ತರಕಾರಿ ಮತ್ತಿತರ ಸಾಮಾಗ್ರಿಗಳನ್ನು ಸಮರ್ಪಿಸಿದರು. ಘಟಕದ ಅಧ್ಯಕ್ಷ ಬೊಳ್ತಂಡ ಸಜನ್ ಕಿಶೋರ್, ಸದಸ್ಯರಾದ ಭರತ್ ಬಿ.ಆರ್, ದಿನೇಶ್ ತಡ್ಡಿಕೊಪ್ಪ, ದಿನು ಕೋಳಿಬೈಲು, ಬಿಪಿನ್ ತಿಮ್ಮಯ್ಯ ಮಚಂಡ, ನವೀನ್ ನಡುಮನೆ, ಹೇಮಂತ್, ಪವಿಹೇಮಂತ್ ನಿಡ್ಯಮಲೆ, ಹಾರ್ದಿತ್ ಉಳ್ಳಿಯೆಡ್ಕ ಮತ್ತಿತರರು ಈ ಸಂದರ್ಭ ಹಾಜರಿದ್ದರು.
ಮಡಿಕೇರಿ ಅ.16 : ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನ.3 ರಿಂದ 5ರ ವರೆಗೆ ರಾಜ್ಯ ಮಟ್ಟದ ಕೃಷಿ ಯಂತ್ರ ಮೇಳ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕ ಡಾ.ರಾಮಕೃಷ್ಣ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗಿನಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯ ಮಟ್ಟದ ಕೃಷಿ ಯಂತ್ರ ಮೇಳ “ಕೃಷಿದೇವೋಭವ” ಎನ್ನುವ ಘೋಷವಾಕ್ಯದೊಂದಿಗೆ 3 ದಿನಗಳ ಕಾಲ ನಡೆಯಲಿದ್ದು, ಸಿದ್ಧತೆಗಳು ನಡೆದಿದೆ. ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 25ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ “ಕೃಷಿದೇವೋಭವ” ಕೃಷಿ ಯಂತ್ರ ಮೇಳ ನಡೆಯುತ್ತಿದ್ದು, 250ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಗ್ರಾಹಕರಿಗೆ ಒಂದೇ ಸೂರಿನಲ್ಲಿ ಹಲವು ಉತ್ಪನ್ನಗಳು ಕಡಿಮೆ ದರದಲ್ಲಿ ಸಿಗಲಿದೆ ಎಂದು ಹೇಳಿದ್ದಾರೆ. ಮೇಳದಲ್ಲಿ ಎಲ್ಲರೂ ಮುಕ್ತವಾಗಿ ಭಾಗವಹಿಸುವ ಅವಕಾಶವಿದ್ದು, ಕೃಷಿ ಯಂತ್ರೋಪಕರಣಗಳು, ಕೃಷಿ ಪರಿಕರಗಳು, ಭತ್ತ ಕಟಾವು ಮಾಡುವ ಯಂತ್ರಗಳು, ಪಂಪ್ ಸೆಟ್‍ಗಳು, ಕಾಫಿ ಬಾಕಿಂಗ್ ಮಿಷನ್ ಗಳು, ಸಿಂಪಡಣೆ ಯಂತ್ರಗಳು, ಡ್ರೋನ್ ಗಳು, ಬಿತ್ತನೆ ಬೀಜಗಳು, ಗೃಹ ಉತ್ಪನ್ನಗಳನ್ನು ತಯಾರಿಸುವ…
ಮಡಿಕೇರಿ ಅ.16 : ಅಮೃತ ಮಹೋತ್ಸವದ ಸಂಭ್ರಮದಲ್ಲಿರಬೇಕಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಇಂದು ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಕೊಡಗು ವಿಶ್ವವಿದ್ಯಾನಿಲಯದ ಮಧ್ಯೆ ಸಿಲುಕಿ ಮೂಲಭೂತ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಸೆಳೆದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ ಭರವಸೆ ನೀಡಿದ್ದಾರೆ. ಕೊಡವ ಮಕ್ಕಡ ಕೂಟ, ಮಂಗಳೂರು ವಿಶ್ವವಿದ್ಯಾನಿಲಯದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಲೇಖಕ ನಾಗೇಶ್ ಕಾಲೂರು ಬರೆದಿರುವ ಶ್ರೀ ಕಾವೇರಿ ದರ್ಶನಂ ಮತ್ತು ಕೊಡಗಿನಿಂದ ಗಿರಿತನಕ (ಮೂಲ ಲೇಖಕರು ದಿ.ಮಳವಂಡ ಗೌರಮ್ಮ ಅಚ್ಚಯ್ಯ) ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀ ಕಾವೇರಿ ದರ್ಶನಂ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮೂಲಭೂತ ಸೌಲಭ್ಯಗಳಿಂದ ವಂಚಿತವಾಗುತ್ತದೆ ಎಂಬ ಕಾರಣಕ್ಕೆ ತನ್ನ ಅಧಿಕಾರ ಅವಧಿಯಲ್ಲಿಯೇ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಭಾಗವಾಗಿ ಮಾಡಲಾಗಿತ್ತು. ಆದರೆ ಇಂದು ಕೊಡಗಿನ ಪ್ರತಿಷ್ಠಿತ ಕಾಲೇಜು ಮೂಲಭೂತ…






